ಮಳಗಿ ಸಹಕಾರಿ ಬ್ಯಾಂಕಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆ, ಸೆಕ್ಯುರಿಟಿ ಗಾರ್ಡ್ ಕಟ್ಟಿ ಹಾಕಿದ್ರು ಖದೀಮರು.‌!

ಮಳಗಿ ಸಹಕಾರಿ ಬ್ಯಾಂಕಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆ, ಸೆಕ್ಯುರಿಟಿ ಗಾರ್ಡ್ ಕಟ್ಟಿ ಹಾಕಿದ್ರು ಖದೀಮರು.‌!

ಮುಂಡಗೋಡ ತಾಲೂಕಿನ ಮಳಗಿಯಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆಯಾಗಿದೆ. ನಿನ್ನೆ ರಾತ್ರಿ 9.30 ರ ಸಮಯದಲ್ಲೇ ಬಂದು, ಸೆಕ್ಯುರಿಟಿ ಗಾರ್ಡ್ ನನ್ನು ಕಟ್ಟಿಹಾಕಿ, ರಾತ್ರಿಯಿಡೀ ಅಲ್ಲೇ ಬೀಡು ಬಿಟ್ಟು, ಯಾರದ್ದೂ ಭಯವಿಲ್ಲದೇ ದರೋಡೆಕೋರರ ಗ್ಯಾಂಗ್ ಸಹಕಾರಿ ಸಂಘದಲ್ಲಿ ದರೋಡೆ ಮಾಡಿಕೊಂಡು ಹೋಗಿದೆ. ಗಾರ್ಡಿಗೆ ಕಟ್ಟಿ ಹಾಕಿ..! ಅಂದಹಾಗೆ, ನಿನ್ನೆ ರಾತ್ರಿ ಎಲ್ಲರೂ ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದರೆ, ದರೋಡೆಕೋರ ಗ್ಯಾಂಗ್ ಮಾತ್ರ ಕಳ್ಳತನದ ಪ್ಲ್ಯಾನ್ ಹಾಕಿದೆ. ಹೀಗಾಗಿ, ಇನ್ನೂ ಯಾರೂ ಮಲಗದ ವೇಳೆಯೇ ಮಳಗಿ ಸೇವಾ ಸಹಕಾರಿ ಸಂಘದ ಅಂಗಳಕ್ಕೆ ಬಂದಿದೆ. ಸಂಘದಲ್ಲಿ ರಾತ್ರಿ ಕಾಯಲು ಇದ್ದ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನ ಬಾಯಿಗೆ ಬಟ್ಟೆ ತುರುಕಿ ಕಟ್ಟಿ ಹಾಕಿದ್ದಾರೆ ದರೋಡೆಕೋರರು. ನಿನ್ನ ತಲೆದಿಂಬಿನ ಹತ್ತಿರವೇ ಬಾಂಬ್ ಇಟ್ಟಿದ್ದೇವೆ ನೀನೇನಾದ್ರೂ ಬಾಲ ಬಿಚ್ಚಿದ್ರೆ ರಿಮೋಟ್ ಮೂಲಕ ಉಡಾಯಿಸಿ ಬಿಡ್ತಿವಿ ಅಂತಾ ಭಯಗೊಳಿಸಿ ಒಳನುಗ್ಗಿದ್ದಾರಂತೆ. ಹೀಗಾಗಿ, ಏನೂ ಮಾಡಲಾಗದ ಸ್ಥಿತಿಯಲ್ಲಿ ಪರದಾಡಿದ್ದಾನೆ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪ. ಕಟ್ಟರ್ ಮಶಿನ್ ತಂದ್ರು..! ಹೀಗೆ, ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನನ್ನು...

ಬಾಚಣಕಿ ಶಾಲೆಯಲ್ಲಿ ವಿದ್ಯುತ್ ಆಘಾತ,  ಅದೃಷ್ಟವಶಾತ್ ಆರು ವಿದ್ಯಾರ್ಥಿಗಳು ಬಚಾವ್..!

ಬಾಚಣಕಿ ಶಾಲೆಯಲ್ಲಿ ವಿದ್ಯುತ್ ಆಘಾತ, ಅದೃಷ್ಟವಶಾತ್ ಆರು ವಿದ್ಯಾರ್ಥಿಗಳು ಬಚಾವ್..!

