ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಮುಂಡಗೋಡಿನ “ಮಾಸ್” ಹುಡುಗ್ರ ಸ್ಟೆಪ್..!


ಮುಂಡಗೋಡಿನ ಯುವಕರ ಪಡೆಯೊಂದು ತಾಲೂಕಿನ ಹೆಮ್ಮೆಗೆ ಕಾರಣವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಂಡಗೋಡಿನ ನೃತ್ಯ ಪಟುಗಳು ಭಾಗಿಯಾಗಿದ್ದಾರೆ. ಇಂದು ರವಿವಾರ ರಾತ್ರಿ ನಮ್ಮ ಹೆಮ್ಮೆಯ ಯುವಕರ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಂದಹಾಗೆ, ಮುಂಡಗೋಡಿನ ಮಾಸ್ ಅಕಾಡೆಮಿಯ ಹುಲಿಗಳು ಇವ್ರು. ಸಂದೀಪ್ ಕೋರಿ, ಸಾನಿಕಾ ಪವಾರ್,ರಂಜಿತಾ ಜೀವಣ್ಣವರ, ಮನೋಜ್ ಮೆತ್ರಾಣಿ ಎಂಬುವ ಡ್ಯಾನ್ಸ್ ಕಲಿಗಳು ಟಿವಿ ಪರದೆಯ ಮೇಲೆ ಇಂದು ಮಿಂಚಲಿದ್ದಾರೆ.

ಪ್ರತೀ ಶನಿವಾರ, ರವಿವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ ಕಾರ್ಯಕ್ರಮದಲ್ಲಿ ನಮ್ಮ ಯುವಕರು ಭಾಗಿಯಾಗಿದ್ದು ಮುಂಡಗೋಡಿಗರ ಹೆಮ್ಮೆಗೆ ಕಾರಣವಾಗಿದೆ. ಹೀಗಾಗಿ, ನಮ್ಮ ಹುಡುಗರ ಡ್ಯಾನ್ಸ್ ಕಣ್ತುಂಬಿಕೊಳ್ಳಲು ಮುಂಡಗೋಡಿಗರ ಕಾತರ ಹೆಚ್ಚಾಗಿದೆ. ಅಂದಹಾಗೆ, ಇವತ್ತು “ಚೆಲ್ಲಿದರು ಮಲ್ಲಿಗೆಯಾ” ಗೀತೆಗೆ ಹೆಜ್ಜೆ ಹಾಕಲಿದ್ದಾರೆ ನಮ್ಮ ಮಾಸ್ ಹುಡುಗರು. ನೀವೂ ತಪ್ಪದೇ ನೋಡ್ತಿರಾ ಅಲ್ವಾ..?

error: Content is protected !!