ಮುಂಡಗೋಡ: ಸದ್ಯ, ರಾಷ್ಟ್ರಾಧ್ಯಂತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರ ಸಂಭ್ರಮ ಜೋರಾಗಿದೆ. ಅಗಷ್ಟ 13 ರಿಂದಲೇ “ಹರ್ ಘರ್ ತಿರಂಗಾ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ದೇಶಾಧ್ಯಂತ ಅಮೃತ ಮಹೋತ್ಸವದ ಸಂಭ್ರಮ ಮನೆ, ಮನೆ ಮಾತಾಗಿದೆ. ಈ ಹೊತ್ತಲ್ಲೇ ಅವರೊಬ್ಬ ಅಧಿಕಾರಿ ಹೀಗೆ ಮಾಡಿದ್ದು ಸರಿನಾ ಅನ್ನೋ ಪ್ರಶ್ನೆ ಕೂಡ ತಾಲೂಕಿನಾಧ್ಯಂತ ಚರ್ಚೆಯಾಗ್ತಿದೆ. ತಾಲೂಕಿನ ಗುಂಜಾವತಿ ಭಾಗದ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ರಾ..? ಈ ಪೋಟೋ ನೋಡಿದ್ರೆ ಎಂಥವರಿಗೂ ಹಾಗೆ ಅನ್ನಿಸದೇ ಇರಲ್ಲ. ಶ್ರೀಶೈಲ್ ಐನಾಪುರ..! ಅವ್ರ ಹೆಸ್ರು ಶ್ರೀಶೈಲ್ ಐನಾಪುರ ಸದ್ಯ ಗುಂಜಾವತಿ ಅರಣ್ಯ ಭಾಗದ ಉಪ ವಲಯ ಅರಣ್ಯಾಧಿಕಾರಿ. “ಹರ್ ಘರ್ ತಿರಂಗಾ” ಕಾರ್ಯಕ್ರಮಕ್ಕೆ ಪೂರಕವಾಗಿ ಇವತ್ತು ಗುಂಜಾವತಿಯ ತಮ್ಮ ಕಚೇರಿಯ ಎದುರು ಈ ಫಾರೆಸ್ಟರ್ ಕೂಡ ಧ್ವಜಾರೋಹಣ ಮಾಡಿದ್ದಾರೆ. ಆದ್ರೆ, ದ್ವಜಾರೋಹಣ ಮಾಡುವಾಗ ಶೂ ಧರಿಸಿಯೇ ಧ್ವಜಸ್ತಂಭದ ಮೇಲೆ ನಿಂತಿದ್ದಾರೆ. ಹೀಗಾಗಿ, ಇವರ ಈ ರೀತಿಯ ವರ್ತನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಅಪಮಾನ...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಹಿರಿಯ ಸಹಕಾರಿ ಧುರೀಣ ಎಂ.ಬಿ.ಕುಟ್ರಿ ವಿಧಿವಶ..!
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಮುಖಂಡ, ಹಿರಿಯ ರಾಜಕಾರಣಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಕುಟ್ರಿ ವಿಧಿವಶರಾಗಿದ್ದಾರೆ. ಹುಬ್ಬಳ್ಳಿಯ SDM ನಲ್ಲಿ ಎಂ.ಬಿ.ಕುಟ್ರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೀಡಾಗಿದ್ದ ಎಂ.ಬಿ.ಕುಟ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ. APMC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಬಿ.ಕುಟ್ರಿ ಜನಾನುರಾಗಿಯಾಗಿದ್ದರು. ಶ್ರೀಯುತರ ನಿಧನಕ್ಕೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.
