ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ..! ಮೊದಲ ದಿನವೇ ಕಳ್ಳರ ಕೈಚಳಕಕ್ಕೆ ಭಕ್ತರು ಶಾಕ್..!!

ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ..! ಮೊದಲ ದಿನವೇ ಕಳ್ಳರ ಕೈಚಳಕಕ್ಕೆ ಭಕ್ತರು ಶಾಕ್..!!

ಶಿರಸಿಯ ಮಾರಿಕಾಂಬೆಯ ಜಾತ್ರೆ ವಿದ್ಯುಕ್ತ ಚಾಲನೆ ಪಡೆದುಕೊಂಡಿದೆ. ಸಹಸ್ರ ಸಂಖ್ಯೆಯ ಭಕ್ತರ ಹರ್ಷೋದ್ಘಾರದ ನಡುವೆ ಶಿರಸಿಯ ಸಿರಿದೇವಿ ಜಾತ್ರಾ ಗದ್ದುಗೆಯ ಮೇಲೆ ವಿರಾಜಮಾನಳಾಗಿದ್ದಾಳೆ. ಆದ್ರೆ, ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಅದ್ಯಾಕೋ ಏನೋ ಪೊಲೀಸ್ ಇಲಾಖೆ ಕೊಂಚ ನಿರ್ಲಿಪ್ತವಾಗಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ, ಮೊದಲ ದಿನದ ಜಾತ್ರೆಯಲ್ಲೇ ಕಳ್ಳರ ಕೈಚಳಕ ವಿಪರೀತ ಹೆಚ್ಚಾಗಿದೆ ಅಂತಾ ಸಾಕಷ್ಟು ಭಕ್ತರು ಗಾಬರಿಗೊಂಡಿದ್ದಾರೆ. ಮೊದಲ ದಿನವೇ ಇಷ್ಟಾ..? ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಭಕ್ತರ ಮೂಲಕ ಬಂದ‌ ಮಾಹಿತಿ ಪ್ರಕಾರ ಇವತ್ತಿನ ಮೊದಲ ದಿನದ ಮಾರಿಕಾಂಬಾ ಜಾತ್ರೆಯಲ್ಲಿ ಏನಿಲ್ಲವೆಂದರೂ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಾಗಿವೆ. ಆದ್ರೆ, ಅವೇಲ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ. ಕೆಲವು ಮಾತ್ರ ಪೊಲೀಸರ ಗಮನಕ್ಕೆ ಬಂದಿದೆ. ಅದ್ರಲ್ಲಿ, ನಾಲ್ಕೈದು ಚಿನ್ನದ ಸರಗಳ್ಳತನ, ಮೊಬೈಲ್ ಕಳ್ಳತನ ನಡೆದು ಹೋಗಿದೆ ಎನ್ನಲಾಗ್ತಿದೆ. ಆದ್ರೆ, ರಾಜ್ಯದ ಪ್ರಸಿದ್ಧ ಜಾತ್ರೆಯೊಂದರಲ್ಲಿ ಮೊದಲ ದಿನವೇ ಇಂತಹ ಘಟನೆಗಳು ಈ ಪರಿಯಲ್ಲಿ ನಡೆದಿದೆ ಅಂದ್ರೆ ಏನಯ್ಯಾ ಗತಿ ಅಂತಾ ಭಕ್ತರು ಪ್ರಶ್ನಿಸ್ತಿದಾರೆ....

ಮುಂಡಗೋಡಿಗೆ ನೂತನ ಸಿಪಿಐ ಯಾರು ಗೊತ್ತಾ..? ಇವತ್ತೇ ಅಧಿಕಾರ ಸ್ವೀಕಾರ ಫಿಕ್ಸ್..!

ಮುಂಡಗೋಡಿಗೆ ನೂತನ ಸಿಪಿಐ ಯಾರು ಗೊತ್ತಾ..? ಇವತ್ತೇ ಅಧಿಕಾರ ಸ್ವೀಕಾರ ಫಿಕ್ಸ್..!

