Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ಹಾನಗಲ್ ನಲ್ಲಿ ಎರಡು ಪುಟ್ಟ ಕಂದಮ್ಮಗಳೂ ಸೇರಿ ಮೂವರ ಬರ್ಬರ ಹತ್ಯೆ..! ಮೈದುನನಿಂದಲೇ ನಡೀತಾ ಕೃತ್ಯ..?

ಹಾನಗಲ್ ನಲ್ಲಿ ಎರಡು ಪುಟ್ಟ ಕಂದಮ್ಮಗಳೂ ಸೇರಿ ಮೂವರ ಬರ್ಬರ ಹತ್ಯೆ..! ಮೈದುನನಿಂದಲೇ ನಡೀತಾ ಕೃತ್ಯ..?

ಹಾನಗಲ್ ತಾಲೂಕಿನ ಯಳ್ಳೂರಿನಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈದುನನೇ ಅಣ್ಣನ ಹೆಂಡತಿ ಹಾಗೂ ಎರಡು ಪುಟ್ಟ ಪುಟ್ಟ ಕಂದಮ್ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿಬಲ್ ಮರ್ಡರ್ ಆಗಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ಭೀಕರವಾಗಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಕುಮಾರಗೌಡ್ ಮರಿಗೌಡ್ರು (35)ಎಂಬುವ ಮೈದುನನೇ...

Post
ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!

ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!

ಮುಂಡಗೋಡಿನ ಅಕ್ರಮ ದಂಧೆಗಳ ಪೈಕಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಲೂ,ಹಣ್ಣು, ತುಪ್ಪ ಸುರಿದು ಸಲುಹುತ್ತಿರೋ ಅದೊಬ್ಬ ಸರ್ಕಾರಿ ಶೂರ ಯಡವಟ್ಟು ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾನ್ಯ ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿರೋ ಆ ಕಿಲಾಡಿಯ ಮಂಕು ಬುದ್ದಿಗೆ, ಅಸಲೀ ಆರೋಪಿಗಳು ಯಾರೂ ಅಂತಾನೇ ಅರ್ಥ ಆಗಿಲ್ಲ. ಹೀಗಾಗಿ, ತನ್ನ ದಂಧೆಯ ಕೊಂಡಿಯೊಬ್ಬ ನೀಡಿರೋ ಹೆಸರನ್ನೇ ಬರೆದುಕೊಂಡು ಕೇಸು ದಾಖಲಿಸಿರೋ ಆ ಅಡ್ನಾಡಿಗೆ ಇವಾಗ ಬಿಸಿ ಮುಟ್ಟುವ ಎಲ್ಲಾ ಸೂಚನೆ ಇದೆ. ಸದ್ಯ ಮೀಟಿಂಗ್ ನಡೀತಿದೆ.. ಅಲ್ಲಿ ಆತ...

Post
ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?

ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?

  ಅತ್ತಿವೇರಿ ಪಕ್ಷಿಧಾಮದಲ್ಲಿ ಶ್ರೀಗಂಧದ ಮರ ಕಳ್ಳತನ ಪ್ರಕರಣ ನಾವೇಲ್ಲ ಅಂದುಕೊಂಡಷ್ಟು ಸುಲಭವಾಗಿಲ್ಲ ಅನಿಸ್ತಿದೆ. ಮೇಲ್ನೋಟಕ್ಕೆ ಹೇಳೋದಾದ್ರೆ ಇಲ್ಲಿನ ಅಧಿಕಾರಿಗಳೇ ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದು ಬಹುತೇಕ ನಿಚ್ಚಳವಾದಂತಾಗಿದೆ. ಯಾಕಂದ್ರೆ, ನಾವು ನಿನ್ನೆ ತಮ್ಮೇದುರು ಬಯಲು ಮಾಡಿದ್ದ ಶ್ರೀಗಂಧದ ಮರಗಳ್ಳತನ ಕೇಸಿನಲ್ಲಿ ನಮಗೆ ಕೆವಲ ಎರಡೇ ಶ್ರೀಗಂಧದ ಮರ ದೋಚಿದ್ದಾರೆ ಅನ್ನೋ ಮಾಹಿತಿಯಿತ್ತು. ಆದ್ರೆ, ಅಲ್ಲಿನ ಅಸಲೀಯತ್ತೇ ಬೇರೆಯದ್ದಿದೆ. ಎರಡಲ್ಲ, ಬರೋಬ್ಬರಿ ಐದು..? ಅಸಲು, ಕರ್ನಾಟಕದ ವಿಖ್ಯಾತ ಅತ್ತಿವೇರಿ ಪಕ್ಷಿಧಾಮದಲ್ಲಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಬಲಿಯಾಗಿದ್ದು ಕೇವಲ...