ಉಗ್ರ ಸ್ವರೂಪಕ್ಕಿಳಿದ ವಿದ್ಯಾರ್ಥಿಗಳ ಹೋರಾಟ, ಮುಂಡಗೋಡಿನಲ್ಲೇ ರಸ್ತೆ ತಡೆದ ನಂದಿಕಟ್ಟಾ ಗ್ರಾಮಸ್ಥರು..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಸ್ಥರ ಆಕ್ರೋಶ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ವಿದ್ಯಾರ್ಥಿಗಳಿಗೆ ನಿತ್ಯವೂ ಉಂಟಾಗ್ತಿರೊ ಬಸ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲೇ ಬೇಕು. ನಮಗೆ ಬಸ್ ಬೇಕೆ ಬೇಕು ಅಂತಾ ಸತತವಾಗಿ ಪ್ರತಿಭಟನೆ ಕೈಗೊಂಡಿರೋ ನಂದಿಕಟ್ಟ ಭಾಗದ ವಿದ್ಯಾರ್ಥಿಗಳು, ಪೋಷಕರು ಇವತ್ತು ಮುಂಡಗೋಡಿನಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡ್ರು. ನಾಲಾಯಕ ಸಾರಿಗೆ ಅಧಿಕಾರಿಗಳೇ..! ಅಸಲು, ನಿನ್ನೆ ಸಂಜೆ 4.30 ರಿಂದ ಇಂದೂರಿನ ಸಮೀಪ ಪ್ರೌಢಶಾಲೆಯ ಹತ್ತಿರ ಬಸ್ ತಡೆದು ಪ್ರತಿಭಟಿಸಿದ್ದ ವಿದ್ಯಾರ್ಥಿಗಳಿಗೆ ಯಾರೂ ಕ್ಯಾರೇ ಅಂದಿರಲಿಲ್ಲ. ಸುರಿವ ಮಳೆಯಲ್ಲಿ ಪುಟ್ಟ ಕಂದಮ್ಮಗಳು ಬರೋಬ್ಬರಿ 6 ತಾಸು ಪ್ರತಿಭಟನೆ ಕೈಗೊಂಡಿದ್ದರು. ಬಸ್ ತಡೆದು ನಿಲ್ಲಿಸಿದ್ದರು. ಆದ್ರೆ ಕೆಎಸ್ಆರ್ಟಿಸಿ ಯ ಯಾವೊಬ್ಬ ಅಧಿಕಾರಿಯೂ ಅತ್ತ ಕಡೆ ಸುಳಿದಿರಲೇ ಇಲ್ಲ. ತಮ್ಮ ಮನೆಯ ಮಕ್ಕಳಿಗೆ ಅಂತಹ ಪರಿಸ್ಥಿತಿ ಬಂದು, ಮನೆಗೆ ಹೋಗದೇ ಮಳೆಯಲ್ಲಿ ನೆನೆದುಕೊಂಡು ಪ್ರತಿಭಟನೆ ನಡೆಸುತ್ತಿದ್ದರೆ ಈ ನಾಲಾಯಕ ಅಧಿಕಾರಿಗಳು ಸುಮ್ಮನೆ ಇರ್ತಿದ್ರಾ..? ಇಂತಹ ಪ್ರಶ್ನೆ ಪೋಷಕರು ಕೇಳ್ತಿದಾರೆ. ಹೆಚ್ಚಾಯ್ತು ಆಕ್ರೋಶ..!...
ನಮಗೆ ಬಸ್ ಬೇಕೇ ಬೇಕು..! ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!
ಮುಂಡಗೋಡ: ತಾಲೂಕಿನ ಇಂದೂರು ಪ್ರೌಢಶಾಲೆ ಹತ್ತಿರ ಸುರಿವ ಮಳೆಯಲ್ಲೇ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ರು. ಅಸಲು, ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಕೆಂದಲಗೇರಿ, ಹುಲಿಹೊಂಡ, ಬಸಾಪುರ ಗ್ರಾಮದ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಇಂದೂರುಹೈಸ್ಕೂಲ್ ಹತ್ತಿರ.. ಅಂದಹಾಗೆ, ಇಂದು ಸಂಜೆ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಸುಮಾರು 40 ವಿದ್ಯಾರ್ಥಿಗಳು ಬಸ್ ಹತ್ತಲು ರೆಡಿಯಾಗಿದ್ದಾರೆ. ಆದ್ರೆ, ಆದಾಗಲೇ ಬಸ್ ಸಂಪೂರ್ಣ ಭರ್ತಿಯಾಗಿತ್ತು. ಹೀಗಾಗಿ, ಬಸ್ ನಲ್ಲಿ ಜಾಗವಿಲ್ಲ ಅಂತಾ ನಿರ್ವಾಹಕ ಹೇಳಿದ್ದಾನೆ. ಸುರಿವ ಮಳೆಯಲ್ಲಿ ವಿದ್ಯಾರ್ಥಿಗಳು ಮನೆಗೆ ಹೋಗುವುದಾದರೂ ಹೇಗೆ ಅಂತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಕ್ಷಣವೇ ಬಸ್ ತಡೆದು ಪ್ರತಿಭಟನೆಗಿಳಿದಿದ್ದಾರೆ. ಮಳೆಯಲ್ಲೇ ಪ್ರತಿಭಟನೆ..! ನೂರಾರು ವಿದ್ಯಾರ್ಥಿಗಳು ಬಸ್ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ಶುರು ಮಾಡಿದ್ದಾರೆ. ನಿಜ ಅಂದ್ರೆ ಪುಟ್ಟ ಪುಟ್ಟ...
