ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಸಂಭ್ರಮ, ಆಂಜನೇಯ ಸ್ವಾಮಿಗೆ ಹೋಮ, ಹವನ..!

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಸಂಭ್ರಮ, ಆಂಜನೇಯ ಸ್ವಾಮಿಗೆ ಹೋಮ, ಹವನ..!

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತು ನವರಾತ್ರಿಯ ಸಂಭ್ರಮದಲ್ಲಿ, ಮಂತ್ರ ಘೋಷಗಳ ಸದ್ದು ರಿಂಗಣಿಸಿದೆ. ನವರಾತ್ರಿಯ ವಿಶೇಷ ಸಂದರ್ಭದಲ್ಲಿ, ಅದ್ರಲ್ಲೂ ಶನಿವಾರದ ದಿನ ಇಲ್ಲಿನ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಹೋಮ, ಹವನ ನಡೆಸಲಾಗಿದೆ. ನೂತನವಾಗಿ ಅಧಿಕಾರ ವಹಿಸಿಕೊಂಡಿರೋ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ರು.    

ಮುಂಡಗೋಡ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಮಟ್ಕಾ ದಂಧೆ..! “ಕ್ರಮ ಕೈಗೊಳ್ಳಿ ಸಾಹೇಬ್ರೇ” ಅಂತಾ ಎಸ್ಪಿಗೆ ದೂರು..!!

ಮುಂಡಗೋಡ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಮಟ್ಕಾ ದಂಧೆ..! “ಕ್ರಮ ಕೈಗೊಳ್ಳಿ ಸಾಹೇಬ್ರೇ” ಅಂತಾ ಎಸ್ಪಿಗೆ ದೂರು..!!

ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಮನೆ ಮಾತಾಗಿದೆ. ಹಳ್ಳಿ, ಹಳ್ಳಿಗಳಲ್ಲಿ ಹೆಜ್ಜೆಗೊಬ್ರು ಮಟ್ಕಾ ಬುಕ್ಕಿಗಳು ತಲೆ ಎತ್ತಿದ್ದಾರೆ, ಆದ್ರೆ ಇದನ್ನೇಲ್ಲ ಕಂಟ್ರೋಲ್ ಮಾಡಬೇಕಿದ್ದ ಪೊಲೀಸರು ಮಾತ್ರ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.. ಹಾಗಂತ, ನಾವು ಹೇಳ್ತಿಲ್ಲ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಂಡಗೋಡಿನ ಯುವ ಪಡೆ ಲಿಖಿತವಾಗಿ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದೆ. ಯಸ್, ಮುಂಡಗೋಡ ಭಜರಂಗದಳದ ಕಾರ್ಯಕರ್ತ ಮಂಜುನಾಥ್ ಪವಾರ್ ಇಂತಹದ್ದೊಂದು ದೂರನ್ನು ಎಸ್ಪಿ ಸಾಹೇಬ್ರಿಗೆ ಸಲ್ಲಿಸಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಅನ್ನೋದು ಬಡ ಜನರ ಜೀವ ಹಿಂಡ್ತಿದೆ, ಯುವ ಜನರ ದಾರಿ ತಪ್ಪಿಸ್ತಿದೆ. ಅದೇಷ್ಟೋ ಬಡ ಹೆಣ್ಣುಮಕ್ಕಳು ತಮ್ಮ ಒಂದ್ಹೊತ್ತಿನ ತುತ್ತಿಗಾಗಿ ಪರದಾಡುತ್ತಿರುವಾಗ ಈ ಮಟ್ಕಾ, ಓಸಿ ದಂಧೆ ಮುಂಡಗೋಡ ತಾಲೂಕಿನ ಬಡವರ ರಕ್ತ ಹೀರುತ್ತಿದೆ ಅಂತಾ ಆರೋಪಿಸಿದ್ದಾರೆ‌. ಪೊಲೀಸರಿಗೆ ಕೈ ಕಟ್ಟಿದ್ಯಾರು..? ಇಲ್ಲಿ, ಗಮನಿಸಬೇಕಾದ ಅಂಶವೆಂದರೆ, ತಾಲೂಕಿನಾಧ್ಯಂತ ಮಟ್ಕಾ ದಂಧೆ ಅವ್ಯಾಹತವಾಗಿ ಚಾಲ್ತಿಯಲ್ಲಿದ್ದರೂ ಮುಂಡಗೋಡ ಪೊಲೀಸರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರಂತೆ. ಹಾಗಂತ, ಮಂಜುನಾಥ್ ಪವಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ....

