ಮೈಸೂರು:ಪತಿ ಸಾವಿನ ಬೆನ್ನಲ್ಲೇ ದಿವಂಗತ ಆರ್.ಧ್ರುವ ನಾರಾಯಣ್ ಪತ್ನಿ ವೀಣಾ(58) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಇಂದು ವಿಧಿವಶರಾಗಿದ್ದಾರೆ.

ಪತಿ ಧ್ರುವನಾರಾಯಣ್ ಸಾವಿನಿಂದ ಕುಗ್ಗಿದ್ದ ವೀಣಾ, ಪತಿ ಮೃತಪಟ್ಟು ತಿಂಗಳಿಗೂ ಮುನ್ನವೇ ನಿಧನರಾಗಿದ್ದಾರೆ. ಕಳೆದ ಮಾರ್ಚ್ 11ರಂದು ಹೃದಯಾಘಾತದಿಂದ ಧ್ರುವನಾರಾಯಣ್ ನಿಧನರಾಗಿದ್ದರು.

ಇನ್ನು, ಪುತ್ರ ದರ್ಶನ್ ಧ್ರುವಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ, ಚುನಾವಣಾ ಚಟುವಟಿಕೆಗಳಲ್ಲಿ ನಿರತರಾಗಿದ್ದ ದರ್ಶನ್ ರಿಗೆ ತಾಯಿ ಸಾವಿನಿಂದ ಆಘಾತವಾಗಿದೆ.

error: Content is protected !!