ಸನವಳ್ಳಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಮೂಲಕ ಹೊರಟ ಭವ್ಯ ಮೂರ್ತಿ..!
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹೀಗಾಗಿ, ಇಂದು ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಆವರಣಕ್ಕೆ ಆಗಮಿಸಿದ್ದ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಭವ್ಯ ಸ್ವಾಗತ ಕೋರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಯಣ್ಣನ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು. ಇನ್ನು ಮೆರವಣಿಗೆ ನಂತರ ಸನವಳ್ಳಿ ಗ್ರಾಮಕ್ಕೆ ಕೊಂಡೊಯ್ಯಲಾಗುವ ರಾಯಣ್ಣನ ಮೂರ್ತಿಗೆ ವಿಶೇಷ ಗೌರವಗಳೊಂದಿಗೆ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ.
ಮುಂಡಗೋಡ ತಾಲೂಕಿನಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಸಂಭ್ರಮ..!
ಮುಂಡಗೋಡ: ತಾಲೂಕಿನಾಧ್ಯಂತ ಮೊಹರಂ ಹಬ್ಬದ ಕೊನೆಯ ದಿನದ ಸಂಭ್ರಮ ಜೋರಾಗಿದೆ. ಕಳೆದ ಐದು ದಿನಗಳಿಂದ ತಾಲೂಕಿನಾಧ್ಯಂತ ಹಿಂದು ಮುಸ್ಲಿಂ ಬಾಂಧವರು ಭಾವೈಕ್ಯತೆಯ ಮೊಹರಂ ಆಚರಿಸುತ್ತಿದ್ದಾರೆ. ಬುಧವಾರ ಮೊಹರಂ ಕೊನೆಯ ದಿನದ ಆಚರಣೆಯಾಗಿದೆ. ಅಗ್ನಿ ಕುಂಡ..! ತಾಲೂಕಿನೆಲ್ಲೆಡೆ ಮೊಹರಂ ಪಂಜಾಗಳನ್ನು ಪ್ರತಿಷ್ಟಾಪಿಸಿ ಇಂದು ವಿಸರ್ಜನೆ ನಡೆಯುತ್ತಿದೆ. ಹೀಗಾಗಿ, ಇಂದು ಬೆಳಿಗಿನ ಜಾವ ಅಗ್ನಿ ಕುಂಡ ರಚಿಸಿ ಪಂಜಾಗಳನ್ನು ಹೊತ್ತು ಕೆಂಡ ತುಳಿಯಲಾಯಿತು. ಆ ನಂತರದಲ್ಲಿ ಪಂಜಾಗಳ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಂಜಾಗಳಿಗೆ ಗ್ರಾಮಸ್ಥರು ಸಕ್ಕರೆ ಬೆಲ್ಲ ನೀಡಿ, ದರ್ಶನ ಪಡೆದ್ರು. ಅಲ್ಲಾವಿ ಕುಣಿತ..! ಇನ್ನು ಸಾಂಪ್ರದಾಯಿಕವಾಗಿ ವಿಶೇಷ ಅಲ್ಲಾವಿ ಹೆಜ್ಜೆ ಕುಣಿತ ಆಕರ್ಷಕವಾಗಿತ್ತು. ಅಂದಹಾಗೆ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಕೊಂಡಿಯಾಗಿರೋ ಮೊಹರಂ ಹಬ್ಬ ಹಿಂದುಗಳ ಪಾಲಿಗೆ “ಅಲ್ಲಬ್ಬ” ಅಂತಲೇ ಆಚರಣೆಯಾಗತ್ತೆ. ಐದು ದಿನಗಳ ಕಾಲ ಸಂಭ್ರಮ ಜೋರಾಗಿರತ್ತೆ. ಕೊನೆಯ ದಿನದ ಹಬ್ಬಕ್ಕೆ ಇಂದು ಹಿಂದುಗಳು ವಿಶೇಷ ಖಾದ್ಯವಾದ ಚ್ಯೊಂಗ್ಯಾ ಮಾಡಿ ನೈವೇದ್ಯ ಅರ್ಪಿಸುವ ಪದ್ದತಿಯಿದೆ.
