ಇಸ್ಪೀಟು ಆಟದ ಅನುಮತಿಗೆ ಲಂಚ, ತಡಸ ಪೊಲೀಸ್ ಠಾಣೆ ಪಿಎಸ್ಐ ಲೋಕಾಯುಕ್ತ ಬಲೆಗೆ, ಜೊತೆಗೆ ಪೇದೆಯೂ ತಗಲಾಕ್ಕೊಂಡ..!

ಶಿಗ್ಗಾವಿ: ತಡಸಿನಲ್ಲಿ ಲೋಕಾಯುಕ್ತ ದಾಳಿಯಾಗಿದೆ‌. 2 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ತಡಸ ಪಿಎಸ್ ಐ ಹಾಗು ಪೇದೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ತಗಲಾಕೊಂಡಿದ್ದಾರೆ‌.

ತಡಸ ಠಾಣೆ ಪಿಎಸ್ಐ ಶರಣ ಬಸಪ್ಪ, ಪೇದೆ ಸುರೇಶ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂದಹಾಗೆ, ಗ್ಯಾಂಬಲಿಂಗ್ ಗೆ ಇಸ್ಪೀಟು ಆಟಕ್ಕೆ ಅನುಮತಿ ನೀಡಲು 2 ಲಕ್ಷ ರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇಸ್ಪೀಟ್ ಆಡಿಸಲು, ಪ್ರಭಾಕರ ಎನ್ನುವವರಿಂದ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅದ್ರಲ್ಲಿ 2 ಲಕ್ಷ ರೂ ಲಂಚ ಪಡೆಯುವಾಗ ಬಲೆಗೆ ಕೆಡವಲಾಗಿದೆ.

error: Content is protected !!