ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಗಾಂದೇನ್ ಬೌದ್ಧ ಮಠದಲ್ಲಿ ನಿನ್ನೆಯಿಂದ ಶುರುವಾಗಿರೋ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನ ಇಂದು ಎರಡನೇ ದಿನದ ಪ್ರಾರಂಭ ಕಂಡಿದೆ. ಹೀಗಾಗಿ ಇಂದು ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ಟಿಬೇಟಿಯನ್ ಸಂಪ್ರದಾಯದಂತೆ ಜರುಗಿದೆ.
ಸೈಕಾಲಜಿ ಮತ್ತು ಚಿಂತನಶೀಲ ಅಭ್ಯಾಸಗಳ ಕುರಿತು ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದಲ್ಲಿ ಅನೇಕ ಗಣ್ಯ ಭಾಷಣಕಾರರು ಮತ್ತು ವಿದ್ವಾಂಸರು ಭಾಗಿಯಾಗಲಿದ್ದಾರೆ.
ಭಾರತದ 15 ರಾಜ್ಯಗಳಿಂದ ಬಂದಿರೋ ಬೌದ್ಧ ಬಿಕ್ಕುಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ವಿಶೇಷ ಭಾಷಣ, ಪ್ರವಚನ ಕೈಗೊಂಡಿದ್ದಾರೆ. ಅಂದಹಾಗೆ ಜೂನ್ 21 ರವರೆಗೆ ಈ ಸಮ್ಮೇಳನ ನಡೆಯಲಿದೆ.