ಮುಂಡಗೋಡ ತಾಲೂಕಿನ ನ್ಯಾಸರ್ಗಿಯ ಗೌಳಿದಡ್ಡಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮೃತನು ಶಿಗ್ಗಾವಿ ತಾಲೂಕಿನ ಹೊಸುರು ಗ್ರಾಮದವನು ಅಂತಾ ತಿಳಿದು ಬಂದಿದೆ. ಹೊಸೂರಿನ ವೀರಭದ್ರಪ್ಪ ಶೇಖರಯ್ಯ ಹಿರೇಮಠ(48), ಎಂಬುವವರೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈತ ಮುಂಡಗೋಡಿನಿಂದ ನ್ಯಾಸರ್ಗಿ ಮಾರ್ಗವಾಗಿ ಹೊಸೂರಿಗೆ ಬೈಕ್ ಮೂಲಕ ಹೊರಟಿದ್ದ. ಈ ವೇಳೆ ನ್ಯಾಸರ್ಗಿ ಸಮೀಪದ ಗೌಳಿದಡ್ಡಿಯ ರಸ್ತೆ ತಿರುವಿನಲ್ಲಿ ಅಪಘಾತವಾಗಿದೆ ಅನ್ನೊ ಮಾಹಿತಿ ತಿಳಿದುಬಂದಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಕೊಪ್ಪದ ಕುಟ್ರಿಯವರ ಹುಡುಗ “ಅಭಿ” ಇನ್ನು ನೆನಪು ಮಾತ್ರ..! ಕ್ರೂರ ವಿಧಿಯೇ ಧಿಕ್ಕಾರವಿರಲಿ
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಅಭಿಷೇಕ ಬಸವಂತಪ್ಪ ಕುಟ್ರಿ ಮೃತಪಟ್ಟಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಷೇಕಙ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಅಂದಹಾಗೆ, ಸದಾ ಹಸನ್ಮಖಿಯಾಗಿದ್ದ ಹುಡುಗ ಅಭಿಷೇಕ ಮುಂಡಗೋಡಿನ ಮಹಾರಾಜಾ ಮೊಬೈಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಕಳೆದ ಎರಡು ಮೂರು ದಿನಗಳಿಂದ ಕೊಂಚ ಜ್ವರದಿಂದ ಬಳಲುತ್ತಿದ್ದ ಅಭಿಷೇಕ ಗೆ ಹುಬ್ಬಳ್ಳಿ ಕೀಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತ್ರ ಇಂದು ರವಿವಾರ ರಾತ್ರಿ ಸಾವನ್ನಪ್ಪಿದ್ದಾನೆ. ಅಭಿಷೇಕ ಕುಟ್ರಿ ಸಾವಿಗೆ, ಪಬ್ಲಿಕ್ ಫಸ್ಟ್ ನ್ಯೂಸ್ ಬಳಗ ಸೇರಿ ಮುಂಡಗೋಡ ತಾಲೂಕಿನ ಹಲವು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ, ಮೂವರು ಎಸ್ಕೇಪ್..!?
ಮುಂಡಗೋಡ ಪಿಎಸ್ ಐ ಪರಶುರಾಮ್ ಮತ್ತವರ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ ಆಟದಲ್ಲಿ “ಬ್ಯುಸಿ” ಆಗಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೆ ಮೂವರು ಪರಾರಿಯಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಫಸ್ಟ್ ಗೆ ತಿಳಿದು ಬಂದಿದೆ. ಅಂದಹಾಗೆ, ತಾಲೂಕಿನ ಕಾತೂರು ಸಮೀಪ ಇಸ್ಪೀಟು ಆಟದಲ್ಲಿ ತೊಡಗಿದ್ದರು. ಈ ವೇಳೆ ದಾಳಿ ನಡೆಸಿರೋ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದಂತೆ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಆಟದಲ್ಲಿ ತೊಡಗಿಸಿದ್ದ 39 ಸಾವಿರ ರೂ. ಹಣವನ್ನೂ ಜಪ್ತಿ ಮಾಡಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ದಾಳಿ ವೇಳೆ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ್, ಪೇದೆಗಳಾದ ಮಂಜು ಚಿಂಚಲಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ್ ಮುಧೋಳ್, ಕೆಂಚೆಪ್ಪ, ರವಿ ಭಾಗಿಯಾಗಿದ್ರು ಎನ್ನಲಾಗಿದೆ.
