ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ ಮಿಲ್ ನ ಬೃಹತ್ ಗಾತ್ರದ ಯಂತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಹಳೇ ದಾಂಡೇಲಿ ನಿವಾಸಿ ಅಬ್ದುಲ್ ಸಲೀಂ ಖಲಾಸಿ (55) ಸಾವನ್ನಪಿದ್ದ ವ್ಯಕ್ತಿ. ಮೃತ ವ್ಯಕ್ತಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ನಗರದ ಪೊಲೀಸ ಠಾಣೆಯ ಪಿಎಸ್‌ಐ ಅಮೀನಸಾಬ ಅತ್ತಾರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗುತ್ತಿಗೆದಾರ ಸಾಜಿದ್ ಪಠಾಣ್ ಹಾಗೂ ಮೇಲ್ವಿಚಾರಕ ಅಬ್ದುಲ್ ಖಾದರ ಪಠಾಣ ಇವರ ಮೇಲೆ ಮೃತನ ಹೆಂಡತಿ ಬಲಕಿಸ್ ಬಾನು ಖಲಾಸಿ ನಗರಠಾಣೆಯಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ 6 ನಂ ಮೆಷೀನ್ ನ 14 ನೇ ರೆಡಿಯೇಟರ್ ಹತ್ತಿರ ಕೆಲಸ ಸಮಯದಲ್ಲಿ ಯಾವುದೇ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿದರಿಂದ ನನ್ನ ಗಂಡ ಮೃತಪಟ್ಟಿದ್ದಾನೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
Top Stories
ಭೀಕರ ಮಳೆಗೆ ಬೆಂಗಳೂರಲ್ಲಿ ಬಾಲಕ ಸೇರಿ ಮೂವರು ಬಲಿ..! 24 ಗಂಟೆಯಲ್ಲಿ 10.4 ಸೆಂ.ಮೀ. ಮಳೆ ದಾಖಲು..!
ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್….: 9 ಮಂದಿ ‘ಪಾಕಿಸ್ತಾನ ಗೂಢಚಾರರ’ ಬಂಧನ..! ಗದ್ದಾರ್ ಗಳು ಅಂದ್ರೆ ಇವ್ರೇ ಅಲ್ವಾ..?
ಪ್ಲೇಆಪ್ ತಲುಪಿರೋ RCB ತಂಡಕ್ಕೆ ಮತ್ತೊಂದು ಶುಭಸುದ್ದಿ..! ಇದನ್ನ ಲಾಟರಿ ಅಂದ್ರೂ ಓಕೆ.!!
ಲೋಕಾಯುಕ್ತ ಅಧಿಕಾರಿಗಳ ನಾಳೆಯ (ಮೇ 20 ರ) ಮುಂಡಗೋಡ ಕಾರ್ಯಕ್ರಮ ಮೇ. 28ಕ್ಕೆ ಮುಂದೂಡಿಕೆ..!
Rain Alert News: ಭಾರಿ ಮಳೆಯ ಮುನ್ಸೂಚನೆ, ಉತ್ತರ ಕನ್ನಡದಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ: ಎಚ್ಚರಿಕೆ ವಹಿಸಿ; ಡಿಸಿ ಲಕ್ಷ್ಮೀಪ್ರಿಯ
Death News: ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ದಾರುಣ ಸಾವು..!
ಬಂಗಾರದ ಬೆಲೆ ಮತ್ತೆ ₹380 ಹೆಚ್ಚಳ; ಬೆಳ್ಳಿ ₹1000 ತುಟ್ಟಿ, ಈ ದರ ಏರಿಕೆಗೆ ಕಾರಣಗಳೇನು ಗೊತ್ತಾ..?
ಸತತ 2ನೇ ದಿನ ಕುಸಿದ ಷೇರುಪೇಟೆ : ಸೆನ್ಸೆಕ್ಸ್ 270 ಪಾಯಿಂಟ್ಸ್ ಇಳಿಕೆ, ಟಾಪ್ ಗೇನರ್ ಮತ್ತು ಲೂಸರ್ಸ್ ಇಲ್ಲಿವೆ
Lokayukta Raid News :ಅಡ್ಮಿಶನ್ ಮಾಡಿಕೊಳ್ಳಲು ಲಂಚ ಸ್ವೀಕಾರ, ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕನ ಬಂಧನ..!
