ನಾಳೆ ವೈದ್ಯರ ಮುಷ್ಕರ ಹಿನ್ನೆಲೆ ಸೈಲೆಂಟಾಯ್ತಾ ಮುಂಡಗೋಡಿನ IMA ತಾಲೂಕಾ ಘಟಕ..? ಬೆಂಬಲ ಇದೆಯೋ, ಇಲ್ವೋ..?

ಮುಂಡಗೋಡ: ಕೊಲ್ಕತ್ತಾದಲ್ಲಿ ಇತ್ತೀಚಿಗೆ ನಡೆದ ಮೆಡಿಕಲ್ ಸ್ನಾತಕೋತ್ತರ ಪದವಿಧರ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ದೇಶವ್ಯಾಪಿ ಮುಷ್ಕರದ ಕರೆಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಾಳೆ ಮುಷ್ಕರ ನಡೆಯುತ್ತಿದೆ. ಆದ್ರೆ ಮುಂಡಗೋಡಿನಲ್ಲಿ ಮಾತ್ರ ಮುಷ್ಕರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ನಾಳೆ ಶನಿವಾರ ಮುಂಜಾನೆ 6 ಗಂಟೆಯಿಂದ ರವಿವಾರ ಮುಂಜಾನೆ 6 ಗಂಟೆಯವರೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ದಂತ ಚಿಕಿತ್ಸಾ ಕೇಂದ್ರದಲ್ಲಿ ತುರ್ತು ಸೇವೆ ಮಾತ್ರ ಲಭ್ಯವಿರುತ್ತದೆ. ಯಾವುದೇ ಓ.ಪಿ.ಡಿ ಮತ್ತು ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯರು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ ಸೇವೆ ಸಲ್ಲಿಸಲಿದ್ದಾರೆ ಅಂತಾ IMA ನಿರ್ಧರಿಸಿದೆ. ಹೀಗಾಗಿ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕಿನಲ್ಲೂ ತಾಲೂಕಾ ಘಟಕದ ಅಧ್ಯಕ್ಷರುಗಳು ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ, ಈ ಕ್ಷಣದವರೆಗೂ ಮುಂಡಗೋಡ ತಾಲೂಕಿನ ಯಾವೊಬ್ಬ ಸಂಘಟನೆಯವರೂ ಮಾಹಿತಿ ನೀಡಿಲ್ಲ.

ಹೀಗಾಗಿ, ನಾಳೆ ಶನಿವಾರ ಮುಂಡಗೋಡ ತಾಲೂಕಿನಲ್ಲಿ ಯಥಾರೀತಿ, ಆಸ್ಪತ್ರೆಗಳು ತೆರೆದಿರತ್ತಾ..? ಅಥವಾ ಬಂದ್ ಆಗಿರತ್ತಾ..? ಇದರ ಬಗ್ಗೆ IMA ತಾಲೂಕಾ ಘಟಕ ಸ್ಪಷ್ಟ ಮಾಹಿತಿ ನೀಡಬೇಕಿದೆ. ಇದ್ರಿಂದ, ಗ್ರಾಮಾಂತರ ಭಾಗದಿಂದ ವೈದ್ಯಕೀಯ ಚಿಕಿತ್ಸೆಗಾಗಿ ಆಗಮಿಸುವವರಿಗೆ ಅನುಕೂಲವಾಗಲಿದೆ ಎಂಬುದು ಬಲ್ಲವರ ಅಭಿಪ್ರಾಯ.

error: Content is protected !!