Post
ಮುಂಡಗೋಡ ತಾಲೂಕಾಸ್ಪತ್ರೆಯ ಪಕ್ಕದಲ್ಲೇ ಶ್ರೀಗಂಧದ ಮರ ಕಳುವು, ಮತ್ತೆ ಆ್ಯಕ್ಟಿವ್ ಆಯ್ತಾ “ಗಂಧ” ಕಳ್ಳರ ಗ್ಯಾಂಗ್..?

ಮುಂಡಗೋಡ ತಾಲೂಕಾಸ್ಪತ್ರೆಯ ಪಕ್ಕದಲ್ಲೇ ಶ್ರೀಗಂಧದ ಮರ ಕಳುವು, ಮತ್ತೆ ಆ್ಯಕ್ಟಿವ್ ಆಯ್ತಾ “ಗಂಧ” ಕಳ್ಳರ ಗ್ಯಾಂಗ್..?

 ಮುಂಡಗೋಡ: ತಾಲೂಕಾಸ್ಪತ್ರೆಯ ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲೇ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಬೆಲೆಬಾಳುವ ಎರಡು ಶ್ರೀಗಂಧದ ಮರಗಳನ್ನು ಅನಾಮತ್ತಾಗಿ ಎಗರಿಸಿಕೊಂಡು ಹೋಗಿದ್ದಾರೆ ಕಳ್ಳರು. ಕೋಟೆ ಕೊಳ್ಳೆ ಹೊಡೆದ ಮೇಲೆ ಅದೇಂತದ್ದೋ ಬಾಗಿಲು ಹಾಕಿದ್ರು ಅಂತಾರಲ್ಲ ಹಾಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮುಗಿದ ಮೇಲೆ ಓಡೋಡಿ ಬಂದಿದ್ದಾರೆ. ಮತ್ತದೇ ತನಿಖೆಗಿಳಿದಿದ್ದಾರೆ. ಅದು ಜನವಸತಿ ಏರಿಯಾ..! ಅಸಲು, ಇವಾಗ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಹೋಗಿರೋ ಜಾಗ ಇದೆಯಲ್ಲ, ಅದು ಬಹುತೇಕ ಜನವಸತಿಯ ಜಾಗವೇ, ಹೀಗಿದ್ದಾಗಲೂ ಯಾರಿಗೂ ಒಂಚೂರು...

Post
ಟಿಬೇಟಿಯನ್ ಕ್ಯಾಂಪಿನಲ್ಲಿ ನಡೆದಿದ್ದ ದರೋಡೆ ಕೇಸಿನಲ್ಲಿ ಕೋರ್ಟ್ ತೀರ್ಪು, ನಾಲ್ವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ..!

ಟಿಬೇಟಿಯನ್ ಕ್ಯಾಂಪಿನಲ್ಲಿ ನಡೆದಿದ್ದ ದರೋಡೆ ಕೇಸಿನಲ್ಲಿ ಕೋರ್ಟ್ ತೀರ್ಪು, ನಾಲ್ವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ..!

ಮುಂಡಗೋಡಿನ ಟಿಬೇಟಿಯನ್‌ ಕ್ಯಾಂಪ್‌ ನಂ 1 ರ ಟಿಬೇಟಿಗರ ಮನೆಯೊಂದರಲ್ಲಿ 2019 ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅಪರಾಧಿಗಳಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮುಂಡಗೋಡಿನ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೋಳಂಕಿ ಮತ್ತು ಮಧುಸಿಂಗ್‌ ಗಂಗಾರಾಮಸಿಂಗ್‌ ರಜಪೂತ ಎಂಬುವವರಿಗೆ ಶಿಕ್ಷೆಯಾಗಿದೆ. 2019...

Post
ಮುಂಡಗೋಡ ಶಿಂಗನಳ್ಳಿ ಡ್ಯಾಂ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ..! ನೇಣು ಬಿಗಿದ ಸ್ಥಿತಿಯಲ್ಲಿರೋ ಶವದ ಸುತ್ತ ಅನುಮಾನದ ಹುತ್ತ..?

ಮುಂಡಗೋಡ ಶಿಂಗನಳ್ಳಿ ಡ್ಯಾಂ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ..! ನೇಣು ಬಿಗಿದ ಸ್ಥಿತಿಯಲ್ಲಿರೋ ಶವದ ಸುತ್ತ ಅನುಮಾನದ ಹುತ್ತ..?

