ಮುಂಡಗೋಡ: ತಾಲೂಕಿನಾಧ್ಯಂತ ಮೊಹರಂ ಹಬ್ಬದ ಕೊನೆಯ ದಿನದ ಸಂಭ್ರಮ ಜೋರಾಗಿದೆ. ಕಳೆದ ಐದು ದಿನಗಳಿಂದ ತಾಲೂಕಿನಾಧ್ಯಂತ ಹಿಂದು ಮುಸ್ಲಿಂ ಬಾಂಧವರು ಭಾವೈಕ್ಯತೆಯ ಮೊಹರಂ ಆಚರಿಸುತ್ತಿದ್ದಾರೆ. ಬುಧವಾರ ಮೊಹರಂ ಕೊನೆಯ ದಿನದ ಆಚರಣೆಯಾಗಿದೆ. ಅಗ್ನಿ ಕುಂಡ..! ತಾಲೂಕಿನೆಲ್ಲೆಡೆ ಮೊಹರಂ ಪಂಜಾಗಳನ್ನು ಪ್ರತಿಷ್ಟಾಪಿಸಿ ಇಂದು ವಿಸರ್ಜನೆ ನಡೆಯುತ್ತಿದೆ. ಹೀಗಾಗಿ, ಇಂದು ಬೆಳಿಗಿನ ಜಾವ ಅಗ್ನಿ ಕುಂಡ ರಚಿಸಿ ಪಂಜಾಗಳನ್ನು ಹೊತ್ತು ಕೆಂಡ ತುಳಿಯಲಾಯಿತು. ಆ ನಂತರದಲ್ಲಿ ಪಂಜಾಗಳ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಂಜಾಗಳಿಗೆ ಗ್ರಾಮಸ್ಥರು ಸಕ್ಕರೆ ಬೆಲ್ಲ ನೀಡಿ, ದರ್ಶನ ಪಡೆದ್ರು. ಅಲ್ಲಾವಿ ಕುಣಿತ..! ಇನ್ನು ಸಾಂಪ್ರದಾಯಿಕವಾಗಿ ವಿಶೇಷ ಅಲ್ಲಾವಿ ಹೆಜ್ಜೆ ಕುಣಿತ ಆಕರ್ಷಕವಾಗಿತ್ತು. ಅಂದಹಾಗೆ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಕೊಂಡಿಯಾಗಿರೋ ಮೊಹರಂ ಹಬ್ಬ ಹಿಂದುಗಳ ಪಾಲಿಗೆ “ಅಲ್ಲಬ್ಬ” ಅಂತಲೇ ಆಚರಣೆಯಾಗತ್ತೆ. ಐದು ದಿನಗಳ ಕಾಲ ಸಂಭ್ರಮ ಜೋರಾಗಿರತ್ತೆ. ಕೊನೆಯ ದಿನದ ಹಬ್ಬಕ್ಕೆ ಇಂದು ಹಿಂದುಗಳು ವಿಶೇಷ ಖಾದ್ಯವಾದ ಚ್ಯೊಂಗ್ಯಾ ಮಾಡಿ ನೈವೇದ್ಯ ಅರ್ಪಿಸುವ ಪದ್ದತಿಯಿದೆ.
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಬಾಚಣಕಿ ಸಮೀಪ ರಸ್ತೆ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಸ್ಥಗಿತ..!
ಮುಂಡಗೋಡ ತಾಲೂಕಿನ ಬಾಚಣಕಿ ಸಮೀಪ ಹುಬ್ಬಳ್ಳಿ ಶಿರಸಿ ರಸ್ತೆ ಸಂಚಾರ ಸ್ಥಗಿತವಾಗಿದೆ. ನಿರಂತರ ಮಳೆಯಿಂದ ಬೃಹತ್ ಮರ ರಸ್ತೆ ಮೇಲೆ ಉರುಲಕಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತವಾಗಿದೆ. ರಸ್ತೆ ಬದಿ ಇದ್ದ ಮರ ಮದ್ಯಾಹ್ನ ಏಕಾಏಕಿ ಉರುಳಿ ಬಿದ್ದಿದೆ. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದಾರೆ. ಅಂದಹಾಗೆ, ಕಳೆದ ಹತ್ತು ದಿನಗಳಿಂದ ತಾಲೂಕಿನಲ್ಲಿ ನಿರಂತರವಾಗಿ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಗೆ ತಾಲೂಕಿನಾಧ್ಯಂತ ಭಾರೀ ಅವಾಂತರಗಳು ಸೃಷ್ಟಿಯಾಗುತ್ತಿವೆ. ಹಲವು ಕಡೆ ಮನೆಗಳು ನೆಲಸಮಗೊಂಡಿವೆ.