 ಮುಂಡಗೋಡ ತಾಲೂಕಿನ ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದ ಆರು ವಿದ್ಯಾರ್ಥಿಗಳು ಅಧೃಷ್ಟವಶಾತ್ ಬಚಾವ್ ಆಗಿದ್ದಾರೆ. ವಿದ್ಯುತ್ ಪ್ರವಹಿಸಿ ಆರು ಮಕ್ಕಳಿಗೆ ಆಘಾತವಾಗಿದೆ. ಗ್ರಾಮಸ್ಥರು ಪೋಷಕರ ಸಮಯಪ್ರಜ್ಞೆಯಿಂದ ಆರು ಮಕ್ಕಳು ಬಚಾವ್ ಆಗಿದ್ದಾರೆ. ಏನಿದು ಘಟನೆ..? ಅಂದಹಾಗೆ, ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯುತ್ ಮೀಟರ್ ಪಕ್ಕದಿಂದ‌ ಡೈರೆಕ್ಟ್ ಆಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಅಂದ್ರೆ ಅಲ್ಲಿ ಯಾವುದೇ ರಕ್ಷಣಾತ್ಮಕ ಪರಿಕರಗಳನ್ನು ಬಳಸದೇ ಸ್ವಿಚ್ ಬೋರ್ಡ್ ಹಾಕಲಾಗಿದೆ. ಎಲ್ಲೆಂದರಲ್ಲಿ ಹರಿದ ವಿದ್ಯುತ್ ವೈಯರ್ ಗಳನ್ನು ನೇತಾಡುವಂತೆ ಮಾಡಲಾಗಿದೆ. ಹೀಗಾಗಿ, ಇಂದು ಬೆಳಿಗ್ಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಬಾಗಿಲು ತೆರೆಯಲು ಹೋದಾಗ ವಿದ್ಯುತ್ ಪ್ರವಹಿಸಿದೆ. ತಕ್ಷಣವೇ ಭಯದಿಂದ ನಡುಗಿ ಹೋದ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರು ಪೋಷಕರು ಸೇರಿ  ತಕ್ಷಣವೇ ಮೇನ್ ಲೈನ್ ಸಂಪರ್ಕ‌ ಕಡಿತಗೊಳಿಸಿದ್ದಾರೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಬಚಾವ್ ಆಗಿದ್ದಾರೆ. ಕಾಮೆನ್ ಸೆನ್ಸ್...

ಸಂತ ಸೇವಾಲಾಲರ ಜನ್ಮಸ್ಥಳದಲ್ಲಿ RSS ಶಿಬಿರಕ್ಕೆ ವಿರೋಧ ಸರಿಯಲ್ಲ, ಬಂಜಾರಾ ಸಮುದಾಯಕ್ಕೆ ಮುಖಂಡ ಶೇಖರ್ ಲಮಾಣಿ ಮನವಿ..!

ಸಂತ ಸೇವಾಲಾಲರ ಜನ್ಮಸ್ಥಳದಲ್ಲಿ RSS ಶಿಬಿರಕ್ಕೆ ವಿರೋಧ ಸರಿಯಲ್ಲ, ಬಂಜಾರಾ ಸಮುದಾಯಕ್ಕೆ ಮುಖಂಡ ಶೇಖರ್ ಲಮಾಣಿ ಮನವಿ..!

