ಮುಂಡಗೋಡ ಪಟ್ಟಣವೂ ಸೇರಿದಂತೆ, ತಾಲೂಕಿನ ಹಲವು ಭಾಗಗಳಲ್ಲಿ ಇವತ್ತು ಮಂಗಳವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮುಂಡಗೋಡ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಸ್ಕಾಂ ಮುಂಡಗೋಡ ಉಪ ವಿಭಾಗದಲ್ಲಿ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಹೊಸ ಬ್ಯಾಟರಿ ಯೂನಿಟ್ ಗಳ ಅಳವಡಿಕೆ ಹಾಗೂ ತುರ್ತು ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಇಂದು ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪವರ್ ಕಟ್ ಇರಲಿದೆ.

ಎಲ್ಲೆಲ್ಲಿ ಪವರ್ ಕಟ್..?
ಮುಂಡಗೋಡ ಪಟ್ಟಣ, ಟಿಬೇಟಿಯನ್ ಕಾಲೋನಿ, ಬಾಚಣಕಿ, ನಂದಿಕಟ್ಟಾ, ಇಂದೂರು, ಹುನಗುಂದ, ಮೈನಳ್ಳಿ, ಚೌಡಳ್ಳಿ, ಗುಂಜಾವತಿ, ಚಿಗಳ್ಳಿ ಹಾಗೂ ಸಾಲಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ಇರುವುದಿಲ್ಲ. ಹೀಗಾಗಿ, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಮುಂಡಗೋಡ ಉಪವಿಭಾಗದಿಂದ ಪ್ರಕಟಣೆ ಮೂಲಕ ತಿಳಿಸಲಾಗಿದೆ.

error: Content is protected !!