ಭಾರೀ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ 7 ಜನರ ಸಾವು..!

ಭಾರೀ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ 7 ಜನರ ಸಾವು..!

ಬೆಳಗಾವಿ: ಭಾರಿ ಮಳೆಗೆ ಮನೆ ಕುಸಿದು ಒಂದೇ ಮನೆಯಲ್ಲಿದ್ದ 7 ಜನರು ಸಾವು ಕಂಡ ಹೃದಯ ವಿದ್ರಾವಕ ಘಟನೆ, ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದಿದೆ. ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಭಾರೀ ಮಳೆಯಿಂದ ಕುಸಿದು ಬಿದ್ದಿದ್ದು, 7 ವರ್ಷದ ಮಗು ಸೇರಿ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು, ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲು ಅಗ್ನಿಶಾಮಕ ದಳ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ

ವಯಸ್ಸಲ್ಲದ ವಯಸ್ಸಲ್ಲಿ ಎದ್ದು ನಡೆದೆಯಲ್ಲೋ ರಾಜೇಶ್..? ವಿಧಿಯೇ ನೀನೇಷ್ಟು ಕ್ರೂರಿ..?

ವಯಸ್ಸಲ್ಲದ ವಯಸ್ಸಲ್ಲಿ ಎದ್ದು ನಡೆದೆಯಲ್ಲೋ ರಾಜೇಶ್..? ವಿಧಿಯೇ ನೀನೇಷ್ಟು ಕ್ರೂರಿ..?

ನಿಜ, ಆತ ಕಾಲ್ ಮಾಡಿದ್ದಾಗಲೇಲ್ಲ ಅಣ್ಣಾ ಅನ್ನದೇ ಮಾತಾಡ್ತಾನೇ ಇರಲಿಲ್ಲ. ಇತ್ತಿಚೆಗಷ್ಟೇ ಕಾಲ್ ಮಾಡಿದ್ದ, ಅದು ರಾತ್ರಿ ಹೊತ್ತು, ಕ್ಷೇತ್ರದ ರಾಜಕೀಯ, ಅದು, ಇದು ಅಂತೇಲ್ಲ ತುಂಬಾ ಮಾತಾಡಿದ್ದ‌‌. ತುಂಬಾ ಗೌರವಿಸ್ತಿದ್ದ, ನಿನ್ನ ಬರವಣಿಗೆಯ ಕಟ್ಟಾ ಅಭಿಮಾನಿಯಣ್ಣಾ ನಾನು ಅಂತಿದ್ದ. ಇಷ್ಟೇಲ್ಲ ಹೇಳಿದವನು ಈಗ ಏಕಾ ಏಕಿ ಯಾರಿಗೂ ಹೇಳದೇ ಕೇಳದೇ ಹೀಗೆ ನಿಂತ ಅರ ಗಳಿಗೆಯಲ್ಲೇ ಎದ್ದು ಹೊರಟು ಬಿಟ್ಟರೆ ಏನಂತಾ ಅನಕೊಳ್ಳೊದು ತಮ್ಮಾ..? ಯಾಕೆ, ರಾಜೇಶ್ ಹೀಗೆ ಮಾಡಿದೆ..? ಇಷ್ಟು ಬೇಗ ನಮ್ಮನ್ನೇಲ್ಲ ಅಗಲೋಕೆ ಮನಸ್ಸಾದ್ರೂ ಹೇಗೆ ಬಂತೋ ನಿಂಗೆ..? ಇದೇಲ್ಲ ನನ್ನೊಳಗಿನ ಕಣ್ಣೀರಿನ ಪ್ರಶ್ನೆ..! ನಿಜ, ತುಂಬಾ ಸಂಕಟವಾಗುತ್ತಿದೆ‌. ನೀನಿಲ್ಲ ಅನ್ನೋ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ ತಮ್ಮಾ..! ಪ್ರಿಯ, ಓದುಗರೇ, ರಾಜೇಶ್ ತಳವಾರ್, ಮುಂಡಗೋಡ ತಾಲೂಕಿನ ಕಟ್ಟಕಡೆಯ ಗ್ರಾಮ ಅಗಡಿಯವನು. ಬದುಕಿನಲ್ಲಿ ಬಹುದೊಡ್ಡ ಕನಸುಗಳನ್ನು ಬೆನ್ನತ್ತಿದ್ದವ, ಶ್ರಮಜೀವಿ.. ಅದೇಷ್ಟೋ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ಈಗಷ್ಟೇ ಸಮಾಜದ ಮೇಲ್ಪಂಕ್ತಿಗೆ ಬಂದಿದ್ದ, ಭರವಸೆಯ ನೀಲಿಗಣ್ಣಿನ ಹುಡುಗ. ಇಂದು ನಮ್ಮನ್ನೇಲ್ಲ ಅಗಲಿದ್ದಾನೆ.‌...

