ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್

ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್

 ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತ ಇಬ್ಬರು ಶಾಸಕರನ್ನು ಈ ತಿಂಗಳಾ‌ಂತ್ಯಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗುವದು ಅಂತಾ ಬಿಜೆಪಿ ಶಿಸ್ತು ಸಮಿತಿ ರಾಜ್ಯ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು. ಹುಬ್ಬಳ್ಳಿಯಲ್ಲಿ ‌ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ನಂತ್ರ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ನಿರಂತರ ಪಕ್ಷ ದ್ರೋಹ ಮಾಡಿದ್ದಾರೆ. ಕಳೆದ ಲೋಕಸಭಾ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ಬಗ್ಗೆ ಈಗಾಗಲೇ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗಿದೆ ಎಂದರು. ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕ್ಷೇತ್ರಕ್ಕೆ ತೆರಳಿ ವರದಿ ಸಿದ್ಧಪಡಿಸಿದ್ದೇನೆ. ಪಕ್ಷದ ಕಾರ್ಯಕರ್ತರ ಮತ್ತು ಅಲ್ಲಿನ ಮಂಡಳ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿಂದ ವರದಿ ಸಿದ್ದಪಡಿಸಿ ನೀಡಿದ್ದೇನೆ. ಅಲ್ಲದೇ ಇಬ್ಬರು ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ವಿಡಿಯೋ ಮತ್ತು ಪೇಪರ್ ಕಟಿಂಗ್‌ಗಳನ್ನ ವರದಿಯ ಜೊತೆಗೆ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಎರಡ್ಮೂರು ಬಾರಿ ಕೇಂದ್ರಕ್ಕೆ ವರದಿ ನೀಡಲಾಗಿದೆ. ಹೀಗಾಗಿ ಈ ತಿಂಗಳಾಂತ್ಯಕ್ಕೆ ಇಬ್ಬರ ಶಾಸಕರ ಉಚ್ಚಾಟನೆ...

ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!

ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!

ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತದ ಕಳಕಿಕಾರೆ ಮಜಿರೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬಹುತೇಕ‌ ಇಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಸಂಕಟ ಒಂದೆಡೆಯಾದ್ರೆ, ಗ್ರಾಮಸ್ಥರಿಗೆ ನೀರು ಪೂರೈಸಲು ಮೈನಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಪರದಾಡುವ ಸ್ಥಿತಿಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಂದಹಾಗೆ, ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಕೀಕಾರೆಯಲ್ಲಿ RWS ಇಲಾಖೆಯಿಂದ ಬೋರ್ವೆಲ್ ಕೊರೆದಿದ್ದಾರೆ. ಆದ್ರೆ, ಜೀವಜಲ ಮಾತ್ರ ಸಿಕ್ಕೇ ಇಲ್ಲ. ಹೀಗಾಗಿ, ಇಲ್ಲಿನ ಜನ್ರಿಗೆ ಕುಡಿಯುವ ನೀರು ಅನ್ನೋದು ನಿತ್ಯದ ಪರದಾಟವಾಗಿದೆ. ಈ ಕಾರಣಕ್ಕಾಗೇ, ಕಳೆದ ಎಂಟು ದಿನಗಳಿಂದ ಟ್ಯಾಂಕರ್ ಮೂಲಕ ಗ್ರಾಪಂ ನೀರು ಪೂರೈಸುತ್ತಿದೆ. ಆದ್ರೆ ಇದೇಲ್ಲ ಎಷ್ಟು ದಿನ..? ಇದೇ ರೀತಿ ಆದ್ರೆ, ನೀರು ಪೂರೈಸಲು ಬೇಕಾದ ಆರ್ಥಿಕ ವ್ಯವಸ್ಥೆ ಇಲ್ಲದೆ, ಗ್ರಾಪಂ ಅಧಿಕಾರಿಗಳಿಗೆ ಕಷ್ಟವಾಗಬಹುದು. ಹೀಗಾಗಿ, ಜಿಲ್ಲಾಡಳಿತ ಈ ಕಡೆ ಒಂದಿಷ್ಟು ಗಮನ ಹರಿಸೋದು ಅವಶ್ಯವಿದೆ.

ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ

ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ

ಕಾರವಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಆಃಖಿ) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿ-2025 ರ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 05 ಕೆ.ಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ .ಕೆ.ಲಕ್ಷ್ಮೀಪ್ರಿಯ ತಿಳಿಸಿದ್ದಾರೆ. ಅದರಂತೆ ಫೆಬ್ರವರಿ-2025 ಮಾಹೆಯಲ್ಲಿ ವಿತರಿಸಬೇಕಾದ ಅಕ್ಕಿ ಪ್ರಮಾಣವನ್ನು ಸೇರಿ ಮಾರ್ಚ್-2025 ಮಾಹೆಯಲ್ಲಿ ಈ ಕೆಳಗಿನ ಪ್ರಮಾಣದಂತೆ ವಿತರಿಸಲಾಗುವುದು. ಮಾರ್ಚ್ ಮಾಹೆ 1ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು. ಇ-ಕೆವೈಸಿ ಮಾಡಿಸಲು ಪಡಿತರ...

ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್

ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್

ಕಾರವಾರ: ಕಾರವಾರ ಅಂಕೋಲಾ ವಿಭಾಗದಲ್ಲಿ ಈ ವರ್ಷ ಇದುವರೆಗೆ 2500 ಕ್ಕೂ ಅಧಿಕ ಆಲಿವ್ ರಿಡ್ಲೆ ಕಡಲಾಮೆಗಳನ್ನು ಸಮುದ್ರಕ್ಕೆ ಬಿಡಲಾಗಿದ್ದು, 111 ಕಡಲಾಮೆಗಳ ಗೂಡುಗಳನ್ನು ರಕ್ಷಣೆ ಮಾಡಲಾಗಿದೆ. ಕಳೆದ ವರ್ಷ 188 ಕಡಲಾಮೆಗಳ ಗೂಡುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್ ತಿಳಿಸಿದರು. ಅವರು ಶುಕ್ರವಾರ ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಸಮಾರು 150 ಆಲಿವ್ ರಿಡ್ಲೆ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಎರಡು ಗೂಡುಗಳಿಂದ 152 ಮೊಟ್ಟೆಗಳಿಂದ 149 ಮರಿಗಳು ಹೊರಬಂದಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಮೊಟ್ಟೆಯಿಂದ ಹೊರಬಂದ ಸಂರಕ್ಷಣೆ ಮಾಡಿದ ಕಡಲಾಮೆ ಮರಿಗಳನ್ನು 51 ದಿನದ ನಂತರ ಸಮುದ್ರಕ್ಕೆ ಇಂದು ಬಿಡಲಾಗಿದೆ. ಕಾರವಾರ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೋಸ್ಟಲ್ ಮರೈನ್ ಸೇಲ್ ಸ್ಥಾಪಿಸಿಲಾಗಿದ್ದು, ಇದರಿಂದ ಕಡಲಾಮೆಗಳ ಗೂಡುಗಳ ಮತ್ತು ಮೊಟ್ಟೆಗಳ ರಕ್ಷಣೆ ಮಾಡಿ, ಮರಿಗಳನ್ನು ಪೋಷಣೆ ಮಾಡಿ ಸಮುದ್ರಕ್ಕೆ ಬಿಡಲಾಗುತ್ತದೆ ಎಂದರು. ಹೊನ್ನಾವರದಲ್ಲಿ ಕಳೆದ...

SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!

SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!

ಕಾರವಾರ: ಜಿಲ್ಲೆಯಲ್ಲಿ ಮಾರ್ಚ್ 21 ರಿಂದ ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಅತ್ಯಂತ ವ್ಯವಸ್ಥಿತ ಮತ್ತು ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ನು ಕಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ದತೆಗಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲೆಯಲ್ಲಿ 20035 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮೊದಲ ಪ್ರಯತ್ನದಲ್ಲಿಯೇ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ವಿದ್ಯಾರ್ಥಿಗಳನ್ನು ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 37 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು ಈ ಎಲ್ಲಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸುವ ಕಾರ್ಯವನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದ ಅವರು, ಎಲ್ಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ...

ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!

ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!

ಹಾವೇರಿ; ಬೆಂಗಳೂರಿನಿಂದ ಹಾವೇರಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯವಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಿರಿಯೂರು ಬಳಿ ರೆಸ್ಟ್ ವೇಳೆ ದ್ವಿಚಕ್ರ ವಾಹನ ಸವಾರನೋರ್ವ ರುದ್ರಪ್ಪ ಲಮಾಣಿ ಅವರಿಗೆ ಡಿಕ್ಕಿ ಹೊಡೆದು ತಲೆಗೆ, ಮೂಗಿಗೆ ಗಾಯಗಳು ಆಗಿವೆ ಎಂದು ಲಮಾಣಿ ಅವರನ್ನು ದಾವಣಗೆರೆ ಎಸ್ ರಸ್ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!

ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. 2024-25 ಸಾಲಿನಯುಗಮಾನೋತ್ಸವ ಹಿನ್ನೆಲೆಯಲ್ಲಿ ಹುನಗುಂದ ಗ್ರಾಮದ ಮಂತ್ರವಾಡಿ ಮಠದ ಶ್ರೀ ರೇಣುಕ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ಯಾಹಟ್ಟಿಯ ಉಜ್ಜಯಿನಿ ಶಾಖಾ ಹಿರೇಮಠದ ಶ್ರೀ ಷ ಬ್ರ ಮರುಳ ಸಿದ್ಧ ಶಿವಾಚಾರ್ಯ ಮಹಾ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುನಗುಂದ ಸರ್ವಧರ್ಮದ ಗುರು ಹಿರಿಯರು, ಜಂಗಮ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?

ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?

ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ಮುಂಡಗೋಡಿನ ವ್ಯಕ್ತಿ ಭೀಕರ ಸಾವು ಕಂಡಿದ್ದಾನೆ. ತನ್ನದೇ ಬೈಕ್ ಪಕ್ಕದಲ್ಲಿ ಸಾವನ್ನಪ್ಪಿರೋ ವ್ಯಕ್ತಿ ಅನುಮಾನಾಸ್ಪದವಾಗಿ ಹೆಣವಾಗಿದ್ದಾನೆ. ಮುಂಡಗೋಡ ತಾಲೂಕಿನ ಮೂಡಸಾಲಿಯ ಮಂಜುನಾಥ್ ಜಾಧವ್(45) ಅಲಿಯಾಸ್ ಮಂಜು ಮೂಡಸಾಲಿ ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿ ಅಂತಾ ಅನುಮಾನಿಸಲಾಗಿದೆ. ಅಸಲು, KA 31 E F 3587 ನೋಂದಣಿ ಸಂಖ್ಯೆಯ ಪಲ್ಸರ್ ಬೈಕ್ ನ ಪಕ್ಕದಲ್ಲೇ ರಕ್ತಸಿಕ್ತವಾಗಿ ಬಿದ್ದಿರೋ ವ್ಯಕ್ತಿ, ಮಂಜುನಾಥ್ ಜಾಧವ್ ಅಂತ ಹೇಳಲಾಗ್ತಿದೆ. ಬಂಕಾಪುರ ಪಟ್ಟಣದ ಹೊರವಲಯದ ರಸ್ತೆ ಪಕ್ಕದಲ್ಲಿ ಘಟನೆ ನಡೆದಿದೆ. ಇಲ್ಲಿ ಬೈಕ್ ಅಪಘಾತವಾಯ್ತಾ ಅಥವಾ ಯಾರಾದ್ರೂ ಕೊಲೆ ಮಾಡಿ ಅಪಘಾತ ಅಂತಾ ಬಿಂಬಿಸಲು ಯತ್ನಿಸಿದ್ದಾರಾ..? ಅನ್ನೋ ಅನುಮಾನ ಶುರುವಾಗಿದೆ. ಸದ್ಯ ಬಂಕಾಪುರ ಠಾಣೆಯ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹುನಗುಂದ ಗ್ರಾಪಂ PDO ಮಂಜುನಾಥ್ ಗೆ  “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!

ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಪಿಡಿಒ ಮಂಜುನಾಥ್ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶುಕ್ರವಾರ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು, ಮಂಜುನಾಥ ಅವರಿಗೆ ಫೆಬ್ರವರಿ 2025 ಮಾಹೆಯ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು‌. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಕರೀಂ ಅಸದಿ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಉಪಸ್ಥಿತರಿದ್ದರು.

ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!

ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಮಾರ್ಚ್ 9 ರಂದು ಬೆಳಿಗ್ಗೆ 6 ಗಂಟೆಗೆ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಿಂದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ” Drugs & Cyber Crime free Karnataka & Fitness for All” ಥೀಮ್‌ ಅಡಿಯಲ್ಲಿ ಕರ್ನಾಟಕ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟವನ್ನು ಆಯೋಜಿಸಲಾಗಿದೆ. ಪೊಲೀಸ್ ರನ್ -2025 ರ ಮ್ಯಾರಾಥಾನ್ 5K ಓಟದಲ್ಲಿ ಸಾರ್ವಜನಿಕರು ಕ್ಯೂಆ‌ರ್ ಕೋಡ್ ಸ್ಕ್ಯಾನ್ ಮಾಡಿ ಹೆಸರುಗಳನ್ನು ನೊಂದಾಯಿಸಿ ಕೊಳ್ಳುವುದು ಹಾಗೂ ಮ್ಯಾರಾಥಾನ್ ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ. 5K ಮ್ಯಾರಾಥಾನ್ ಓಟದಲ್ಲಿ ಮೊದಲ 3 ಓಟಗಾರರಿಗೆ ಆಕರ್ಷಕ ನಗದು ಬಹುಮಾನ, ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಮತ್ತು ಮ್ಯಾರಾಥಾನ್ ಮುಗಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ಹಾಗೂ ಪದಕವನ್ನು ನೀಡಲಾಗುವುದು ಎಂದು ಪೊಲೀಸ್ ಅಧೀಕ್ಷಕ ನಾರಾಯಣ ಎಂ ತಿಳಿಸಿದ್ದಾರೆ.

error: Content is protected !!