ಬಾಚಣಕಿಯಲ್ಲಿ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ, ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಯಲ್ಲಿ ಧ್ವಜಕ್ಕೆ ಇದೇಂತಾ ಗತಿ..? ಏನ್ ಮಾಡ್ತಿದ್ದಿರಿ ಅಧಿಕಾರಿಗಳೆ..?

ಬಾಚಣಕಿಯಲ್ಲಿ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ, ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಯಲ್ಲಿ ಧ್ವಜಕ್ಕೆ ಇದೇಂತಾ ಗತಿ..? ಏನ್ ಮಾಡ್ತಿದ್ದಿರಿ ಅಧಿಕಾರಿಗಳೆ..?

 ಇಡೀ ದೇಶ ಇವತ್ತು ರಾಷ್ಟ್ರಭಕ್ತಿಯ ಸಿಹಿ ಸಂಭ್ರಮದಲ್ಲಿದೆ. 77 ನೇಯ ಸ್ವತಂತ್ರ ದಿನಾಚರಣೆಯ ಮಹಾ ಸಂಭ್ರಮದಲ್ಲಿ ಎಲ್ಲೆಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿವೆ. ಆದ್ರೆ, ಮುಂಡಗೋಡ ತಾಲೂಕಿನ ಇದೊಂದು ಗ್ರಾಮದಲ್ಲಿ ಸರ್ಕಾರದ ಆದೇಶವಿದ್ದರೂ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ ಮಾಡಲಾಗಿದೆ. ಧ್ವಜ ಸ್ತಂಬ ಕಟ್ಟಿ, ಹೆಮ್ಮೆಯ ಧ್ವಜವನ್ನೂ ಕಂಬಕ್ಕೆ ಏರಿಸಿಟ್ಟು, ಇನ್ನೇನು ಧ್ವಜಾರೋಹಣ ಮಾಡಬೇಕಿದ್ದವರು ಭಾರೀ ಅಪಮಾನ ಮಾಡಿದ್ದಾರೆ. ಧ್ವಜ ಹಾರಿಸದೇ ಇಡೀ ಧ್ವಜ ಸ್ತಂಬವನ್ನೇ ಕಿತ್ತು ಹಾಕಿ ಏನೂ ಆಗಿಲ್ಲದವರಂತೆ ಬೆಪ್ಪಗೆ ಕುಳಿತಿದ್ದಾರೆ. ನಡೆದದ್ದು ಎಲ್ಲಿ..? ಅಂದಹಾಗೆ ಇದು ನಡೆದಿದ್ದು ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ. ಅಷ್ಟಕ್ಕೂ ಇದನ್ನ ಬಾಚಣಕಿ ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿ ಅನ್ನಬೇಕೋ ಅಥವಾ ಹುಂಬತನ ಅನ್ನಬೇಕೋ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ಸ್ವತಂತ್ರ ದಿನಾಚರಣೆ ದಿನ ಇಲ್ಲಿನ ಅಮೃತ ಸರೋವರದ ಹತ್ತಿರ ಹಾರಾಡಬೇಕಿದ್ದ ಧ್ವಜ ಹಾರಾಡಲೇ ಇಲ್ಲ. ಬದಲಾಗಿ, ಸಂಪೂರ್ಣ ತಯಾರಿ ಆಗಿದ್ದರೂ, ಇಡೀ ಧ್ವಜ ಸ್ತಂಭವನ್ನೇ ಅನಾಮತ್ತಾಗಿ ಕಿತ್ತು ಹಾಕಿದ್ದಾರೆ. ಇದ್ರೊಂದಿಗೆ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ...

ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!

ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!

ಕುಮಟಾ : ಧ್ವಜಾರೋಹಣಕ್ಕೆಂದು ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ದಾರುಣ ಸಾವು ಕಂಡಿದ್ದಾರೆ. ಬೋಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಟಾ ತಾಲೂಕಿನ ಹಳಕಾರ ಕ್ರಾಸ್ ಸಮೀಪ‌ ಘಟನೆ ನಡೆದಿದ್ದು, ಅಪಘಾತದಲ್ಲಿ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿಯಾಗಿದ್ದ ಗೋಪಾಲ ಪಟಗಾರ (50) ಮೃತಪಟ್ಟ ಶಿಕ್ಷಕರಾಗಿದ್ದಾರೆ. ಇವರು ಗುಡೆಅಂಗಡಿ ಶಾಲೆ ಶಿಕ್ಷಕರಾಗಿದ್ದು, ಧ್ವಜಾರೋಹಣಕ್ಕಾಗಿ ಬೆಳಿಗ್ಗೆ ಹೆಗಡೆಯ ಮೇಲಿನ ಕೇರಿಯಲ್ಲಿರುವ ತಮ್ಮ ಮನೆಯಿಂದ ಬೈಕ್ ಮೇಲೆ‌ ಶಾಲೆಗೆ ಹೋಗುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬಂದ ಬೋಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಶಿಕ್ಷಕ ಗೋಪಾಲ ಪಟಗಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಧ್ವಜಾರೋಹಣ, ಹೇಗಿತ್ತು ಗೊತ್ತಾ ಸಂಭ್ರಮ..!

ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಧ್ವಜಾರೋಹಣ, ಹೇಗಿತ್ತು ಗೊತ್ತಾ ಸಂಭ್ರಮ..!

ಮುಂಡಗೋಡ ತಾಲೂಕಿನೆಲ್ಲೆಡೆ 77 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಜೋರಾಗಿತ್ತು. ಬೆಳಿಗ್ಗೆಯಿಂದ ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಧ್ವಜಾರೋಹಣ ಕಾರ್ಯಕ್ರಮಗಳು ನಡೆದವು. ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮುಂಡಗೋಡಿನಲ್ಲಿ..! ಇನ್ನು ತಾಲೂಕಾಡಳಿತದಿಂದ ತಾಲೂಕಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಿತು. ತಹಶೀಲ್ದಾರ್ ಶಂಕರ್ ಗೌಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ರು.ಮಾಜಿ ಶಾಸಕ ವಿ.ಎಸ್.ಪಾಟೀಲ್, ಮಾಜಿ ಜಿಪಂ ಸದಸ್ಯ ಎಲ್.ಟಿ.ಪಾಟೀಲ್, ಸಿಪಿಐ ಬರಮಪ್ಪ ಲೋಕಾಪುರ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ತಾಲೂಕಿನ ಹಲವು ಸಾಧಕರಿಗೆ ತಾಲೂಕಾಡಳಿತದ ಪರವಾಗಿ ಸನ್ಮಾನಿಸಲಾಯಿತು. ಪೊಲೀಸ್ ಠಾಣೆಯಲ್ಲಿ..! ಮುಂಡಗೋಡ ಪೊಲೀಸ್ ಠಾಣೆಯಲ್ಲಿಯೂ 77ನೇ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಯೂನಿಫಾರ್ಮ್ ತೊಟ್ಟ ಪೊಲೀಸ್ ಅಧಿಕಾರಿಗಳು, ಪೊಲೀಸ್ ಪೇದೆಗಳು ಶಿಸ್ತಿನಿಂದ ಧ್ವಜಾರೋಹಣದಲ್ಲಿ ಪಾಲ್ಗೊಂಡರು. ನೂತನ ಸಿಪಿಐ ಬರಮಪ್ಪ ಲೋಕಾಪುರ್ ಧ್ಜಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ್ರು. ಹುನಗುಂದದಲ್ಲಿ..! ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಆವರಣದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಷರೀಫಸಿಂಗ್ ಶಿಗ್ಗಟ್ಟಿ ಧ್ವಜಾರೋಹಣ ನೆರವೇರಿಸಿದ್ರು....

ಮುಂಡಗೋಡಿನಲ್ಲಿ ಸಿಕ್ತು ಬಳೆಯ ಚೀಲ, ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ  ಅಟೋ ಚಾಲಕ..!

ಮುಂಡಗೋಡಿನಲ್ಲಿ ಸಿಕ್ತು ಬಳೆಯ ಚೀಲ, ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ..!