ಮುಂಡಗೋಡ: ಬಂಜಾರಾ ಸಮುದಾಯದ ಪವಿತ್ರ ಕ್ಷೇತ್ರ ಸಂತ ಶ್ರೀ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದ ಬಾಯಾಗಢನಲ್ಲಿ RSS ನವರು ನಡೆಸುತ್ತಿರೋ ಶಿಬಿರಕ್ಕೆ ಬಂಜಾರಾ ಸಮುದಾಯದ ಕೆಲವು ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ, ಹೀಗೆ RSS ನ ಶಿಬಿರವನ್ನು ವಿರೋಧಿಸುವುದು ಸರಿಯಲ್ಲ, ಶಿಬಿರ ನಡೆಯುವಂತಾಗಲಿ ಅಂತಾ ಮುಂಡಗೋಡಿನ ಬಂಜಾರಾ ಮುಖಂಡ, ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ ಆಗ್ರಹಿಸಿದ್ದಾರೆ. RSS ಬಗ್ಗೆ ಅರಿವಿದೆ..! ನಮಗೆ RSS ಬಗ್ಗೆ ಅರಿವಿದೆ. ದೇಶಭಕ್ತಿಯನ್ನು ಜಾಗ್ರತಗೊಳಿಸಿ, ಯುವಕರನ್ನು ದೇಶಭಕ್ತಿಯೆಡೆಗೆ ಸಂಘಟಿಸುವುದೇ RSS ಆಗಿದೆ. ನಾನೂ ಕೂಡ RSS ನ ಸಂಪೂರ್ಣ ಸಿದ್ದಾಂತಗಳನ್ನು ತಿಳಿದುಕೊಂಡಿದ್ದೇನೆ. ಹೀಗಾಗಿ, ನಮ್ಮ ಬಂಜಾರಾ ಸಮುದಾಯದವರು ಹೀಗೆ RSS ಬಗ್ಗೆ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರ ಬರಬೇಕು. ಸೂರಗೊಂಡನಕೊಪ್ಪದ ಬಾಯಗಡನಲ್ಲಿ ಶಿಬಿರ ನಡೆಯುವಂತಾಗಬೇಕು, ಆ ಶಿಬಿರಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಬೇಡಿ ಅಂತಾ ಬಂಜಾರಾ ಸಮುದಾಯಕ್ಕೆ ಶೇಖರ್‌ ಲಮಾಣಿ ಮನವಿ ಮಾಡಿದ್ದಾರೆ. ಮತಾಂತರ ತಡೆದದ್ದೇ RSS..! ಇನ್ನು ಬಂಜಾರಾ ಸಮುದಾಯದ ಬಡವರನ್ನೇ ಟಾರ್ಗೆಟ್...

ಮುಂಡಗೋಡಿನಲ್ಲಿ ಮತ್ತೇ ಭಾರೀ ಮಳೆ, ಬಂಕಾಪುರ ರಸ್ತೆ ನಿವಾಸಿಗಳಿಗೆ ಮತ್ತದೇ ಗೋಳು, ಇನ್ನಾದ್ರೂ ಎಚ್ಚೆತ್ತುಕೊಳ್ಳಿ‌ ಮಿಸ್ಟರ್ ಚೀಫ್ ಆಫೀಸರ್ರೇ.!

ಮುಂಡಗೋಡಿನಲ್ಲಿ ಮತ್ತೇ ಭಾರೀ ಮಳೆ, ಬಂಕಾಪುರ ರಸ್ತೆ ನಿವಾಸಿಗಳಿಗೆ ಮತ್ತದೇ ಗೋಳು, ಇನ್ನಾದ್ರೂ ಎಚ್ಚೆತ್ತುಕೊಳ್ಳಿ‌ ಮಿಸ್ಟರ್ ಚೀಫ್ ಆಫೀಸರ್ರೇ.!