ಮುಂಡಗೋಡ ತಾಲೂಕಿನ ಶಿಂಗನಳ್ಳಿ ಜಲಾಶಯದ ಸಮೀಪದ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೋ ಶವ, ಕೊಳೆತು ದುರ್ನಾತ ಬೀರುತ್ತಿದೆ. ಸುಮಾರು 38 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಮುಖ ಕೊಳೆತು ವಿಕಾರವಾಗಿದೆ. ಕಾಡಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡಿರೋ ಸ್ಥಿತಿಯಲ್ಲಿರೋ ಶವದ ಬಲಗೈ ಕಟ್ ಆಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೊ ಅನ್ನೋ ಬಗ್ಗೆ ಇನ್ನಷ್ಟೇ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ‌. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ,...

Post
ಸೆ.17 ರಂದು ಹಲ್ಲೆಗೊಳಗಾಗಿದ್ದ ನ್ಯಾಸರ್ಗಿಯ ದಲಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು..! ಬೀದಿಯಲ್ಲಿ ನಡೆದ ಜಗಳ ಸಾವಿನಲ್ಲಿ ಅಂತ್ಯವಾಯ್ತಾ..?

ಸೆ.17 ರಂದು ಹಲ್ಲೆಗೊಳಗಾಗಿದ್ದ ನ್ಯಾಸರ್ಗಿಯ ದಲಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು..! ಬೀದಿಯಲ್ಲಿ ನಡೆದ ಜಗಳ ಸಾವಿನಲ್ಲಿ ಅಂತ್ಯವಾಯ್ತಾ..?

ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿ ಸಾವು ಕಂಡಿದ್ದಾನೆ. ಕಳೆದ ಸೆಪ್ಟೆಂಬರ್ 17 ರ ರಾತ್ರಿ ನಡೆದಿದ್ದ ಹಲ್ಲೆ ಪ್ರಕರಣ ಈಗ ಸಾವಿನಲ್ಲಿ ದಿಕ್ಕು ಬದಲಿಸಿದೆ. ಹಲ್ಲೆ ನಡೆದು 13 ದಿನಗಳ ನಂತರ ಮೃತಪಟ್ಟಿದ್ದಾನೆ. ನ್ಯಾಸರ್ಗಿಯ ಮಂಜುನಾಥ ದುರ್ಗಪ್ಪ ಬೋವಿ(57) ಎಂಬುವವನೇ ಸದ್ಯ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಕಳೆದ ಸೆಪ್ಟೆಂಬರ್ 17 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನ್ಯಾಸರ್ಗಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದ ರಸ್ತೆಯಲ್ಲಿ ಹನುಮಂತ ಭೀಮಣ್ಣ ಹರಪನಹಳ್ಳಿ ಹಾಗೂ ಮೃತ...

Post
ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ, ಕೇಳೋಕೆ ಹೋದ್ರೆ ಕೆಟ್ಟದಾಗಿ ಬೈತಾರೆ, ಮುಂಡಗೋಡ MG ಗಾರ್ಮೆಂಟ್ಸ್ ಮಾಲೀಕರ ವಿರುದ್ಧ FIR ದಾಖಲಿಸಿದ ಮಹಿಳಾ ಕಾರ್ಮಿಕರು..!

ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ, ಕೇಳೋಕೆ ಹೋದ್ರೆ ಕೆಟ್ಟದಾಗಿ ಬೈತಾರೆ, ಮುಂಡಗೋಡ MG ಗಾರ್ಮೆಂಟ್ಸ್ ಮಾಲೀಕರ ವಿರುದ್ಧ FIR ದಾಖಲಿಸಿದ ಮಹಿಳಾ ಕಾರ್ಮಿಕರು..!

ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಮೇಲ್ಬಾಗದಲ್ಲಿರೋ ಎಂಜಿ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಮಾಲೀಕರ ಮೇಲೆ ಮಹಿಳಾ ಕಾರ್ಮಿಕರು ಮುಗಿ ಬಿದ್ದಿದ್ದಾರೆ. ತಾವು ನಿತ್ಯವೂ ಕೆಲಸ ಮಾಡಿ ಉಪವಾಸ ಬೀಳುವಂತ ಪರಿಸ್ಥಿತಿ ಬಂದೊದಗಿದೆ. ನಮಗೆ ಸಂಬಳವನ್ನೇ ನೀಡಿಲ್ಲ ಅಂತಾ ಆಕ್ರೋಶಗೊಂಡಿದ್ದಾರೆ. ಸಂಬಳ ಕೇಳಿದ್ರೆ ಅವಾಚ್ಯವಾಗಿ ನಿಂದಿಸ್ತಿರೋ ಮಾಲೀಕರು, ವ್ಯವಸ್ಥಾಪಕರು ಸೇರಿ ಮೂವರ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಗಾರ್ಮೆಂಟ್ಸ್ ಮಹಿಳೆಯರು ದೂರು ದಾಖಲಿಸಿದ್ದಾರೆ‌. 3ತಿಂಗಳಿಂದ ಸಂಬಳವಿಲ್ಲ..! ಅಂದಹಾಗೆ, ಗಾರ್ಮೆಂಟಿನಲ್ಲಿ ಕೆಲಸ ಮಾಡ್ತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು, ತಮಗೆ...

Post
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ, e ಸ್ವತ್ತು ಮಾಡಲು ಲಂಚ ಕೇಳಿದ್ದಕ್ಕೆ, ಖೆಡ್ಡಾ ತೋಡಿದ ಅಧಿಕಾರಿಗಳು..!

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ, e ಸ್ವತ್ತು ಮಾಡಲು ಲಂಚ ಕೇಳಿದ್ದಕ್ಕೆ, ಖೆಡ್ಡಾ ತೋಡಿದ ಅಧಿಕಾರಿಗಳು..!

ಈ ಸ್ವತ್ತು ಮಾಡಿಸಲು ಲಂಚ ಪಡೆದ ಹಿರೇಕೆರೂರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ್ ಪಂಚಾಯತ ಕಚೇರಿಯಲ್ಲೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಹಿರೇಕೆರೂರು ಪಟ್ಟಣದ ಸ್ವಿವಿಲ್ ಇಂಜನಿಯರ ಮೊಹಮ್ಮದ್‌ ಆಖಿಬ ಮತ್ತೂರು ಅವರ ಈ ಸ್ವತ್ತು ಮಾಡಿಸಲು ಮುಖ್ಯಾಧಿಕಾರಿ ಪಂಪಾಪತಿ ನಾಯ್ಕಗೆ ಮೊದಲು 10ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದು, ನಂತರ ಸೆ.30ರಂದು ಮತ್ತೆ 10ಸಾವಿರ ರೂಗಳ ಲಂಚಕ್ಕೆ ಬೇಡಿಕೆಯಿಟ್ಟ ವೇಳೆ ಅವರ ಕಚೇರಿಯಲ್ಲಿ ಲೋಕಾಯುಕ್ತರು ದಾಳಿ ಮಾಡಿ ಪಂಪಾಪತಿ ನಾಯ್ಕರನ್ನು ಟ್ರ್ಯಾಪ್ ಮಾಡಿದ್ದಾರೆ. ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ...

Post
ಶಿರಸಿ- ಕುಮಟಾ ರಸ್ತೆಯ, ದೇವಿಮನೆ ಘಟ್ಟದಲ್ಲಿ ಪುರುಷನ ಅಪರಿಚಿತ ಶವ ಪತ್ತೆ, ಕೊಲೆ ಮಾಡಿ ಬೀಸಾಡಿ ಹೋದ್ರಾ ಹಂತಕರು..?

ಶಿರಸಿ- ಕುಮಟಾ ರಸ್ತೆಯ, ದೇವಿಮನೆ ಘಟ್ಟದಲ್ಲಿ ಪುರುಷನ ಅಪರಿಚಿತ ಶವ ಪತ್ತೆ, ಕೊಲೆ ಮಾಡಿ ಬೀಸಾಡಿ ಹೋದ್ರಾ ಹಂತಕರು..?

ಶಿರಸಿ- ಕುಮಟಾ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಸ್ಥಿತಿ ಕಂಡ ಪೊಲೀಸರು ಇದೊಂದು ಮರ್ಡರ್ ಅನ್ನೋ ಅನುಮಾನ ವ್ಯಕ್ತ ಪಡಿಸ್ತಿದಾರೆ. ಅಂದಾಜು, 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಸಾವನ್ನಪ್ಪಿರುವ ವ್ಯಕ್ತಿಯ ತಲೆ ಹಿಂಬದಿಯಲ್ಲಿ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಯಾರೋ, ಎಲ್ಲಿಯೊ ಕೊಲೆ ಮಾಡಿ, ಇಲ್ಲಿ ತಂದು ಎಸೆದು ಹೋಗಿರಬಹುದಾದ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಬಿಳಿ ಶರ್ಟ ಹಾಗೂ ಲುಂಗಿ ಹಾಕಿದ್ದು, ಶರ್ಟನಲ್ಲಿ ಬಸ್...

error: Content is protected !!