Education news:
ಕಾರವಾರ: ಪ್ರಸುತ್ತ ಸಾಲಿನ ಐ.ಟಿ.ಐ ಪ್ರವೇಶದ ಆನ್‌ಲೈನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು.ಪ್ರಥಮ ಸುತ್ತಿನ ಆಯ್ಕೆ ಪ್ರಕ್ರಿಯೆ ಕೈಗೊಂಡಿರುವುದಿಲ್ಲ.ಆಯ್ಕೆ ಪ್ರಕ್ರಿಯೆಗೊಂಡ ನಂತರ ವೃತ್ತಿವಾರು ಬಾಕಿ ಉಳಿದಿರುವ ಸ್ಥಾನಗಳನ್ನು ಸೂಚನಾ ಫಲಕ್ಕೆ ಅಳವಡಿಸಲಾಗುವುದು.
ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡದೇ ಇರುವವರು ಆನ್‌ಲೈನ್ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿಕೊಂಡರೂ ಪ್ರಥಮ ಸುತ್ತಿನ ಪ್ರಕ್ರಿಯೆಯಲ್ಲಿ ಆಯ್ಕೆಗೊಳ್ಳದೇ ಇರುವವರು ಹಾಗೂ ಇದುವರೆಗೂ ಯಾವುದೇ ಅರ್ಜಿ ಸಲ್ಲಿಸದೇ ಇರುವವರಿಗೆ ಆಫ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ👉ಪತ್ನಿಯ ತಲೆ ಕಡಿದುಕೊಂಡು ಪೊಲೀಸ್ ಠಾಣೆಗೆ ಬಂದ ಪತಿರಾಯ..!
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾರವಾರದಲ್ಲಿ ಆಫ್‌ಲೈನ್ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿ ಎಲ್ಲಾ ದಾಖಲಾತಿಯ ಝೇರಾಕ್ಸ ದೃಢೀಕೃತ ಪ್ರತಿಯೊಂದಿಗೆ ಸಲ್ಲಿಸಿ ದಾಖಲೆ ಪರಿಶೀಲನೆ ಮಾಡಿಸಿಕೊಂಡು ದಾಖಲೆ ಪರಿಶೀಲನೆ ಫೀ ರೂ.50 ನ್ನು ಕಚೇರಿಯಲ್ಲಿ ಪಾವತಿಸಿ ಅರ್ಜಿ ಸಲ್ಲಿಸುವುದು. ಜೂ.12 ರವರೆಗೆ ಸ್ವೀಕರಿಸಿದ ಅರ್ಜಿಗಳನ್ನು ಮೇರಿಟ್ ಆಧಾರದ ಮೇಲೆ ಕ್ರೋಢಿಕರಿಸಿ ಮೇರಿಟ್ ಆಧಾರದ ಮೇಲೆ ಉಳಿದ ಸ್ಥಾನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.