Accident News: ಕಾರ್ ಅಪಘಾತ, ಪ್ರವಾಸಕ್ಕೆ ತೆರಳಿದ್ದ BJP ತಾಲೂಕಾ ಮಾಜಿ ಅಧ್ಯಕ್ಷ ಸೇರಿ ಮೂವರು ದುರಂತ ಸಾವು..!
FIRE MISHAP News: ಹೈದರಾಬಾದ್ ಬೆಂಕಿ ಅವಘಡ, ಒಂದೇ ಕುಟುಂಬದ 17 ಜನರ ಸಾವು..!
Terrorist Death News: ಬೆಂಗಳೂರಿನ IISC ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ಡೇಂಜರಸ್ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ..!
Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..!
Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!
IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್
‘ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ..!
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿ ಕೆಲಸದ ಸಮಯದಲ್ಲಿ ಬೃಹತ್ ಗಾತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ಮುಂಡಗೋಡ ತಾಲೂಕಿನ 79 ಶಾಲೆಗಳ ಸ್ಥಿತಿ ಚಿಂತಾಜನಕ, ಮಕ್ಕಳನ್ನು ಶಾಲೆಗೆ ಕಳಿಸೋಕೆ ಪಾಲಕರಿಗೆ ಭಾರೀ ಆತಂಕ..!
ಮುಂಡಗೋಡ ತಾಲೂಕಿನಲ್ಲಿ ಅದ್ಯಾಕೋ ಏನೋ ಎಲ್ಲವೂ ಸರಿಯಿಲ್ಲ. ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷವೋ ಗೊತ್ತಿಲ್ಲ. ಇಲ್ಲಿ ಏನಂದ್ರೆ ಏನೂ ನಡೆಯುತ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿವೆ. ಬೇರೆ ಏನಾದ್ರೂ ಸಮಸ್ಯೆಗಳು ಒತ್ತಟ್ಟಿಗಿರಲಿ, ಆದ್ರೆ, ವಿದ್ಯಾರ್ಥಿಗಳಿಗೆ ನಿರಾತಂಕವಾಗಿ ಪಾಠ ಕೇಳಲು ತಾಲೂಕಿನಲ್ಲಿ ಬರೋಬ್ಬರಿ 79 ಶಾಲೆಗಳು ಸಾಧ್ಯವಾಗದ ಸ್ಥಿತಿಯಲ್ಲಿದೆ. ಹೌದು, ಮುಂಡಗೋಡ ತಾಲೂಕಿನ ಒಟ್ಟೂ 169 ಶಾಲೆಗಳಲ್ಲಿ 79 ಶಾಲೆಗಳಿಗೆ ಪ್ರಕೃತಿ ವಿಕೋಪದಿಂದ ಹಾನಿಯಾಗಿದೆ. ಅನುದಾನ ಕೊರತೆಯಿಂದಾಗಿ ಶಾಲೆಗಳು ದುರಸ್ಥಿಯಾಗದೆ ಹಾಗೆಯೇ ಉಳಿದುಕೊಂಡಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ. ತಾಲೂಕನಾದ್ಯಂತ ಒಟ್ಟು ಸರಕಾರಿ ಕಿರಿಯ-ಹಿರಿಯ ಪ್ರಾಥಮಿಕ ಸೇರಿ169 ಶಾಲೆಗಳು ಇವೆ. 2024-25 ಸಾಲಿನ ಜುಲೈ ತಿಂಗಳಿನಿಂದ, ನವೆಂಬರ್ ತಿಂಗಳಿನ ಅವಧಿಯಲ್ಲಿ ಪ್ರಕೃತಿ ವಿಕೋಪದಿಂದ 79 ಶಾಲೆಗಳು ಹಾನಿಯಾಗಿವೆ. ಶಾಲೆಗಳಿಗೆ ಹಾನಿ ಎಲ್ಲೇಲ್ಲಿ..? ಬೆಡಸಗಾಂವ ಗ್ರಾ.ಪಂ.ವ್ಯಾಪ್ತಿಯ ಉಮ್ಮುಚಗಿ, ಹಿರಿಯ ಪ್ರಾಥಮಿಕ ಶಾಲೆಯ ಗೊಡೆ ಮೇಲ್ಚಾವಣಿಗೆ ಹಾನಿ, ಅಜ್ಜಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆ ಮತ್ತು ಮೇಲ್ಚಾವಣಿ, ಪಟ್ಟಣದ ಸಂಜಯನಗರದ ಪ್ರಾಥಮಿಕ ಶಾಲೆಯ ಕೊಠಡಿ...
