ಮುಂಡಗೋಡ: ತಾಲೂಕಿನ ಚೌಡಳ್ಳಿಯ ಹಲವು ಯುವಕರು ಸಿಡಿದು ನಿಂತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ, ಮಹಿಳಾ ಸದಸ್ಯರುಗಳ ಪತಿ, ಅಥವಾ ಸಂಬಂಧಿಕರೇ ದರ್ಬಾರು ನಡೆಸ್ತಿದಾರೆ ಅಂತಾ ಆರೋಪಿಸಿ ದೂರು ನೀಡಿದ್ದಾರೆ.

ಯಸ್, ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ, ಅವರ ಸಂಬಂಧಿಕರು ಹಾಗೂ ಮಹಿಳಾ ಸದಸ್ಯರ ಪತಿ, ಹೀಗೆ ಕುಟುಂಬಸ್ಥರು ಪಂಚಾಯತ್ ಕೆಲಸಕಾರ್ಯಗಳಲ್ಲಿ ತಾವು ಅವರ ಪರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಇದನ್ನ ಖಂಡಿಸಿ ಗ್ರಾಮದ ವಿದ್ಯಾಧರ್ ಶಿವಾಜಿ ಮಾದಾಪುರ ಎಂಬುವವರ ನೇತೃತ್ವದಲ್ಲಿ, ಯುವಕರು ದಿನಾಂಕ 29.9.2021 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಅದಿನಿಯಮ 1993, ಹಾಗೂ ಸರ್ಕಾರದ ಆದೇಶದ ಪ್ರಕಾರ ಮಹಿಳಾ ಸದಸ್ಯರ ಪರವಾಗಿ ಅವರ ಕುಟುಂಬಸ್ಥರು ಹಸ್ತಕ್ಷೇಪ ಮಾಡುವುದು ಅಕ್ಷಮ್ಯ ಅಪರಾಧವೆಂದು ಕಾನೂನು ಇದೆ. ಹೀಗಿದ್ದರೂ ಪಂಚಾಯತಿಯಲ್ಲಿ ಮಹಿಳಾ ಸದಸ್ಯರುಗಳ ಸಂಬಂಧಿಕರು ದರ್ಬಾರು ಮಾಡುತ್ತಿದ್ದು, ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಅಂತಾ ಮನವಿ ಮಾಡಿದ್ದಾರೆ.

***********

ಜಾಹೀರಾತು

error: Content is protected !!