ಮುಂಡಗೋಡ: ಬಸ್ಸಿನಲ್ಲಿ 50 ಸಾವಿರ ಮೌಲ್ಯದ ಬಳೆ ಇದ್ದ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಗೆ ಪೊಲೀಸರ ಮೂಲಕ ವಾಪಸ್ ನೀಡಲಾಗಿದೆ. ಮುಂಡಗೋಡಿನ ಆಟೋ ಚಾಲಕನ ಸಮಯ ಪ್ರಜ್ಞೆ ಹಾಗೂ ಪ್ರಮಾಣಿಕತೆಯಿಂದ ಒಂದೊಳ್ಳೆ ಕೆಲಸವಾಗಿದೆ. ಅಂದಹಾಗೆ, ನಿನ್ನೆ ಶನಿವಾರ ಬನವಾಸಿಯ ಶಾರದಾ ಪಕ್ಕೀರಪ್ಪ ಬಜಂತ್ರಿ, ಎಂಬುವವರು ಬಸ್ಸಿನಲ್ಲಿ ತಮ್ಮ ಚೀಲವನ್ನು ಕಳೆದುಕೊಂಡಿದ್ದರು. ಹಾಗೆ ಕಳೆದುಕೊಂಡಿದ್ದ ಚೀಲದಲ್ಲಿ ಬರೋಬ್ಬರಿ 50 ಸಾವಿರ ರೂ. ಮೌಲ್ಯದ ಬಳೆ ಇತ್ತು. ಮುಂಡಗೋಡಿನ ಪಟ್ಟಣ ಪಂಚಾಯತಿ ಎದುರು ಅದ್ಯಾರೋ ಏನೋ ಆ ಚೀಲವನ್ನು ಇಳಿಸಿ ಬಿಟ್ಟಿದ್ದರು. ಹೀಗಾಗಿ, ಆ ಮಹಿಳೆಗೆ ಮಳಗಿಗೆ ಹೋದ ನಂತರ ತನ್ನ ಚೀಲ ಕಳೆದುಕೊಂಡಿದ್ದರ ಬಗ್ಗೆ ಗಮನಕ್ಕೆ ಬಂದಿದೆ. ಆಟೋ ಚಾಲಕನ ನಿಯತ್ತು..! ಅಸಲು, ಹಾಗೆ ಅನಾಥವಾಗಿ ಬಿದ್ದಿದ್ದ ಚೀಲ ಮುಂಡಗೋಡಿನ ಆಟೋ ಚಾಲಕ ಬಸವರಾಜ್ ನಿಡಗುಂದಿ ಎಂಬುವರ ಕಣ್ಣಿಗೆ ಬಿದ್ದಿದೆ. ಇದೇನು ಇರಬಹುದು ಅಂತಾ ಚೀಲ ತೆರೆದು ನೋಡಿದಾಗ ಅದ್ರಲ್ಲಿ ಬಳೆಗಳು ಇರೋದು ತಿಳಿದಿದೆ. ತಕ್ಷಣವೇ ಆ ಚೀಲದಲ್ಲಿ ತಡಕಾಡಿದ ಆಟೋ ಚಾಲಕನಿಗೆ ಸಂಬಂಧಪಟ್ಟ...

ಕರೆಂಟ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮೊಮ್ಮಗಳ ದುರಂತ ಸಾವು, ವಾಚಮನ್ ಕೆಲಸ ಮಾಡ್ತಿದ್ದ ಕುಟುಂಬದ ಮೂವರ ದುರ್ಮರಣ..!

ಕರೆಂಟ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮೊಮ್ಮಗಳ ದುರಂತ ಸಾವು, ವಾಚಮನ್ ಕೆಲಸ ಮಾಡ್ತಿದ್ದ ಕುಟುಂಬದ ಮೂವರ ದುರ್ಮರಣ..!

