ಹುನಗುಂದ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ..!

ಮುಂಡಗೋಡ: ತಾಲೂಕಿನ ಹುನಗುಂದ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಕೆಲವು ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು. ಟಿಚ್ ಮೆಟ್ ಆಪ್ ಮೂಲಕ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಲಾಯಿತು. ಸರಕಾರಿ ಶಾಲೆಗಳು ನೀಡುವ ಸವಲತ್ತು, ಸೌಕರ್ಯಗಳ ಕುರಿತು ತಿಳಿಸಿ ಹೇಳುವ ಜೊತೆಗೆ ಪ್ಲೇಕ್ಸ್ ಬೋರ್ಡ ಅನ್ನು ಅನಾವರಣ ಗೊಳಿಸಲಾಯಿತು. ಕೋವಿಡ್-19 ರ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೇಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. SDMC ಅಧ್ಯಕ್ಷರು, ಸದಸ್ಯರು, ಪಾಲಕರು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ******************* ಚೌಡಳ್ಳಿಯ ರೈತನ ಮಕ್ಕಳ ಸಾಹಸವನ್ನೂ ಸ್ವಲ್ಪ ನೋಡಿ..

ವರದಕ್ಷಿಣೆ ದುರಾಸೆಗೆ ಬಲಿಯಾದ್ಲಾ ಕೊಪ್ಪದ ಗೃಹಿಣಿ..? ಹಾಗಂತ ಕೇಸು ಕೊಟ್ಟವರಾರು..?

ವರದಕ್ಷಿಣೆ ದುರಾಸೆಗೆ ಬಲಿಯಾದ್ಲಾ ಕೊಪ್ಪದ ಗೃಹಿಣಿ..? ಹಾಗಂತ ಕೇಸು ಕೊಟ್ಟವರಾರು..?

ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಗೃಹಿಣಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮೃತ ಸ್ವಾತಿ ಪತಿ ಹಾಗೂ ಅತ್ತೆಯ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ‌. ಬುಧವಾರ ರಾತ್ರಿ ಸ್ವಾತಿ ಮಂಜುನಾಥ ಹೊಸೂರ (26) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ವರದಕ್ಷಿಣೆ ಕಿರುಕುಳವಾ..? ಅಂದಹಾಗೆ, ಆತ್ಮಹತ್ಯೆ ಮಾಡಿಕೊಂಡಿರೋ ಗೃಹಿಣಿ ಸ್ವಾತಿಗೆ ಮೂವರು ಹೆಣ್ಣುಮಕ್ಕಳು ಜನಿಸಿದ್ದಾರೆ. ಹೀಗಾಗಿ, ಬರೀ ಹೆಣ್ಣುಮಕ್ಕಳನ್ನೇ ಹೆತ್ತಿದ್ದಿಯಾ, ಅಲ್ದೆ ಮದುವೆಯಲ್ಲಿ ವರದಕ್ಷಿಣೆ ಕೂಡ ನೀಡಿಲ್ಲ ಅಂತಾ ಪತಿ ಮಂಜುನಾಥ್ ಹಾಗೂ ಅತ್ತೆ ತಾಯವ್ವ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ರು ಅಂತಾ ಆರೋಪಿಸಲಾಗಿದೆ. ಮೃತಳ ತಾಯಿಯಿಂದ ದೂರು..! ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿರೋ ಮೃತ ಗೃಹಿಣಿಯ ತಾಯಿ ಮಲ್ಲವ್ವ ಕಬ್ಬೇರ್, ನನ್ನ ಮಗಳ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಕೇಸು ದಾಖಲಿಸಿದ್ದಾರೆ. ಇನ್ನು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. *************************”...

ಚೌಡಳ್ಳಿ ಹುಡುಗರ ಸಾಹಸ, ಕಿರುಚಿತ್ರ ರಚಿಸಿದ್ದೇ ರೋಚಕ..!!

ಚೌಡಳ್ಳಿ ಹುಡುಗರ ಸಾಹಸ, ಕಿರುಚಿತ್ರ ರಚಿಸಿದ್ದೇ ರೋಚಕ..!!