ಮುಂಡಗೋಡ ನೂತನ ಸಿಪಿಐ ಆಗಿ ರಂಗನಾಥ್ ನೀಲಮ್ಮನವರ್ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತಿಚೆಗಷ್ಟೇ ಪದೋನ್ನತಿ ಹೊಂದಿ ಇಲ್ಲಿಂದ ವರ್ಗಾವಣೆಗೊಂಡ ಬಿ.ಎಸ್.ಲೋಕಾಪುರ ಸ್ಥಾನಕ್ಕೆ ರಂಗನಾಥ್ ನೀಲಮ್ಮನವರ್ ನೇಮಕಗೊಂಡಿದ್ದಾರೆ. ಅಂದಹಾಗೆ, ಈ ಮೊದಲು ಯಲ್ಲಾಪುರ ಠಾಣೆಯಲ್ಲಿಯೂ ಕಾರ್ಯನಿರ್ವಹಿಸಿದ್ದ ನೀಲಮ್ಮನವರ್, ಕಾರವಾರದ ಸೈಬರ್ ಕ್ರೈಂ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಮುಂಡಗೋಡ ಠಾಣೆಗೆ ನಿಯುಕ್ತಿಗೊಂಡು ಆಗಮಿಸಲಿದ್ದಾರೆ. ಇವತ್ತು ಬಹುತೇಕ ಮುಂಡಗೋಡ ಠಾಣೆಗೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದು ಮುಂಡಗೋಡಿಗರಿಗೆ ಶಾಕಿಂಗ್ ಸುದ್ದಿ..!  ಅವನ ಸಾವು ಸಹಜ ಅಲ್ಲವಂತೆ, ಹಾಗಿದ್ರೆ ಪತ್ನಿಯೇ ಪತಿಯನ್ನ ಕೊಂದಳಾ ಪಾಪಿ..?

ಇದು ಮುಂಡಗೋಡಿಗರಿಗೆ ಶಾಕಿಂಗ್ ಸುದ್ದಿ..! ಅವನ ಸಾವು ಸಹಜ ಅಲ್ಲವಂತೆ, ಹಾಗಿದ್ರೆ ಪತ್ನಿಯೇ ಪತಿಯನ್ನ ಕೊಂದಳಾ ಪಾಪಿ..?

ಇದು ನಿಜಕ್ಕೂ ಮುಂಡಗೋಡಿಗರನ್ನು ನಿಬ್ಬೆರಗಾಗಿಸೋ ಸುದ್ದಿ. ಗಂಡನನ್ನೇ ಕೊಲೆ ಮಾಡಿ, ವಿಪರೀತ ಎಣ್ಣೆ ಹೊಡೆದು ಸತ್ತು ಹೋಗಿದ್ದಾನೆ ಅಂತಾ ಬಿಂಬಿಸಿರೋ ಖತರ್ನಾಕ ಪತ್ನಿಯೊಬ್ಬಳ ಗುಸು ಗುಸು, ಪಿಸು ಪಿಸು..! 15 ದಿನಗಳ ಹಿಂದೆ..! ಅಸಲು ಕಳೆದ 15 ದಿನಗಳ ಹಿಂದೆ ನಡೆದು ಹೋದ ಈ ಆಟದಲ್ಲಿ ಉಸಿರು ಚೆಲ್ಲಿದವನ ಆತ್ಮ ಇನ್ನೂ ಅದೇ ಜಾಗದಲ್ಲಿ ಗಿರಕಿ ಹೊಡೆಯುತ್ತಿದೆಯೋ ಏನೋ..? ತಾನೇ ತಾಳಿ ಕಟ್ಟಿದ್ದ ಮಾಯಾಂಗನೆಯೇ ತನ್ನನ್ನ ಕೊಂದು ಹಾಕಿದ್ದಾಳೆ, ನಾನು ಕುಡಿದು ಸತ್ತಿಲ್ಲ ಅಂತಾ ಅದೇಷ್ಟೇ ಬಾಯಿ ಬಡಕೊಂಡ್ರೂ ಪಾಪ ಆ ಪತಿಯ ಆತ್ಮದ ಮೂಕ ರೋಧನ ಯಾರಂದ್ರೆ ಯಾರಿಗೂ ಕೇಳಿಸಿರಲೇ ಇಲ್ಲವಂತೆ, ಆದ್ರೆ, ಸದ್ಯ ಅದೊಂದು ಸಮಾಜದ ಮುಖಂಡರೇ ನಿಂತು ಭಯಾನಕ ಕೇಸನ್ನು ಬಟಾಬಯಲು ಮಾಡಿದ್ದಾರೆ ಅಂತಾ ಜನ ಮಾತಾಡಿಕೊಳ್ತಿದಾರೆ. ಈ ಮೂಲಕ ನಮ್ಮ ಮುಂಡಗೋಡ ಪೊಲೀಸರೂ ಕೂಡ ತಲೆ ಕೆಡಿಸಿಕೊಳ್ಳದೇ ಸಹಜ ಸಾವು ಅಂತ ಕೈ ತೊಳೆದುಕೊಂಡಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಕೊಟ್ಟಿದ್ದಾರಂತೆ. ಅಷ್ಟಕ್ಕೂ ಏನಾಯ್ತು..? ಈಗ್ಗೆ ಸುಮಾರು...

ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್, ಕರ್ನಾಟಕದಲ್ಲೂ ಎರಡು ಹಂತದಲ್ಲಿ ಮತದಾನ..! ಯಾವ ಡೇಟ್ ಗೊತ್ತಾ..?

ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್, ಕರ್ನಾಟಕದಲ್ಲೂ ಎರಡು ಹಂತದಲ್ಲಿ ಮತದಾನ..! ಯಾವ ಡೇಟ್ ಗೊತ್ತಾ..?

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಒಟ್ಟೂ ಇಡೀ ದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅದ್ರಲ್ಲಿ ಕರ್ನಾಟಕದಲ್ಲಿ ಎಪ್ರಿಲ್ 26 ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಇನ್ನು ಮೇ 7 ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ. ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಇಂದು ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಮಾಹಿತಿ ಸುದ್ದಿಗೋಷ್ಟಿಯ ಮೂಲಕ ಹೊರಬಿದ್ದಿದೆ.

ಬಸಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, ಆಸ್ಪತ್ರೆಗೆ ದಾಖಲು..!

ಬಸಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, ಆಸ್ಪತ್ರೆಗೆ ದಾಖಲು..!

ಮುಂಡಗೋಡ ತಾಲೂಕಿನ ಬಸಾಪುರ ಗ್ರಾಮದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬಸಾಪುರ ಗ್ರಾಮದ ಅರುಣ್ ಸಿಂಗ್ ರಜಪೂತ್ (24) ಎಂಬುವ ಯುವಕನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯಾವುದೋ ವಿಷಯವನ್ನು ಮನಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಯುವಕನನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಾಲಬಾಧೆ, ಇಂದೂರಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನಾ ಅನ್ನದಾತ..? ತನ್ನ ಗದ್ದೆಯಲ್ಲೇ ಸಾವಿಗೆ ಶರಣಾದ ರೈತ

ಸಾಲಬಾಧೆ, ಇಂದೂರಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನಾ ಅನ್ನದಾತ..? ತನ್ನ ಗದ್ದೆಯಲ್ಲೇ ಸಾವಿಗೆ ಶರಣಾದ ರೈತ

ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಅನ್ನದಾತನೋರ್ವ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಡೆದಿದೆ. ತೀವ್ರ ಬರದ ಹಿನ್ನೆಲೆಯಲ್ಲಿ ಬೋರವೆಲ್ ನಲ್ಲಿ ಅಂತರ್ಜಲ ಬತ್ತಿಹೋದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಇಂದೂರು ಗ್ರಾಮದ ಬಾಬಾಜಾನ್ ದಾವಲಸಾಬ್ ಹುಬ್ಬಳ್ಳಿ(65) ಎಂಬುವ ರೈತನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಗದ್ದೆಯಲ್ಲೇ ಸಾವಿಗೆ ಶರಣಾಗಿದ್ದಾನೆ. ಅಂದಹಾಗೆ, ಎರಡು ಎಕರೆ ಜಮೀನು ಹೊಂದಿರೋ ರೈತನಿಗೆ ಸಹಕಾರಿ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿಯೂ ಸಾಲ ಮಾಡಿಕೊಂಡಿದ್ದ. ಸುಮಾರು 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ರೈತನಿಗೆ ತೀವ್ರ ಬರದ ಹಿನ್ನೆಲೆ ಸಾಲ ತೀರಿಸುವ ಚಿಂತೆ ಶುರುವಾಗಿತ್ತು. ಹೀಗಾಗಿ, ತನ್ನ ಗದ್ದೆಯಲ್ಲೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಶಂಕಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾರವಳ್ಳಿ ಬಳಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು..!