ಚೌಡಳ್ಳಿ ಗ್ರಾಪಂ ನಲ್ಲಿ ಮಹಿಳಾ ಸದಸ್ಯರ ಬದಲು ಸಂಬಂಧಿಕರದ್ದೇ ದರ್ಬಾರು..! ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು..!!

ಚೌಡಳ್ಳಿ ಗ್ರಾಪಂ ನಲ್ಲಿ ಮಹಿಳಾ ಸದಸ್ಯರ ಬದಲು ಸಂಬಂಧಿಕರದ್ದೇ ದರ್ಬಾರು..! ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು..!!

ಮುಂಡಗೋಡ: ತಾಲೂಕಿನ ಚೌಡಳ್ಳಿಯ ಹಲವು ಯುವಕರು ಸಿಡಿದು ನಿಂತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ, ಮಹಿಳಾ ಸದಸ್ಯರುಗಳ ಪತಿ, ಅಥವಾ ಸಂಬಂಧಿಕರೇ ದರ್ಬಾರು ನಡೆಸ್ತಿದಾರೆ ಅಂತಾ ಆರೋಪಿಸಿ ದೂರು ನೀಡಿದ್ದಾರೆ. ಯಸ್, ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ, ಅವರ ಸಂಬಂಧಿಕರು ಹಾಗೂ ಮಹಿಳಾ ಸದಸ್ಯರ ಪತಿ, ಹೀಗೆ ಕುಟುಂಬಸ್ಥರು ಪಂಚಾಯತ್ ಕೆಲಸಕಾರ್ಯಗಳಲ್ಲಿ ತಾವು ಅವರ ಪರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಇದನ್ನ ಖಂಡಿಸಿ ಗ್ರಾಮದ ವಿದ್ಯಾಧರ್ ಶಿವಾಜಿ ಮಾದಾಪುರ ಎಂಬುವವರ ನೇತೃತ್ವದಲ್ಲಿ, ಯುವಕರು ದಿನಾಂಕ 29.9.2021 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಅದಿನಿಯಮ 1993, ಹಾಗೂ ಸರ್ಕಾರದ ಆದೇಶದ ಪ್ರಕಾರ ಮಹಿಳಾ ಸದಸ್ಯರ ಪರವಾಗಿ ಅವರ ಕುಟುಂಬಸ್ಥರು ಹಸ್ತಕ್ಷೇಪ ಮಾಡುವುದು ಅಕ್ಷಮ್ಯ ಅಪರಾಧವೆಂದು ಕಾನೂನು ಇದೆ. ಹೀಗಿದ್ದರೂ ಪಂಚಾಯತಿಯಲ್ಲಿ ಮಹಿಳಾ ಸದಸ್ಯರುಗಳ ಸಂಬಂಧಿಕರು ದರ್ಬಾರು ಮಾಡುತ್ತಿದ್ದು, ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಅಂತಾ...

ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನ, ಹಾರ್ಡವೇರ್ ಅಂಗಡಿ ದೋಚಿದ ಖದೀಮರು..!

ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನ, ಹಾರ್ಡವೇರ್ ಅಂಗಡಿ ದೋಚಿದ ಖದೀಮರು..!

ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನವಾಗಿದೆ‌. ಹಾರ್ಡವೇರ್ ಅಂಗಡಿಯ ಸೆಟರ್ಸ್ ಮುರಿದು ಕಳ್ಳರು ಕೈಚಳಕ ತೋರಿದ್ದಾರೆ. ಅಂಗಡಿಯಲ್ಲಿದ್ದ 15 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶಿರಸಿ ರಸ್ತೆಯ ಪೆಟ್ರೊಲ್ ಬಂಕ್ ಪಕ್ಕದಲ್ಲೇ ಇರುವ ಹಾರ್ಡವೇರ್ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಹಾರ್ಡವೇರ್ ಅಂಗಡಿಯ ಕೌಂಟರಿನಲ್ಲಿದ್ದ 15 ಸಾವಿರ ರೂ. ನಗದು ದೋಚಿಕೊಂಡು ಹೋಗಿದ್ದಾರೆ. ಮುಂಡಗೋಡ ಪೊಲೀಸರು ಯಥಾರೀತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿನ್ನೆಯಷ್ಟೇ ತಾಲೂಕಿನ ಮಳಗಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು. ಇವತ್ತು ಮತ್ತದೇ ರೀತಿ ಮತ್ತೊಂದು ಕಳ್ಳತನವಾಗಿದೆ‌. ಅಂದಹಾಗೆ, ಮುಂಡಗೋಡ ಪಟ್ಟಣದಲ್ಲಿ ಕಳೆದ ಎರಡು ತಿಂಗಳಲ್ಲಿ ಇದು ಮೂರನೇ ಕಳ್ಳತನ ಪ್ರಕರಣ. ಹೀಗಾಗಿ, ಸಾರ್ವಜನಿಕರು ಆತಂಕದಲ್ಲಿದ್ದಾರೆ.

ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ..? ಇದು ನಿಜವಾ..?

ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ..? ಇದು ನಿಜವಾ..?

ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಅಂತಾ ತಿಳಿದು ಬಂದಿದೆ‌. ಇವತ್ತು ಗಾಂಧಿ ಜಯಂತಿ ಎಲ್ಲಿಯೂ ಮದ್ಯದ ಅಂಗಡಿಗಳನ್ನು ತೆರೆಯುವ ಹಾಗಿಲ್ಲ‌. ಆದ್ರೆ, ಅಗಡಿಯಲ್ಲಿ ಮಾತ್ರ ರಾಜಾರೋಶವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ, ಬಾತ್ಮಿ ತಿಳಿದು ಸ್ಥಳಕ್ಕೆ ಹೋಗಿದ್ದ ಪೊಲೀಸರಿಗೆ ಖಾತ್ರಿಯಾಗಿದೆ. ಮಾಲು ಸಮೇತ ಎಳೆದು ತಂದಿದ್ದಾರಂತೆ ಪೊಲೀಸ್ರು. ಹಾಗಂತ, ಮಾಹಿತಿಯಿದೆ, ಆದ್ರೆ, ಅಸಲು ಏನು ಅಂತಾ ಪೊಲೀಸರೇ ಹೇಳಬೇಕಿದೆ‌. ಅಷ್ಟಕ್ಕೂ ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಇರೋ ಈ ಮದ್ಯದ ಅಂಗಡಿ ಪರವಾನಿಗೆ ಪಡೆದದ್ದು ಅಲ್ಲವಂತೆ, ಆದ್ರೆ ನಿತ್ಯವೂ ಇಲ್ಲಿ ರಾಜಾರೋಶವಾಗಿ ಮದ್ಯ ಮಾರಾಟ ಮಾಡಲಾಗ್ತಿದೆ ಅಂತಾ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ದುರಂತ ಅಂದ್ರೆ ಇದೇಲ್ಲ ಇಲ್ಲಿನ ಪೊಲೀಸರಿಗೂ ಗೊತ್ತಿದೆ. ಆದ್ರೆ, ಇವತ್ತು ಗಾಂಧಿ ಜಯಂತಿಯ ಕಾರಣಕ್ಕೆ ಮದ್ಯ ಮಾರಾಟ ಮಾಡೋರನ್ನು ಪ್ರಶ್ನಿಸಲಾಗಿದೆ‌. ಅಷ್ಟೆ. ಪ್ರತೀ ಹಳ್ಳಿಗಳಲ್ಲೂ ಇದೇ ಕತೆ ಬಿಡಿ..! ಅಸಲು, ಮುಂಡಗೋಡ ತಾಲೂಕಿನ ಪ್ರತೀ ಹಳ್ಳಿಗಳಲ್ಲೂ ಮದ್ಯ ಮಾರಾಟ...

ಮಳಗಿಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ..! ಆತಂಕದಲ್ಲಿದ್ದಾರೆ ಜನ..!!

ಮಳಗಿಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ..! ಆತಂಕದಲ್ಲಿದ್ದಾರೆ ಜನ..!!