 ಮುಂಡಗೋಡಿನಲ್ಲಿ ಮತ್ತೆ ಭಾರೀ ಮಳೆಯಾಗಿದೆ. ಬಂಕಾಪುರ ರಸ್ತೆಯಲ್ಲಿ ಮತ್ತದೇ ಗೋಳು ಎದುರಾಗಿದೆ. ಶನಿವಾರದಂತೆ ಇವತ್ತೂ ಕೂಡ ಇಲ್ಲಿ‌ನ ನಿವಾಸಿಗಳು “ಶಿವ”ರಾತ್ರಿ ಜಾಗರಣೆ ಮಾಡುವಂತಾಗಿದೆ. ಹೀಗೆ ಭಜನೆ‌ ಮಾಡಿದ ಮೇಲಾದ್ರೂ “ಜನಪ್ರತಿನಿಧಿ” ಸಾಹೇಬ್ರುಗಳು ಈ ನಿವಾಸಿಗಳ ಗೋಳು ಕೇಳ್ತಾರಾ ಅನ್ನೋದೊಂದೇ ಸದ್ಯದ ಪ್ರಶ್ನೆಯಾಗಿದೆ. ಶನಿವಾರದಂತೆ..! ಅಸಲು, ಶನಿವಾರ ಇಂತದ್ದೇ ಮಳೆ ಧುತ್ತನೇ ಸುರಿದು ಹೋದಾಗ, ಪಾಪ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾತ್ರೋ ರಾತ್ರಿ ಎದ್ನೊ ಬಿದ್ನೊ ಅಂತಾ ಬಂದಿದ್ರಂತೆ. ಪಾಪ ಅದೇಲ್ಲಿ ಬೆಚ್ಚಗೆ ಮಲಗಿದ್ರೋ ಏನೋ ಮಾದ್ಯಮಗಳು ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದ್ದವು. ಅಲ್ಲದೇ ಇಲ್ಲಿನ ಬಡ ನಿವಾಸಿಗಳು ಉಗಿದು ಉಪ್ಪಿನಕಾಯಿ ಹಾಕಿದ್ರು. ಆ ಕಾರಣಕ್ಕಾಗಿ ಪಾಪ ದಡಬಡನೇ ಬಂದಿದ್ದ “ಸ್ವಾಮಿಗಳು” ಕತ್ತಲಲ್ಲೇ ಬಂದು ಅದೇನೋ ಮುಂದಿನ “ಕಠಿಣ” ವ್ಯವಸ್ಥೆಯ ಕ್ರಮಕ್ಕೆ ಮುಂದಾಗಿದ್ದಾರಂತೆ. ಪಾಪ, ಈ ಯಪ್ಪನಿಗೆ ಶನಿವಾರ ರಾತ್ರಿಯೇ ಜ್ಞಾನೋದಯವಾಗಿದ್ದು ಸಮಸ್ಯೆಯ ಪರಿಹಾರಕ್ಕಾಗಿ ರೆಡಿಯಾಗಿದ್ರಂತೆ. ಆದ್ರೆ, ಮುಹೂರ್ತಕ್ಕಾಗಿ ಜ್ಯೋತಿಷ್ಯರ ಹುಡುಕಾಟದಲ್ಲಿದ್ದಾರಂತೆ. ಇದೇಲ್ಲ  ನಂಬೋದಾ..? ಅಸಲು, ಇದೇಲ್ಲ ಬರೀ ಕಣ್ಣೊರೆಸುವ ತಂತ್ರ ಅಂತಿದ್ದಾರೆ...

ಮುಂಡಗೋಡಿನಲ್ಲಿ ಭಾರಿ ಮಳೆ, ಬಂಕಾಪುರ ರಸ್ತೆ ಮೇಲೆ ಮೊಣಕಾಲಿನವರೆಗೂ ಮಳೆ‌ನೀರು..! ಮನೆಗಳಿಗೂ ಹೊಕ್ಕ ಕೊಳಚೆ ನೀರು.!

ಮುಂಡಗೋಡಿನಲ್ಲಿ ಭಾರಿ ಮಳೆ, ಬಂಕಾಪುರ ರಸ್ತೆ ಮೇಲೆ ಮೊಣಕಾಲಿನವರೆಗೂ ಮಳೆ‌ನೀರು..! ಮನೆಗಳಿಗೂ ಹೊಕ್ಕ ಕೊಳಚೆ ನೀರು.!

 ಮುಂಡಗೋಡ: ಪಟ್ಟಣದಲ್ಲಿ ಭಾರೀ ಮಳೆ ಸುರಿದಿದೆ‌. ಪರಿಣಾಮ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನಗಳು ರಸ್ತೆ ಮೇಲೆ ಸಂಚರಿಸಲು ಪರದಾಡುವಂತಾಗಿದೆ. ಪಟ್ಟಣ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಗೆ ಇಲ್ಲಿನ ನಿವಾಸಿಗಳು ಕ್ಯಾಕರಿಸಿ ಉಗಿಯುವಂತಾಗಿದೆ. ರಸ್ತೆಯಲ್ಲಾ, ಕೆರೆ..! ಅಸಲು, ಇಂದು ಮದ್ಯಾನ ಸುರಿದ ಭಾರೀ ಮಳೆಯಿಂದ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮಳೆಯ ನೀರು ತುಂಬಿ ಅದ್ವಾನವಾಗಿದೆ‌. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ‌. ಮೊಣಕಾಲಿನವರೆಗೂ ಮಳೆಯ ನೀರು ತುಂಬಿದೆ‌. ಹೀಗಾಗಿ, ಇದೇನು ರಸ್ತೆಯೋ ಕೆರೆಯೋ ಎಂಬ ಅನುಮಾನದಲ್ಲೇ ವಾಹನ ಸವಾರರು ಪರದಾಡುವಂತಾಗಿದೆ. ಅದ್ರಲ್ಲೂ ಇಲ್ಲಿ ಹೇಗೋ ದಾಟಿ ನಡೆದರಾಯ್ತು ಅಂತಾ ಹೊರಟಿದ್ದ ವಾಹನವೊಂದು ನಟ್ಟನಡುವೆ ನೀರಲ್ಲಿ ಕೆಟ್ಟು ಪರದಾಡಿದೆ. ಇಷ್ಟಿದ್ರೂ ನಿರ್ಲಜ್ಜ ಅಧಿಕಾರಿಗಳು ತಮ್ಮ ಬೇಜವಾಬ್ದಾರಿಯಿಂದ ಎದ್ದು ಬರುತ್ತಲೇ ಇಲ್ಲ. ಮನೆಗಳಿಗೆ ಹೊಕ್ಕ ನೀರು..! ಇನ್ನು, ಮಳೆಯ ನೀರು ಬಂಕಾಪುರ ರಸ್ತೆಯ ನಿವಾಸಿಗಳಿಗೆ ಇನ್ನಿಲ್ಲದ ಪರದಾಟ ತಂದಿಟ್ಟಿದೆ. ಇಲ್ಲಿನ ಹಲವು ಮನೆಗಳಿಗೆ ನುಗ್ಗಿರೋ ಮಳೆ...

