ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಮಹಾಲೆ ಮಿಲ್ ಹತ್ತಿರ ಭೀಕರ ಅಪಘಾತವಾಗಿದೆ. PWD ಇಲಾಖೆಯ ಬೇಜವಾಬ್ದಾರಿ ಹಾಗೂ ಸರ್ಕಾರದ ಖಬರಗೇಡಿತನಕ್ಕೆ ಈ ರಸ್ತೆ ಅನ್ನೋದು ಯಮರೂಪಿಯಾಗಿದೆ. ನಿತ್ಯವೂ ಹಲವರು ಇಲ್ಲಿ ಎದ್ದು, ಬಿದ್ದು ಓಡಾಡುವಂತಾಗಿದೆ. ಅಂತದ್ದರಲ್ಲಿ ಇವಾಗ ಮತ್ತೊಂದು ಅಪಘಾತಕ್ಕೆ ಇದೇ ರಸ್ತೆಯ ಗುಂಡಿಗಳು ಕಾರಣವಾಗಿವೆ.
ಅಂದಹಾಗೆ, ಮುಂಡಗೋಡ ಪಟ್ಟಣದ ಹೊರ ವಲಯದ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬೈಕ್ ಸವಾರನೊಬ್ಬ ಬಿದ್ದಿದ್ದಾನೆ. ಹೀಗಾಗಿ, ಗಂಭೀರ ಗಾಯಗೊಂಡಿರೋ ಬೈಕ್ ಸವಾರನನ್ನು ಸ್ಥಳೀಯರು 108 ಅಂಬ್ಯುಲೆನ್ಸ್
ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.
ಗಂಭೀರವಾಗಿ ಗಾಯಗೊಂಡವನನ್ನು ಮುಂಡಗೋಡ ಹೊಸ ಓಣಿಯ ಮೊಹಮ್ಮದ್ ಜಾಫರ್ (22) ಅಂತಾ ಗುರುತಿಸಲಾಗಿದೆ.
ಈ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಪ್ರತಿದಿನ ಮುಂಡಗೋಡಿನ ಜನ ಈ ರಸ್ತೆಯಲ್ಲಿ ಸಂಚರಿಸುವಾಗ ಹಿಡಿಶಾಪ ಹಾಕುವಂತಾಗಿದೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.