ಧಾರವಾಡ; ಎಲೆಕ್ಷನ್ ಹೊತ್ತಲ್ಲಿ ಇದೇನಪ್ಪ ಇಂತಹ ಭವಿಷ್ಯ ಅಂತೀರಾ..? ನಂಬೊಕೆ ಆಗದೇ ಇದ್ರೂ ಈ ಭವಿಷ್ಯ ಮಾತ್ರ ಸುಳ್ಳಾಗೇ ಇಲ್ವಂತೆ, ಹೀಗಾಗಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಣ್ಣಿನ ಗೊಂಬೆಗಳ ಭವಿಷ್ಯ ಅಚ್ಚರಿ ಮೂಡಿಸುತ್ತಿದೆ. ಬಹುಶಃ ಪ್ರಸಕ್ತ ಯುಗಾದಿಗೆ ನುಡಿದಿರೋ ಭವಿಷ್ಯ ಬರುವ ಚುನಾವಣೆಯ ಮುನ್ಸೂಚನೆಯಾ..? ನಾಯಕತ್ವ ಬದಲಾವಣೆ ಅಂತೆ..! ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆಯಾಗಲಿದೆ ಎಂಬ ಭವಿಷ್ಯವನ್ನು ಮಣ್ಣಿನ ಬೊಂಬೆ ತೋರಿಸಿಕೊಟ್ಟಿದೆ. ಈ ಗ್ರಾಮದಲ್ಲಿ ಮಣ್ಣಿನ ಗೊಂಬೆಗಳು ಇಂತಹದ್ದೊಂದು ಭವಿಷ್ಯ ನುಡಿದಿವೆ. ಧಾರವಾಡ ತಾಲೂಕಿನ...
Top Stories
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಸರ್ಕಾರಿ ಅಧಿಕಾರಿ ಭಾಗಿ ಕೇಸ್, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಿಇಓ..!
ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್..
Tag: Publicfirstnewz
ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಮಳಗಿಯಲ್ಲಿ ಗಾಂಜಾ ಸಾಗಿಸುತ್ತಿದ್ದವ ಅಂದರ್..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಎಳೆದು ತಂದಿದ್ದಾರೆ. ಮಳಗಿ ಸಮೀಪದ ದಾಸನಕೊಪ್ಪ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿ ಸೇರಿದಂತೆ ಅರ್ಧ ಕೇಜಿಯಷ್ಟು ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿರೋ ಮುಂಡಗೋಡ ಪೊಲೀಸರು, ಶಿವಮೊಗ್ಗ ಜಿಲ್ಲೆ ಸಾಗರದ ಮಹಮದ್ ಫಾರುಕ್ ತಂದೆ ನಜೀರ್ ಅಹಮ್ಮದ್ ಅರಮನಿಕೆರಿ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ಅರ್ದ ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ...
ಪಾಳಾ ಸಮೀಪ ಕಾರು ದುರಂತ ಕೇಸ್: ಕೊನೆಗೂ ಫಲಿಸಲಿಲ್ಲ ಚಿಕಿತ್ಸೆ.. ಗಾಯಗೊಂಡಿದ್ದ ಶಂಕರಯ್ಯಾ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮುಂಡಗೋಡ ತಾಲೂಕಿನ ಪಾಳಾ ಸಮೀಪ ಬುಧವಾರ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಈಗಷ್ಟೇ ಮೃತಪಟ್ಟಿದ್ದಾನೆ. ಈ ಮೂಲಕ ಅಪಘಾತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಶಂಕರಯ್ಯ ಮಲ್ಲಯ್ಯ ಹಿರೇಮಠ್, ಮೃತಪಟ್ಟ ಮತ್ತೋರ್ವ ಯುವಕನಾಗಿದ್ದು, ನಿನ್ನೆ ರಾತ್ರಿ ಪಾಳಾ ಜಾತ್ರೆ ಮುಗಿಸಿ ಮುಂಡಗೋಡಿಗೆ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಐ20 ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮುಂಡಗೋಡಿನ ಇಬ್ಬರು ಸಹೋದರರು ಮೃತಪಟ್ಟಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕರ್ ಹಿರೇಮಠನನ್ನು ಹುಬ್ಬಳ್ಳಿಯ ಕಿಮ್ಸ್...
