ಕಾರವಾರ: ಸಮುದ್ರದಲ್ಲಿ ಈಜಲು ಹೋದ ಇಬ್ಬರು ನೀರುಪಾಲಾಗಿ, ಮತ್ತಿಬ್ಬರನ್ನು ಸ್ಥಳೀಯರೇ ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಣಿ ಹಾಗೂ ಬೇಕರಿ ಮಂಜುನಾಥ್ ಸಾವು ಕಂಡವರು. ನಾಗರಾಜ ಹಾಗೂ ಪ್ರವೀಣ್ ರಕ್ಷಣೆಗೊಳಗಾದವರು. ಇನ್ನು ಸಮುದ್ರ ಪಾಲಾಗಿದ್ದ ಮಣಿ ಶವ ಪತ್ತೆಯಾಗಿದೆ. ಆದ್ರೆ, ಮಂಜುನಾಥ್ ಶವ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಶವಕ್ಕಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗಿದೆ.
ನಾಲ್ಕು ಜನ ಸ್ನೇಹಿತರು ಸೇರಿ ಶಿವಮೊಗ್ಗ ದಿಂದ ಮುರಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ರು.. ನಾಲ್ಕೂ ಜನ ಸಮುದ್ರದಲ್ಲಿ ಈಜುವಾಗ ಅಲೆಗೆ ಕೊಚ್ಚಿ ಹೋಗಿ ದುರಂತ ಸಂಭವಿಸಿದೆ.
ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.