Home uttara kannada news

Tag: uttara kannada news

Post
ಮುಂಡಗೋಡಿನಲ್ಲಿ ರಾತ್ರೋ ರಾತ್ರಿ IPL ಬೆಟ್ಟಿಂಗ್ ಅಡ್ಡೆ ಮೇಲೆ ಎಸ್ಪಿ ಟೀಂ ದಾಳಿ, ನಾಲ್ವರು ಅರೆಸ್ಟ್..!

ಮುಂಡಗೋಡಿನಲ್ಲಿ ರಾತ್ರೋ ರಾತ್ರಿ IPL ಬೆಟ್ಟಿಂಗ್ ಅಡ್ಡೆ ಮೇಲೆ ಎಸ್ಪಿ ಟೀಂ ದಾಳಿ, ನಾಲ್ವರು ಅರೆಸ್ಟ್..!

ಇದು ಮುಂಡಗೋಡ ಮಟ್ಟಿಗೆ ಬಹುದೊಡ್ಡ ಬ್ರೇಕಿಂಗ್ ನ್ಯೂಸ್. ಯಸ್, ಉತ್ತರ ಕನ್ನಡದ ಖಡಕ್ ಎಸ್ಪಿ ಸುಮನಾ ಫನ್ನೇಕರ್ ಮೇಡಂ ಈಗಷ್ಟೇ ತಮ್ಮ ಅಸಲೀ ಆಟಗಳನ್ನು ಶುರು ಮಾಡಿ ಆಯ್ತು. ಇನ್ನೇನಿದ್ರು ಜಿಲ್ಲೆಯಲ್ಲಿ ಅಕ್ರಮಗಳಿಗೆ ಜಾಗವಿಲ್ಲ ಅನ್ನೋದು ಪಕ್ಕಾ. ಅದ್ರ ಭಾಗವಾಗೇ ನಿನ್ನೆ ತಡರಾತ್ರಿ ಮುಂಡಗೋಡಿನಲ್ಲಿ ಅದೊಂದು ಸ್ಪೇಷಲ್ ಟೀಂ ಬೃಹತ್ ಕಾರ್ಯಾಚರಣೆ ಮಾಡಿ ನಾಲ್ವರನ್ನ ಅನಾಮತ್ತಾಗಿ ವಶಕ್ಕೆ ಪಡೆದುಕೊಂಡು ಹೋಗಿದೆ. ಅಸಲು, ಈ ಕಾರ್ಯಚರಣೆ ಖುದ್ದು ಮುಂಡಗೋಡ ಪೊಲೀಸರಿಗೂ ಬೆವರು ಇಳಿಸಿದೆ. ಯಾಕಂದ್ರೆ ಅಲ್ಲೇನಾಗ್ತಿದೆ ಅನ್ನೋ ಸಣ್ಣದೊಂದು...

Post
ಮುಂಡಗೋಡ ಪೊಲೀಸರ ಕಾರ್ಯಾಚರಣೆ,  ಅಕ್ರಮ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಅಕ್ರಮ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ..!

ಮುಂಡಗೋಡ: ಪಟ್ಟಣದ ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ವ್ಯಕ್ತಿಯೋರ್ವ ಗಾಂಜಾ‌ ಮಾರಾಟ ಮಾಡುತ್ತಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ. ಶಿಗ್ಗಾವಿ ತಾಲೂಕಿನ ಜೊಂಡಲಗಟ್ಟಿಯ ಮಾಧುರಾವ್ ಶಂಕರ್ ರಾವ್ ಭೋಸ್ಲೆ (26) ಎಂಬುವವನೇ ಆರೋಪಿಯಾಗಿದ್ದಾನೆ. ಈತ ಇಂದು ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ದಾಳಿ ಮಾಡಿದೆ. ಸುಮಾರು 4 ಸಾವಿರ...