ಬಿಜೆಪಿ ಮರಾಠಾ ಮುಖಂಡ ಎಲ್ಟಿ ಪಾಟೀಲ್ ಗೆ ಒಲಿಯತ್ತಾ ಅಧ್ಯಕ್ಷಗಿರಿ..? ಅಸಲು, ಪಾಟೀಲರ ಮನದೊಳಗಿನ ನೋವು ಎಂತಾದ್ದು ಗೊತ್ತಾ..?

ಬಿಜೆಪಿ ಮರಾಠಾ ಮುಖಂಡ ಎಲ್ಟಿ ಪಾಟೀಲ್ ಗೆ ಒಲಿಯತ್ತಾ ಅಧ್ಯಕ್ಷಗಿರಿ..? ಅಸಲು, ಪಾಟೀಲರ ಮನದೊಳಗಿನ ನೋವು ಎಂತಾದ್ದು ಗೊತ್ತಾ..?

  ಮುಂಡಗೋಡ ತಾಲೂಕಿನ ಮರಾಠಾ ಮುಖಂಡ, ತಾಲೂಕಿನ ಬಿಜೆಪಿ ನಾಯಕ, ಎಲ್. ಟಿ. ಪಾಟೀಲ್ ಒಳಗೊಳಗೆ ಕಿಚ್ಚು ಹೊತ್ತಿಸಿಕೊಂಡು ಕೂತಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸದ್ಯದ ಸ್ಥಿತಿಗತಿಗಳ ಬಗ್ಗೆ ಆತಂಕಗೊಂಡಿದ್ದಾರೆ. ಜೊತೆಗೆ ಸದ್ಯ ಖಾಲಿಯಿರೋ NWKSRTC ಅಧ್ಯಕ್ಷಗಿರಿ ದಕ್ಕದೇ ಹೋದ್ರೆ ಬಿಜೆಪಿಗೆ ಠಕ್ಕರ್ ಕೊಡುವ ಸಾತ್ವಿಕ ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಬಿಜೆಪಿ ಸಂಕಷ್ಟದಲ್ಲಿ..! ಅಸಲು, ಬಿಜೆಪಿ ಮುಖಂಡ ಎಲ್.ಟಿ.ಪಾಟೀಲರೇ ನೇರವಾಗಿ ಪಬ್ಲಿಕ್ ಫಸ್ಟ್ ಎದುರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಶಿವರಾಮ್ ಹೆಬ್ಬಾರ್ ಪಡೆಯೊಳಗೇ ಗುರುತಿಸಿಕೊಂಡಿರೋ ಎಲ್ಟಿ ಪಾಟೀಲರು ಅದ್ಯಾಕೋ ಎನೋ ಸದ್ಯದ ಬಿಜೆಪಿಯೊಳಗಿನ ನೆಗೆಟಿವ್ ಅಂಶಗಳನ್ನು ಬಾಯಿಬಿಟ್ಟಿದ್ದಾರೆ. ಹೀಗೇ ಮುಂದುವರೆದ್ರೆ ಬರುವ ಚುನಾವಣೆಯಲ್ಲಿ ಬಿಜೆಪಿಗೆ ನೆಲೆ ಸಿಗೋದೇ ಕಷ್ಟ ಅಂತಿದ್ದಾರೆ. ಅಸಲು, ಇಂತಹದ್ದೊಂದು ಮನದಾಳದ ನೋವು ಮತ್ತು ಆಕ್ರೋಶ ಹೊರಹಾಕುವ ಹಿಂದೆ ಎಲ್ಟಿ ಪಾಟೀಲರು ಅನುಭವಿಸಿರೋ ಒಳಗೊಳಗಿನ ನಿರ್ಲಕ್ಷ ಹಾಗೂ ಕೆಲವೇ ಕೆಲವು ನಾಯಕರೆನಿಸಿಕೊಂಡವರ ಹುಂಬ ರಾಜಕೀಯ ಕಾರಣವಾಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಬರೀ ಬ್ರಷ್ಟಾಚಾರ..! ನಿಜ ಅಂದ್ರೆ, ಯಲ್ಲಾಪುರ...

