ಮುಂಡಗೋಡ:ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ಬೆಳ್ಳಂ ಬೆಳಿಗ್ಗೆ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಕ್ರಮವಾಗಿ ಬಂಕಾಪುರದಿಂದ ಗೋಮಾಂಸ ಸಾಗಾಟ ಮಾಡುತ್ತಿದ್ದ ಓಮಿನಿ ವಾಹನ ಸಮೇತ ಓರ್ವ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಟಿಬೇಟಿಯನ್ ಕಾಲೋನಿಗೆ..? ಇಂದು ಬೆಳಿಗ್ಗೆ, ಹಾವೇರಿ ಜಿಲ್ಲೆಯ ಬಂಕಾಪುರದಿಂದ ಓಮಿನಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದಲ್ಲಿ ಬಂಕಾಪುರ ರಸ್ತೆಯಲ್ಲಿ ದಾಳಿ ಮಾಡಿರೋ ಪೊಲೀಸರು, ಬರೋಬ್ಬರಿ 2 ಕ್ವಿಂಟಾಲ್ ಗೋಮಾಂಸ ವಶಕ್ಕೆ ಪಡೆಸಿಕೊಂಡಿದ್ದಾರೆ. ಜೊತೆಗೆ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿ ಸಮೇತ...
Top Stories
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
Tag: mundgod news
ನಾಪತ್ತೆಯಾಗಿದ್ದ ಮುಂಡಗೋಡಿನ ಆನಂದ್ ಕಡಗಿ ಶವ ಕುಂದರ್ಗಿ ಕ್ರಾಸ್ ಬಳಿ ಪತ್ತೆ, ಅಷ್ಟಕ್ಕೂ ಸಾವು ಹೇಗಾಯ್ತು..?
ಮುಂಡಗೋಡ: ನಾಪತ್ತೆಯಾಗಿದ್ದ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕ ಆನಂದ ಕಡಗಿ ಶವ, ಬರೋಬ್ಬರಿ 21 ದಿನಗಳ ಬಳಿಕ ಪತ್ತೆಯಾಗಿದೆ. ಮುಂಡಗೋಡ ತಾಲೂಕಿನ ಕುಂದರ್ಗಿ ಕ್ರಾಸ್ ಬಳಿ ಶವ ಪತ್ತೆಯಾಗಿದೆ. ಈ ಮೂಲಕ ಉಟ್ಟುಡುಗೆಯಲ್ಲೇ ಮನೆಬಿಟ್ಟು ನಡೆದಿದ್ದ ಆನಂದ್ ಕಡಗಿಯ ಶವ ಕಂಡು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ನೇಹಿತರಲ್ಲಿ ದುಃಖ ಮಡುಗಟ್ಟಿದೆ. ಬರಿಗಾಲಲ್ಲೇ ನಡೆದಿದ್ದ ಶಿಕ್ಷಕ..! ಅವತ್ತು, ಮೇ 29 ರ ರವಿವಾರ, ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿದ್ದ ಆನಂದ್, ಹಸಿರು ಬಣ್ಣದ...
25 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ, ಇಂದೂರ ಸೊಸೈಟಿಯ ಸಿಬ್ಬಂದಿ ವಸಂತ್ ವರೂರ್ ಗೆ ಬೀಳ್ಕೊಡುಗೆ..!
ಮುಂಡಗೋಡ: ತಾಲೂಕಿನ ಇಂದೂರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿ, ನಿವೃತ್ತಿಯಾಗಿರೋ ಸಿಬ್ಬಂದಿ ವಸಂತ ವರೂರವರಿಗೆ ಇಂದು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು. ವಸಂತ ವರೂರ ದಂಪತಿಗೆ ಶಾಲು ಹೊದಿಸಿ, ಹಾರ ಹಾಕಿ ಫಲ ಪುಷ್ಪ ನೀಡಿ ಸನ್ಮಾನಿಸಿದ ಆಡಳಿತ ಮಂಡಳಿ ಸದಸ್ಯರು, ನೆನಪಿನ ಕಾಣಿಕೆ ನೀಡಿ ವಸಂತ್ ವರೂರರವರ ಸೇವೆಯನ್ನು ಶ್ಲಾಘಿಸಿದ್ರು. ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ರು.
ಮಳಗಿಯಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮ..!
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳಿಂದ ಗಿಡ ನೆಡುವ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿದೆ. ತಹಶೀಲ್ದಾರರಿಂದ ಕಂದಾಯ ಅದಾಲತ, ಪಿಂಚಣಿ ಅದಾಲತ ಹಾಗೂ ಹಲವು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಇದೆ. ಮಳಗಿ ಭಾಗದ ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಅಹವಾಲುಗಳೊಂದಿಗೆ ವೃದ್ಧರು, ರೈತರು, ಯುವಕರು ಪಾಲ್ಗೊಂಡಿದ್ದಾರೆ.
ಟಿಬೇಟಿಯನ್ ಕಾಲೋನಿಯಲ್ಲಿ 2ನೇ ದಿನದ ಇಂಡೋ-ಟಿಬೇಟಿಯನ್ ವಿದ್ವಾಂಸರ ಸಮ್ಮೇಳನ ಜಾರಿ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಗಾಂದೇನ್ ಬೌದ್ಧ ಮಠದಲ್ಲಿ ನಿನ್ನೆಯಿಂದ ಶುರುವಾಗಿರೋ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನ ಇಂದು ಎರಡನೇ ದಿನದ ಪ್ರಾರಂಭ ಕಂಡಿದೆ. ಹೀಗಾಗಿ ಇಂದು ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ಟಿಬೇಟಿಯನ್ ಸಂಪ್ರದಾಯದಂತೆ ಜರುಗಿದೆ. ಸೈಕಾಲಜಿ ಮತ್ತು ಚಿಂತನಶೀಲ ಅಭ್ಯಾಸಗಳ ಕುರಿತು ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದಲ್ಲಿ ಅನೇಕ ಗಣ್ಯ ಭಾಷಣಕಾರರು ಮತ್ತು ವಿದ್ವಾಂಸರು ಭಾಗಿಯಾಗಲಿದ್ದಾರೆ. ಭಾರತದ 15 ರಾಜ್ಯಗಳಿಂದ ಬಂದಿರೋ ಬೌದ್ಧ ಬಿಕ್ಕುಗಳು, ಮಠಾಧೀಶರು, ಧಾರ್ಮಿಕ ಮುಖಂಡರು...
ಟಿಬೇಟಿಯನ್ ಕಾಲೋನಿಯಲ್ಲಿ ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನ ಉದ್ಘಾಟನೆ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಗಾಂದೇನ್ ಬೌದ್ಧ ಮಠದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಹೀಗಾಗಿ ಇಂದು ಸಮ್ಮೇಲನ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಸೈಕಾಲಜಿ ಮತ್ತು ಚಿಂತನಶೀಲ ಅಭ್ಯಾಸಗಳ ಕುರಿತು ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದಲ್ಲಿ ಅನೇಕ ಗಣ್ಯ ಭಾಷಣಕಾರರು ಮತ್ತು ವಿದ್ವಾಂಸರು ಭಾಗಿಯಾಗಲಿದ್ದಾರೆ. ಭಾರತದ 15 ರಾಜ್ಯಗಳಿಂದ ಬಂದಿರೋ ಬೌದ್ಧ ಬಿಕ್ಕುಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ....
ಕಾರವಾರದಲ್ಲಿ ಬೆಳ್ಳಂ ಬೆಳಿಗ್ಗೆ ಎಸಿಬಿ ದಾಳಿ, ಇಬ್ಬರು ಅಧಿಕಾರಿಗಳ ಮನೆ ತಲಾಶ್..!