Post
“ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು” ಅಭಿಮಾನಿಯ ಘೋಷಣೆ..! ಬಿಜೆಪಿಯಲ್ಲೂ ಮೊಳಗಿದ ಮುಂದಿನ ಸಿಎಂ ಕೂಗು

“ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು” ಅಭಿಮಾನಿಯ ಘೋಷಣೆ..! ಬಿಜೆಪಿಯಲ್ಲೂ ಮೊಳಗಿದ ಮುಂದಿನ ಸಿಎಂ ಕೂಗು

ಮುಂಡಗೋಡ: ಪಟ್ಟಣಕ್ಕೆ ಇಂದು ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ಶ್ರೀರಾಮುಲುರವರಿಗೆ ಭವ್ಯ ಸ್ವಾಗತ ಕೋರಲಾಯಿತು. ಜೊತೆಗೆ ಇದೇ ವೇಳೆ ಸಚಿವರು ಗಲಿಬಿಲಿಗೊಳ್ಳುವಂತಹ ಘಟನೆಯೂ ನಡೆಯಿತು. ಸಾರಿಗೆ ಸಚಿವ ಶ್ರೀರಾಮುಲು ಮುಂಡಗೋಡ ಪಟ್ಟಣಕ್ಕೆ ಬಂದಿಳಿಯುತ್ತಿದ್ದಂತೆ, ಸಚಿವ ಶಿವರಾಮ್ ಹೆಬ್ಬಾರ್ ಶ್ರೀರಾಮುಲುರವರಿಗೆ ಸ್ವಾಗತಿಸಲು ಮುಂದಾಗಿದ್ರು. ಈ ವೇಳೆ ಸಚಿವ ಶ್ರೀರಾಮುಲುರಿಗೆ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಸ್ವಾಗತಿಸಿದ್ರು. ಇದೇ ವೇಳೆ ಅಭಿಮಾನಿಗಳ...

Post
ಹುನಗುಂದ ಗ್ರಾಮದಲ್ಲಿ ಸರಾಯಿ ನಿಷೇಧ, ಗ್ರಾಮಸ್ಥರ ತೀರ್ಮಾನ, ಸರಾಯಿ ಮಾರಿದ್ರೆ 50 ಸಾವಿರ ದಂಡ..!

ಹುನಗುಂದ ಗ್ರಾಮದಲ್ಲಿ ಸರಾಯಿ ನಿಷೇಧ, ಗ್ರಾಮಸ್ಥರ ತೀರ್ಮಾನ, ಸರಾಯಿ ಮಾರಿದ್ರೆ 50 ಸಾವಿರ ದಂಡ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು, ಗ್ರಾಮದಲ್ಲಿ ಸರಾಯಿ ನಿಷೇಧ ಮಾಡಲಾಗಿದೆ. ಈ ಮೂಲಕ ಅದೇಷ್ಟೋ ಬಡ ಮಹಿಳೆಯರ ಬಹುದಿನದ ಆಸೆ ನೆರವೇರಿದಂತಾಗಿದೆ. ಗ್ರಾಮದಲ್ಲಿ ಇಂದು ಸಭೆ ಸೇರಿದ್ದ ಗ್ರಾಮಸ್ಥರು, ಮುಖಂಡರು ಈ ಬಗ್ಗೆ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇಂದಿನಿಂದ ಗ್ರಾಮದಲ್ಲಿ ಸರಾಯಿ ನಿಷೇಧಿಸಿ ಠರಾವು ಬರೆದಿದ್ದಾರೆ. ಒಂದುವೇಳೆ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡಿದ್ರೆ 50 ಸಾವಿರ ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾರೆ.

Post
ವಡಗಟ್ಟಾ ಬಳಿ ಬೈಕ್ ಅಪಘಾತ: ಗಾಯಗೊಂಡಿದ್ದ ಅರಶಿಣಗೇರಿಯ ಉಮೇಶ್ ಲಮಾಣಿ ಸಾವು..!

ವಡಗಟ್ಟಾ ಬಳಿ ಬೈಕ್ ಅಪಘಾತ: ಗಾಯಗೊಂಡಿದ್ದ ಅರಶಿಣಗೇರಿಯ ಉಮೇಶ್ ಲಮಾಣಿ ಸಾವು..!