ಗುಂಜಾವತಿ ಬಳಿ ಬೈಕ್ ಹಾಗೂ ಕಾರ್ ನಡುವೆ ಡಿಕ್ಕಿ, ಬೈಕ್ ಸವಾರ ಗಂಭೀರ..! ರಸ್ತೆಯಲ್ಲೇ ಬಿದ್ದು ಒದ್ದಾಡಿದ ಗಾಯಾಳು..!

ಗುಂಜಾವತಿ ಬಳಿ ಬೈಕ್ ಹಾಗೂ ಕಾರ್ ನಡುವೆ ಡಿಕ್ಕಿ, ಬೈಕ್ ಸವಾರ ಗಂಭೀರ..! ರಸ್ತೆಯಲ್ಲೇ ಬಿದ್ದು ಒದ್ದಾಡಿದ ಗಾಯಾಳು..!

 ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಗುಂಜಾವತಿ ಮೈನಳ್ಳಿ ಬಳಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ಕಾರ್ ಹಾಗೂ ಬೈಕ್ ನಡುವೆ ಸಂಭವಿಸಿದ ದುರಂತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಗಂಗಾರಾಮ ರಾಮು ಎಡಗೆ (20) ಗಂಭೀರ ಗಾಯಗೊಂಡ ಬೈಕ್ ಸವಾರನಾಗಿದ್ದು. ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಹೊರಟಿದ್ದ KA-03 MV-6816 ನೋಂದಣಿ ಸಂಖ್ಯೆಯ ಕಾರ್ ಹಾಗೂ ಗುಂಜಾವತಿ ಸಮೀಪದ ಬೆಂಡಿಕಟ್ಟಾ ಕಡೆಯಿಂದ ಗದ್ದೆಗೆ ಹೊರಟಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರ್ ನಲ್ಲಿನ ಏರ್ ಬ್ಯಾಗ್ ಓಪನ್ ಆಗಿದ್ದು ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಇನ್ನು ಘಟನೆ ನಡೆದು ಒಂದು ಗಂಟೆ ಕಳೆಯುತ್ತ ಬಂದರೂ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿರಲಿಲ್ಲ. ಆ ನಂತರದಲ್ಲಿ, 108 ಅಂಬ್ಯುಲೆನ್ಸ್ ಗೆ ಸ್ಥಳೀಯರು ಕರೆ‌ಮಾಡಿದ ನಂತರ ಸ್ಥಳಕ್ಕೆ ಆಗಮಿಸಿದ 108 ಅಂಬ್ಯುಲೆನ್ಸ್ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದೆ. ಹೀಗಾಗಿ, ಗಾಯಾಳು ನೋವಿನಿಂದ ನರಳುತ್ತಿದ್ದ ದೃಷ್ಯ ಕಂಡು ಬಂತು. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು...

ಪಾಟೀಲರಿಂದ ಕಿತ್ತುಕೊಂಡ ಅಧ್ಯಕ್ಷಗಿರಿ ಯಾರ ಪಾಲು..? ಮರಾಠಾ‌ ಮುಖಂಡನಿಗೆ ಒಲಿಯತ್ತಾ ಪಟ್ಟ..? ಐರ್ಲ್ಯಾಂಡನಲ್ಲೇ ರೆಡಿಯಾಯ್ತಾ ಪ್ಲ್ಯಾನ್..?