ಮುಂಡಗೋಡ: ಮಳಗಿಯಲ್ಲಿ ಕಳ್ಳರು ಮತ್ತೆ ಕೈಚಳಕ ತೋರಿದ್ದಾರೆ‌. ಇಲ್ಲಿ‌ನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸೆಟರ್ಸ್ ಮುರಿದು ಒಳನುಗ್ಗಿರೋ ಕಳ್ಳರು, ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ‌. ತಿಂಗಳಲ್ಲೇ ಇದು ಮಳಗಿಯಲ್ಲಿ ಮೂರನೇ ಕಳ್ಳತನದ ಪ್ರಕರಣವಾಗಿದೆ‌. ಹೀಗಾಗಿ, ಮಳಗಿಯಲ್ಲೇ ಠಾಣೆ ಇದ್ದರೂ ಅಲ್ಲಿನ ಪೊಲೀಸರು ಅದೇನು ಮಾಡ್ತಿದಾರೆ..? ಅನ್ನೋ ಪ್ರಶ್ನೆ ಎದುರಾಗಿದೆ‌. ನಿನ್ನೆ ತಡರಾತ್ರಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಹಿಂಬದಿಯ ಸೆಟರ್ಸ್ ಮುರಿದು ಒಳ ನುಗ್ಗಿರೋ ಕಳ್ಳರು, ಎಲ್ಲೆಂದರಲ್ಲಿ ತಡಕಾಡಿದ್ದಾರೆ. ಆದ್ರೆ, ಅದೃಷ್ಟವಶಾತ್ ಯಾವುದೇ ಹಣ, ವಸ್ತುಗಳು ಅವ್ರ ಕಣ್ಣಿಗೆ ಬಿದ್ದಿಲ್ಲ. ಹೀಗಾಗಿ, ಬರಿಗೈಲಿ ವಾಪಸ್ ಆಗಿದ್ದಾರೆ ಅನ್ನೊ ಅನುಮಾನ ವ್ಯಕ್ತವಾಗಿದೆ. ಮಳಗಿ ಉಪಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

“ಗುಂಡು ಹೊಡಿಯೋಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ವಾವ್, ಏನ್ ಮಾತಾಡಿದ್ರಿ “ಪುಟ್ಟ” ಪ್ರಶಾಂತಣ್ಣ..?

“ಗುಂಡು ಹೊಡಿಯೋಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ವಾವ್, ಏನ್ ಮಾತಾಡಿದ್ರಿ “ಪುಟ್ಟ” ಪ್ರಶಾಂತಣ್ಣ..?

“ನಾವು ಗುಂಡು ಹೊಡಿಲಿಕ್ಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ಅಯ್ಯೋ ಪ್ರಶಾಂತಣ್ಣ ನಿಮ್ಮಂತವರ ಬಾಯಲ್ಲಿ ಇಂತಹ ಮಾತಾ..? ಚುನಾವಣೆ ಅಂದಮೇಲೆ ಒಂದು ಮಾತು ಹೆಚ್ಚು, ಒಂದು ಮಾತು ಕಡಿಮೆ ಇದ್ದೇ ಇರತ್ತೆ, ಅಷ್ಟಕ್ಕೇ ಗುಂಡಿನ ದಾಳಿಗಳ ಮಾತು ಹೇಳೋದಾ..? ಅಷ್ಟಕ್ಕೂ ಆರ್.ವಿ.ದೇಶಪಾಂಡೆಯವರ ಸುಪುತ್ರರಾಗಿರೋ ನಿಮಗೆ ಇಂತಹ ಮಾತುಗಳು ಸರಿಕಾಣತ್ತಾ..? ಹಾಗಂತ, ನಿಮ್ಮ ಬಾಯಲ್ಲಿ ಆ ನಿಮ್ಮ ಗುಂಡಿನ ಸದ್ದು ಕೇಳಿದವರು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದಾರೆ. ಅದೇನಂದ್ರು ಪ್ರಶಾಂತಣ್ಣ ಕೇಳಿಬಿಡಿ..! ನಿಜ, ಇಂತಹದ್ದೊಂದು, “ಗುಂಡಿನ” ಮಾತನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ್ ದೇಶಪಾಂಡೆ ಬನವಾಸಿ ಸಮೀಪದ ಬಿಸಲಕೊಪ್ಪದಲ್ಲಿ ಭಾವಾವೇಶದಲ್ಲಿ ಆಡಿ ಹೋಗಿದ್ದಾರೆ. ಆದ್ರೆ, ಈ ಮಾತು ಆಡಿ ಹೋದ ಗಳಿಗೆಯಿಂದ ಒಂದಿಷ್ಟು ಚರ್ಚೆಗಳನ್ನೂ ಹುಟ್ಟು ಹಾಕಿದ್ದಾರೆ. ಅಷ್ಟಕ್ಕೂ ಏನ್ರಿ ನಿಮ್ಮ ಸಂದೇಶ..? ನಿಜ, ಯಾವುದೇ ಪಕ್ಷವಿರಲಿ ಆ ಪಕ್ಷಗಳಿಗೆ ಕಾರ್ಯಕರ್ತರೇ ಜೀವಾಳ, ಕಾರ್ಯಕರ್ತರ ಸಲುವಾಗಿ ನಾಯಕನೆನಿಸಿಕೊಂಡವನು ಯಾವತ್ತೂ ಬೆನ್ನೆಲುಬಾಗೇ ಇರ್ತಾನೆ, ಇರಬೇಕು ಕೂಡ. ಅದು ಎಲ್ಲಾ ಪಕ್ಷಗಳ ತತ್ವ....

ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟವಾಯ್ತು ಬಿಜೆಪಿ ಅಸಮಾಧಾನ..! ಛೇ, ಏನಿದೇಲ್ಲ..?

ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟವಾಯ್ತು ಬಿಜೆಪಿ ಅಸಮಾಧಾನ..! ಛೇ, ಏನಿದೇಲ್ಲ..?

ಮುಂಡಗೋಡ ಬಿಜೆಪಿಯ ಕಾರ್ಯಕರ್ತರ ಒಳ ಗುದ್ದಾಟ ಮುಗಿಯುವ ಲಕ್ಷಣಗಳು ಸದ್ಯಕ್ಕಂತೂ ಕಾಣ್ತಿಲ್ಲ. ಅದ್ಯಾವ ಕಾರಣಕ್ಕೋ ಏನೋ ಹಲವ್ರಿಗೆ ಅಸಮಾಧಾನ ಅನ್ನೋದು ಒಳಗೊಳಗೇ ಕುದಿಯುತ್ತಿದೆ. ಹೀಗಾಗಿ, ಇಲ್ಲಿನ ಬಿಜೆಪಿ ಕಾರ್ಯಕರ್ತರ ಒಳನೋವು ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟಗೊಳ್ತಿವೆ. ಒಂದು ಕಣ್ಣಿಗೆ ಸುಣ್ಣ..! ಅಸಲು, ಮುಂಡಗೋಡ ಬಿಜೆಪಿಯಲ್ಲಿ ಕಾರ್ಯಕರ್ತರ ನೋವು ಕೇಳುವವರೇ ಇಲ್ವಾ..? ಕಾರ್ಯಕರ್ತರಲ್ಲಿ ಮುಖಂಡರ ನಡುವೆ ಅದೇಷ್ಟರ ಮಟ್ಟಿಗೆ ಗುಂಪುಗಾರಿಕೆಯಿದೆಯೋ ಅದೇಲ್ಲ ಜಾತಿಯಾದಾರಿತವಾ..? ಜಾತಿಗೊಂದು ಬಣ ಸೃಷ್ಟಿಯಾಗಿದೆಯಾ ಕಮಲ ಪಡೆಯಲ್ಲಿ..? ಇಂತಹ ಅನುಮಾನಗಳು ಸದ್ಯಕ್ಕಂತೂ ತಲೆ ಚಿಟ್ಟು ಹಿಡಿಸಿದೆ. ಅಷ್ಟಕ್ಕೂ ಇದನ್ನೇಲ್ಲ ಯಾಕಿಲ್ಲಿ ಹೇಳ್ತಿದಿವಿ ಅಂದ್ರೆ, ಇವತ್ತು ಮುಂಡಗೋಡಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ, ಬಿಜೆಪಿಯ ಓರ್ವ ಕಾರ್ಯಕರ್ತ ನೇರವಾಗಿ ಒಂದು ಸವಾಲು ಹಾಕಿದ್ದಾರೆ. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ತಿರಾ ಅಂತಾ ನೇರವಾಗಿ ಪ್ರಶ್ನಿಸಿದ್ದಾನೆ. ಅದಷ್ಟೇ ಆಗಿದ್ರೆ ಏನೋ ಬಿಡು ಅಂತಾ ಸುಮ್ಮನೇ ಇರಬಹುದಿತ್ತು. ಆದ್ರೆ, ಆ ಕಾರ್ಯಕರ್ತ, ಈ ಬಾರಿ ಮರಾಠರ ತಾಕತ್ತು ಏನು ಅನ್ನೋದನ್ನ ತೋರಿಸ್ತಿವಿ ಅಂತಾ...

error: Content is protected !!