ಮುಂಡಗೋಡ ತಾಲೂಕಿನ 7 ಗ್ರಾಪಂ ಗಳ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ಸಂಪೂರ್ಣ ವಿವರ..!

ಮುಂಡಗೋಡ ತಾಲೂಕಿನ 7 ಗ್ರಾಮ ಪಂಚಾಯತಿಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ‌. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ನಡೆದಿರೋ ಆಯ್ಕೆ ಪ್ರಕ್ರಿಯೆ ಹಲವು ಕುತೂಹಲಗಳ ನಡುವೆ, ಜಿದ್ದಾಜಿದ್ದಿನ ಮದ್ಯೆ ಕೊನೆಗೂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆಗಳು ನಡೆದು ಫಲಿತಾಂಶ ಹೊರಬಿದ್ದಿದೆ. ಹಾಗಿದ್ರೆ, ಯಾವ್ಯಾವ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿದೆ..? ಹಾಗಿದ್ರೆ ನೂತನ ಅಧ್ಯಕ್ಷ ಉಪಾಧ್ಯಕ್ಷರುಗಳು ಯಾರ್ಯಾರು..? ಇಲ್ಲಿದೆ ಫುಲ್ ಡಿಟೇಲ್ಸ್..!

ಇಂದೂರು ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಇಂದೂರು ಗ್ರಾಪಂ..!
ಕುತೂಹಲಕ್ಕೆ ಕಾರಣವಾಗಿದ್ದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯ ರೋಚಕ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಬೆಂಬಲಿತರಲ್ಲೇ ಎರಡು ಬಣಗಳಾಗಿ‌ ಮಾರ್ಪಟ್ಟು ಕೊನೆಗೂ ಶಶಿಧರ್ ಪಕ್ಕೀರಪ್ಪ ಪರವಾಪುರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ ಕೊಪ್ಪ ಗ್ರಾಮದ ಕಸ್ತೂರಿ ನಾಗಪ್ಪ ಹರಿಜನ್ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ, ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಅಧ್ಯಕ್ಷ ಸ್ಥಾನದ ಆಯ್ಕೆ ಕಸರತ್ತು ಕೊನೆಗೂ ಬಿಜೆಪಿ ಬಣ ರಾಜಕೀಯದಲ್ಲಿ ಒಂದು ಕೊಟ್ಟು ಮತ್ತೊಂದು ಪಡೆದಂತಾಗಿದೆ.

ಚಿಗಳ್ಳಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಚಿಗಳ್ಳಿ ಗ್ರಾಪಂ..!
ಚಿಗಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಅದ್ಯಕ್ಷರಾಗಿ ಪುಷ್ಪಾ ಕಲ್ಮೇಶ ಗೋಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ ಮಮತಾ ತಿರುಪತಿ ವಡ್ಡರ್ ರವರು ಚುನಾವಣೆ ಮೂಲಕ ಆಯ್ಕೆ ಆಗಿರುತ್ತಾರೆ. ಇದ್ರೊಂದಿಗೆ ಚಿಗಳ್ಳಿ ಪಂಚಾಯತಿಯಲ್ಲಿ ಕೈ ಪಡೆಯ ಸ್ತ್ರೀ ಶಕ್ತಿಯ ಪರ್ವ ಶುರುವಾದಂತಾಗಿದೆ.

ಮೈನಳ್ಳಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಮೈನಳ್ಳಿ ಗ್ರಾಪಂ..!
ಮೈನಳ್ಳಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಗ್ಗುಬಾಯಿ ವಾಗು ಪಟಗಾರೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿಯೂ ಬಿಜೆಪಿ ಬೆಂಬಲಿತ ನಾಗರಾಜ ಓಬಳಪ್ಪ ಪೂಜಾರ ಆಯ್ಕೆಯಾಗಿರುತ್ತಾರೆ. ಇದ್ರೊಂದಿಗೆ ಮೈನಳ್ಳಿ ಗ್ರಾಪಂ ಬಿಜೆಪಿ ತೆಕ್ಕೆಗೆ ಜಾರಿದಂತಾಗಿದೆ.

ಕೋಡಂಬಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಕೋಡಂಬಿ ಗ್ರಾಪಂ..!
ಕೋಡಂಬಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರೇಮಾ ಕೃಷ್ಣ ಕೋರವರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹಮ್ಮದ್ ಸಾದಿಕ್ ಮೋದಿನ ಸಾಬ್ ಮುಲ್ಲಾ ಆಯ್ಕೆಯಾಗಿದ್ದಾರೆ‌.

ನಾಗನೂರ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ನಾಗನೂರ್ ಗ್ರಾಪಂ..!
ನಾಗನೂರು ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಯಶೋದಾ ಗಣಪತಿ ಪಾಟೀಲ್ ಚುನಾಯಿತರಾಗಿದ್ದಾರೆ. ಹಾಗೆನೇ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಂಗಾರವ್ವ ಬಸಲಿಂಗಪ್ಪ ಸುಣಗಾರ ಆಯ್ಕೆಯಾಗಿದ್ದಾರೆ.

ಕಾತೂರು ಗ್ರಾಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರು

ಕಾತೂರು ಗ್ರಾಪಂ..!
ಕಾತೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರೇಮಾ ಗುಡದಯ್ಯ ಹರಿಜನ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರೇಣುಕಾ ರಾಮಣ್ಣ ಮಾಯಣ್ಣನವರ್ ಆಯ್ಕೆ ಆಗಿದ್ದಾರೆ.

ಮಳಗಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಮಳಗಿ ಗ್ರಾಪಂ..!
ಮಳಗಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕಸ್ತೂರಿ ಪ್ರಕಾಶ ತಳವಾರ ಆಯ್ಕೆಯಾಗಿದ್ದಾರೆ.
ಇನ್ನು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರೇಣುಕಾ ಅಣ್ಣಪ್ಪ ನಾಯ್ಕ್ ಆಯ್ಕೆ ಆಗಿದ್ದಾರೆ.

error: Content is protected !!