ಹಾವೇರಿ ಸಮೀಪ ಭೀಕರ ಅಪಘಾತ ಮಕ್ಕಳೂ ಸೇರಿ 13 ಜನರ ದುರ್ಮರಣ..!
ಹಾವೇರಿ: ಇಲ್ಲಿಗೆ ಸಮೀಪದ ಗುಂಡನಹಳ್ಳಿ ಕ್ರಾಸ್ ಬಳಿರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶುಕ್ರವಾರ ಬೆಳಗಿನ ಜಾವ 3.40ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳೂ ಸೇರಿ13 ಜನರು ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದ್ದು, ವಾಹನದಲ್ಲಿದ್ದ ಚಾಲಕ ಸೇರಿ ನಾಲ್ವರು ಪುರುಷರು, ಏಳುಜನ ಮಹಿಳೆಯರು, ಮಗು, ಓರ್ವ ಅಜ್ಜಿ, ಓರ್ವ ವಿಕಲಚೇತನ ಯುವತಿ ಸೇರಿದ್ದು, ಶವಗಳನ್ನು ಇಲ್ಲಿ ನ ಜಿಲ್ಲಾ ಆಸ್ಪತ್ರೆ ಗೆ ಸಾಗಿಸಲಾಗಿದೆ. ಅಪಘಾತ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 108ರ ವಾಹನದ ಸ್ಟಾಪ್ ನರ್ಸ ಶಂಕರ್ ಲಮಾಣಿ, ಚಾಲಕರು ಟಿಟಿ ವಾಹನದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಈ ಮೂವರು ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಚಿಕಿತ್ಸೆಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಯ ಎಮ್ಮೆ ಹಟ್ಟಿ ಗಂಗಾಮದವರನ್ನು ತಿಳಿದು ಬಂದಿದೆ ಟಿಟಿ...
ಇಂದೂರು ಗ್ರಾಪಂ ನಲ್ಲಿ ಉದ್ಯೋಗ ಖಾತ್ರಿಯಲ್ಲಿ ಚೊಂಬಾಟ..! ತಾಲೂಕಿನಲ್ಲಿ ಅವನೊಬ್ಬ ನುಂಗಣ್ಣನಿಂದ ಇಡೀ ಯೋಜನೆಯೇ ಉಳ್ಳವರ ಪಾಲಾಗ್ತಿದೆಯಾ..?
ಮುಂಡಗೋಡ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಹುತೇಕ ಹಳ್ಳ ಹಿಡಿತಿದೆಯಾ..? ಅವನೊಬ್ಬ ಬಕಾಸುರ ಬಗಬಂಡಿಯಿಂದ ಬಡ ಕೂಲಿ ಕಾರ್ಮಿಕರಿಗೆ ಬದುಕಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ, ಕೆಲ ಆಸೆ ಬುರುಕ ಗ್ರಾಮ ಪಂಚಾಯತಿ ಮೆಂಬರುಗಳಿಗೆ ರೊಕ್ಕ ಗಳಿಸುವ ಅಡ್ಡ ಕಸುಬು ಆಗ್ತಿದೆಯಾ..? ಇಂತಹದ್ದೊಂದು ಅನುಮಾನ ಇಂದೂರಿನ ಈ ಗ್ರಾಮ ಪಂಚಾಯತಿ ಸದಸ್ಯನ ಮಾತುಗಳನ್ನು ಕೇಳಿದ್ರೆ ಎಂತವರಿಗೂ ಅರ್ಥವಾಗ್ತಿದೆ. ಅದು ಇಂದೂರು ಪಂಚಾಯತಿ..! ಯಸ್, ಇಂದೂರು ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಇದುವರೆಗೂ ಒಂದಿಷ್ಟು ಮಾನ ಮರ್ಯಾದೆ ಅಂತಾ ಇಟ್ಕೊಂಡು ಹೆಸರುವಾಸಿಯಾಗಿತ್ತು. ಆದ್ರೆ, ಈಗ ಅದೇ ಗ್ರಾಮ ಪಂಚಾಯತಿಯ ಗೌರವಾನ್ವಿತ ಸದಸ್ಯರುಗಳು, ಸಿಬ್ಬಂದಿಗಳೇ ಅಲ್ಲಿನ ಅಸಲೀ ಹೂರಣ ಬಿಚ್ಚಿಟ್ಟಿದ್ದಾರೆ. ಬಡ ಕೂಲಿ ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರೋ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯನ್ನು ಹೇಗೇಲ್ಲ ಹಳ್ಳಹಿಡಿಸಿದ್ದಾರೆ ಅಂತಾ ಖುದ್ದು, ಪಂಚಾಯತಿ ಸದಸ್ಯರೇ ಆರೋಪಿಸಿದ್ದಾರೆ. ಅಸಲು, ಸರ್ಕಾರ ಬಡ ಕೂಲಿ ಕಾರ್ಮಿಕರಿಗಾಗೇ ರೂಪಿಸಿರೋ ಮಹತ್ವದ ಈ ಯೋಜನೆ, ಬಡ ಕೂಲಿ ಕಾರ್ಮಿಕರ ಬದಲಾಗಿ ಜೆಸಿಬಿ ಮಾಲೀಕರ ಪಾಲಾಗುತ್ತಿದೆ. ಅದ್ರಲ್ಲೂ...
ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!
ಇದು ಮುಂಡಗೋಡ ಪೊಲೀಸಪ್ಪನ ಘನಂಧಾರಿ ಕೆಲಸ. ಯುವತಿಯೋರ್ವಳಿಗೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಮುಂಡಾಮೋಚಿದ ನಯವಂಚಕತನದ ಸ್ಟೋರಿ. ಈತನಿಗೆ ಈ ಹಿಂದೆಯೇ ಇಲ್ಲಿನ ಇಲಾಖೆಯ ಹಿರಿಯರು ಒಂದಿಷ್ಟು ಕಿವಿ ಹಿಂಡಿದ್ದಿದ್ರೆ ಬಹುಶಃ ಇವತ್ತು ಇಡೀ ಇಲಾಖೆಗೆ ಆಗಿರೋ ಮುಜುಗರ ಒಂದಿಷ್ಟು ತಪ್ಪುತ್ತಿತ್ತೋ ಏನೋ. ಆದ್ರೆ, ಯಾರಂದ್ರೆ ಯಾರೂ ಈತನ ಅಡ್ನಾಡಿ ಕೆಲಸಗಳ ವಿರುದ್ಧ ಧನಿ ಎತ್ತಲೇ ಇಲ್ಲ. ಹೀಗಾಗಿ ಇವತ್ತು ಅದೊಂದು ಅಮಾಯಕ ಹೆಣ್ಣು ಜೀವ ಮುಂಡಗೋಡ ಠಾಣೆಯ ಮೆಟ್ಟಿಲೇರಿ FIR ದಾಖಲಿಸಿದೆ. ತನಗೆ ಆಗಿರೋ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದಿದೆ. ಅಸಲು, ಈಗಲೂ ಆಕೆಗೆ ಖಡಾಖಂಡಿತವಾದ ನ್ಯಾಯ ಸಿಕ್ಕತ್ತೆ ಅನ್ನೋ ಭರವಸೆನೇ ಉಳಿದಿಲ್ಲ. ಬರೋಬ್ಬರಿ 18 ಲಕ್ಷ..! ಸದ್ಯ ಮುಂಡಗೋಡ ಠಾಣೆಯಲ್ಲಿ ಹಾಸನದ ಯುವತಿಯೋರ್ವಳು ಗಿರೀಶ್ ಅನ್ನೊ ಪೊಲೀಸಪ್ಪನ ವಿರುದ್ಧ ವಂಚನೆಯ ಕೇಸ್ ದಾಖಲಿಸಿದ್ದಾರೆ. ಬರೋಬ್ಬರಿ 18 ಲಕ್ಷಗಳನ್ಜು ವಂಚಿಸಿರೋ ಆರೋಪ ಆತನ ಮೇಲಿದೆ. ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಆರೋಪಿ ಪೊಲೀಸಪ್ಪ ನಾಪತ್ತೆಯಾಗಿದ್ದಾನೆ ಅನ್ನೋ ಮಾಹಿತಿ ಇದೆ. ಹೀಗಾಗಿ, ತನ್ನ...
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಬಂಧನ! ಯಾಕೆ ಗೊತ್ತಾ..?