ಪಾಟೀಲರಿಂದ ಕಿತ್ತುಕೊಂಡ ಅಧ್ಯಕ್ಷಗಿರಿ ಯಾರ ಪಾಲು..? ಮರಾಠಾ‌ ಮುಖಂಡನಿಗೆ ಒಲಿಯತ್ತಾ ಪಟ್ಟ..? ಐರ್ಲ್ಯಾಂಡನಲ್ಲೇ ರೆಡಿಯಾಯ್ತಾ ಪ್ಲ್ಯಾನ್..?

ಯಲ್ಲಾಪುರ ಕ್ಷೇತ್ರದ ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ಗುದುಮುರುಗಿ ಬಿದ್ದಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲರನ್ನು ಅನಾಮತ್ತಾಗಿ ಕಿತ್ತು ಹಾಕಿದ ನಂತರ, ಕ್ಷೇತ್ರದ ಬಿಜೆಪಿ ಅಂಗಳದಲ್ಲಿ ಭಾರೀ ಲೆಕ್ಕಾಚಾರಗಳು ಗರಿಗೆದರಿವೆ. ಪಾಟೀಲರ ಅಷ್ಟೂ ಮಜಕೂರಗಳಿಂದ ಕ್ಷೇತ್ರದ ಬಿಜೆಪಿಗೆ ಆಗಿರೋ, ಆಗಲಿರೋ ಡ್ಯಾಮೇಜ್ ಕಂಟ್ರೋಲ್ ಗೆ ಅದೊಂದು ಪ್ಲ್ಯಾನ್ ಸಾಗರದಾಚೆಗಿನ ಐರ್ಲೆಂಡ್ ನಲ್ಲಿಯೇ ರೆಡಿಯಾಗ್ತಿದೆಯಾ..? ಹೌದು ಅಂತಿದೆ ಅದೊಂದು ಮೂಲ..! ಅದೊಂದು ಫ್ಯಾಕ್ಟರ್..? ನಿಮಗೆ, 2018 ರ ವಿಧಾನಸಭಾ ಚುನಾವಣೆಯ ಒಂದಿಷ್ಟು ರಣರೋಚಕ ಸಂಗತಿ ಹೇಳಲೇಬೇಕಿದೆ. ಅವತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಎಸ್.ಪಾಟೀಲ್, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ್ ಹೆಬ್ಬಾರ್ ವಿರುದ್ಧ ಕೂದಲೆಳೆ ಅಂತರದಿಂದ ಸೋತು ಮನೆ ಹಿಡಿಯುವಂತಾಗಿತ್ತು. ಅಸಲಿಗೆ, ಅವತ್ತು ವಿ.ಎಸ್.ಪಾಟೀಲರ ಸೋಲಿನ ಹಿಂದೆ ಅದೊಂದು ಫ್ಯಾಕ್ಟರ್ ಇನ್ನಿಲ್ಲದಂತೆ ಕೆಲಸ ಮಾಡಿತ್ತು ಅನ್ನೋದು ಖುದ್ದು ಪಾಟೀಲರಿಗೂ ಅರ್ಥವಾಗಿತ್ತು. ಆ ಹೊತ್ತಲ್ಲಿ ಅದೊಂದು ಪ್ರಬಲ ಸಮುದಾಯ ಬಿಜೆಪಿಗೆ ಇನ್ನಿಲ್ಲದಂತೆ ಗುದ್ದು ಕೊಟ್ಟಿತ್ತು. ಯಡಿಯೂರಪ್ಪನವರ ಅದ್ಯಾವುದೋ ಒಂದು ಮಾತು ಆ ಸಮುದಾಯದ...

ಮುಂಡಗೋಡ ಬಳಿ ಬೈಕ್- ಕಾರ್ ನಡುವೆ ಮುಖಾಮುಕಿ ಡಿಕ್ಕಿ, ಲಕ್ಕೊಳ್ಳಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ ಬಳಿ ಬೈಕ್- ಕಾರ್ ನಡುವೆ ಮುಖಾಮುಕಿ ಡಿಕ್ಕಿ, ಲಕ್ಕೊಳ್ಳಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಹೊಂಡಾ ಶೋ ರೂಂ ಬಳಿ ಭೀಕರ ಅಪಘಾತವಾಗಿದೆ‌. ಕಾರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದ ಮಹೇಶ್ ಪುಂಡಲೀಕ್ ಅರ್ಕಸಾಲಿ(53) ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ಸ್ಥಿತಿ ಚಿಂತಾಜನಕವಾಗಿದ್ದು ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಿಒಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಶಿರಸಿ ಕಡೆಯಿಂದ ಬರುತ್ತಿದ್ದ ಕಾರ್ ಹಾಗೂ ಮುಂಡಗೋಡ ಕಡೆಯಿಂದ ಹೊರಟಿದ್ದ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇ‌ನ್ನು ಗಾಯಾಳುಗಳನ್ನು 108 ಅಂಬ್ಯಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಹಾಗೂ ಚಾಲಕ ಕೆಂಚೇಶ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ‌ ಮುಂದಿನ ಕ್ರಮ ಕೈಗೊಂಡಿದ್ದಾರೆ‌.

