ಮುಂಡಗೋಡ ಹೊರ ವಲಯದ ಮಹಾಲೆ ಮಿಲ್ ಹತ್ತಿರ PWD ಅಧಿಕಾರಿಗಳು ಬಂದಿಳಿದಿದ್ದಾರೆ. ನಿನ್ನೆಯಷ್ಟೇ ರಸ್ತೆಯಲ್ಲಿ ಬಾಯ್ತೆರೆದಿರೋ ಯಮರೂಪಿ ಗುಂಡಿಗಳ ಬಗ್ಗೆ ಪಬ್ಲಿಕ್ ಫಸ್ಟ್ ನ್ಯೂಸ್ ಪ್ರತ್ಯಕ್ಷ ವರದಿ ಬಿತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗ್ತಿದೆ. ವಾಹನ ಸವಾರರಿಗೆ ತಾತ್ಕಾಲಿಕವಾಗಿ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್..!
ನಿಜ, ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ. ಪ್ರತೀ ವರ್ಷದ ಮಳೆಗಾಲ ಬಂತಂದ್ರೆ ಸಾಕು ಈ ರಸ್ತೆಯಲ್ಲಿ ಜಸ್ಟ್ ನಡೆದಾಡಲೂ ಆಗದ ಸ್ಥಿತಿ ಇರತ್ತೆ. ಅದೆಷ್ಟೇ ತೆಪೆ ಹಚ್ಚಿದ್ರೂ ಈ ರಸ್ತೆ ಇವತ್ತಿಗೂ ಶಾಶ್ವತ ಪರಿಹಾರಕ್ಕೆ ಸಾಕ್ಷಿ ಆಗಲೇ ಇಲ್ಲ. ಅವನೊಬ್ಬ ಬ್ರಷ್ಟ ಅಧಿಕಾರಿ ಅವತ್ತು ಸರಿಯಾಗಿ ಕಾರ್ಯ ನಿರ್ವಹಿಸಿದ್ದಿದ್ದರೆ, ಈ ಸ್ಥಿತಿ ಇರ್ತಾನೇ ಇರಲಿಲ್ಲ. ಈ ರಸ್ತೆಯ ಸಮಸ್ಯೆಗೆ ಅವತ್ತೇ ಮುಕ್ತಿ ಸಿಕ್ಕುಬಿಡ್ತಿತ್ತು ಅಂತಾರೆ ಇಲ್ಲಿನ ಜನ.
ಅದೇನೇ ಆಗಲಿ, ಸದ್ಯ ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಆದ್ರೆ, ಇದೇ ಶಾಶ್ವರ ಪರಿಹಾರ ಅಲ್ಲ. ಇಲ್ಲಿ ಸಿಸಿ ರಸ್ತೆ ಆಗಬೇಕಿದೆ ಅನ್ನೋದು ಸ್ಥಳೀಯರ ಅಭಿಪ್ರಾಯ.