ಮೈನಳ್ಳಿಯಲ್ಲಿ ಸಿಡಿಲಾಘಾತ, ಐವರಿಗೆ ಸಿಡಿಲು ಬಡಿದು ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ: ತಾಲೂಕಿನ ಮೈನಳ್ಳಿಯ ಗ್ರಾಮ ದೇವಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ ಐವರಿಗೆ ಸಿಡಿಲು ಬಡಿದು ಗಾಯಗೊಂಡ ಘಟನೆ ನಡೆದಿದೆ. ನಾಗರತ್ನ ಜೋಲೆ, ಲಕ್ಷ್ಮೀ ಕೊಕರೆ, ಗಂಗಾರಾಮ ಮುಕ್ಕೊ ಕೊಕರೆ, ಶಾಂತಾಬಾಯಿ ಸಳಕೆ ಹಾಗೂ ಭರತ್ ಸಳಕೆ ಎಂಬಾತರೇ ಸಿಡಿಲಿನ ಶಾಖದಿಂದ ಗಾಯಗೊಂಡಿದ್ದಾರೆ. ತಾಲೂಕಿನಾದ್ಯಂತ ಶನಿವಾರ ಮತ್ತು ರವಿವಾರ ರಾತ್ರಿ ಸಿಡಿಲು ಸಹಿತ ರಭಸದ ಗಾಳಿ ಮಳೆ ಸುರಿದಿತ್ತು. ಬಾಳೆಹಳ್ಳಿ ಹಾಗೂ ಕಳಕೀಕೆರಿ ಗ್ರಾಮದವರು ಮೈನಳ್ಳಿ ಗ್ರಾಮದೇವಿ ಜಾತ್ರೆಗೆ ಬಂದು ದೇವಿ ದರ್ಶನ ಪಡೆದು ನಂತರ ಸಿಡಿಲು ಮಳೆ ಪ್ರಾರಂಭವಾಗಿದ್ದರಿಂದ ಅವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ 10 ಗಂಟೆಗೆ ಇವರು ತಂಗಿದ್ದ ಮನೆಗೆ ಸಿಡಲು ಹೊಡದಿದೆ. ಇದರ ಪರಿಣಾಮ ಮನೆಯಲ್ಲಿದ್ದ ಹತ್ತೊಂಬತ್ತು ಜನರಲ್ಲಿ ಐವರಿಗೆ ಸಿಡಿಲಿನ ಶಾಖ ತಗಲಿದೆ. ಹೀಗೆ ಸಿಡಿಲಿನ ಶಾಖಕ್ಕೆ ಅಸ್ವಸ್ಥರಾದವರನ್ನು ತಾಲೂಕು ಆಸ್ಪತ್ರೆ ಗೆ ದಾಖಲಿಸಲಾಯಿತು. ಐವರಲ್ಲಿ ನಾಲ್ವರನ್ನು ತಾಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದರೆ ಗಂಗಾರಾಮ ಮುಕ್ಕೊ ಎಂಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿ...
ನಂದಿಪುರದಲ್ಲಿ ಸಿಡಿಲಿನಾರ್ಭಟ, ಮನೆಯ ವಿದ್ಯುತ್ ವೈಯರ್ ಗಳೇ ಭಸ್ಮ, ಟಿವಿ, ಪ್ರಿಡ್ಜು ಹರೋಹರ..! ಮನೆ ಮಂದಿಗೂ ಗಾಯ..!
