Business News
ಕಾರವಾರ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕುಮಟಾದಲ್ಲಿ ಜೂ.9 ರಿಂದ ಜೂ.21 ವರೆಗೆ ಕೃಷಿ ಉದ್ಯಮಿ ಮತ್ತು ಕೋಳಿ ಸಾಕಾಣಿಕೆ 13 ದಿನಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ. ಅಭ್ಯರ್ಥಿಯು ನಿರುದ್ಯೋಗಿಯಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ವಯೋಮಿತಿ 18 ರಿಂದ 45 ವರ್ಷಗಳು. ಹಾಗೂ ಕನಿಷ್ಟ ವಿದ್ಯಾರ್ಹತೆ ಕನ್ನಡ ಓದಲು ಬರೆಯಲು ಬರಬೇಕು ಮತ್ತು ತರಬೇತಿಗೆ ಅನುಗುಣವಾಗಿ ಕನಿಷ್ಠ ಜ್ಞಾನವಿರಬೇಕು.
ಆಸಕ್ತರು ತರಬೇತಿಗೆ ಬರುವಾಗ 4 ಪಾಸ್ ಪೋರ್ಟ ಸೈಜ್ ಫೋಟೋ,ರೇಶನ್ ಕಾರ್ಡ,ಆಧಾರ್ ಕಾರ್ಡ, ಬ್ಯಾಂಕ್ ಪಾಸ್‌ಬುಕ್,ಪಾನ್ ಕಾರ್ಡ ಇವುಗಳ 1 ಝೆರಾಕ್ಸ್ ಪ್ರತಿಯನ್ನು ತರಬೇಕು.
ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ, ಕೈಗಾರಿಕಾ ವಸಾಹತು ಪ್ರದೇಶ, ಹೆಗಡೆರಸ್ತೆ, ಕುಮಟಾ -581343 ಉತ್ತರ ಕನ್ನಡ ಜಿಲ್ಲೆ ಇವರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ದೂರವಾಣಿ ಸಂಖ್ಯೆ:08386-220530, 9449860007, 9538281989, 9916783825, 8880444612, 9821819723 ನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.