ಪಾಳಾ ಬಳಿ ಭೀಕರ ಅಪಘಾತ, ಮುಂಡಗೋಡಿನ ಇಬ್ಬರು ಸ್ಥಳದಲ್ಲೇ ಸಾವು..! ಮತ್ತಿಬ್ಬರಿಗೆ ಗಾಯ
ಮುಂಡಗೋಡ ತಾಲೂಕಿನ ಪಾಳಾ ಸಮೀಪ ಭೀಕರ ಅಪಘಾತವಾಗಿದೆ. ಐ20 ಕಾರ್ ಪಲ್ಟಿಯಾದ ಪರಿಣಾಮ ಇಬ್ಬರು ಮುಂಡಗೋಡಿನ ಯುವಕರು ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾರೆ. ಮತ್ತಿಬ್ಬರಿಗೆ ಗಾಯವಾಗಿದೆ. ಮುಂಡಗೋಡಿನ ಗಣೇಶ್ ಗಾಣಿಗೇರ್, ಮಹೇಶ ಗಾಣಿಗೇರ ಮೃತ ದುರ್ದೈವಿಗಳು. ಪಾಳಾದಿಂದ ಮುಂಡಗೋಡಿಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕರಿಂದ ಅಧಿಕಾರಿಗಳ ತರಾಟೆ, ಕಿಟ್ ಗಾಗಿ ಎಡತಾಕಿಸೋದು ಸರಿನಾ..?
ಮುಂಡಗೋಡ: ಪಟ್ಟಣದಲ್ಲಿ ಇರೋ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿನ ಅಧಿಕಾರಿಗಳ ಮೇಲೆ ನೂರಾರು ಕಾರ್ಮಿಕರು ಆಕ್ರೋಶಗೊಂಡಿದ್ದಾರೆ. ಕಾರ್ಪೆಂಟರ್ ಕೆಲಸದವರು, ಗಾರೆ ಕೆಲಸದವರು ಸೇರಿದಂತೆ ಹಲವರು ಕಾರ್ಮಿಕ ಇಲಾಖೆಯ ತಾಲೂಕಾ ಕಚೇರಿಯ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ರು. ಅಸಮರ್ಪಕ ಕಿಟ್ ಹಂಚಿಕೆ..! ಇನ್ನು, ಕಾರ್ಮಿಕರ ಆರೋಪದಂತೆ, ಈ ತಾಲುಕಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಿಟ್ ನೀಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರಂತೆ. ಅರ್ಹರಿಗೆ ಸಿಗಬೇಕಾದ ಕಾರ್ಪೆಂಟರ್ ಕಿಟ್, ಗಾರೆ ಕೆಲಸದ ಕಿಟ್ ಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲವಂತೆ. ತಿಂಗಳುಟ್ಟಲೇ ಅಲೆದಾಡಿಸಿ ಕಾರ್ಮಿಕರ...
ಶಿಗ್ಗಾವಿ ಕುಸ್ತಿ ಹಬ್ಬದಲ್ಲಿ 800 ಪೈಲ್ವಾನರ, 5 ದಿನಗಳ ಕಾದಾಟಕ್ಕೆ ವಿದ್ಯುಕ್ತ ತೆರೆ..!
ಶಿಗ್ಗಾವಿ: ಅದೊಂದು ಅಪ್ಪಟ ದೇಸೀ ಗ್ರಾಮೀಣ ಕ್ರೀಡೆ.. ಅಲ್ಲಿನ ಅಖಾಡದಲ್ಲಿ ಧೂಳೆಬ್ಬಿಸುವ ಕುಸ್ತಿ ಕಲಿಗಳು ತೊಡೆ ತಟ್ಟಿ ನಿಂತಿದ್ರು. ನೀನಾ..? ನಾನಾ..? ಅಂತಾ ಕಣದಲ್ಲಿ ಕೇಕೆ ಹಾಕಿದ್ರು. ಇದು, ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ನಡೆದ ಕುಸ್ತಿ ಹಬ್ಬದ ರಣರೋಚಕ ದೃಷ್ಯಗಳು. ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಶಿಗ್ಗಾವಿಯಲ್ಲಿ ಏರ್ಪಡಿಸಿದ್ದ ಕರ್ನಾಟಕ ಕುಸ್ತಿ ಹಬ್ಬ 2022-23 ಸಮಾರೋಪ ಸಮಾರಂಭ ರವಿವಾರ ನಡೆಯಿತು. ವಿವಿಧ ರಾಜ್ಯಗಳ...
ಟಿಬೇಟಿಯನ್ ಕಾಲೋನಿಯಲ್ಲಿ ಜೇನು ನೋಣಗಳ ದಾಳಿ, 100 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಜೇನು ನೋಣಗಳು..!
ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂ.1 ರಲ್ಲಿ ಜೇನು ದಾಳಿಯಾಗಿದೆ. ದಲಿತ ಸಂಘರ್ಷ ಸಮಿತಿಯ ಕಾರ್ಯಕ್ರಮಕ್ಕೆ ಬಂದಿದ್ದವರ ಮೇಲೆ ಜೇನುನೋಣಗಳ ದಾಳಿಯಾಗಿದೆ. ಪರಿಣಾಮ ಸುಮಾರು 100 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಅದಹಾಗೆ, ಇಂದು ತಾಲೂಕಿನ ಟಿಬೇಟಿಯನ್ ಕಾಲೋನಿ ನಂಬರ್ 1 ರಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ರು. ಈ ವೇಳೆ ಅದು ಹೇಗೋ ಗೊತ್ತಿಲ್ಲ, ಜೇನು ನೋಣಗಳು ದಾಳಿಮಾಡಿವೆ...
