ಮುಂಡಗೋಡ ತಾಲೂಕಿನ 8 ಗ್ರಾಮ ಪಂಚಾಯತಿಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ನೂತನ ಅಧ್ಯಕ್ಷರು ಯಾರ್ಯಾರು ಗೊತ್ತಾ..?

ಮುಂಡಗೋಡ ತಾಲೂಕಿನ 8 ಗ್ರಾಮ ಪಂಚಾಯತಿಗಳಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿದೆ.

ಹುನಗುಂದ ಗ್ರಾಪಂ ನೂತನ ಅಧ್ಯಕ್ಷ ಷರೀಪಸಿಂಗ್

ಹುನಗುಂದ ಗ್ರಾಪಂ..!
ಪಬ್ಲಿಕ್ ಫಸ್ಟ್ ನ್ಯೂಸ್ ನಿನ್ನೆಯೇ ನುಡಿದಿದ್ದ ಭವಿಷ್ಯ ನಿಜವಾಗಿದೆ. ಕಾಂಗ್ರೆಸ್ ಬೆಂಬಲಿತರೇ ಹೆಚ್ಚಿದ್ದ ಹುನಗುಂದ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಷರೀಪಸಿಂಗ್ ಶಿಗ್ಗಟ್ಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಬೆಂಬಲಿತ ಜ್ಯೋತಿ‌ ಮರಿಯಪ್ಪ ಮೇತ್ರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಂದಿಕಟ್ಟಾ ಗ್ರಾಪಂ ನೂತನ ಅಧ್ಯಕ್ಷ ಸಂತೋಷ ಭೋಸಲೆ

ನಂದಿಕಟ್ಟಾ ಗ್ರಾಪಂ..!
ಇನ್ನು ನಂದಿಕಟ್ಟಾ ಗ್ರಾಮ ಪಂಚಾಯತನಲ್ಲಿ ಕಾಂಗ್ರೆಸ್ ಬೆಂಬಲಿತ ಸಂತೋಷ ಪರಶುರಾಮ್ ಭೋಸಲೇ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದ್ರಂತೆ, ಉಪಾಧ್ಯಕ್ಷರಾಗಿ ಮಾರಕ್ಕ ಸಣ್ಣ ಭೀಮಣ್ಣ ದುರಮುರ್ಗಿ ಆಯ್ಕೆಯಾಗಿದ್ದಾರೆ.

ಚೌಡಳ್ಳಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಚೌಡಳ್ಳಿ ಗ್ರಾಪಂ..!
ಅದ್ರಂತೆ ಚೌಡಳ್ಳಿ ಗ್ರಾಮ ಪಂಚಾಯತಿಗ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಶ್ರೀಮತಿ ಬಶಿರಾಭಿ ಮೌಲಾ ಸಾಬ್ ನದಾಫ್ ಆಯ್ಕೆಯಾಗಿದ್ದಾರೆ. ಹಾಗೇ,
ಸುನಿಲ್ ಆದು ರಾಥೋಡ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಾಲಗಾಂವ್ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಸಾಲಗಾಂವ್ ಗ್ರಾಪಂ..!
ಸಾಲಗಾಂವ್ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಗಣಪತಿ ದೇವಿಂದ್ರಪ್ಪ ಬಾಳಮ್ಮನವರ, ಉಪಾಧ್ಯಕ್ಷರಾಗಿ ಶ್ರೀಮತಿ ರೇಖಾ ಹನುಮಂತ ಹರಿಜನ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಗುಂಜಾವತಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಗುಂಜಾವತಿ ಗ್ರಾಪಂ..!
ಗುಂಜಾವತಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಬಾಗುಬಾಯಿ ಬಾಬು ಪಟಗಾರ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಬಾಬು ಕೋಕರೆ ಆಯ್ಕೆ ಆಗಿರುತ್ತಾರೆ.

ಪಾಳಾ ಗ್ರಾಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರು

ಪಾಳಾ ಗ್ರಾಪಂ..!
ಪಾಳಾ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚಂದ್ರುಗೌಡ ಬಸವನಗೌಡ ಶಿವನಗೌಡ್ರ ಮತ್ತು ಉಪಾಧ್ಯಕ್ಷರಾಗಿ ಜಯಂತಿ ಅಶೋಕ ಅಕ್ಕಸಾಲಿ ಅವರು ಆಯ್ಕೆಯಾಗಿದ್ದಾರೆ.

ಬಾಚಣಕಿ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಬಾಚಣಕಿ ಗ್ರಾಪಂ..!
ಬಾಚಣಕಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಫಕೀರವ್ವ ಮಲ್ಲಿಕಾರ್ಜುನ್ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಹಜರೇಸಾಬ್ ಶೇಖಅಲಿ ರವರು ಆಯ್ಕೆ ಆಗಿರುತ್ತಾರೆ.

ಓಣಿಕೇರಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು

ಓಣಿಕೇರಿ ಗ್ರಾಪಂ..!
ಇನ್ನು, ಓಣಿಕೇರಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸುರೇಶ್ ರಾಮಣ್ಣ ಸುಭಾಂಜಿ, ಉಪಾಧ್ಯಕ್ಷರಾಗಿ ಕುಬೇರಪ್ಪ ಶಿವಪ್ಪ ಕೋಣಕೆರಿ ಆಯ್ಕೆ ಆಗಿರುತ್ತಾರೆ.

error: Content is protected !!