ಮುಂಡಗೋಡ: ತಾಲೂಕಿನ ವಡಗಟ್ಟಾ ಸಮೀಪದ ಬೀರವಳ್ಳಿ ಕ್ರಾಸ್ ಬಳಿ, ಏ.29 ರಂದು ನಡೆದಿದ್ದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅರಶಿಣಗೇರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಿನ ಅರಶಿಣಗೇರಿಯ ಉಮೇಶ್ ಶೇಖಪ್ಪಾ ಲಮಾಣಿ(55) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಳೆದ ಏ.29 ರಂದು ಬೀರವಳ್ಳಿ ಕ್ರಾಸ್ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು.

Post
ವಡಗಟ್ಟಾ ಸಮೀಪದ ಬೀರವಳ್ಳಿ ಕ್ರಾಸ್ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ, ನಾಲ್ವರು ಗಂಭೀರ..!

ವಡಗಟ್ಟಾ ಸಮೀಪದ ಬೀರವಳ್ಳಿ ಕ್ರಾಸ್ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ, ನಾಲ್ವರು ಗಂಭೀರ..!

ಮುಂಡಗೋಡ: ತಾಲೂಕಿನ ಹುಬ್ಬಳ್ಳಿ ರಸ್ತೆಯ ವಡಗಟ್ಟಾ ಸಮೀಪ ಬೀರವಳ್ಳಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ಬೈಕ್ ಗಳ‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ಉಮೇಶ್ ಶೇಖಪ್ಪಾ ಲಮಾಣಿ ಗಂಭೀರ ಗಾಯಗೊಂಡಿದ್ದಾನೆ. ಇನ್ನುಳಿದಂತೆ ಶಿಗ್ಗಾವಿ ತಾಲೂಕಿನ ಕಮಲಾನಗರ ತಾಂಡಾದ ಇಬ್ಬರು ಮಹಿಳೆಯರು ಸೇರಿ ಮೂವರು ಗಾಯಗೊಂಡಿದ್ದಾರೆ. ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದಿಂದ ಕಮಲಾನಗರಕ್ಕೆ ಬೈಕ್...

Post
ಅಮ್ಮಾಜಿ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದ ಲಾರಿ, ಕ್ರೇನ್ ಮೂಲಕ ಹೊರತೆಗೆದ ಸಿಬ್ಬಂದಿಗಳು..!

ಅಮ್ಮಾಜಿ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದ ಲಾರಿ, ಕ್ರೇನ್ ಮೂಲಕ ಹೊರತೆಗೆದ ಸಿಬ್ಬಂದಿಗಳು..!

ಮುಂಡಗೋಡ: ಪಟ್ಟಣದ ಅಮ್ಮಾಜಿ ಕೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದ ಲಾರಿಯನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ. ಇಂದು ಬೆಳಿಗ್ಗೆ ಯಲ್ಲಾಪುರದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಮ್ಮಾಜಿ ಕೆರೆಯಲ್ಲಿ ಧುಮುಕಿತ್ತು. ಹೀಗಾಗಿ, ಲಾರಿಯಲ್ಲಿದ್ದವರನ್ನು ಸಾರ್ವಜನಿಕರು ರಕ್ಷಣೆ‌ ಮಾಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಸದ್ಯ ಕೆರೆಯಲ್ಲಿ ಪಲ್ಟಿಯಾಗಿ ಅರ್ದಮರ್ದ ಮುಳುಗಿದ್ದ ಲಾರಿಯನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ. ಈ ವೇಳೆ ಯಲ್ಲಾಪುರ ಮುಂಡಗೋಡ ರಸ್ತೆಯಲ್ಲಿ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು.

Post
ಮುಂಡಗೋಡಿನ ಅಮ್ಮಾಜಿ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದ ಲಾರಿ, ತಪ್ಪಿದ ಭಾರೀ ದುರಂತ..!

ಮುಂಡಗೋಡಿನ ಅಮ್ಮಾಜಿ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದ ಲಾರಿ, ತಪ್ಪಿದ ಭಾರೀ ದುರಂತ..!