ಹಾರವಳ್ಳಿ ಬಳಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ತಾಲೂಕಿನ ಹಾರವಳ್ಳಿ‌‌ ಗ್ರಾಮದ ಹತ್ತಿರ ಮಾಜಿ ಶಾಸಕ‌ ವಿ ಎಸ್ ಪಾಟೀಲ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ. ಬನವಾಸಿಯಿಂದ ಪಾಳಾ- ರಾಮಪೂರ ಮಾರ್ಗವಾಗಿ ತಮ್ಮ ಸ್ವಗ್ರಾಮ ಅಂದಲಗಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರ ಪರಿಣಾಮ‌ ಚಾಲಕ ಆನಂದ ಆಲೂರನಿಗೆ ಕಣ್ಣಿಗೆ ಹಾಗೂ ಮಾಜಿ ಶಾಸಕ ವಿ ಎಸ್ ಪಾಟೀಲರಿಗೆ ಎದಗೆ ಪೆಟ್ಟು ಬಿದ್ದಿದೆ. ಅದೃಷ್ಟವಾಶತ್ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಹೆಚ್ಚು ಗಾಯ- ನೋವುವಾಗಿಲ್ಲ. ತಕ್ಷಣವೇ ಮಾಜಿ ಶಾಸಕರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗನ‌ ಕಾಯಿಲೆಯಿಂದ ಮೃತಪಟ್ಟವರಿಗೆ ಅರಣ್ಯ ಇಲಾಖೆಯಿಂದ ಪರಿಹಾರಕ್ಕೆ ಚರ್ಚಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಮಂಗನ‌ ಕಾಯಿಲೆಯಿಂದ ಮೃತಪಟ್ಟವರಿಗೆ ಅರಣ್ಯ ಇಲಾಖೆಯಿಂದ ಪರಿಹಾರಕ್ಕೆ ಚರ್ಚಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಶಿರಸಿ: ಮಂಗನ ಕಾಯಿಲೆಯಿಂದ ಮರಣ ಹೊಂದಿದವರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಖಾಸಗಿ ಸಂಸ್ಥೆಗಳು ನೀಡುವ FSL ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದರು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧ್ಯತೆಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 854 ಕೋಟಿ ರೂ ಪಿಡಿ ಖಾತೆಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಉಚಿತ ಸಹಾಯವಾಣಿ ಆರಂಭಿಸಲಾಗುವುದು. ಸಚಿವರು ಮತ್ತು ಶಾಸಕರ ಅಧ್ಯಕ್ಷತೆ ಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಪ್ರತೀ ವಾರಕ್ಕೊಮ್ಮೆ ಪಿಡಿಒ ಗಳು ಮತ್ತು ವಿಎ ಗಳ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಡಿಸಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಂಸಬಾವಿ ಹೋರಿ ಹಬ್ಬದಲ್ಲಿ ಹೋರಿ ತಿವಿದು ಯುವಕ ಸಾವು, ಇಬ್ಬರು ಗಂಭೀರ, 16ಜನರಿಗೆ ಗಾಯ, ಹಬ್ಬವೇ ಬಂದ್..!

ಹಂಸಬಾವಿ ಹೋರಿ ಹಬ್ಬದಲ್ಲಿ ಹೋರಿ ತಿವಿದು ಯುವಕ ಸಾವು, ಇಬ್ಬರು ಗಂಭೀರ, 16ಜನರಿಗೆ ಗಾಯ, ಹಬ್ಬವೇ ಬಂದ್..!