ಮುಂಡಗೋಡ: ಅದೊಂದು ಪುಟ್ಟಗ್ರಾಮ ಆ ಗ್ರಾಮದಲ್ಲಿ ಅನೇಕ ಜನಪದ, ಸಾಂಸ್ಕೃತಿಕ, ನಾಟಕ ಸೇರಿ ಹಲವು ಪ್ರಕಾರಗಳ ಕಲಾವಿಧರಿದ್ದಾರೆ. ಸಾಕಷ್ಟು ಪ್ರತಿಭಾನ್ವಿತ ಮಕ್ಕಳಿದ್ದಾರೆ. ಹಾಗಿರೋ ಚೌಡಳ್ಳಿ ಗ್ರಾಮದಲ್ಲಿ ಈ ಯುವಕರು ಹೊಸ ಸಾಹಸ ಮಾಡಿದ್ದಾರೆ. ಅಪ್ಪಟ ಜವಾರೀ ಕಲಾವಿಧರಾಗಿರೋ ರೈತನ ಮಕ್ಕಳೇ ಕಿರು ಚಿತ್ರ ರಚಿಸಿದ್ದಾರೆ. ಅಚ್ಚರಿಯೆಂದ್ರೆ ಹಾಗೆ ರಚಿಸಿರೋ ಕಿರುಚಿತ್ರದ ಚಿತ್ರೀಕರಣ, ಯಾವುದೇ ತಂತ್ರಜ್ಞಾನದ ಸಹಾಯದಿಂದಲ್ಲ, ಯಾವುದೇ ಡಿಸಿಟಲ್ ಕ್ಯಾಮೆರಾಗಳಿಂದಲ್ಲ, ಬದಲಾಗಿ ತಾವೇ ನಿರ್ಮಿಸಿಕೊಂಡ ಪರಿಕರಗಳಿಂದ.. ಹಾಗಾದ್ರೆ ಹೇಗಿದೆ ಆ ಅನ್ನದಾತನ ಮಕ್ಕಳ ಮೇಕಿಂಗ್ ಕಹಾನಿ..? ಇಲ್ಲಿದೆ ನೋಡಿ.. ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. https://youtu.be/YA1p_snqzoQ

ಕೊಪ್ಪ ಗ್ರಾಮದಲ್ಲಿ ನೇಣಿಗೆ ಶರಣಾದ ಗೃಹಿಣಿ..!

ಕೊಪ್ಪ ಗ್ರಾಮದಲ್ಲಿ ನೇಣಿಗೆ ಶರಣಾದ ಗೃಹಿಣಿ..!

ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಸ್ವಾತಿ ಮಂಜುನಾಥ್ ಹೊಸೂರು(26) ನೇಣಿಗೆ ಶರಣಾದ ಗೃಹಿಣಿಯಾಗಿದ್ದಾಳೆ. ತನ್ನ ಮನೆಯ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಪ್ರಾರಂಭೋತ್ಸವ”

ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಪ್ರಾರಂಭೋತ್ಸವ”

ಮುಂಡಗೋಡ: ತಾಲೂಕಿನ ಹುನಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು. ಕೋವಿಡ್ ಸಂಕಷ್ಟದಿಂದ ಈಗಷ್ಟೆ ಹೊರ ಬಂದಿರೋ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ ಲೈನ್ ಶಿಕ್ಷಣ ಪ್ರಾರಂಭವಾಗುತ್ತಿದೆ. ಅಲ್ದೆ, ಚಂದನ ವಾಹಿನಿಯ ಸಂವೇದ ಕಾರ್ಯಕ್ರಮದ ಮೂಲಕ ಇಂದಿನಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ತರಗತಿಗಳು ಪ್ರಾರಂಭವಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಶಿಕ್ಷಕರು ಈಗಾಗಲೇ ಕಳಿಸಿರೋ ಮಾರ್ಗಸೂಚಿಗಳನ್ನು ಪಾಲಿಸಿ ಪಾಠ ಕೇಳಬೇಕು ಅಂತಾ ಶಿಕ್ಷಕರು ತಿಳಿಸಿದ್ದಾರೆ.

ಸಚಿವ ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ..!!

ಸಚಿವ ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ..!!