ಮುಂಡಗೋಡಿನಲ್ಲಿ ಕಾರ್ ಡಿಕ್ಕಿಯಾಗಿ ಆಕಳ ಕರು ಸ್ಥಳದಲ್ಲೇ ಸಾವು..!
ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಪಟ್ಟಣ ಪಂಚಾಯತ ಎದುರಿನಲ್ಲಿ ಇಂಡಿಕಾ ಕಾರ್ ಡಿಕ್ಕಿಯಾದ ಪರಿಣಾಮ ಆಕಳ ಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹುಬ್ಬಳ್ಳಿ ರಸ್ತೆ ಕಡೆಗೆ ಹೊರಟಿದ್ದ ಇಂಡಿಕಾ ಕಾರು, ರಸ್ತೆಯಲ್ಲಿದ್ದ ಕರುವಿನ ಮುಖಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕರು ರಕ್ತದ ಮಡುವಿನಲ್ಲಿ ಬಿದ್ದಿದೆ. ಹೀಗಾಗಿ, ಸ್ಥಳೀಯರು ತಕ್ಷಣವೇ ಪಶುವೈದ್ಯ ಅವಿನಾಶ್ ಪೂಜಾರ್ ಗೆ ಕರೆ ಮಾಡಿದ್ದಾರೆ. ಆದ್ರೆ, ಪಶುವೈದ್ಯರು ಚಿಕಿತ್ಸೆ ನೀಡುವಷ್ಟರಲ್ಲೇ ಕರು ಸಾವನ್ನಪ್ಪಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಸದ್ಯ ರಕ್ತದ ಮಡುವಿನಲ್ಲಿ ಬಿದ್ದಿರೊ ಕರುವಿನ ಕಳೇಬರವನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯ ಮಾಡಲಾಗಿದೆ. ಬಿಡಾಡಿ ದನಗಳು ನಿತ್ಯವೂ ಹೀಗೆ ಒಂದಿಲ್ಲೊಂದು ದುರಂತಕ್ಕೆ ಈಡಾಗುತ್ತಿವೆ. ಹೀಗಿದ್ರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಮಾತ್ರ ಗಪ್ ಚುಪ್ ಆಗಿ ಕುಳಿತು ಬಿಟ್ಟಿದ್ದಾರೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದಾರೆ.
ನ್ಯಾಸರ್ಗಿಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಎರಡು ಶ್ವಾನಗಳ ದಾರುಣ ಸಾವು..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ವಿದ್ಯುತ್ ಅವಘಡವಾಗಿದೆ. ನಿರಂತರ ಮಳೆಯಿಂದ, ರಾತ್ರಿ ವೇಳೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಪರಿಣಾಮ ವಿದ್ಯತ್ ತಂತಿ ಸ್ಪರ್ಶಿಸಿ ಎರಡು ನಾಯಿಗಳು ಸ್ಥಳದಲ್ಲೇ ದಾರುಣ ಸಾವು ಕಂಡಿವೆ. ತಪ್ಪಿದ ಭಾರೀ ಅನಾಹುತ..! ಬಹುತೇಕ ಪುಟ್ಟ ಪುಟ್ಟ ಮಕ್ಕಳು ಓಡಾಡುವ ಸ್ಥಳ ಇದಾಗಿದೆ. ಅಲ್ಲದೇ ಮನೆಯ ಎದುರಿಗೆ ಇಂತಹದ್ದೊಂದು ಘಟನೆ ನಡೆದಿದೆ. ವಿದ್ಯುತ್ ತಂತಿ ಮರಕ್ಕೆ ತಾಗಿಕೊಂಡು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ತಂತಿ ತುಂಡಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಜನರ ಜೀವ ಹಾನಿಯಾಗಿಲ್ಲ. ರಾತ್ರಿವೇಳೆ ಜನರು ತಂತಿಯನ್ನು ತುಳಿದಿದ್ರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದ್ರೆ, ಮುಗ್ದ ಎರಡು ಶ್ವಾನಗಳು ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿವೆ. ಹೆಸ್ಕಾಂ ನಿರ್ಲಕ್ಷ..? ನಿಜ ಅಂದ್ರೆ, ನ್ಯಾಸರ್ಗಿ ಗ್ರಾಮದ ಈ ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ. ತಂತಿ ಜೋತುಬಿದ್ದು ವರ್ಷಗಳೇ ಕಳೆದಿವೆ. ಆದ್ರೆ, ಹೆಸ್ಕಾಂ ಇಲಾಖೆಯಿಂದ ಯಾವುದೇ ಸಮರ್ಪಕ ನಿರ್ವಹಣೆ ಆಗಿಲ್ಲ ಅಂತಾರೆ ಗ್ರಾಮಸ್ಥರು, ಇನ್ನು 2 ವರ್ಷದ ಹಿಂದೆ ವಿದ್ಯುತ್...
ರಾಕ್ಷಸ ಮಳೆ: ನದಿ ನೀರಲ್ಲಿ ಕೊಚ್ಚಿ ಹೋದ 7 ವರ್ಷದ ಬಾಲಕಿ..!
ಉಡುಪಿ: ರಾಕ್ಷಸ ಮಳೆಯ ರಣಭೀಕರತೆ ಮುಂದುವರೆದಿದೆ. 7 ವರ್ಷದ ಬಾಲಕಿಯೊಬ್ಬಳು ಕಾಲುಸಂಕದಿಂದ ಕೆಳಗೆ ಬಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಉಡುಪಿ ಜಿಲ್ಲೆ ಬೈಂದೂರಿನ ಬೀಜಮಕ್ಕಿಯಲ್ಲಿ ನಡೆದಿದೆ. 7 ವರ್ಷ ವಯಸ್ಸಿನ ಸನ್ನಿಧಿ ಎಂಬ ಬಾಲಕಿಯೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಶಾಲೆಯಿಂದ ಮನೆಗೆ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಭಾರಿ ಮಳೆಯ ನಡುವೆಯೇ ಶಾಲೆಗೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದ ಬಾಲಕಿ ಕಾಲುಸಂಕ ದಾಟುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ನದಿ ನೀರಿನ ರಭಸಕ್ಕೆ ಬಾಲಕಿ ಕೊಚ್ಚಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿಗಾಗಿ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ.
ಪಾಳಾದ ದೊಡ್ಡಕೆರೆ ಒಡೆಯುವ ಆತಂಕ, ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ, ತೀವ್ರ ತರಾಟೆಗೆ ಪಡೆದ ಅನ್ನದಾತರು..!
ಮುಂಡಗೋಡ ತಾಲೂಕಿನ ಪಾಳಾ ದೊಡ್ಡಕೇರಿ ಸಂಪೂರ್ಣ ಭರ್ತಿಯಾಗಿದೆ. ನಿರಂತರ ಮಳೆಯಿಂದ ತಾಲೂಕಿನಲ್ಲೇ ಅತಿದೊಡ್ಡ ಕೆರೆಯ ಸ್ಥಾನ ಪಡೆದಿರೊ ದೊಡ್ಡಕೆರೆ ಭರ್ತಿಯಾಗಿದ್ದು, ಜೊತೆಗೆ ಈ ಭಾಗದ ಜನರಿಗೆ, ರೈತರಿಗೆ ಆತಂಕವೂ ಶುರುವಾಗಿದೆ. ಯಾಕಂದ್ರೆ, ಚಿಕ್ಕ ನೀರಾವರಿ ಇಲಾಖೆಯ ಬಹು ದೊಡ್ಡ ಬೇಜವಾಬ್ದಾರಿಗೆ ಇಡೀ ಕೆರೆಯೇ ಒಡೆದು ಹೋಗುವ ಆತಂಕದಲ್ಲಿದೆ. ಇನ್ನೇರಡು ದಿನ ಹೀಗೆ ಮಳೆ ಸುರಿದ್ರೆ ಇಡೀ ಕೆರೆಯೇ ಒಡೆದು ಹೋಗುವ ಹಂತಕ್ಕೆ ಬಂದಿದೆ. ಹೀಗಾಗಿ, ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ರೈತರು ದಿಗ್ಬಂಧನ ಹಾಕಿ ಕೂಡಿಸಿದ್ದಾರೆ. ಏನಿದು ಆತಂಕ..! ಬರೋಬ್ಬರಿ 33 ಎಕರೆ 32 ಗುಂಟೆ ವಿಸ್ತೀರ್ಣದಲ್ಲಿ ಪಾಳಾದ ದೊಡ್ಡ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಆದ್ರೆ ಹಾಗೆ ಭರ್ತಿಯಾಗಿರೋ ಕೆರೆಯ ಕೋಡಿ ಬಿದ್ದ ನೀರು ಹೊರಹೋಗಲು ಯಾವುದೇ ಮಾರ್ಗಗಳೇ ಇಲ್ಲ. ಎಡದಂಡೆ ಹಾಗೂ ಬಲದಂಡೆ ಅಂತಾ ಎರಡು ಕಡೆ ಕೋಡಿ ವಿದ್ದ ನೀರು ಹರಿದು ಹೋಗಲು ಕಾಮಗಾರಿ ಮಾಡಲಾಗಿದೆ. ಆದ್ರೆ, ಚಿಕ್ಕ ನೀರಾವರಿ ಇಲಾಖೆಯ ನಿರ್ಲಕ್ಷದಿಂದ ಆ...
ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರಧ್ವಜ ನಿರ್ವಹಣೆ ಕಾರ್ಯಾಗಾರ..!
ಮುಂಡಗೋಡ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಇಂದು, ಸ್ವಾತಂತ್ರ ಭಾರತದ ಅಮೃತ ಮಹೋತ್ಸವ 2022 ರ ಪ್ರಯುಕ್ತ ರಾಷ್ಟ್ರಧ್ವಜ ನಿರ್ವಹಣೆ ತರಬೇತಿ ಕಾರ್ಯಾಗಾರ ನಡೆಯಿತು. ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ ದೀಪ ಬೆಳಗಿಸುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದ್ರು. ತಾಲೂಕಾಡಳಿತ ಮುಂಡಗೋಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಭಾರತ ಸೇವಾದಲದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರೋ ತರಬೇತಿ ಕಾರ್ಯಾಗಾರದಲ್ಲಿ ರಾಷ್ಟ್ರಧ್ವಜ ನಿರ್ವಹಣೆಯ ಕುರಿತು ತಹಶೀಲ್ದಾರ್ ಶಂಕರ್ ಗೌಡಿ ಮಾಹಿತಿ ನೀಡಿದ್ರು. ಕಾರ್ಯಕ್ರಮದಲ್ಲಿ ಭಾರತ್ ಸೇವಾದಲದ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ವಿ.ಪಟಗಾರ್, ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಕಟ್ಟಿ, ಎಂ.ಹೆಚ್. ಕಲಾಲ್, ಸಿ.ಕೆ.ಅಶೋಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಧಾತ್ರಿ ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ,ಪುಸ್ತಕ ವಿತರಣೆ..!
ಮುಂಡಗೋಡ: ತಾಲೂಕಿನ ಕೋಡಂಬಿ, ಬೆಡಸಗಾಂವ್, ಮಳಗಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಉಚಿತ ಪಠ್ಯ, ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಭಟ್, ಫಣಿರಾಜ್ ಹದಳಗಿ, ಗಿರೀಶ್ ಕಾತೂರು, ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ, ದಿವಾನ್ ಸಾಬ್, ವಿಜಯ್ ಕುರುಬರ ಹಾಗೂ ಪಂಚಾಯತ್ ಅಧ್ಯಕ್ಷರು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಮುಖಂಡರು, ಶಿಕ್ಷಕವೃಂದ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಆ ಶಿಕ್ಷಕನ ಯಡವಟ್ಟಿಗೆ, ಇಂದೂರಿನ ಓರ್ವ ವಿದ್ಯಾರ್ಥಿಯ ಬದುಕೇ ಬರ್ಬಾದು, ಬಿಇಓ ಸಾಹೇಬ್ರೇ ಏನಿದೇಲ್ಲ..?
ಮುಂಡಗೋಡ: ತಾಲೂಕಿನ ಇಂದೂರಿನ ಅದೊಬ್ಬ ಬಡ ವಿದ್ಯಾರ್ಥಿ ಸಂಕಟಕ್ಕೆ ಸಿಲುಕಿದ್ದಾನೆ. ಅವನ ಜೊತೆ ಆತನ ಪೋಷಕರೂ ನಿತ್ಯವೂ ಮುಂದೇನು ಅಂತಾ ಪರದಾಡುವ ಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವನೊಬ್ಬ ಮಾಸ್ತರು ಅದೇಂಥಾ ನಿದ್ದೆಗುಂಗಿನಲ್ಲಿ ಮಾಡಿದ್ನೋ ಗೊತ್ತಿಲ್ಲ, ಆತ ಮಾಡಿದ ಯಡವಟ್ಟಿಗೆ ಆ ವಿದ್ಯಾರ್ಥಿ ಈಗ ವಿಲ ವಿಲ ಅಂತಿದಾನೆ. ಆತನ ಹೆಸ್ರು ಮಾಂತೇಶ್..! ಅಂದಹಾಗೆ, ಇಂದೂರಿನ ಆ ವಿದ್ಯಾರ್ಥಿಯ ಹೆಸ್ರು ಮಾಂತೇಶ್ ಫಕ್ಕೀರಪ್ಪ ನಾಣಪೂರ್, ಈತ ಇಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪಾಸ್ ಆಗಿ, ಅದೇ ಇಂದೂರಿನ ಪ್ರೌಢಶಾಲೆಯಲ್ಲಿ ಮತ್ತೆ ಹೈಸ್ಕೂಲು ಶಿಕ್ಷಣ ಮುಗಿಸಿಕೊಂಡಿದ್ದಾನೆ. ಕಳೆದ ವರ್ಷ SSLC ಪರೀಕ್ಷೆಯಲ್ಲಿ ಪಾಸ್ ಆಗಿ ಇನ್ನೇನು ಕಾಲೇಜಿಗೆ ಹೋಗಲು ರೆಡಿಯಾಗಿದ್ದಾನೆ. ಆದ್ರೆ, ಸದ್ಯ SSLC ಅಂಕಪಟ್ಟಿಯಲ್ಲಿ ಈತನ ಹೆಸರೇ ಬದಲಾಗಿ ಹೋಗಿದೆ. ಮಾಂತೇಶ್ ಅಂತಾ ಇದ್ದ ಈ ವಿದ್ಯಾರ್ಥಿಯ ಹೆಸರು ಈಗ “ಮಾಲತೇಶ್” ಅಂತಾ ಬದಲಾಗಿದ್ದು, ಯಾವ ಕಾಲೇಜಿನಲ್ಲೂ ಪ್ರವೇಶಾತಿ ಸಿಗದೇ ಪರದಾಡುವಂತಾಗಿದೆ. ಮೂಲ ದಾಖಲೆಗಳೇ ಬೇರೆ..! ಅಸಲು, ಈ ವಿದ್ಯಾರ್ಥಿಯ...
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಮುಂಡಗೋಡಿನ “ಮಾಸ್” ಹುಡುಗ್ರ ಸ್ಟೆಪ್..!
ಮುಂಡಗೋಡಿನ ಯುವಕರ ಪಡೆಯೊಂದು ತಾಲೂಕಿನ ಹೆಮ್ಮೆಗೆ ಕಾರಣವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಂಡಗೋಡಿನ ನೃತ್ಯ ಪಟುಗಳು ಭಾಗಿಯಾಗಿದ್ದಾರೆ. ಇಂದು ರವಿವಾರ ರಾತ್ರಿ ನಮ್ಮ ಹೆಮ್ಮೆಯ ಯುವಕರ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದಹಾಗೆ, ಮುಂಡಗೋಡಿನ ಮಾಸ್ ಅಕಾಡೆಮಿಯ ಹುಲಿಗಳು ಇವ್ರು. ಸಂದೀಪ್ ಕೋರಿ, ಸಾನಿಕಾ ಪವಾರ್,ರಂಜಿತಾ ಜೀವಣ್ಣವರ, ಮನೋಜ್ ಮೆತ್ರಾಣಿ ಎಂಬುವ ಡ್ಯಾನ್ಸ್ ಕಲಿಗಳು ಟಿವಿ ಪರದೆಯ ಮೇಲೆ ಇಂದು ಮಿಂಚಲಿದ್ದಾರೆ. ಪ್ರತೀ ಶನಿವಾರ, ರವಿವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ ಕಾರ್ಯಕ್ರಮದಲ್ಲಿ ನಮ್ಮ ಯುವಕರು ಭಾಗಿಯಾಗಿದ್ದು ಮುಂಡಗೋಡಿಗರ ಹೆಮ್ಮೆಗೆ ಕಾರಣವಾಗಿದೆ. ಹೀಗಾಗಿ, ನಮ್ಮ ಹುಡುಗರ ಡ್ಯಾನ್ಸ್ ಕಣ್ತುಂಬಿಕೊಳ್ಳಲು ಮುಂಡಗೋಡಿಗರ ಕಾತರ ಹೆಚ್ಚಾಗಿದೆ. ಅಂದಹಾಗೆ, ಇವತ್ತು “ಚೆಲ್ಲಿದರು ಮಲ್ಲಿಗೆಯಾ” ಗೀತೆಗೆ ಹೆಜ್ಜೆ ಹಾಕಲಿದ್ದಾರೆ ನಮ್ಮ ಮಾಸ್ ಹುಡುಗರು. ನೀವೂ ತಪ್ಪದೇ ನೋಡ್ತಿರಾ ಅಲ್ವಾ..?