ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ, ಬೆಚ್ಚಿ ಬಿದ್ದ ನಗರ ಸಭೆ ಉಪಾಧ್ಯಕ್ಷೆಯ ಕುಟುಂಬ..!

ಗದಗ: ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಮಾಡಲಾಗಿದೆ. ಗದಗ ನಗರದ ದಾಸರ ಓಣಿಯಲ್ಲಿ ಘಟನೆ ನಡೆದಿದ್ದು, ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ಕು ಜನ್ರ ಕೊಲೆ ಆಗಿದೆ.

ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಹತ್ಯೆ ಮಾಡಲಾಗಿದೆ. ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಏಪ್ರಿಲ್‌ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ನ ಮದುವೆ ಫಿಕ್ಸ್ ಕಾರ್ಯಕ್ರಮಕ್ಕಾಗಿ ಸಂಬಂಧಿಗಳು ಆಗಮಿಸಿದ್ದರು. ಮೊದಲನೇ ಮಹಡಿಯ ಕೊಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳ ಕೊಲೆ ಮಾಡಲಾಗಿದೆ.

ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಪೊಲೀಸರಿಗೆ ಫೋನ್ ಮಾಡಿದ್ದ ಕುಟುಂಬಸ್ಥರು‌. ಪೊಲೀಸರಿಗೆ ಫೋನ್ ಮಾಡ್ತಾಯಿದ್ದಂತೆ ಎಸ್ಕೇಪ್ ಆದ ದುಷ್ಕರ್ಮಿಗಳು. ಬಾಗಿಲು ತೆಗೆದಿದ್ರೆ ನಮ್ಮನ್ನು ಕೊಲೆ ಮಾಡುತ್ತಿದ್ರು ಅಂತಾ ಮನೆ ಮಾಲೀಕ‌ ಪ್ರಕಾಶ್ ಬಾಕಳೆ ಹೇಳಿಕೆ ನೀಡಿದ್ದಾರೆ.

ಶ್ವಾನದಳ, ಫಾರಿನ್ ಸಿಕ್ ತಂಡಗಳಿಂದ ಇಂಚಿಂಚು ಪರಿಶೀಲನೆ ನಡೆಸಲಾಗಿದೆ. ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!