ಮುಂಡಗೋಡ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆ, ಗಾಳಿ ಸಿಡಿಲಿನಾರ್ಭಟಕ್ಕೆ ಭಾರೀ ಅವಾಂತರಗಳು ಸೃಷ್ಟಿಯಾಗಿವೆ.. ಮುಂಡಗೋಡ ಪಟ್ಟಣದಲ್ಲೇ ಎರಡು ಕಡೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರಗಳು ಹೊತ್ತಿ ಉರಿದಿದ್ದರೆ, ತಾಲೂಕಿನ ನಂದಿಪುರ ಗ್ರಾಮದಲ್ಲಿ ಹಲವು ಮನೆಗಳಿಗೆ ಸಿಡಿಲಿನ ಸೆಳೆತ ಭಾರೀ ಹಾನಿ ಮಾಡಿದೆ. ನಂದಿಪುರ ಗ್ರಾಮದ ದಸ್ತಗಿರ ಮಹ್ಮದ್ ಹುಸೇನ್ ಮರಗಡಿ ಎಂಬುವವರ ಮನೆ ಮುಂದಿನ ಗಿಡಕ್ಕೆ ಸಿಡಿಲು ಹೊಡೆದ ಪರಿಣಾಮ, ಮನೆಯ ವಿದ್ಯುತ್ ವೈಯರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಟಿವಿ, ಪ್ರಿಡ್ಜು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇನ್ನು ಸಿಡಿಲಿನಾರ್ಭಟಕ್ಕೆ ಮನೆಯಲ್ಲಿ ಇದ್ದ ಓರ್ವ ಮಹಿಳೆಯ ಕಿವಿಗೆ ಹಾನಿಯಾಗಿದ್ದು, ಮಕ್ಕಳಿಗೂ ಭಯದಿಂದ ಸಣ್ಣ ಪುಟ್ಟ ಗಾಯವಾಗಿದೆ ಆದ್ರೆ, ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ ಅಂತಾ ಮನೆಯ ಮುಖ್ಯಸ್ಥ ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿದ್ದಾನೆ.
ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!
ಗೋಕರ್ಣ: ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವತಿಯರು ಜಟಾಯು ತೀರ್ಥದ ಹತ್ತಿರ ಕಾಲು ಜಾರಿ ಸಮುದ್ರಕ್ಕೆ ಬಿದ್ದು ದಾರುಣ ಸಾವು ಕಂಡಿದ್ದಾರೆ. ತಮಿಳನಾಡು ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದ ಕೊನೆಯ ವರ್ಷದ ಪರೀಕ್ಷೆ ಮುಗಿಸಿ, ಚಾರಣಕ್ಕೆ ಬಂದಿದ್ದ ಒಟ್ಟು 23ಜನರ ತಂಡದಲ್ಲಿದ್ದ, ಸಿಂದುಜಾ ಮತ್ತು ಕನ್ನಿಮೊಳಿ ಎಂಬ ಹೆಸರಿನ ಇಬ್ಬರು ಯುವತಿಯರು ಸಮುದ್ರದ ಪಾಲಾಗಿದ್ದಾರೆ. ನಾಲ್ವರು ಯುವತಿಯರು ಸಮುದ್ರ ಅಂಚಿನ ಬಂಡೆ ಮೇಲೆ ಕುಳಿತಿ ಸಮುದ್ರದ ಸುಂದರತೆಯನ್ನು ಕಣ್ತುಂಬಿಕೊಳ್ತಿದ್ದರು. ಇದೇ ವೇಳೆ ರಭಸದ ಅಲೆ ಬಡಿದು ಇಬ್ಬರು ಸಮುದ್ರಕ್ಕೆ ಬಿದ್ದಿದ್ದಾರಡ. ಮತ್ತಿಬ್ಬರು ಬಂಡೆಯ ಪಕ್ಕ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹೀಗಾಗಿ, ಆಸ್ಪತ್ರೆಯಲ್ಲಿ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿದೆ.. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಪೊಲೀಸರ ಗಟ್ಟಿ ಕಾರ್ಯಾಚರಣೆ, ಗೋಹತ್ಯೆ ಕೇಸಿನಲ್ಲಿ ಓರ್ವ ಆರೋಪಿ ಅರೆಸ್ಟ್, ಮತ್ತೋರ್ವ ಪರಾರಿ..!