 ಬೆಳಗಾವಿ: ಕರೆಂಟ್ ಶಾಕ್ ಹೊಡೆದು ಮೂವರು ಸ್ಥಳದಲ್ಲಿ ಸಾವು ಕಂಡ ದಾರುಣ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಅಜ್ಜ, ಅಜ್ಜಿ, ಮೊಮ್ಮಗಳು ಸ್ಥಳದಲ್ಲಿ ಸಾವು ಕಂಡಿದ್ದಾರೆ. ಈರಪ್ಪ ರಾಠೋಡ, ಶಾಂತವ್ವ ರಾಠೋಡ, 3 ನೇ ತರಗತಿ ಓದುತ್ತಿದ್ದ ಅನ್ನಪೂರ್ಣಾ ರಾಠೋಡ ಮೃತಪಟ್ಟ ದುರ್ದೈವಿಗಳು. ನಿರ್ಮಾಣ ಹಂತದ ಮನೆಗೆ ವಾಚಮನ್ ಕೆಲಸ ಮಾಡುತ್ತಿದ್ದ ರಾಠೋಡ ಕುಟುಂಬ, ಏಕಕಾಲದಲ್ಲಿ ಮೂವರಿಗೆ ಕರೆಂಟ್ ಶಾಕ್ ಹೊಡೆದು ದುರ್ಘಟನೆ ನಡೆದಿದೆ. ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾ ನಿವಾಸಿಗಳು ಅಂತಾ ತಿಳಿದು ಬಂದಿದೆ. ಇನ್ನು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ ಸ್ಥಳಕ್ಕೆ ಎಪಿಎಂಸಿ ಠಾಣೆ ಸಿಪಿಐ ವಿಶ್ವನಾಥ ಕಬ್ಬೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿ ನಸುಕಿನ ಜಾವ ಭೀಕರ ಅಪಘಾತವಾಗಿದೆ. ಲಾರಿ ಹಾಗೂ ಕಾರು ಮುಖಾಮುಕಿ ಡಿಕ್ಕಿಯಾದ ಪರಿಣಾಮ, ಇನ್ನೇನು ಮದುವೆ ಆಗಬೇಕೆಂಬ ಕನಸು ಹೊತ್ತಿದ್ದ ಜೋಡಿ ಸ್ಥಳದಲ್ಲೇ ದಾರುಣ ಸಾವು ಕಂಡಿದೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ. ಮನೋಹರ್ (38), ಪ್ರಿಯಾಂಕಾ(23) ಸಾವನ್ನಪ್ಪಿದ ದುರ್ದೈವಿಗಳು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿಯ NH4 ರಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬಾಂಬೆಗೆ ಹೊರಟಿದ್ದ ಇವರ, ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತರು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ. ಮೃತ ಮನೋಹರ್ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಸದ್ಯದಲ್ಲೆ ಮನೋಹರ್ ಗೂ ಪ್ರಿಯಾಂಕಗೂ ಮದುವೆ ನಿಶ್ಚಯ ಆಗಿತ್ತು. ಸ್ಥಳಕ್ಕೆ ತಡಸ ಪೋಲಿಸರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ತಡಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡ ತಾಲೂಕಿನ 7 ಗ್ರಾಪಂ ಗಳ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ಸಂಪೂರ್ಣ ವಿವರ..!

ಮುಂಡಗೋಡ ತಾಲೂಕಿನ 7 ಗ್ರಾಪಂ ಗಳ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ಸಂಪೂರ್ಣ ವಿವರ..!

ಮುಂಡಗೋಡ ತಾಲೂಕಿನ 7 ಗ್ರಾಮ ಪಂಚಾಯತಿಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ‌. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ನಡೆದಿರೋ ಆಯ್ಕೆ ಪ್ರಕ್ರಿಯೆ ಹಲವು ಕುತೂಹಲಗಳ ನಡುವೆ, ಜಿದ್ದಾಜಿದ್ದಿನ ಮದ್ಯೆ ಕೊನೆಗೂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆಗಳು ನಡೆದು ಫಲಿತಾಂಶ ಹೊರಬಿದ್ದಿದೆ. ಹಾಗಿದ್ರೆ, ಯಾವ್ಯಾವ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿದೆ..? ಹಾಗಿದ್ರೆ ನೂತನ ಅಧ್ಯಕ್ಷ ಉಪಾಧ್ಯಕ್ಷರುಗಳು ಯಾರ್ಯಾರು..? ಇಲ್ಲಿದೆ ಫುಲ್ ಡಿಟೇಲ್ಸ್..! ಇಂದೂರು ಗ್ರಾಪಂ..! ಕುತೂಹಲಕ್ಕೆ ಕಾರಣವಾಗಿದ್ದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯ ರೋಚಕ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಬೆಂಬಲಿತರಲ್ಲೇ ಎರಡು ಬಣಗಳಾಗಿ‌ ಮಾರ್ಪಟ್ಟು ಕೊನೆಗೂ ಶಶಿಧರ್ ಪಕ್ಕೀರಪ್ಪ ಪರವಾಪುರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ ಕೊಪ್ಪ ಗ್ರಾಮದ ಕಸ್ತೂರಿ ನಾಗಪ್ಪ ಹರಿಜನ್ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ, ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಅಧ್ಯಕ್ಷ ಸ್ಥಾನದ ಆಯ್ಕೆ ಕಸರತ್ತು ಕೊನೆಗೂ ಬಿಜೆಪಿ ಬಣ ರಾಜಕೀಯದಲ್ಲಿ ಒಂದು ಕೊಟ್ಟು ಮತ್ತೊಂದು ಪಡೆದಂತಾಗಿದೆ. ಚಿಗಳ್ಳಿ ಗ್ರಾಪಂ..! ಚಿಗಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರ...