ವಿ.ಎಸ್.ಪಾಟೀಲ್ “ಕೈ”ವಶ ಆಗ್ತಿದ್ದಂತೆ, ತಲೆ ಕೆಳಗಾಯ್ತಾ ಲೆಕ್ಕಾಚಾರ..? ಬೆವರುತ್ತಿದೆಯಾ ಬಿಜೆಪಿ..?

ವಿ.ಎಸ್.ಪಾಟೀಲ್ “ಕೈ”ವಶ ಆಗ್ತಿದ್ದಂತೆ, ತಲೆ ಕೆಳಗಾಯ್ತಾ ಲೆಕ್ಕಾಚಾರ..? ಬೆವರುತ್ತಿದೆಯಾ ಬಿಜೆಪಿ..?

 ಯಲ್ಲಾಪುರ ಕ್ಷೇತ್ರದ ಬಿಜೆಪಿಗೆ ಮರ್ಮಾಘಾತವಾಗಿದೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಪಕ್ಷ ತೊರೆಯೋದು ಕನ್ಫರ್ಮ್ ಆಗಿದೆ. ಬಿಜೆಪಿ ತೊರೆದು ಇನ್ನೇನು ಕಾಂಗ್ರೆಸ್ ಸೇರಲು ಪಾಟೀಲರು ತುದಿಗಾಲಲ್ಲಿ ನಿಂತಾಗಿದೆ. ಹೀಗಾಗಿ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಅದೊಂದು ರೀತಿಯ ಸಂಚಲನಕ್ಕೆ ಕಾರಣವಾಗಿದೆ. ವಲಸಿಗರು ಹಾಗೂ ಮೂಲ ಬಿಜೆಪಿಗರ ನಡುವಿನ ಕಾಳಗಕ್ಕೆ ರಣಾಂಗಣ ಸಿದ್ದವಾಗ್ತಿದೆ. ಇದ್ರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ “ಪಬ್ಲಿಕ್ ಫಸ್ಟ್” ನುಡಿದಿದ್ದ ಭವಿಷ್ಯ ನಿಜವಾಗಿದೆ.  ಸಂಭಾವಿತ ರಾಜಕಾರಣಿ..! ಅಸಲು, ವಿ.ಎಸ್.ಪಾಟೀಲ್ ಉತ್ತರ ಕನ್ನಡ ಕಂಡ ಸಂಭಾವಿತ ರಾಜಕಾರಣಿ, ಯಾವತ್ತಿಗೂ ಅಧಿಕಾರದ ದರ್ಪ ತೋರಿದವರೇ ಅಲ್ಲ. ಮಾತಿಗಿಂತ ಕೃತಿಯಲ್ಲೇ ತಾವು ಏನು ಅಂತಾ ತೋರಿಸಿಕೊಟ್ಟವರು ಇವ್ರು. ಮೊದಲ ಬಾರಿ ಶಾಸಕರಾಗಿದ್ದಾಗ, ಇಡೀ‌ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಇವತ್ತಿಗೂ ಮಾದರಿ. ಹೀಗಾಗಿನೇ ಪಾಟೀಲರೆಂದ್ರೆ ಇವತ್ತಿಗೂ ಕ್ಷೇತ್ರದಲ್ಲಿ ಅಪ್ಪಿಕೊಳ್ಳುವ ಅಪ್ಪಟ ಅಭಿಮಾನಿಗಳಿದ್ದಾರೆ. ಇದು ಎಲ್ರಿಗೂ ಗೊತ್ತು. ಈ ಕಾರಣಕ್ಕಾಗೇ ಪಾಟೀಲರು ಕಳೆದ ಚುನಾವಣೆಯಲ್ಲಿ ಸೋತು ಗೆದ್ದಿದ್ದರು. ಪಕ್ಷಕ್ಕಾಗಿ ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು....

error: Content is protected !!