ಮುಂಡಗೋಡ ಪಟ್ಟಣದಲ್ಲಿ ಗುರುವಾರ ಬಾರೀ ಚರ್ಚೆ ಹಾಗೂ ಹಿಂದು ಕಾರ್ಯಕರ್ತರ ಪ್ರತಿರೋಧಕ್ಕೆ ಕಾರಣವಾಗಿದ್ದ ಗೋಹತ್ಯೆ ಕೇಸಿನಲ್ಲಿ ಮುಂಡಗೋಡ ಪೊಲೀಸ್ರು ಕೆಚ್ಚೆದೆಯ ಕ್ರಮ ಕೈಗೊಂಡಿದ್ದಾರೆ. ಜಾನುವಾರನ್ನು ಅಕ್ರಮವಾಗಿ ವಧೆ ಮಾಡಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇಬ್ಬರಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ. ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ, ದೇಶಪಾಂಡೆ ನಗರದ ಜಹೀರ ಅಹ್ಮದ್ ಮೈಮದ್ದಿನ್ ಬೇಪಾರಿ(32) ಎಂಬುವವನನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ. ಗುರುವಾರ ಬೆಳಗ್ಗೆ 09-15 ಗಂಟೆಯ ಸುಮಾರಿಗೆ ಮುಂಡಗೋಡ ಪಟ್ಟಣದ ಯಲ್ಲಾಪೂರ ರಸ್ತೆಯಲ್ಲಿರುವ ರಜಾಕಿಯ ಮಸೀದಿಯ ಹಿಂಭಾಗದ ಖಾಲಿಜಾಗದಲ್ಲಿ ಜಾನುವಾರನ್ನು ವಧೆ ಮಾಡಿ, ಅದರ ಮಾಂಸವನ್ನು ತಮ್ಮ ತಾಬಾದಲ್ಲಿ ಇಟ್ಟುಕೊಂಡು ಕುಳಿತುಕೊಂಡಿದ್ದರು. ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿದ್ದ ಮುಂಡಗೋಡ ಪೊಲೀಸ್ರು, ಕ್ರಮ ಕೈಗೊಂಡಿದ್ದಾರೆ. ಉತ್ತರ ಕನ್ನಡ ಎಸ್ಪಿ ಎಮ್. ನಾರಾಯಣ ಹೆಚ್ಚುವರಿ ಎಸ್ಪಿಗಳಾದ, ಕೃಷ್ಣಮೂರ್ತಿ ಜಿ ಹೆಚ್.,ಜಗದೀಶ ನಾಯ್ಕ್, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್ ರವರ ಮಾರ್ಗದರ್ಶನದಲ್ಲಿ ಆರೋಪಿತನನ್ನು ಬಂಧಿಸುವಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐ...
ಮುಂಡಗೋಡ ಕರಗಿನಕೊಪ್ಪ ಬಳಿ ಬೈಕ್ ಅಪಘಾತ, ಮೂಡಸಾಲಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡ ಸಮೀಪದ ಕರಗಿನಕೊಪ್ಪ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರಗೆ ರವಾನಿಸಲಾಗಿದೆ. ತಾಲೂಕಿನ ಮೂಡಸಾಲಿ ಗ್ರಾಮದ ಜಗದೀಶ ಪಕ್ಕೀರಪ್ಪ ಪಾಟೀಲ್ (52) ಎಂಬುವ ಬೈಕ್ ಸವಾರನೇ ಗಂಭೀರ ಗಾಯಗೊಂಡಿದ್ದಾನೆ. ಈತ ಮುಂಡಗೋಡಿನಿಂದ ಮೂಡಸಾಲಿಗೆ ಮತ್ತೋರ್ವ ವ್ಯಕ್ತಿ ಕೇದಾರಲಿಂಗ್ ಹನ್ಮಂತಪ್ಪ ಬೆಡಸಗಾವ್ ಎಂಬುವವರ ಜೊತೆ ಬೈಕ್ ಮೇಲೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೀಗಾಗಿ, ಮತ್ತೋರ್ವನಿಗೂ ಸಣ್ಣಪುಟ್ಟ ಗಾಯವಾಗಿದೆ. ಇದೇ ವೇಳೆ ವಕೀಲ ಗುಡ್ಡಪ್ಪ ಕಾತೂರ ಅದೇ ಮಾರ್ಗದಲ್ಲಿ ಬರುತ್ತಿದ್ದಾಗ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ತಮ್ಮದೇ ಕಾರಿನಲ್ಲಿ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆಸದ್ಯ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಸಾಗಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡಿನಲ್ಲಿ ಗೋಹತ್ಯೆಗೆ ಖಂಡನೆ, ಹಿಂದು ಕಾರ್ಯಕರ್ತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ..!