ಕಾರವಾರದಲ್ಲಿ ಬೆಳ್ಳಂ ಬೆಳಗ್ಗೆ ಅಧಿಕಾರಿಗಳ ಮನೆಯ ಮೇಲೆ ಎಸಿಬಿ ದಾಳಿ ನಡೆಸಿ ಶಾಕ್ ನೀಡಿದೆ. ಕಾರವಾರದ ಎಸಿಬಿ ಡಿವೈ ಎಸ್ ಪಿ ಪ್ರಕಾಶ್ ನೇತ್ರತ್ವದ ತಂಡ ಹಾಗೂ ಹುಬ್ಬಳ್ಳಿಯ ಎಸಿಬಿ ಅಧಿಕಾರಿಗಳು ಪ್ರತ್ಯೇಕವಾಗಿ ಎರಡು ತಂಡಗಳ ಮೂಲಕ ದಾಳಿ ನಡೆಸಿದೆ. ಕುಮಟಾ ಮೂಲದ ಪಿ.ಡಬ್ಲು ಡಿ ಇಂಜಿನಿಯರ್ ರಾಜೀವ್ ನಾಯ್ಕ ಹಾಗೂ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳಾಗಿದ್ದಾರೆ. ಕಾರವಾರ ನಗರದ ಎಂ.ಜಿ ರಸ್ತೆಯಲ್ಲಿರುವ ಬೃಂದಾವನ ಅಪಾರ್ಟ ಮೆಂಟ್, ಹಬ್ಬುವಾಡದ ಮನೆಯ ಮೇಲೆ ಎರಡು...
ನಂದಿಕಟ್ಟಾ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಸೊಸೈಟಿಯ ನೂತನ ಅಧ್ಯಕ್ಷರಾಗಿ ಸುಧಾಕರ್ ಮೋರೆ, ಉಪಾಧ್ಯಕ್ಷರಾಗಿ ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸೊಸೈಟಿ ನಿರ್ದೇಶಕರ ಮಧ್ಯ ನಡೆದ ಒಪ್ಪಂದದಂತೆ,ನಿಕಟ ಪೂರ್ವ ಅಧ್ಯಕ್ಷ ತುಕಾರಾಮ್ ಔಂಡೋಜಿ ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರಿಂದ ಇಂದು ಚುನಾವಣೆ ಘೋಷಣೆ ಮಾಡಲಾಗಿತ್ತು, ಹಾಗಾಗಿ ಇಂದು ಸೊಸೈಟಿ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ, ಸುಧಾಕರ್ ಮೋರೆ ಅಧ್ಯಕ್ಷರಾಗಿ, ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚುನಾವಣಾಧಿಕಾರಿಯಾಗಿ, ಶಿರಸಿಯ ಸಹಕಾರಿ...
ಮೈನಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್, ಕೆಂದಲಗೇರಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಮೈನಳ್ಳಿ ಸಮೀಪದಲ್ಲಿ ಬೈಕ್ ಅಪಘಾತವಾಗಿದೆ. ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಕೆಂದಲೆಗೇರಿ ಗ್ರಾಮದ ನೂರ್ ಅಹ್ಮದ್ (30) ಎಂಬುವವನೇ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ಕೆಂದಲಗೇರಿ ಗ್ರಾಮದಿಂದ ಯಲ್ಲಾಪುರ ರಸ್ತೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ, ಈ ವೇಳೆ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವೂ ಮುರಿದಿದೆ. ಸದ್ಯ ಬೈಕ್ ಸವಾರನ...
ಹುನಗುಂದದಲ್ಲಿ ಅಪರಿಚಿತ, ಅರೆನಗ್ನ ವ್ಯಕ್ತಿಯ ತಿರುಗಾಟದ ಆತಂಕ, ಪೊಲೀಸರ ವಶಕ್ಕೆ ಒಪ್ಪಿಸಿದ ಗ್ರಾಮಸ್ಥರು..!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಇಂದು ಸಂಜೆ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಅರೆನಗ್ನ ಸ್ಥಿತಿಯಲ್ಲಿ ಏಕಾಏಕಿ ಮನೆಗಳಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸುತ್ತಿದ್ದ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಕಂಡ ಜನ ಅಕ್ಷರಶಃ ಆತಂಕಕ್ಕೀಡಾಗಿದ್ದರು. ಆತ ಬಿಹಾರಿ..! ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದ. ಆದ್ರೆ ಜನ ಮಾತ್ರ ಆತ ನಡೆದುಕೊಂಡ ರೀತಿ ನೋಡಿ ಭಯಭೀತಗೊಂಡು ಆತನನ್ನು ಕಳ್ಳ ಇರಬಹುದು ಅಂತ ಭಾವಿಸಿದ್ರು. ಹೀಗಾಗಿ, ತಕ್ಷಣವೇ 112 ಪೊಲೀಸರಿಗೆ ಕರೆ...