Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಹುನಗುಂದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವ ಪೂರ್ವ ತಯಾರಿ‌ ಮೆರವಣಿಗೆ..!

ಹುನಗುಂದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವ ಪೂರ್ವ ತಯಾರಿ‌ ಮೆರವಣಿಗೆ..!

ಮುಂಡಗೋಡ: ತಾಲೂಕಿನ ಹುನಗುಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ‌ ಮರವಣಿಗೆ ನಡೆಸಿದ್ರು. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ ಮೆರವಣಿಗೆ ನಡೆಸಲಾಗ್ತಿದೆ.. ಕನ್ನಡ ನಾಡು ನುಡಿಗಾಗಿ ದುಡಿದ ಕಿತ್ತೂರು ಚೆಮ್ಮಮ್ಮ, ಸಿದ್ಧಗಂಗಾ ಶಿವಕುಮಾರ ಶ್ರೀಗಳು ಸೇರಿದಂತೆ ಮಹನೀಯರ ವೇಷ ಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.. ಕನ್ನಡಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕನ್ನಡಾಂಬೆಯ ನಾಡು ನುಡಿಯ ಬಗ್ಗೆ ಜಯಘೋಷ ಮೊಳಗಿಸಿದ್ರು. ಈ ವೇಳೆ ಶಾಲೆಯ ಶಿಕ್ಷಕರು,...

Post
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನೀಡುವಂತೆ ಮನವಿ..!

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನೀಡುವಂತೆ ಮನವಿ..!

ಮುಂಡಗೋಡ: ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕಾರ್ಯಕರ್ತರು, ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅನುಮತಿ ನೀಡಬೇಕೆಂದು, ಮುಂಡಗೋಡ ತಹಶೀಲ್ದಾರ್ ಮೂಲಕ ಮುಖ್ಯಂಮತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆಯಲ್ಲಿ ಅಯ್ಯಪ್ಪ ಬಜಂತ್ರಿ. ಶಿವಣ್ಣ ಕುಂದರಗಿ. ಪಿರಜ್ಜಾ ಸಾಗರ್. ಮಂಜುನಾಥ್ ಕುರುಬರ, ಕೃಷ್ಣ ಕುಂದರಗಿ. ನಿಗಪ್ಪ ಕುರಬರ, ಪ್ರಕಾಶ್ ಕೊರವರ್, ಕೈಲಾಶ್ ಗಜಕೋಷ್, ಸಂಕೇತ್ ಗೌಡರ್, ಶ್ರೀನಿವಾಸ್ ಹುಲಗೂರ್ ಸೇರಿ ಹಲವರು ಹಾಜರಿದ್ದರು.

Post
ಅಗಡಿಯಲ್ಲಿ ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ..!

ಅಗಡಿಯಲ್ಲಿ ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ..!

ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಗರ್ಭಿಣಿಯೋರ್ವಳು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, 108 ಅಂಬ್ಯಲೆನ್ಸ್ ಗೆ ಕರೆ ಮಾಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ 108 ಸಿಬ್ಬಂದಿಗಳು, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಮನೆಯ ಹತ್ತಿರ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮನೀಡಿರೋ ಗೀತಾ ಪ್ರಭು ನಾಯಕ ಎಂಬ ಮಹಿಳೆ ಆರೋಗ್ಯವಾಗಿದ್ದಾರೆ‌. ಹೆರಿಗೆಯ ನಂತರ ಸೂಕ್ತ ಚಿಕಿತ್ಸೆಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ. ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಬಳೂರು ಹಾಗೂ ಚಾಲಕ...

Post
ಹಾನಗಲ್ ಉಪ ಕದನದಲ್ಲಿ ಮುಂಡಗೋಡ ಬಿಜೆಪಿಗರ ಪ್ರಚಾರ ಭರಾಟೆ..!

ಹಾನಗಲ್ ಉಪ ಕದನದಲ್ಲಿ ಮುಂಡಗೋಡ ಬಿಜೆಪಿಗರ ಪ್ರಚಾರ ಭರಾಟೆ..!