ಬಾಚಣಕಿ ಸಮೀಪ ರಸ್ತೆ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಸ್ಥಗಿತ..!
ಮುಂಡಗೋಡ ತಾಲೂಕಿನ ಬಾಚಣಕಿ ಸಮೀಪ ಹುಬ್ಬಳ್ಳಿ ಶಿರಸಿ ರಸ್ತೆ ಸಂಚಾರ ಸ್ಥಗಿತವಾಗಿದೆ. ನಿರಂತರ ಮಳೆಯಿಂದ ಬೃಹತ್ ಮರ ರಸ್ತೆ ಮೇಲೆ ಉರುಲಕಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತವಾಗಿದೆ. ರಸ್ತೆ ಬದಿ ಇದ್ದ ಮರ ಮದ್ಯಾಹ್ನ ಏಕಾಏಕಿ ಉರುಳಿ ಬಿದ್ದಿದೆ. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದಾರೆ. ಅಂದಹಾಗೆ, ಕಳೆದ ಹತ್ತು ದಿನಗಳಿಂದ ತಾಲೂಕಿನಲ್ಲಿ ನಿರಂತರವಾಗಿ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಗೆ ತಾಲೂಕಿನಾಧ್ಯಂತ ಭಾರೀ ಅವಾಂತರಗಳು ಸೃಷ್ಟಿಯಾಗುತ್ತಿವೆ. ಹಲವು ಕಡೆ ಮನೆಗಳು ನೆಲಸಮಗೊಂಡಿವೆ.
ಮುಂಡಗೋಡಿನಲ್ಲಿ ಕಾರ್ ಡಿಕ್ಕಿಯಾಗಿ ಆಕಳ ಕರು ಸ್ಥಳದಲ್ಲೇ ಸಾವು..!
ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಪಟ್ಟಣ ಪಂಚಾಯತ ಎದುರಿನಲ್ಲಿ ಇಂಡಿಕಾ ಕಾರ್ ಡಿಕ್ಕಿಯಾದ ಪರಿಣಾಮ ಆಕಳ ಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹುಬ್ಬಳ್ಳಿ ರಸ್ತೆ ಕಡೆಗೆ ಹೊರಟಿದ್ದ ಇಂಡಿಕಾ ಕಾರು, ರಸ್ತೆಯಲ್ಲಿದ್ದ ಕರುವಿನ ಮುಖಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕರು ರಕ್ತದ ಮಡುವಿನಲ್ಲಿ ಬಿದ್ದಿದೆ. ಹೀಗಾಗಿ, ಸ್ಥಳೀಯರು ತಕ್ಷಣವೇ ಪಶುವೈದ್ಯ ಅವಿನಾಶ್ ಪೂಜಾರ್ ಗೆ ಕರೆ ಮಾಡಿದ್ದಾರೆ. ಆದ್ರೆ, ಪಶುವೈದ್ಯರು ಚಿಕಿತ್ಸೆ ನೀಡುವಷ್ಟರಲ್ಲೇ ಕರು ಸಾವನ್ನಪ್ಪಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಸದ್ಯ ರಕ್ತದ ಮಡುವಿನಲ್ಲಿ ಬಿದ್ದಿರೊ ಕರುವಿನ ಕಳೇಬರವನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯ ಮಾಡಲಾಗಿದೆ. ಬಿಡಾಡಿ ದನಗಳು ನಿತ್ಯವೂ ಹೀಗೆ ಒಂದಿಲ್ಲೊಂದು ದುರಂತಕ್ಕೆ ಈಡಾಗುತ್ತಿವೆ. ಹೀಗಿದ್ರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಮಾತ್ರ ಗಪ್ ಚುಪ್ ಆಗಿ ಕುಳಿತು ಬಿಟ್ಟಿದ್ದಾರೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದಾರೆ.
