ಉಡುಪಿ: ಇಲ್ಲಿನ ಕರಾವಳಿ ಜಂಕ್ಷನ್ ನಲ್ಲಿ
ಹಾಡು ಹಗಲೇ 2 ವರ್ಷದ ಗಂಡು ಮಗುವಿನ ಅಪಹರಣ ಮಾಡಲಾಗಿದೆ. ಮಗುವನ್ನ ಅಪಹರಿಸಿ ಖಾಸಗಿ ಬಸ್ಸು ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಬಾಗಲಕೋಟೆ ಮೂಲದ ದಂಪತಿಗಳ ಗಂಡು ಮಗು ಅಪಹರವಾಗಿದ್ದು, ಕೆಲವು ದಿನದ ಹಿಂದೆ ಈ ದಂಪತಿಯನ್ನ ಪರಿಚಯ ಮಾಡಿಕೊಂಡಿದ್ದ ಅಪಹರಣಕಾರ, ಪ್ರತಿದಿನ ಈ ದಂಪತಿಯ ಸಮೀಪದಲ್ಲೇ ಮಲಗುತ್ತಿದ್ದ.
ಇಂದು ಬೆಳಿಗ್ಗೆ ಮಗುವಿಗೆ ತಿಂಡಿ ಮಾಡಿಸಿ ಬರುತ್ತೇನೆ ಎಂದು ಕರೆದುಕೊಂಡು ಹೋಗಿ, ಮಗುವಿನ ಜೊತೆ ಬಸ್ ಏರಿ ಪರಾರಿಯಾಗಿದ್ದಾನೆ. ಇನ್ನು ಉಡುಪಿ ನಗರ ಠಾಣೆ ಪೊಲೀಸರಿಂದ ಅಪಹರಣಕಾರನಿಗಾಗಿ ಹುಡುಕಾಟ ನಡೆದಿದೆ.