ಅದ್ಯಾಕೋ ಗೊತ್ತಿಲ್ಲ, ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ಅವ್ರು ಯಾವ ಪಕ್ಷದಲ್ಲಿದ್ದಾರೆ..? ಯಾವ ಹುದ್ದೆಯಲ್ಲಿದ್ದಾರೆ..? ಅಂತೇಲ್ಲ ನೋಡಿ ಬಕೀಟು ಹಿಡಿಯೋ ಸಲುವಾಗಿ ಹೊಗಳುವ, ಅಥವಾ ಅವ್ರಿಂದ ಬೆನ್ನು ತಟ್ಟಿಸಿಕೊಳ್ಳೊ ಇರಾದೆಯ ಜಾಯಮಾನವಂತೂ ನಮಗೆ ಖಂಡಿತ ಇಲ್ಲ. ಆದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ್ ಹೆಬ್ಬಾರ್ ಒಬ್ಬ ಉತ್ತುಂಗದ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡ ಪಕ್ಷಾತೀತ ನಾಯಕನಾಗಿ ಕಾಣ್ತಾರೆ. ಆ ಕಾರಣಕ್ಕೆ ಅವ್ರನ್ನ ಬಹುಶಃ ಕಾಂಗ್ರೆಸ್ಸಿನ ಅದೇಷ್ಟೋ ಕಾರ್ಯಕರ್ತರೂ ಇಷ್ಟ ಪಡ್ತಾರೆ. ಅಹಂ ಸುಳಿಯಲ್ಲ..! ನಿಜ, ಶಿವರಾಮ್ ಹೆಬ್ಬಾರ್, ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಅವ್ರ ರಾಜಕೀಯ ಜೀವನದ ಹಾದಿ ಅಷ್ಟೊಂದು ಸುಲಭವಾಗಿದ್ದಲ್ಲ. ಶಾಸಕರಾಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸೋ ಗಳಿಗೆವರೆಗೂ ಅವ್ರು ಕ್ಷೇತ್ರದಲ್ಲಿ ಪಟ್ಟ ಶ್ರಮ, ಕಾರ್ಯಕರ್ತರೊಂದಿಗಿನ ಅವಿನಾಭಾವ ಸಂಬಂಧ, ಅದೇಂತದ್ದೇ ಸಂದರ್ಭ ಬಂದರೂ ಕ್ಷೇತ್ರದ ಜನತೆಯೊಂದಿಗೆ ಸ್ಪಂಧಿಸುವ ಮನೋಭಾವ, ಇದೇಲ್ಲ ಶಿವರಾಮ್ ಹೆಬ್ಬಾರ್ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಮನೆ ಮಾತಾಗುವಂತೆ ಮಾಡಿದೆ. ಹೆಬ್ಬಾರ್ ಸಾಹೇಬ್ರು ಸಚಿವರಾದ ಮೇಲೆ ಕ್ಷೇತ್ರದ ಜನರ...

ಕಳ್ಳತನದ ಆರೋಪ ಹೊರಿಸಿದ ಮನೆ ಮಾಲೀಕ..! ಗೋವಾಕ್ಕೆ ದುಡಿಯಲು ಹೋಗಿದ್ದ ಮೂವರೂ ಹೆಣವಾದರು..!! ಅಯ್ಯೋ ವಿಧಿಯೇ..!

ಕಳ್ಳತನದ ಆರೋಪ ಹೊರಿಸಿದ ಮನೆ ಮಾಲೀಕ..! ಗೋವಾಕ್ಕೆ ದುಡಿಯಲು ಹೋಗಿದ್ದ ಮೂವರೂ ಹೆಣವಾದರು..!! ಅಯ್ಯೋ ವಿಧಿಯೇ..!