ಮುಂಡಗೋಡ ಪಟ್ಟಣದಲ್ಲಿ ನಡೆದ ಗೋಹತ್ಯೆ ಖಂಡಿಸಿ ABVP ನೇತೃತ್ವದಲ್ಲಿ ಹಿಂದು ಸಂಘಟನೆಗಳು ಬೀದಿಗಿಳಿದಿವೆ. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿಸ ಕಾರ್ಯಕರ್ತರು, ಗೋ ಹಂತಕರನ್ನು ತಕ್ಷಣವೇ ಬಂಧಿಸುವಂತೆ ಘೋಷಣೆ ಕೂಗಿ ಆಗ್ರಹಿಸಿದ್ರು. ನಂತ್ರ, ಶಿವಾಜಿ ಸರ್ಕಲ್ ನಿಂದ ಪೊಲೀಸ್ ಠಾಣೆ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದು ಕಾರ್ಯಕರ್ತರು, ಮೆರವಣಿಗೆಯುದ್ದಕ್ಕೂ ಗೋಹತ್ಯೆಯ ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, ಘೋಷಣೆ ಕೂಗಿದ್ರು. ನಂತರ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ್ ರಿಗೆ ಮನವಿ ಅರ್ಪಿಸಿದ್ರು. ಹಿಂದು ಜಾಗರಣ ವೇದಿಕೆ ತಾಲೂಕಾ ಸಂಚಾಲಕ ಪ್ರಕಾಶ ಬಡಿಗೇರ, ಹಿಂಜಾವೇ ಸಹ ಸಂಚಾಲಕ ವಿಶ್ವನಾಥ್ ನಾಯರ್, ಭಜರಂಗದಳದ ತಾಲೂಕಾಧ್ಯಕ್ಷ ಶಂಕರ ಲಮಾಣಿ, ಅಯ್ಯಪ್ ಭಜಂತ್ರಿ, ಶ್ರೀರಾಮಸೇನೆ ತಾಲೂಕಾಧ್ಯಕ್ಷ ಮಂಜುನಾಥ್ ಹರಿಜನ್, ತಂಗಮ್ ಚಿಣ್ಣನ್, ಶ್ರೀಧರ್ ಉಪ್ಪಾರ್, ಬಿಜೆಪಿ ಮಂಡಳಾಧ್ಯಕ್ಷ ಮಂಜುನಾಥ್ ಪಾಟೀಲ್, ಪಟ್ಟಣ ಪಂಚಾಯತಿ ಸದಸ್ಯ ಫಣಿರಾಜ್ ಹದಳಗಿ, ಭರತರಾಜ್ ಹದಳಗಿ, ರಾಜೇಶ್ ರಾವ್, ಮಂಜುನಾಥ್ ಶೇಠ್ ಸೇರಿದಂತೆ ಹಲವರು ಭಾಗಿಯಾಗಿದ್ರು.
ಮುಂಡಗೋಡಿನಲ್ಲೂ ಮಾಂಸಕ್ಕಾಗಿ ಆಕಳ ಹತ್ಯೆ..! ಪೊಲೀಸರ ದಾಳಿ..! ಸಿಕ್ಕಿದ್ದೇನು..?