ಶಿವಮೊಗ್ಗ : ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಬಂಧನವಾಗಿದೆ. ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿರುವ ಅರುಣ್ ಕುಗ್ವೆ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು, ಮುಂದಿನ 5 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಅರುಣ್ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ, ಇದೇ ಜೂ. 28 ಕ್ಕೆ ಅರುಣ್ ಕುಗ್ವೆ ಮದುವೆ ಫಿಕ್ಸ್ ಆಗಿತ್ತು. ಆದ್ರೆ, ಅದಕ್ಕೂ ಮೊದಲೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಪೊಲೀಸರಿಂದ ಬಂಧನವಾಗಿದೆ. ಮಹಿಳೆಯೊಬ್ಬರಿಗೆ ಬಳಸಿಕೊಂಡಿರುವ ಆರೋಪ ಹೊತ್ತಿರೋ ಅರುಣ್, ತನಗೆ ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಮಹಿಳೆ ಆರೋಪಿಸಿ ಕೇಸು ದಾಖಲಿಸಿದ್ದಾರೆ. http://*Exclusive* *ಬಿಸಿಯೂಟದ ಸಿಬ್ಬಂದಿ ನೇಮಕಕ್ಕೂ ಫಿಕ್ಸ್ ಆಯ್ತಾ ರೇಟು..?* *ಮುಂಡಗೋಡ ತುಂಬ, ಪ.ಪಂ. ಸದಸ್ಯೆ ಆಡಿರೋ ಮಾತಿನದ್ದೇ ಘಾಟು..?* *ಅಷ್ಟಕ್ಕೂ ಅವ್ರದ್ದೇನಾ ಈ ಫೋನ್ ಸಂಭಾಷಣೆ ಆಡಿಯೋ..?* *ಪಬ್ಲಿಕ್ ಫಸ್ಟ್ ನ್ಯೂಸ್* *https://publicfirstnewz.com/?p=33381*
ಭಟ್ಕಳದಲ್ಲಿ ಮತ್ತೋರ್ವ ಶಂಕಿತ ಉಗ್ರನಿಗಾಗಿ ATS ಅಧಿಕಾರಿಗಳಿಂದ ಶೋಧ, ಶಂಕಿತನ ಮನೆಗೆ ನೋಟೀಸ್..!
ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೊಬ್ಬ ಶಂಕಿತ (Suspected Terrorist) ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ತೀವ್ರ ಶೋಧ ನಡೆಸಿದ್ದು, ಶಂಕಿತ ಉಗ್ರನ ನಿವಾಸಕ್ಕೆ ATS ಅಧಿಕಾರಿಗಳು ನೋಟಿಸ್ ಅಂಟಿಸಿದ್ದು, ಶಂಕಿತನ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲ ವರ್ಷಗಳ ಹಿಂದೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಭಟ್ಕಳ ಮೂಲದ ವ್ಯಕ್ತಿಯನ್ನು ಜೂನ್ 21ಕ್ಕೆ ಹಾಜರು ಪಡಿಸಲು ಪುಣೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಅಧಿಕಾರಿಗಳ ತಂಡ ಭಟ್ಕಳದಲ್ಲಿ ತಲಾಶ್ ನಡೆಸಿದೆ. ಆರೋಪಿ ಪತ್ತೆಗೆ ಉಗ್ರ ನಿಗ್ರಹ ಪಡೆ ಉತ್ತರ ಕನಡ ಜಿಲಾಡಳಿತದ ನೆರವು ಕೇಳಿದೆ. ಈತ ಮಹಾರಾಷ್ಟ್ರದಲ್ಲಿ ಉಗ್ರ ನಿಗ್ರಹ ಪಡೆ ಪುಣೆ ವಿಭಾಗದಲ್ಲಿ ಯುಎಪಿಎಎ (ಕಾನೂನುಬಾಹಿರ ಕೃತ್ಯ ತಡೆ ಕಾಯಿದೆ) ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅಬ್ದುಲ್ ಕಬೀರ ಸುಲ್ತಾನ ಅಲಿಯಾಸ್ ಮೌಲಾನಾ ಸುಲ್ತಾನ್ ಹೆಸರಿನ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನವಾಯತ...
ಬಿಸಿಯೂಟದ ಸಿಬ್ಬಂದಿ ನೇಮಕಕ್ಕೂ ಫಿಕ್ಸ್ ಆಯ್ತಾ ರೇಟು..? ಮುಂಡಗೋಡ ತುಂಬ, ಪ.ಪಂ. ಸದಸ್ಯೆ ಆಡಿರೋ ಮಾತಿನದ್ದೇ ಘಾಟು..!