ಕಾರವಾರ: ಕರ್ನಾಟಕದಿಂದ ಹೊಟ್ಟೆ ಪಾಡಿಗಾಗಿ ದುಡಿಯಲು ಗೋವಾಕ್ಕೆ ಹೋಗಿದ್ದ ಒಂದೇ ಕುಟುಂಬದ ಮೂವರು ಗೋವಾದಲ್ಲೇ ನೇಣಿಗೆ ಶರಣಾಗಿರೋ ಮನಕಲುಕುವ ಘಟನೆ ನಡೆದಿದೆ. ಗೋವಾದ ಜುವಾರಿ ನಗರದ ಎಂಇಎಸ್ ಕಾಲೇಜಿನ ಆವರಣದ ಬಾಡಿಗೆ ಮನೆಯೊಂದರಲ್ಲಿ ಘಟನೆ ನಡೆದಿದ್ದು ಇಡೀ ಗೋವಾ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ಹೊಟ್ಟೆಪಾಡಿಗಾಗಿ ಹೋಗಿದ್ರು..! ಕಳೆದ ಹಲವು ವರ್ಷಗಳಿಂದೇ ಕೂಲಿ ಮಾಡಿ ಬದುಕುವ ಉದ್ದೇಶದಿಂದ ಗೋವಾದಲ್ಲೇ ಬದುಕು ಸಾಗಿಸುತ್ತಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದ ಹುಲಗಪ್ಪ ಅಂಬಿಗೇರ(35), ಪತ್ನಿ ದೇವಮ್ಮ ಅಂಬಿಗೇರ(28) ಹಾಗೂ 29 ವರ್ಷದ ಸಹೋದರ ಗಂಗಪ್ಪ ಅಂಬಿಗೇರ ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳು ನೇಣಿನ ನಿರ್ಧಾರ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.   ಘಟನೆ ಏನು..? ಕಳೆದ 4-5 ದಿನಗಳಿಂದಷ್ಟೇ ಗೊವಾದ ಜುವಾರಿ ನಗರದ ಶಮಶುದ್ದಿನ್ ಎಂಬ ಮಾಲೀಕನ ಮನೆಯಲ್ಲೇ ದುರ್ದೈವಿಗಳು ವಾಸವಿದ್ದರು, ಮಾಲೀಕ ಶಮಶುದ್ದಿನ್ ನೇಣಿಗೆ ಶರಣಾದವರ ಮೇಲೆ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟ ಬಂಗಾರ ಹಾಗೂ ಹಣದ ಒಟ್ಟು ಮೊತ್ತ ಸುಮಾರು 15...

ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ..? ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳಿಂದ ಎಸಿಗೆ ಮನವಿ..!

ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ..? ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳಿಂದ ಎಸಿಗೆ ಮನವಿ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಶಿರಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಕೋರಿ ಶಿರಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದಾರೆ‌. ಮನವಿಯಲ್ಲೇನಿದೆ..? ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51(1-18-0) ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ. ಕೇಳಿದ್ರೆ ಹಲ್ಲೆಗೆ ಬರ್ತಾರಂತೆ..! ಹಾಗೇ, ಹಂಚಿಕೆ ಮಾಡಿದ್ದ ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡಿದ್ದನ್ನು ಬಿಟ್ಟುಕೊಡಿ ಅಂತಾ ಸಾಕಷ್ಟು ಬಾರಿ‌ ಮನವಿ‌ ಮಾಡಿದ್ರೂ ಅವ್ರು ಕ್ಯಾರೇ ಅಂತಿಲ್ಲವಂತೆ, ಅಲ್ದೇ ಹಾಗೆ ಕೇಳಿದ್ರೆ ಮಚ್ಚು, ಕೊಡಲಿಗಳನ್ನ ತಂದು ಹಲ್ಲೆಗೆ ಬರ್ತಾರೆ ಅಂತಾ ಮನವಿಯಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ತಹಶೀಲ್ದಾರರಿಂದಲೂ ಕ್ರಮವಿಲ್ಲ..! ಇನ್ನು ಇಂತಹದ್ದೊಂದು ಅತಿಕ್ರಮಣ ಆರೋಪ ಮಾಡಿ ಈಗಾಗಲೇ ಮುಂಡಗೋಡ ತಾಹಶೀಲ್ದಾರರಿಗೆ...

ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!

ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಅಗಡಿ ಸಮೀಪದ ಶಾಂತಾ ದುರ್ಗಾ ರೈಸ್ ಮಿಲ್ ಬಳಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಶಿಗ್ಗಟ್ಟಿ ಗ್ರಾಮದ ಶೇಖಪ್ಪಾ ಲಮಾಣಿ ಗಾಯಗೊಂಡ ಬೈಕ್ ಸವಾರ ಅಂತಾ ತಿಳಿದು ಬಂದಿದೆ. ಬೈಕ್ ನ ಹಿಂದಿನ ಗಾಲಿ ಪಂಕ್ಚರ್ ಆಗಿದ್ದ ಕಾರಣಕ್ಕೆ ಸ್ಕಿಡ್ ಆಗಿ ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಹೀಗಾಗಿ, ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ತರಿಸಿ ಗಾಯಗೊಂಡ ಬೈಕ್ ಸವಾರನನ್ನು ಕಲಘಟಗಿ ತಾಲೂಕಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಶಿಗ್ಗಾವಿ:ಐತಿಹಾಸಿಕ ನಾಗನೂರು ಕೆರೆಯ ಸುತ್ತಮುತ್ತ ಪುರಸಭೆ ಅಧ್ಯಕ್ಷರು, ಸದಸ್ಯರಿಂದ ಸ್ವಚ್ಚತಾ ಕಾರ್ಯ..!

ಶಿಗ್ಗಾವಿ:ಐತಿಹಾಸಿಕ ನಾಗನೂರು ಕೆರೆಯ ಸುತ್ತಮುತ್ತ ಪುರಸಭೆ ಅಧ್ಯಕ್ಷರು, ಸದಸ್ಯರಿಂದ ಸ್ವಚ್ಚತಾ ಕಾರ್ಯ..!

ಶಿಗ್ಗಾವಿ : ಪಟ್ಟಣದ ಐತಿಹಾಸಿಕ ನಾಗನೂರ ಕೆರೆಯ ಸುತ್ತಮುತ್ತಲೂ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮತ್ತು ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ಕೈಗೊಂಡರು. ನಾಗನೂರ ಕೆರೆಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ಮಾತನಾಡಿದ ಪುರಸಭೆ ಅದ್ಯಕ್ಷ ಮತ್ತು ಉಪಾಧ್ಯಕ್ಷರು, ಕೆರೆಯ ದಂಡೆಯಲ್ಲಿ ಗಣೇಶನ ದೇವಸ್ಥಾನವಿದೆ ಈ ಪ್ರದೇಶವು ಪುರಸಭೆಯವರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಸಾರ್ವಜನಿಕರ ಜವಾಬ್ದಾರಿ ಸಹ ಅದನ್ನು ಮನಗಂಡು ತಾವು ಕೂಡ ಯಾರೇ ಕಲುಷಿತ ಮಾಡಿದರೂ ಸಹಿತ ನೋಡಿ ಸುಮ್ಮನೇ ಇರಬಾರದು ಅಂತ ವಿಷಯ ಇದ್ದರೆ ಪುರಸಭೆಯ ಸಹಾಯವಾಣಿಗೆ ತಿಳಿಸಿ ಮತ್ತು ಇಲ್ಲಿ ಹುಟ್ಟು ಹಬ್ಬ ಆಚರಿಸುವುದಾಗಲಿ, ಮದ್ಯಪಾನ ಮಾಡುವದಾಗಲಿ ಕಂಡು ಬಂದರೆ ಅವರು ಶಿಕ್ಷೆಗೆ ಗುರಿ ಮಾಡಲಾಗುವುದು ಎಂದರು. ಜೊತೆಗೆ ಪಟ್ಟಣದ ರಾಚನಕಟ್ಟೆ ಕೆರೆಗೆ ತಡೆಗೋಡೆ ಕಟ್ಟಿಸುವುದು ಅವಶ್ಯವಿದ್ದು ಪಟ್ಟಣದ ಜನರು ಕುಡಿಯಲು ಬಳಸುವ ಗಂಗಾಮಾತೆ ಇದಾಗಿದೆ ಎಂದರು. ಬೆಳಗ್ಗೆ 6 ಗಂಟೆಗೆ ಆಗಮಿಸಿ ಕೆರೆಯ ದಡದಲ್ಲಿ ಹಾಕಲಾಗಿರುವ ತ್ಯಾಜ್ಯ, ಬಿಯರ್ ಬಾಟಲ್...

error: Content is protected !!