ಶಿಗ್ಗಾವಿ: SCP, TSP ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಕ್ಷಪಾತ, ರೈತರ ಆಕ್ರೋಶ..!
ಶಿಗ್ಗಾವಿ ತಾಲೂಕಿನಲ್ಲಿ ಪಶು ಇಲಾಖೆ ಅಧಿಕಾರಿಗಳಿಂದ ತಾರತಮ್ಯವಾಯ್ತಾ..? SCP ಹಾಗೂ TSP ಯೋಜನೆಯಡಿ ಹಸುಗಳನ್ನು ನೀಡುವಾಗ ಫಲಾನುಭವಿಗಳ ಆಯ್ಕೆಯಲ್ಲಿ ಯಪರಾತಪರಾ ಮಾಡಿದ್ದಾರಾ..? ಹಾಗಂತ ಶಿಗ್ಗಾವಿಯ ಅನ್ನದಾತರು ಆರೋಪಿಸಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ 2022-23 ನೇ ಸಾಲಿನ SCP ಹಾಗೂ TSP ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಕೆಲ ಅಧಿಕಾರಿಗಳು ತಮಗೆ ಬೇಕಾದವರಿಗಷ್ಟೆ ಮಾನ್ಯತೆ ನೀಡಿ ಹಸುಗಳನ್ನ ಮಂಜೂರಿಸಲು ಆಯ್ಕೆಮಾಡಿದ್ದಾರೆ. ಹಸುಗಳನ್ನು ನಿಡುವಲ್ಲಿ ಪಕ್ಷಪಾತ ಮಾಡಿದ್ದಾರೆ ಎಂದು ರೈತರು ತಾಲೂಕಾ ಪಶು ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ರು. ಅರ್ಹರಿಗೆ...
ಶಿಗ್ಗಾವಿಯ ಕುಸ್ತಿ ಹಬ್ಬದಲ್ಲಿ ಜಗಜಟ್ಟಿಗಳ ರೋಮಾಂಚಕ ಕುಸ್ತಿ, ಪಂದ್ಯಾವಳಿಗೆ ಇಂದು ಚಾಲನೆ..!
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಇಂದು ಎಲ್ಲಿ ನೋಡಿದರು ಪೈಲ್ವಾನ್ ರುಗಳ ಜಬರ್ಧಸ್ತ್ ಸಂಚಾರ. ಕಣದಲ್ಲಿ ಧೂಳೆಬ್ಬಿಸಿ ತೊಡೆತಟ್ಟಿ ನಿಂತ ಕುಸ್ತಿ ಕಲಿಗಳ ರೋಮಾಂಚಕ ಪಟ್ಟು. ಜಿಲ್ಲೆವಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯದಿಂದ ಬಂದಿದ್ದ ನೂರಾರು ಜಗಜಟ್ಟಿಗಳ ಕಾದಾಟ.. ಅಭಿಮಾನಿಗಳ ಕೇಕೆ ಶಿಳ್ಳೆಗಳ ಝೇಂಕಾರ..! ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಐದು ದಿನಗಳ ಕಾಲ ನಡೆಯುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯವನ್ನ ಇದೆ ಮೊದಲ ಬಾರಿಗೆ ಆಯೋಜನೆ ಮಾಡಲಾಗಿತ್ತು. ಇಂದು ಈ ಕುಸ್ತಿ ಪಂದ್ಯಕ್ಕೆ ಸಾಂಕೇತಿಕವಾಗಿ...
ಹುನಗುಂದದ ಬಳಿ ಬೈಕ್ ಅಪಘಾತ, ಬೈಕ್ ಸವಾರನಿಗೆ ಗಾಯ, ಆಸ್ಪತ್ರೆಗೆ ರವಾನೆ..!
ಮುಂಡಗೋಡ ತಾಲೂಕಿನ ಹುನಗುಂದ ಅಗಡಿ ರಸ್ತೆಯ, ಸರ್ಕಾರಿ ಪ್ರೌಢಶಾಲೆಯ ಬಳಿ ಅಪಘಾತವಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಹುನಗುಂದ ಗ್ರಾಮದ ರಾಚಯ್ಯ ಬಸಯ್ಯ ಬೆಂಡಿಗೇರಿ(45), ಎಂಬುವವನೇ ಗಾಯಗೊಂಡ ವ್ಯಕ್ತಿಯಾಗಿದ್ದು, ತಲೆಗೆ ಪೆಟ್ಟಾಗಿದೆ. ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿದ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ಸಾಗಿಸಿದ್ದಾರೆ. 108 ಅಂಬ್ಯುಲೆನ್ಸ್ ನಲ್ಲಿ ತಂತ್ರಜ್ಞ ಧನರಾಜ್ ಬೆಳೂರು ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾಮಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...