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಬಿಸಿಯೂಟದ ನೌಕರಿ ಬಿಕರಿಗಿದೆಯಾ..? ಇಂತಹದ್ದೊಂದು ಅನುಮಾನ ಅದೊಂದು ಆಡಿಯೋ ಕೇಳಿದ ಎಂತವ್ರಿಗೂ ಮೂಡದೇ ಇರಲ್ಲ. ಮುಂಡಗೋಡ ಪಟ್ಟಣ ಪಂಚಾಯತಿಯ ಸದಸ್ಯೆಯೊಬ್ಬರು ಮಾತನಾಡಿದ್ದು ಎನ್ನಲಾದ ಆಡಿಯೋ ಸದ್ಯ ಊರ ತುಂಬಾ ವೈರಲ್ ಆಗಿದೆ. ಖುಲ್ಲಂ ಖುಲ್ಲಾ ದಂಧೆನಾ..? ಅಷ್ಟಕ್ಕೂ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಎರಡು ಶಾಲೆಗಳಿಗೆ ಅವಶ್ಯವಿರುವ ಬಿಸಿಯೂಟದ ಸಿಬ್ಬಂದಿಯ ನೇಮಕದಲ್ಲಿ ಪಟ್ಟಣ ಪಂಚಾಯತಿಯ ಆ ಸದಸ್ಯೆ ಖುಲ್ಲಂ ಖುಲ್ಲಾ ವ್ಯವಹಾರಕ್ಕೆ ಇಳಿದು ಬಿಟ್ರಾ..? ಬಿಸಿಯೂಟದ ಸಿಬ್ಬಂದಿಗಳ ನೇಮಕಕ್ಕೆ, ಬರೋಬ್ಬರಿ ತಲಾ 50 ಸಾವಿರ ರೂ. ರೇಟು ಫಿಕ್ಸ್ ಆಗಿ ಹೋಯ್ತಾ..? ಇದೇಲ್ಲ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಈ ಆಡಿಯೋ ಸಂಭಾಷಣೆಯಿಂದ ಅನುಮಾನ ಮೂಡಿಸಿ, ತಲೆ ಗಿರ್ರ್ ಅನಿಸಿದೆ. ಬೇಕಾಗಿದ್ದು ಎರಡು ಸ್ಥಾನ..! ಅಸಲು, ಮುಂಡಗೋಡ ಪಟ್ಟಣದ ಮಾರಿಕಾಂಬಾ ನಗರದ ಕಿರಿಯ ಪ್ರಾಥಮಿಕ ಶಾಲೆ, ಹಾಗೂ ಬಸವನಗರದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಒಂದರಂತೆ, ಎರಡು ಬಿಸಿಯೂಟದ ಸಿಬ್ಬಂದಿಯ ಹುದ್ದೆ ಖಾಲಿಯಿದೆ. ಹೀಗಾಗಿ, ಖಾಲಿಯಿರೋ ಹುದ್ದೆಗಳನ್ನು...
ಪಾಳಾ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಮರ, ಮಗು ಸೇರಿ ದಂಪತಿಗೆ ಗಂಭೀರ ಗಾಯ..!
ಪಾಳಾ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಮಾವಿನ ಮರ ಬಿದ್ದ ಪರಿಣಾಮ ಒಂದು ಮಗು ಸೇರಿ ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಪಾಳಾದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ರಸ್ತೆ ಬದಿಯ ಹಳೆಯ ಮರ ಬಿದ್ದು ಘಟನೆ ಸಂಭವಿಸಿದೆ. ಮುಂಡಗೋಡ ತಾಲೂಕಿನ ಚಿಟಗೇರಿಯ ಪರಶುರಾಮ್ ಸಿದ್ದಪ್ಪ ನಾಯ್ಕರ್, ಮಧು ಪರಶುರಾಮ್ ನಾಯ್ಕರ್ ಹಾಗೂ ಒಂದೂವರೆ ವರ್ಷದ ಮಗು ಧನವೀರ್ ಪರಶುರಾಮ್ ನಾಯ್ಕರ್ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೆ ಮಗುವನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮುಂಡಗೋಡ ಪಿಎಸ್ ಐ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.