ಮುಂಡಗೋಡ: ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಮತ್ತೊಂದು ದುರಂತ ನಡೆದಿದೆ. ನಿಯಂತ್ರಣ ತಪ್ಪಿದ ಲಾರಿಯೊಂದು ಕೆರೆಯಲ್ಲೇ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಜನರನ್ನ ಬಚಾವ್ ಮಾಡಲಾಗಿದೆ. ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಲಾರಿ, ಅಮ್ಮಾಜಿ ಕೆರೆ ಮೇಲೆ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಕೆರೆಯಲ್ಲೇ ಧುಮುಕಿದೆ. ಲಾರಿಯಲ್ಲಿದ್ದವರು ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ. ತಕ್ಷಣವೇ ಸಹಾಯಕ್ಕೆ ಬಂದ ಸಾರ್ವಜನಿಕರು ಲಾರಿಯಲ್ಲಿದ್ದವರನ್ನು ರಕ್ಷಿಸಿ ಹೊರ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಅಮ್ಮಾಜಿ ಕೆರೆಯಲ್ಲಿ ಇತ್ತಿಚೇಗಷ್ಟೇ ಕಾರು ಮುಳುಗಿ...

Post
ಮೇ 20 ಕ್ಕೆ ಗ್ರಾಪಂ ಉಪಚುನಾವಣೆ ದಿನಾಂಕ ಫಿಕ್ಸ್, ಮುಂಡಗೋಡಿನ ಆ ಪಂಚಾಯತಿಯ 1ಸ್ಥಾನಕ್ಕೆ ಮತದಾನ..!

ಮೇ 20 ಕ್ಕೆ ಗ್ರಾಪಂ ಉಪಚುನಾವಣೆ ದಿನಾಂಕ ಫಿಕ್ಸ್, ಮುಂಡಗೋಡಿನ ಆ ಪಂಚಾಯತಿಯ 1ಸ್ಥಾನಕ್ಕೆ ಮತದಾನ..!

ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಿರುವ ಗ್ರಾಮ ಪಂಚಾಯತಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ಘೋಷಿಸಿದೆ. ಮೇ 20 ರಂದು ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. 2022 ಏಪ್ರಿಲ್ ನಿಂದ, 2022ರ ಜುಲೈ ತಿಂಗಳವರೆಗೆ ಅವಧಿಯಲ್ಲಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,...

Post
ಇಂದೂರಿನಲ್ಲಿ ಸಿಡಿಲಾಘಾತ, ಹೊತ್ತಿ ಉರಿದ ತೆಂಗಿನ ಮರಗಳು..!

ಇಂದೂರಿನಲ್ಲಿ ಸಿಡಿಲಾಘಾತ, ಹೊತ್ತಿ ಉರಿದ ತೆಂಗಿನ ಮರಗಳು..!

ಮುಂಡಗೋಡ: ತಾಲೂಕಿನ ಹಲವೆಡೆ ಮಳೆ ಗಾಳಿ, ಸಿಡಿಲಿನ ಅರ್ಭಟ ಜೋರಾಗಿತ್ತು. ತಾಲೂಕಿನ ಇಂದೂರು ಗ್ರಾಮದಲ್ಲಿ ಭರಸಿಡಿಲು ಬಡಿದು ಎರಡು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ.   ಇಲ್ಲಿನ ಕಲ್ಮೇಶ್ ದುಗ್ಗಳ್ಳಿ ಎಂಬುವವರ ಮನೆಯ ಹಿತ್ತಲಿನಲ್ಲಿರೋ ತೆಂಗಿನ ಮರಕ್ಕೆ ಭರಸಿಡಿಲು ಬಡಿದು ಹೊತ್ತಿ ಉರಿದಿವೆ. ನೋಡ ನೋಡುತ್ತಲೇ ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಿದೆ. ಹೀಗಾಗಿ ಆತಂಕಗೊಂಡ ಗ್ರಾಮಸ್ಥರು ನಿಬ್ಬೆರಗಾಗಿ ಆ ಸಿಡಿಲಾಘಾತದ ರೋಮಾಂಚಕ ಕ್ಷಣ ನೋಡಿದ್ದಾರೆ. ಸಿಡಿಲಿನ ಹೊಡೆತಕ್ಕೆ ಅದೃಷ್ಟವಶಾತ್ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.

error: Content is protected !!