ಮುಂಡಗೋಡ ತಾಲೂಕಿನ 8 ಗ್ರಾಮ ಪಂಚಾಯತಿಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ನೂತನ ಅಧ್ಯಕ್ಷರು ಯಾರ್ಯಾರು ಗೊತ್ತಾ..?

ಮುಂಡಗೋಡ ತಾಲೂಕಿನ 8 ಗ್ರಾಮ ಪಂಚಾಯತಿಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ನೂತನ ಅಧ್ಯಕ್ಷರು ಯಾರ್ಯಾರು ಗೊತ್ತಾ..?

ಮುಂಡಗೋಡ ತಾಲೂಕಿನ 8 ಗ್ರಾಮ ಪಂಚಾಯತಿಗಳಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿದೆ. ಹುನಗುಂದ ಗ್ರಾಪಂ..! ಪಬ್ಲಿಕ್ ಫಸ್ಟ್ ನ್ಯೂಸ್ ನಿನ್ನೆಯೇ ನುಡಿದಿದ್ದ ಭವಿಷ್ಯ ನಿಜವಾಗಿದೆ. ಕಾಂಗ್ರೆಸ್ ಬೆಂಬಲಿತರೇ ಹೆಚ್ಚಿದ್ದ ಹುನಗುಂದ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಷರೀಪಸಿಂಗ್ ಶಿಗ್ಗಟ್ಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಬೆಂಬಲಿತ ಜ್ಯೋತಿ‌ ಮರಿಯಪ್ಪ ಮೇತ್ರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಂದಿಕಟ್ಟಾ ಗ್ರಾಪಂ..! ಇನ್ನು ನಂದಿಕಟ್ಟಾ ಗ್ರಾಮ ಪಂಚಾಯತನಲ್ಲಿ ಕಾಂಗ್ರೆಸ್ ಬೆಂಬಲಿತ ಸಂತೋಷ ಪರಶುರಾಮ್ ಭೋಸಲೇ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದ್ರಂತೆ, ಉಪಾಧ್ಯಕ್ಷರಾಗಿ ಮಾರಕ್ಕ ಸಣ್ಣ ಭೀಮಣ್ಣ ದುರಮುರ್ಗಿ ಆಯ್ಕೆಯಾಗಿದ್ದಾರೆ. ಚೌಡಳ್ಳಿ ಗ್ರಾಪಂ..! ಅದ್ರಂತೆ ಚೌಡಳ್ಳಿ ಗ್ರಾಮ ಪಂಚಾಯತಿಗ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಶ್ರೀಮತಿ ಬಶಿರಾಭಿ ಮೌಲಾ ಸಾಬ್ ನದಾಫ್ ಆಯ್ಕೆಯಾಗಿದ್ದಾರೆ. ಹಾಗೇ, ಸುನಿಲ್ ಆದು ರಾಥೋಡ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಲಗಾಂವ್ ಗ್ರಾಪಂ..! ಸಾಲಗಾಂವ್ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಗಣಪತಿ ದೇವಿಂದ್ರಪ್ಪ ಬಾಳಮ್ಮನವರ, ಉಪಾಧ್ಯಕ್ಷರಾಗಿ ಶ್ರೀಮತಿ ರೇಖಾ...

ಹುನಗುಂದ ಗ್ರಾಪಂ ಅಧ್ಯಕ್ಷರ ಚುನಾವಣೆ: “ಕೈ” ಕಲಹದಲ್ಲಿ ಅರಳತ್ತಾ ಕಮಲ..? ಅಷ್ಟಕ್ಕೂ “ಅಂದರ್-ಬಾಹರ್” ಆಟದಲ್ಲಿ ಅಧ್ಯಕ್ಷ ಪಟ್ಟ ಯಾರಿಗೆ..?

ಹುನಗುಂದ ಗ್ರಾಪಂ ಅಧ್ಯಕ್ಷರ ಚುನಾವಣೆ: “ಕೈ” ಕಲಹದಲ್ಲಿ ಅರಳತ್ತಾ ಕಮಲ..? ಅಷ್ಟಕ್ಕೂ “ಅಂದರ್-ಬಾಹರ್” ಆಟದಲ್ಲಿ ಅಧ್ಯಕ್ಷ ಪಟ್ಟ ಯಾರಿಗೆ..?

