ಮುಂಡಗೋಡ: ತಾಲೂಕಿನ ಸಿದ್ದನಕೊಪ್ಪದಲ್ಲಿ
ವಿಶೇಷ ಹುಟ್ಟುಹಬ್ಬ ಆಚರಿಸಲಾಗಿದೆ.
ಸ್ಪರ್ಧಾ ಹೋರಿಗೆ ಜನ್ಮ ದಿನ ಆಚರಣೆ ಮಾಡಲಾಗಿದೆ.. ಹೋರಿಗೆ ವಿಶೇಷ ಅಲಂಕಾರ ಮಾಡಿ, ಕೇಕು ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ನೂರಾರು ಜನರು ಸೇರಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೋರಿಯ ಗುಣಗಾನ‌ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಹೋರಿಯ ಮಾಲೀಕರು ಕುಣಿದು ಕುಪ್ಪಳಿಸಿದ್ರು.. ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.. ಈ ಸಂದರ್ಭದಲ್ಲಿ ಮಳಗಿಯ ಬಿಜೆಪಿ ಮುಖಂಡ ಸಂತೋಷ ಶೇಟ್ ರಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..

error: Content is protected !!