ಹಾವೇರಿ ಜಿಲ್ಲೆಯ ಹಿರೆಕೆರೂರಿನ ಹಂಸಬಾವಿ ಹೋರಿ ಬೆದರಿಸುವ ಹಬ್ಬದಲ್ಲಿ ದುರಂತ ಸಂಭವಿಸಿದೆ. ಹೋರಿ ತಿವಿದು ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಘಟನೆ ನಡೆದಿದೆ. ಅರಳೀಕಟ್ಟಿ ಗ್ರಾಮದ ಮಂಜಪ್ಪ ಚನ್ನಪ್ಪನವರ(38), ಮೃತ ಯುವಕನಾಗಿದ್ದು, ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಅಲ್ದೆ, 16 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗಾಗಿ, ಹೋರಿ ಬೆದರಿಸುವ ಹಬ್ಬವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವಾಗಿದೆ.

ಈಶ್ವರಪ್ಪನವ್ರೇ, ಗಾಜಿನ ಮನೇಲಿ ನಿಂತು, ಮತ್ತೊಬ್ಬರ ಮನೆ ಮೇಲೆ ಕಲ್ಲು ಎಸಿಬೇಡಿ- ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಶಿವರಾಂ ಹೆಬ್ಬಾರ್ ಎಚ್ಚರಿಕೆ..!

ಈಶ್ವರಪ್ಪನವ್ರೇ, ಗಾಜಿನ ಮನೇಲಿ ನಿಂತು, ಮತ್ತೊಬ್ಬರ ಮನೆ ಮೇಲೆ ಕಲ್ಲು ಎಸಿಬೇಡಿ- ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಶಿವರಾಂ ಹೆಬ್ಬಾರ್ ಎಚ್ಚರಿಕೆ..!

 ಶಿರಸಿ: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಹಣ ಕೊಟ್ಟಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಶಾಸಕ ಶಿವರಾಮ ಹೆಬ್ಬಾರ್ ಖಡಕ್ ತಿರುಗೇಟು ನೀಡಿದ್ದಾರೆ. ಶಿರಸಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಿದ್ದ ಹೆಬ್ಬಾರ್, ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿಯವರೆ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಿದ್ದಾರಲ್ಲ ಅವರಿಗೆಲ್ಲಾ ಎಷ್ಟೆಷ್ಟು ಕೋಟಿ ಹಣ ನೀಡಿದ್ದಾರೆಂಬುದನ್ನು ಈಶ್ವರಪ್ಪ ಬಹಿರಂಗ ಪಡಿಸಲಿ ಅಂತಾ ತಿರುಗೇಟು ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವರಾಮ ಹೆಬ್ಬಾರ್, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನವರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವುದನ್ನು ಕೇಳಬೇಕಾಗುತ್ತದೆ. ಉತ್ತರಪ್ರದೇಶದಲ್ಲಿ ಏನು ಅಡ್ಡಮತದಾನವಾಯಿತು ಅಲ್ಲಿ ಎಷ್ಟೆಷ್ಟು ಇನ್ವೆಸ್ಟಮೆಂಟ್ ಮಾಡಿದ್ದಾರಂತಾ ಕೇಳಬೇಕಾಗುತ್ತದೆ ಅಂತಾ ಖಾರವಾಗೇ ತಿವಿದ್ರು. ಈಶ್ವರಪ್ಪನ ಮಾತನ್ನು ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಮಾತಿಗೆ ಬೆಲೆಯಿಲ್ಲದಂತಾಗಿದೆ. ಈ ಹಿಂದೆ ಇದೆ ಈಶ್ವರಪ್ಪ ಏನೆಲ್ಲಾ ಮಾಡಿಕೊಂಡು ರಾಜೀನಾಮೆ ನೀಡಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತು, ಈಶ್ವರಪ್ಪನವರಿಗೂ ಗೊತ್ತಿದೆ. ರಾಜ್ಯದಲ್ಲಿ...

error: Content is protected !!