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿಗೆ ನಾಳೆ ಬುಧವಾರ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಹುತೇಕ ಹುನಗುಂದ ಗ್ರಾಮ ಪಂಚಾಯತಿಯ ಅಧ್ಯಕ್ಷ ಗಾದಿಯಲ್ಲಿ ಅಚ್ಚರಿಯ ಅಭ್ಯರ್ಥಿ ಖುರ್ಚಿ ಏರುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ. “ಅ” ವರ್ಗಕ್ಕೆ ಮೀಸಲು..! ಅಂದಹಾಗೆ, ಕಾಂಗ್ರೆಸ್ ಬೆಂಬಲಿತ 8 ಸದಸ್ಯರನ್ನು ಹೊಂದಿರೋ ಹುನಗುಂದ ಗ್ರಾಮ ಪಂಚಾಯತಿಯಲ್ಲಿ, ಬಿಜೆಪಿ ಬೆಂಬಲಿತ 6 ಜನ ಸದಸ್ಯರಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಯಲ್ಲಮ್ಮ ಇಟ್ಲಾಪುರ ಅಧ್ಯಕ್ಷರಾಗಿದ್ದರು. ಆದ್ರೆ, ಇವಾಗ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಒಳ ಏಟುಗಳ ಹೊಡೆತ ಬೀಳುವ ಎಲ್ಲಾ ಸಾಧ್ಯತೆ ಇದ್ದು ಈ ಬಾರಿ ಅಚ್ಚರಿಯ ಫಲಿತಾಂಶದ ನಿರೀಕ್ಷೆ ಇದೆ. “ಅ” ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲು ಘೋಷಣೆಯಾಗಿದ್ದು, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಪದವಿ ಮೀಸಲಾಗಿದೆ. ಹೀಗಾಗಿ, ಕಾಂಗ್ರೆಸ್ ನಲ್ಲಿ ಇಬ್ಬರು ಮಹಿಳೆಯರ ನಡುವೆ ತೀವ್ರ ಜಿದ್ದಾಜಿದ್ದು ಏರ್ಪಟ್ಟಿದ್ದು ಇವರೀರ್ವರ ಗುದ್ದಾಟದಲ್ಲಿ ಮೂರನೇ ಅಭ್ಯರ್ಥಿ ಗೆ ಪಟ್ಟ ಒಲಿಯೊ ಸಾಧ್ಯತೆ ಇದೆ....

ಮುಂಡಗೋಡ ತಾಲೂಕಿನ ಈ ಭಾಗಗಳಲ್ಲಿ ಇಂದು ಕರೆಂಟ್ ಇರಲ್ಲ..! ಎಲ್ಲೇಲ್ಲಿ ಗೊತ್ತಾ..?

ಮುಂಡಗೋಡ ತಾಲೂಕಿನ ಈ ಭಾಗಗಳಲ್ಲಿ ಇಂದು ಕರೆಂಟ್ ಇರಲ್ಲ..! ಎಲ್ಲೇಲ್ಲಿ ಗೊತ್ತಾ..?

ಮುಂಡಗೋಡ ಪಟ್ಟಣವೂ ಸೇರಿದಂತೆ, ತಾಲೂಕಿನ ಹಲವು ಭಾಗಗಳಲ್ಲಿ ಇವತ್ತು ಮಂಗಳವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮುಂಡಗೋಡ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಹೆಸ್ಕಾಂ ಮುಂಡಗೋಡ ಉಪ ವಿಭಾಗದಲ್ಲಿ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಹೊಸ ಬ್ಯಾಟರಿ ಯೂನಿಟ್ ಗಳ ಅಳವಡಿಕೆ ಹಾಗೂ ತುರ್ತು ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಇಂದು ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪವರ್ ಕಟ್ ಇರಲಿದೆ. ಎಲ್ಲೆಲ್ಲಿ ಪವರ್ ಕಟ್..? ಮುಂಡಗೋಡ ಪಟ್ಟಣ, ಟಿಬೇಟಿಯನ್ ಕಾಲೋನಿ, ಬಾಚಣಕಿ, ನಂದಿಕಟ್ಟಾ, ಇಂದೂರು, ಹುನಗುಂದ, ಮೈನಳ್ಳಿ, ಚೌಡಳ್ಳಿ, ಗುಂಜಾವತಿ, ಚಿಗಳ್ಳಿ ಹಾಗೂ ಸಾಲಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ಇರುವುದಿಲ್ಲ. ಹೀಗಾಗಿ, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಮುಂಡಗೋಡ ಉಪವಿಭಾಗದಿಂದ ಪ್ರಕಟಣೆ ಮೂಲಕ ತಿಳಿಸಲಾಗಿದೆ.

error: Content is protected !!