Gold Price Today: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ನಾಲ್ಕು ದಿನ ಏರಿಕೆ ಬಳಿಕ ವೀಕೆಂಡ್‌ನಲ್ಲಿ ಭಾರೀ ಕುಸಿತಗೊಂಡಿದೆ.

ಈ ವಾರದ ಮೊದಲ ನಾಲ್ಕು ವಹಿವಾಟುಗಳಲ್ಲಿ ಬಂಗಾರದ ಬೆಲೆ ಸತತವಾಗಿ ಏರಿಕೆಯಾದ ಬಳಿಕ ಶುಕ್ರವಾರ ಬೆಲೆ ವ್ಯತ್ಯಾಸವಾಗಿರಲಿಲ್ಲ. ಆದ್ರೆ ಇಂದು ಅಂದ್ರೆ ಶನಿವಾರ 22 & 24 ಕ್ಯಾರೆಟ್ ಬಂಗಾರ ದಿಢೀರ್‌ ಇಳಿಕೆಗೊಂಡಿದೆ. ಇದೇ ವೇಳೆಯಲ್ಲಿ ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಗೊಂಡಿದೆ.

6 ದಿನದಲ್ಲಿ ಬೆಳ್ಳಿ ಬೆಲೆ 7,200 ರೂಪಾಯಿ ಜಿಗಿತ!
ಚಿನ್ನದ ಬೆಲೆ ಏರಿಳಿತ ಸಾಧಿಸಿದ್ದರೂ, ಬೆಳ್ಳಿ ಬೆಲೆ ಮಾತ್ರ ಜಿಗಿತ ಮುಂದುವರೆಸಿದೆ. ಶುಕ್ರವಾರ ಬೆಳ್ಳಿ ಬೆಲೆ ಕೆಜಿಗೆ 3,000 ರೂಪಾಯಿ ಹೆಚ್ಚಳದ ಬಳಿಕ ಇಂದು ಶನಿವಾರ 100 ರೂಪಾಯಿ ಏರಿಕೆಗೊಂಡಿದೆ. ಈ ಮೂಲಕ ಒಟ್ಟು 6 ದಿನಗಳಲ್ಲಿ ಬರೋಬ್ಬರಿ 7,200 ರೂಪಾಯಿ ಬೆಲೆ ಹೆಚ್ಚಾಗಿದೆ.

ದೆಹಲಿಯಲ್ಲಿ ಚಿನ್ನದ ಬೆಲೆ ಕುಸಿತ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 1,500 ರೂಪಾಯಿ ಇಳಿಕೆಗೊಂಡು 89,950 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ 1,630 ರೂಪಾಯಿ ಕುಸಿದು 98,120 ರೂಪಾಯಿ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಹೆಚ್ಚಾಗಿ 1,07,100 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ನಗರಗಳ ಹೆಸರು :- ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು :- 97,970 ರೂಪಾಯಿ
ನಾಗ್ಪುರ :- 97,970 ರೂಪಾಯಿ
ಮುಂಬೈ :- 97,970 ರೂಪಾಯಿ
ಚೆನ್ನೈ :-97,970 ರೂಪಾಯಿ
ಕೋಲ್ಕತ್ತಾ :- 97,970 ರೂಪಾಯಿ
ಪಾಟ್ನಾ :- 97,970ರೂಪಾಯಿ
ಸೂರತ್‌ :- 97,970 ರೂಪಾಯಿ
ಚಂಡೀಗಢ :- 97,970 ರೂಪಾಯಿ
ಲಕ್ನೋ :- 97,970 ರೂಪಾಯಿ

ಈ ಮೇಲ್ಕಂಡ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿಗೆ) ಎಷ್ಟಿದೆ ಈ ಕೆಳಗೆ ಚೆಕ್ ಮಾಡಿ

ನಗರಗಳು ಬೆಲೆ (ಪ್ರತಿ ಕೆಜಿಗೆ)
ದೆಹಲಿ :- 1,07,100 ರೂ.
ಬೆಂಗಳೂರು :- 1,07,100 ರೂ.
ಚೆನ್ನೈ :- 1,17,100 ರೂ.
ಮುಂಬೈ :- 1,07,100 ರೂ.
ಕೋಲ್ಕತ್ತಾ :- 1,07,100 ರೂ.
ಕೇರಳ :- 1,17,100 ರೂ.
ಪಾಟ್ನಾ :- 1,07,100 ರೂ.
ಸೂರತ್‌ :- 1,07,100 ರೂ.
ಚಂಡೀಗಢ :- 1,07,100 ರೂ.
ಲಕ್ನೋ :- 1,07,100 ರೂ.

error: Content is protected !!