ಮುಂಡಗೋಡಿನಲ್ಲಿ ಅಕ್ರಮವಾಗಿ ಗೋಮಾತೆಯ ವಧೆ ಮಾಡಲಾಗಿದೆ. ಹಾಗಂತ ಮುಂಡಗೋಡಿನ ಹಿಂದು ಕಾರ್ಯಕರ್ತರು ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಮುಂಡಗೋಡ ಹಳೂರಿನಲ್ಲಿರೋ ದರ್ಗಾ ಹತ್ತಿರ ಘಟನೆ ನಡೆದಿದ್ದು, ಘಟನೆಯಲ್ಲಿ ಎಷ್ಟು ಆಕಳನ್ನು ವಧೆ ಮಾಡಲಾಗಿದೆ..? ವಶಪಡಿಸಿಕೊಂಡ ವಸ್ತುಗಳು ಏನೇನು..? ಸಿಕ್ಕ ಆರೋಪಿಗಳು ಎಷ್ಟು..? ಎಲ್ಲ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಕಾರವಾರ ನಗರಸಭೆ ಸದಸ್ಯನ ಭೀಕರ ಹತ್ಯೆ ಕೇಸ್, ಇಬ್ಬರು PSI ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್..? ಕಾರಣ..?
ಕಾರವಾರ: ನಗರಸಭೆ ಮಾಜಿ ಸದಸ್ಯ ಸತೀಶ್ ಕೋಳಂಬಕರ್ ಹತ್ಯೆಯ ಹಿಂದೆ ಅಲ್ಲಿನ ಪೊಲೀಸರ ನಿರ್ಲಕ್ಷ ಹಾಗೂ ಬೇಜವಾಬ್ದಾರಿಯೂ ಕಾರಣವಾಯ್ತಾ..? ಅದೊಂದು ಹೊಟೆಲ್ ನಲ್ಲಿ ನಡೆದಿದ್ದ ಗಲಾಟೆಯ ದೂರು ದಾಖಲಿಸಿಕೊಂಡು ಸರಿಯಾದ ಕ್ರಮ ಕೈಗೊಂಡಿದ್ದರೆ ಸತೀಶ್ ಹೆಣ ಬೀಳ್ತಾನೇ ಇರಲಿಲ್ಲವಾ..? ಹೀಗಾಗಿನೇ ಇವಾಗ ಆ ನಾಲ್ವರು ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆಯಾ..? ಸದ್ಯದ ಬಾತ್ಮಿಗಳನ್ನು ಗಮನಿಸಿದ್ರೆ ಹೌದು ಅನ್ನುತ್ತಿವೆ ಪೊಲೀಸ್ ಮೂಲಗಳು. ಕಾರವಾರ ನಗರಸಭೆಯ ಮಾಜಿ ಸದಸ್ಯ ಸತೀಶ ಕೋಳಂಬಕರ್ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ, ನಗರ ಠಾಣೆಯ ನಾಲ್ವರನ್ನು ಸಸ್ಪೆಂಡ್ ಮಾಡಲಾಗಿದೆಯಂತೆ. ಹತ್ಯೆಗೂ ಮೊದಲು ಹೊಟೇಲ್ ಒಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಕಾರವಾರ ನಗರಠಾಣೆಯ ಪಿಎಸ್‌ಐ ಸೇರಿ ನಾಲ್ವರನ್ನ ಅಮಾನತ್ ಮಾಡಲಾಗಿದೆ ಎನ್ನಲಾಗಿದೆ. ಇದಿಷ್ಟು ಘಟನೆ..! ಸತೀಶ್ ಕೋಳಂಬಕರ್ ಹತ್ಯೆಗೂ ಮೊದಲು ನಗರದ ಹೊಟೇಲ್ ಒಂದರಲ್ಲಿ ಹತ್ಯೆ ಆರೋಪಿ ಹಾಗೂ ಆತನ ಸ್ನೇಹಿತರು ಸತೀಶ್ ಕೋಳಂಬಕರ್ ನಡುವೆ ಮಾರಾಮಾರಿ ನಡೆದಿತ್ತು ಎನ್ನಲಾಗಿದೆ. ಅಂದು ನಡೆದ ಗಲಾಟೆಯ ಬಗ್ಗೆ ನಗರ ಠಾಣೆಯ ಪೊಲೀಸರು...