ಹುನಗುಂದದಲ್ಲಿ ಅಪರಿಚಿತ, ಅರೆನಗ್ನ ವ್ಯಕ್ತಿಯ ತಿರುಗಾಟದ ಆತಂಕ, ಪೊಲೀಸರ ವಶಕ್ಕೆ ಒಪ್ಪಿಸಿದ ಗ್ರಾಮಸ್ಥರು..!


ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಇಂದು ಸಂಜೆ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಅರೆನಗ್ನ ಸ್ಥಿತಿಯಲ್ಲಿ ಏಕಾಏಕಿ ಮನೆಗಳಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸುತ್ತಿದ್ದ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಕಂಡ ಜನ ಅಕ್ಷರಶಃ ಆತಂಕಕ್ಕೀಡಾಗಿದ್ದರು.

ಆತ ಬಿಹಾರಿ..!
ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದ. ಆದ್ರೆ ಜನ ಮಾತ್ರ ಆತ ನಡೆದುಕೊಂಡ ರೀತಿ ನೋಡಿ ಭಯಭೀತಗೊಂಡು ಆತನನ್ನು ಕಳ್ಳ‌ ಇರಬಹುದು ಅಂತ ಭಾವಿಸಿದ್ರು. ಹೀಗಾಗಿ, ತಕ್ಷಣವೇ 112 ಪೊಲೀಸರಿಗೆ ಕರೆ ಮಾಡಿದ್ರು. ಅಷ್ಟೊತ್ತಿಗಾಗಲೇ ಆ ವ್ಯಕ್ತಿಯನ್ನು ಹುಡುಕಿಕೊಂಡು ಟಿಬೇಟಿಯನ್ ವ್ಯಕ್ತಿಯೊಬ್ಬ ಬಂದಿದ್ದ. ಆ ಅಪರಿಚಿತ ವ್ಯಕ್ತಿಯನ್ನು ನೋಡಿ ಈತ ನಮ್ಮವನು ಅಂತಾ ಹೇಳಿದ. ಹೀಗಾಗಿ, ಆತ ಬಿಹಾರ ಮೂಲದವನು ಅಂತಾ ಗೊತ್ತಾಯ್ತು. ಕೆಲಸಕ್ಕೆ ಅಂತಾ ಟಿಬೇಟಿಯನ್ ಕಾಲೋನಿಗೆ ಬಂದಿದ್ದ ವ್ಯಕ್ತಿ ಬೆಳಿಗ್ಗೆಯಿಂದಲೇ ಮನೆಬಿಟ್ಟು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದ.

112 ಪೊಲೀಸರು ಬಂದ್ರು..
ಅಪರಿಚಿತ ವ್ಯಕ್ತಿ, ಆತಂಕ ಸೃಷ್ಟಿಸಿದ್ದಾನೆ ಅನ್ನೊ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ 112 ತುರ್ತು ಸೇವೆಯ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಠಾಣೆಗೆ ಕರೆದೊಯ್ದಿದ್ದಾರೆ. ಅದ್ರ ಜೊತೆ ಟಿಬೇಟಿಯನ್ ಕಾಲೋನಿಯ ವ್ಯಕ್ತಿಯನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ, ಜನರಲ್ಲಿ ಮನೆ‌ಮಾಡಿದ್ದ ಆತಂಕ ದೂರವಾಗಿದೆ.

error: Content is protected !!