ನ್ಯಾಸರ್ಗಿಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಎರಡು ಶ್ವಾನಗಳ ದಾರುಣ ಸಾವು..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ವಿದ್ಯುತ್ ಅವಘಡವಾಗಿದೆ. ನಿರಂತರ ಮಳೆಯಿಂದ, ರಾತ್ರಿ ವೇಳೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಪರಿಣಾಮ ವಿದ್ಯತ್ ತಂತಿ ಸ್ಪರ್ಶಿಸಿ ಎರಡು ನಾಯಿಗಳು ಸ್ಥಳದಲ್ಲೇ ದಾರುಣ ಸಾವು ಕಂಡಿವೆ. ತಪ್ಪಿದ ಭಾರೀ ಅನಾಹುತ..! ಬಹುತೇಕ ಪುಟ್ಟ ಪುಟ್ಟ ಮಕ್ಕಳು ಓಡಾಡುವ ಸ್ಥಳ ಇದಾಗಿದೆ. ಅಲ್ಲದೇ ಮನೆಯ ಎದುರಿಗೆ ಇಂತಹದ್ದೊಂದು ಘಟನೆ ನಡೆದಿದೆ. ವಿದ್ಯುತ್ ತಂತಿ ಮರಕ್ಕೆ ತಾಗಿಕೊಂಡು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ತಂತಿ ತುಂಡಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಜನರ ಜೀವ ಹಾನಿಯಾಗಿಲ್ಲ. ರಾತ್ರಿವೇಳೆ ಜನರು ತಂತಿಯನ್ನು ತುಳಿದಿದ್ರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದ್ರೆ, ಮುಗ್ದ ಎರಡು ಶ್ವಾನಗಳು ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿವೆ. ಹೆಸ್ಕಾಂ ನಿರ್ಲಕ್ಷ..? ನಿಜ ಅಂದ್ರೆ, ನ್ಯಾಸರ್ಗಿ ಗ್ರಾಮದ ಈ ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ. ತಂತಿ ಜೋತುಬಿದ್ದು ವರ್ಷಗಳೇ ಕಳೆದಿವೆ. ಆದ್ರೆ, ಹೆಸ್ಕಾಂ ಇಲಾಖೆಯಿಂದ ಯಾವುದೇ ಸಮರ್ಪಕ ನಿರ್ವಹಣೆ ಆಗಿಲ್ಲ ಅಂತಾರೆ ಗ್ರಾಮಸ್ಥರು, ಇನ್ನು 2 ವರ್ಷದ ಹಿಂದೆ ವಿದ್ಯುತ್...
ರಾಕ್ಷಸ ಮಳೆ: ನದಿ ನೀರಲ್ಲಿ ಕೊಚ್ಚಿ ಹೋದ 7 ವರ್ಷದ ಬಾಲಕಿ..!
ಉಡುಪಿ: ರಾಕ್ಷಸ ಮಳೆಯ ರಣಭೀಕರತೆ ಮುಂದುವರೆದಿದೆ. 7 ವರ್ಷದ ಬಾಲಕಿಯೊಬ್ಬಳು ಕಾಲುಸಂಕದಿಂದ ಕೆಳಗೆ ಬಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಉಡುಪಿ ಜಿಲ್ಲೆ ಬೈಂದೂರಿನ ಬೀಜಮಕ್ಕಿಯಲ್ಲಿ ನಡೆದಿದೆ. 7 ವರ್ಷ ವಯಸ್ಸಿನ ಸನ್ನಿಧಿ ಎಂಬ ಬಾಲಕಿಯೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಶಾಲೆಯಿಂದ ಮನೆಗೆ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಭಾರಿ ಮಳೆಯ ನಡುವೆಯೇ ಶಾಲೆಗೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದ ಬಾಲಕಿ ಕಾಲುಸಂಕ ದಾಟುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ನದಿ ನೀರಿನ ರಭಸಕ್ಕೆ ಬಾಲಕಿ ಕೊಚ್ಚಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿಗಾಗಿ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ.