ಆ ಶಿಕ್ಷಕನ ಯಡವಟ್ಟಿಗೆ, ಇಂದೂರಿನ ಓರ್ವ ವಿದ್ಯಾರ್ಥಿಯ ಬದುಕೇ ಬರ್ಬಾದು, ಬಿಇಓ ಸಾಹೇಬ್ರೇ ಏನಿದೇಲ್ಲ..?


ಮುಂಡಗೋಡ: ತಾಲೂಕಿನ ಇಂದೂರಿನ ಅದೊಬ್ಬ ಬಡ ವಿದ್ಯಾರ್ಥಿ ಸಂಕಟಕ್ಕೆ ಸಿಲುಕಿದ್ದಾನೆ. ಅವನ ಜೊತೆ ಆತನ ಪೋಷಕರೂ ನಿತ್ಯವೂ ಮುಂದೇನು ಅಂತಾ ಪರದಾಡುವ ಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವನೊಬ್ಬ ಮಾಸ್ತರು ಅದೇಂಥಾ ನಿದ್ದೆಗುಂಗಿನಲ್ಲಿ ಮಾಡಿದ್ನೋ ಗೊತ್ತಿಲ್ಲ, ಆತ ಮಾಡಿದ ಯಡವಟ್ಟಿಗೆ ಆ ವಿದ್ಯಾರ್ಥಿ ಈಗ ವಿಲ ವಿಲ ಅಂತಿದಾನೆ.

ಆತನ ಹೆಸ್ರು ಮಾಂತೇಶ್..!
ಅಂದಹಾಗೆ, ಇಂದೂರಿನ ಆ ವಿದ್ಯಾರ್ಥಿಯ ಹೆಸ್ರು ಮಾಂತೇಶ್ ಫಕ್ಕೀರಪ್ಪ ನಾಣಪೂರ್, ಈತ ಇಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪಾಸ್ ಆಗಿ, ಅದೇ ಇಂದೂರಿನ ಪ್ರೌಢಶಾಲೆಯಲ್ಲಿ ಮತ್ತೆ ಹೈಸ್ಕೂಲು ಶಿಕ್ಷಣ ಮುಗಿಸಿಕೊಂಡಿದ್ದಾನೆ. ಕಳೆದ ವರ್ಷ SSLC ಪರೀಕ್ಷೆಯಲ್ಲಿ ಪಾಸ್ ಆಗಿ ಇನ್ನೇನು ಕಾಲೇಜಿಗೆ ಹೋಗಲು ರೆಡಿಯಾಗಿದ್ದಾನೆ. ಆದ್ರೆ, ಸದ್ಯ SSLC ಅಂಕಪಟ್ಟಿಯಲ್ಲಿ ಈತನ ಹೆಸರೇ ಬದಲಾಗಿ ಹೋಗಿದೆ. ಮಾಂತೇಶ್ ಅಂತಾ ಇದ್ದ ಈ ವಿದ್ಯಾರ್ಥಿಯ ಹೆಸರು ಈಗ “ಮಾಲತೇಶ್” ಅಂತಾ ಬದಲಾಗಿದ್ದು, ಯಾವ ಕಾಲೇಜಿನಲ್ಲೂ ಪ್ರವೇಶಾತಿ ಸಿಗದೇ ಪರದಾಡುವಂತಾಗಿದೆ.

ಮೂಲ ದಾಖಲೆಗಳೇ ಬೇರೆ..!
ಅಸಲು, ಈ ವಿದ್ಯಾರ್ಥಿಯ ಇನ್ನುಳಿದ ಎಲ್ಲಾ ದಾಖಲಾತಿಗಳಲ್ಲಿ ಮಾಂತೇಶ್ ಅಂತಾ ಉಲ್ಲೇಖವಿದ್ದು, ಜಸ್ಟ್ SSLC ಅಂಕಪಟ್ಟಿಯಲ್ಲಿ ಮಾತ್ರ ಹೆಸರು ಮಾಲತೇಶ್ ಆಗಿದೆ. ಹೀಗಾಗಿ, ಹೇಗಾಯ್ತು ಇದೇಲ್ಲ ಅಂತಾ ಅಚ್ಚರಿಯಿಂದ‌ ನೋಡ ಹೊರಟ ವಿದ್ಯಾರ್ಥಿಗೆ ಅವನೊಬ್ಬ ಇಂದೂರಿನ ಹೆಡ್ ಮಾಸ್ತರ ಮಾಡಿದ ನಿದ್ದೆಗಣ್ಣಿನ ಯಡವಟ್ಟು ಬಟಾಬಯಲಾಗಿದೆ.

ಇದೇ ನೋಡಿ ಯಡವಟ್ಟು ವರ್ಗಾವಣೆ ಪತ್ರ

ವರ್ಗಾವಣೆ ಪತ್ರ..!
ಅಂದಹಾಗೆ, ಮಾಂತೇಶ್ ನಾಣಪೂರ್ ಇಂದೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಮುಗಿಸಿ, ಎಂಟನೇ ತರಗತಿ ಕಲಿಯಲು ಹೈಸ್ಕೂಲಿಗೆ ಪ್ರವೇಶಾತಿ ಪಡೆಯುವ ವೇಳೆ ವರ್ಗಾವಣೆ ಪತ್ರ ಪಡೆದಿದ್ದ. ಆ ಹೊತ್ತಲ್ಲಿ ಇದೇ ಇಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾದ್ಯಾಯ ಹುದ್ದೆಯಲ್ಲಿ ಎಲ್. ಪಿ.ಲಮಾಣಿ ಎಂಬುವವರು ಇಂತಹದ್ದೊಂದು ಎಡವಟ್ಟು ಮಾಡಿಬಿಟ್ಟಿದ್ದಾರೆ. ಮಾಂತೇಶ್ ಅಂತಾ ಇದ್ದ ಹೆಸ್ರನ್ನು ಅವ್ರ ಎಕ್ಸ್ಟ್ರಾ ಬುದ್ದಿವಂತಿಕೆಯಿಂದ ಮಾಲತೇಶ್ ಅಂತಾ ಬದಲಾಯಿಸಿಬಿಟ್ಟಿದ್ದಾರೆ. ಹೀಗಾಗಿ ಅದೇ ಹೆಸರಲ್ಲಿಯೇ ಅವತ್ತು ಹೈಸ್ಕೂಲಿನಲ್ಲಿ ದಾಖಲಾತಿ ಆಗಿಬಿಟ್ಟಿದೆ.

ಎಲ್.ಪಿ.ಲಮಾಣಿ..!
ಅಸಲು, ಆ ವಿದ್ಯಾರ್ಥಿಯ ಇಡೀ ದಾಖಲೆಗಳಲ್ಲಿ ಮಾಂತೇಶ್ ಫಕ್ಕೀರಪ್ಪ ನಾಣಪೂರ್ ಅಂತಲೇ ಇದ್ರೂ ತಮ್ಮ ‌ವಿಶೇಷ ಜ್ಞಾನ ಬಳಸಿ, ಮಾಲತೇಶ್ ಅಂತಾ ಮರು‌ನಾಮಕರಣ ಮಾಡಿರೋ ಶಿಕ್ಷಕ, ಸದ್ಯ ಈ ವಿದ್ಯಾರ್ಥಿಯ ಬದುಕನ್ನೇ ಅಂಡಲೆಯುವಂತೆ ಮಾಡಿದ್ದಾನೆ. ಇದನ್ನೇಲ್ಲ ಮುಂಡಗೋಡ ಬಿಇಓ ಸಾಹೇಬ್ರಿಗೆ ಹೇಳಿದ್ರೂ ಪಾಪ ಅವ್ರಿಗೆ ಇದನ್ನೇಲ್ಲ ಕುಳಿತು ಕೇಳಲು ಟೈಮೇ ಇಲ್ಲ. ಹೀಗಿದ್ದಾಗ ಆ ವಿದ್ಯಾರ್ಥಿ ಏನು ಮಾಡಬೇಕು..? ಯಾರ ಹತ್ತಿರ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಅಂತಾ ಪರದಾಡುತ್ತಿದ್ದಾನೆ.

ಶಿಕ್ಷಕ ಎಲ್.ಪಿ.ಲಮಾಣಿ

ಕಾಲೇಜಿನಲ್ಲಿ ಅಡ್ಮಿಶನ್ ಇಲ್ಲ.
SSLC ಫಲಿತಾಂಶ ಬಂದು ತಿಂಗಳುಗಳೇ ಕಳೆದಿವೆ. ಬಹುತೇಕ ಈಗ ಎಲ್ಲಾ ಕಾಲೇಜುಗಳಲ್ಲೂ ಪಿಯೂಸಿ ಅಡ್ಮಿಶನ್ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿವೆ. ಹೀಗಿದ್ದಾಗಲೂ ಈ ವಿದ್ಯಾರ್ಥಿಯ ದಾಖಲೆಯಲ್ಲಿನ ಹೆಸರು ಬದಲಾವಣೆ ಕಾರಣಕ್ಕೆ, ಅದ್ಯಾವ ಕಾಲೇಜುಗಳೂ ಅಡ್ಮಿಶನ್ ಮಾಡಿಕೊಳ್ಳುತ್ತಿಲ್ಲ.. ಹೀಗಾಗಿ, ಏನು ಮಾಡಬೇಕು ಅನ್ನೋ ಚಿಂತೆಯಲ್ಲಿದೆ ಕುಟುಂಬ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಈಗಲಾದ್ರೂ ಗಮನ ಹರಿಸಿ ವಿದ್ಯಾರ್ಥಿಗೆ ಬಂದೊದಗಿರೋ ಸಮಸ್ಯೆ ಬಗೆ ಹರಿಸಬೇಕಿದೆ. ಆ ಶಿಕ್ಷಕನ ಯಡವಟ್ಟಿಗೆ ತಕ್ಕ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಬಡ ವಿದ್ಯಾರ್ಥಿಯ ಇಡೀ ಬದುಕಿಗೆ ಗ್ರಹಣ ಹಿಡಿಯೋದ್ರಲ್ಲಿ ಎರಡು ಮಾತಿಲ್ಲ.

error: Content is protected !!