ಶಿರಸಿ ದಾಸನಕೊಪ್ಪದಲ್ಲಿ ಭಯೋತ್ಪಾದನೆ ನಂಟು; ಓರ್ವನನ್ನು ವಶಕ್ಕೆ ಪಡೆದ NIA

ಶಿರಸಿ: ಭಯೋತ್ಪಾದನೆಯ ನಂಟಿನ ಜಾಲ ಭೇದಿಸಲು ಶಿರಸಿಗೆ ಬಂದಿಳಿದ ಎನ್‌ಐಎ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ದಾಸನಕೊಪ್ಪದ ಅಬ್ದುಲ್ ಸಕೂರ್ ಎನ್‌ಐಎ ವಶದಲ್ಲಿರುವ ಆರೋಪಿ. ಈತನು ಆನ್ ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್‌ ಪೋರ್ಟನಲ್ಲಿ ನಕಲಿ ದಾಖಲೆ ನೀಡಿರುವ ಆರೋಪವಿತ್ತು. ಈ ನಡುವೆ ದುಬೈನಿಂದ ಬಕ್ರೀದ್ ಹಬ್ಬಕ್ಕೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಅಬ್ದುಲ್ ಸಕೂರ್‌ ಆಗಮಿಸಿದ್ದ. ಈ ವೇಳೆ ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಎನ್‌ಐಎ ತಂಡವು ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

error: Content is protected !!