ಹಾನಗಲ್ ನಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಅನ್ನೋ ಪ್ರತಿಷ್ಟೆಯ ಜಿದ್ದಿಗೆ ಬಿದ್ದಿದ್ದಾರೆ. ಹೀಗಾಗಿ, ಇಡೀ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರಕ್ಕೆ ಕಾರ್ಯಪಡೆ ರಚಿಸಿದ್ದಾರೆ. ಅದ್ರಂತೆ, ಪಕ್ಕದ ಮುಂಡಗೋಡ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾನಗಲ್ ಉಪಚುನಾವಣೆಯ ಅಖಾಡಕ್ಕೆ ಇಳಿದು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ತಾಲೂಕಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಹಾನಗಲ್ ಕ್ಷೇತ್ರದ ಹಳ್ಳಿ, ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಮುಂಡಗೋಡ ಬಿಜೆಪಿಯ...

Post
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಕಿಮ್ಸ್ ಗೆ ದಾಖಲು..!

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಕಿಮ್ಸ್ ಗೆ ದಾಖಲು..!

ಮುಂಡಗೋಡ: ವಿಷ ಸೇವಿಸಿದ ಮಹಿಳೆಯೋರ್ವಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಕೋಡಂಬಿಯಲ್ಲಿ ನಡೆದಿದೆ. ಪ್ರೇಮಾ ಕೃಷ್ಣಪ್ಪ ಕೊರಗರ್ ಎಂಬುವ ಗೃಹಿಣಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವಳಾಗಿದ್ದಾಳೆ‌‌. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮುಂಡಗೋಡಿನ 108 ಅಂಬ್ಯುಲೆನ್ಸ್ ಸಿಬ್ಬಂದಿ, ತಾಲ್ಲೂಕು ಆಸ್ಪತ್ರೆ ಮುಂಡಗೋಡಿಂದ ಹುಬ್ಬಳ್ಳಿ ಕಿಮ್ಸ್ ಗೆ,108 ಅಂಬ್ಯುಲೆನ್ಸ್ ಮುಖಾಂತರ ದಾಖಲಿಸಿದ್ದಾರೆ. 108 ಅಂಬ್ಯುಲೆನ್ಸ್ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸಿ. ಬಳೂರು, ಚಾಲಕ ಕೆಂಚೇಶ್ ಇ. ಎನ್ ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ...

Post
ಮಾಜಿ ಗ್ರಾಪಂ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ವಿಧಿವಶ, ಗ್ರಾಮಸ್ಥರ ಕಂಬನಿ..!

ಮಾಜಿ ಗ್ರಾಪಂ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ವಿಧಿವಶ, ಗ್ರಾಮಸ್ಥರ ಕಂಬನಿ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಮಾಜಿ ಗ್ರಾಮ ಪಂಚಾಯತ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ. ಮಂಗಳವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವ್ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ರೈತರ ಬೋರವೆಲ್ ರಿಪೇರಿ ಮಾಡುತ್ತಿದ್ದ ಮರಿಯಪ್ಪ ಮೇತ್ರಿ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

Post
ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಸಂಭ್ರಮ, ಆಂಜನೇಯ ಸ್ವಾಮಿಗೆ ಹೋಮ, ಹವನ..!

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಸಂಭ್ರಮ, ಆಂಜನೇಯ ಸ್ವಾಮಿಗೆ ಹೋಮ, ಹವನ..!

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತು ನವರಾತ್ರಿಯ ಸಂಭ್ರಮದಲ್ಲಿ, ಮಂತ್ರ ಘೋಷಗಳ ಸದ್ದು ರಿಂಗಣಿಸಿದೆ. ನವರಾತ್ರಿಯ ವಿಶೇಷ ಸಂದರ್ಭದಲ್ಲಿ, ಅದ್ರಲ್ಲೂ ಶನಿವಾರದ ದಿನ ಇಲ್ಲಿನ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಹೋಮ, ಹವನ ನಡೆಸಲಾಗಿದೆ. ನೂತನವಾಗಿ ಅಧಿಕಾರ ವಹಿಸಿಕೊಂಡಿರೋ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ರು.    

Post
ಮುಂಡಗೋಡ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಮಟ್ಕಾ ದಂಧೆ..! “ಕ್ರಮ ಕೈಗೊಳ್ಳಿ ಸಾಹೇಬ್ರೇ” ಅಂತಾ ಎಸ್ಪಿಗೆ ದೂರು..!!

ಮುಂಡಗೋಡ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಮಟ್ಕಾ ದಂಧೆ..! “ಕ್ರಮ ಕೈಗೊಳ್ಳಿ ಸಾಹೇಬ್ರೇ” ಅಂತಾ ಎಸ್ಪಿಗೆ ದೂರು..!!

ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಮನೆ ಮಾತಾಗಿದೆ. ಹಳ್ಳಿ, ಹಳ್ಳಿಗಳಲ್ಲಿ ಹೆಜ್ಜೆಗೊಬ್ರು ಮಟ್ಕಾ ಬುಕ್ಕಿಗಳು ತಲೆ ಎತ್ತಿದ್ದಾರೆ, ಆದ್ರೆ ಇದನ್ನೇಲ್ಲ ಕಂಟ್ರೋಲ್ ಮಾಡಬೇಕಿದ್ದ ಪೊಲೀಸರು ಮಾತ್ರ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.. ಹಾಗಂತ, ನಾವು ಹೇಳ್ತಿಲ್ಲ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಂಡಗೋಡಿನ ಯುವ ಪಡೆ ಲಿಖಿತವಾಗಿ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದೆ. ಯಸ್, ಮುಂಡಗೋಡ ಭಜರಂಗದಳದ ಕಾರ್ಯಕರ್ತ ಮಂಜುನಾಥ್ ಪವಾರ್ ಇಂತಹದ್ದೊಂದು ದೂರನ್ನು ಎಸ್ಪಿ ಸಾಹೇಬ್ರಿಗೆ ಸಲ್ಲಿಸಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಅನ್ನೋದು ಬಡ ಜನರ ಜೀವ...

Post
ಚೌಡಳ್ಳಿ ಗ್ರಾಪಂ ನಲ್ಲಿ ಮಹಿಳಾ ಸದಸ್ಯರ ಬದಲು ಸಂಬಂಧಿಕರದ್ದೇ ದರ್ಬಾರು..! ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು..!!

ಚೌಡಳ್ಳಿ ಗ್ರಾಪಂ ನಲ್ಲಿ ಮಹಿಳಾ ಸದಸ್ಯರ ಬದಲು ಸಂಬಂಧಿಕರದ್ದೇ ದರ್ಬಾರು..! ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು..!!

ಮುಂಡಗೋಡ: ತಾಲೂಕಿನ ಚೌಡಳ್ಳಿಯ ಹಲವು ಯುವಕರು ಸಿಡಿದು ನಿಂತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ, ಮಹಿಳಾ ಸದಸ್ಯರುಗಳ ಪತಿ, ಅಥವಾ ಸಂಬಂಧಿಕರೇ ದರ್ಬಾರು ನಡೆಸ್ತಿದಾರೆ ಅಂತಾ ಆರೋಪಿಸಿ ದೂರು ನೀಡಿದ್ದಾರೆ. ಯಸ್, ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ, ಅವರ ಸಂಬಂಧಿಕರು ಹಾಗೂ ಮಹಿಳಾ ಸದಸ್ಯರ ಪತಿ, ಹೀಗೆ ಕುಟುಂಬಸ್ಥರು ಪಂಚಾಯತ್ ಕೆಲಸಕಾರ್ಯಗಳಲ್ಲಿ ತಾವು ಅವರ ಪರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಇದನ್ನ ಖಂಡಿಸಿ ಗ್ರಾಮದ ವಿದ್ಯಾಧರ್ ಶಿವಾಜಿ...

Post
ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನ, ಹಾರ್ಡವೇರ್ ಅಂಗಡಿ ದೋಚಿದ ಖದೀಮರು..!

ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನ, ಹಾರ್ಡವೇರ್ ಅಂಗಡಿ ದೋಚಿದ ಖದೀಮರು..!

ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನವಾಗಿದೆ‌. ಹಾರ್ಡವೇರ್ ಅಂಗಡಿಯ ಸೆಟರ್ಸ್ ಮುರಿದು ಕಳ್ಳರು ಕೈಚಳಕ ತೋರಿದ್ದಾರೆ. ಅಂಗಡಿಯಲ್ಲಿದ್ದ 15 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶಿರಸಿ ರಸ್ತೆಯ ಪೆಟ್ರೊಲ್ ಬಂಕ್ ಪಕ್ಕದಲ್ಲೇ ಇರುವ ಹಾರ್ಡವೇರ್ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಹಾರ್ಡವೇರ್ ಅಂಗಡಿಯ ಕೌಂಟರಿನಲ್ಲಿದ್ದ 15 ಸಾವಿರ ರೂ. ನಗದು ದೋಚಿಕೊಂಡು ಹೋಗಿದ್ದಾರೆ. ಮುಂಡಗೋಡ ಪೊಲೀಸರು ಯಥಾರೀತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿನ್ನೆಯಷ್ಟೇ ತಾಲೂಕಿನ ಮಳಗಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನಕ್ಕೆ...

error: Content is protected !!