ಮುಂಡಗೋಡ: ಕೆಲಸಕ್ಕೆಂದು ಹೋಗಿದ್ದ ಅರಶಿಣಗೇರಿಯ ವ್ಯಕ್ತಿಯೋರ್ವ ಹೆಣವಾಗಿದ್ದಾನೆ. ಶಿಗ್ಗಾವಿ ತಾಲೂಕಿನ ಕುನ್ನೂರು ಬಳಿಯ ಮಮದಾಪುರ ತಾಂಡಾದ ಗದ್ದೆಯಲ್ಲಿ ಶವವಾಗಿದ್ದಾನೆ. ವಿದ್ಯುತ್ ಕಂಬ ಏರಿದ್ದವನಿಗೆ ವಿದ್ಯುತ್ ತಗುಲಿ ಸಾವಿಗೆ ಕಾರಣವಾಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಕುಟುಂಬಸ್ತರು ಈ ಸಾವಿನಲ್ಲಿ ಅನುಮಾನವಿದೆ ಅಂತಾ ಆರೋಪಿಸುತ್ತಿದ್ದಾರೆ.
ಅಂದಹಾಗೆ, ಮೈಲಾರಗೌಡ ನಿಂಗನಗೌಡ ಪಾಟೀಲ್ (36), ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿಯಾಗಿದ್ದಾನೆ. ಈತ ನಿನ್ನೆ ಅಂದ್ರೆ ಬುಧವಾರ, ಅರಶಿಣಗೇರಿಯಿಂದ ಮಮದಾಪುರ ಬಳಿಯ ಗದ್ದೆಗೆ ಕೆಲಸಕ್ಕೆಂದು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಅದ್ಯಾವ ಕಾರಣಕ್ಕೊ ಏನೋ ವಿದ್ಯುತ್ ಕಂಬದ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ಹೀಗಾಗಿ, ಈತನ ಸಾವಿನ ಬಗ್ಗೆ ಅರಶಿಣಗೇರಿಯ ವ್ಯಕ್ತಿಯ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.