ನಿಜ, ಆತ ಕಾಲ್ ಮಾಡಿದ್ದಾಗಲೇಲ್ಲ ಅಣ್ಣಾ ಅನ್ನದೇ ಮಾತಾಡ್ತಾನೇ ಇರಲಿಲ್ಲ. ಇತ್ತಿಚೆಗಷ್ಟೇ ಕಾಲ್ ಮಾಡಿದ್ದ, ಅದು ರಾತ್ರಿ ಹೊತ್ತು, ಕ್ಷೇತ್ರದ ರಾಜಕೀಯ, ಅದು, ಇದು ಅಂತೇಲ್ಲ ತುಂಬಾ ಮಾತಾಡಿದ್ದ. ತುಂಬಾ ಗೌರವಿಸ್ತಿದ್ದ, ನಿನ್ನ ಬರವಣಿಗೆಯ ಕಟ್ಟಾ ಅಭಿಮಾನಿಯಣ್ಣಾ ನಾನು ಅಂತಿದ್ದ. ಇಷ್ಟೇಲ್ಲ ಹೇಳಿದವನು ಈಗ ಏಕಾ ಏಕಿ ಯಾರಿಗೂ ಹೇಳದೇ ಕೇಳದೇ ಹೀಗೆ ನಿಂತ ಅರ ಗಳಿಗೆಯಲ್ಲೇ ಎದ್ದು ಹೊರಟು ಬಿಟ್ಟರೆ ಏನಂತಾ ಅನಕೊಳ್ಳೊದು ತಮ್ಮಾ..? ಯಾಕೆ, ರಾಜೇಶ್ ಹೀಗೆ ಮಾಡಿದೆ..? ಇಷ್ಟು ಬೇಗ ನಮ್ಮನ್ನೇಲ್ಲ ಅಗಲೋಕೆ ಮನಸ್ಸಾದ್ರೂ ಹೇಗೆ ಬಂತೋ ನಿಂಗೆ..? ಇದೇಲ್ಲ ನನ್ನೊಳಗಿನ ಕಣ್ಣೀರಿನ ಪ್ರಶ್ನೆ..! ನಿಜ, ತುಂಬಾ ಸಂಕಟವಾಗುತ್ತಿದೆ. ನೀನಿಲ್ಲ ಅನ್ನೋ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ ತಮ್ಮಾ..!
ಪ್ರಿಯ, ಓದುಗರೇ, ರಾಜೇಶ್ ತಳವಾರ್, ಮುಂಡಗೋಡ ತಾಲೂಕಿನ ಕಟ್ಟಕಡೆಯ ಗ್ರಾಮ ಅಗಡಿಯವನು. ಬದುಕಿನಲ್ಲಿ ಬಹುದೊಡ್ಡ ಕನಸುಗಳನ್ನು ಬೆನ್ನತ್ತಿದ್ದವ, ಶ್ರಮಜೀವಿ.. ಅದೇಷ್ಟೋ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ಈಗಷ್ಟೇ ಸಮಾಜದ ಮೇಲ್ಪಂಕ್ತಿಗೆ ಬಂದಿದ್ದ, ಭರವಸೆಯ ನೀಲಿಗಣ್ಣಿನ ಹುಡುಗ. ಇಂದು ನಮ್ಮನ್ನೇಲ್ಲ ಅಗಲಿದ್ದಾನೆ. ಕಳೆದ ಮೂರು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದ್ರೆ, ಇವತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ವಯಸ್ಸಲ್ಲದ ವಯಸ್ಸಲ್ಲಿ ನಮ್ಮನ್ನೇಲ್ಲ ಅಗಲಿರೋ ಆ ಭರವಸೆಯ ಚೇತನಕ್ಕೆ ಚಿರಶಾಂತಿ ಸಿಗಲಿ…!
ಇದಷ್ಟೇ ಪಬ್ಲಿಕ್ ಫಸ್ಟ್ ನ್ಯೂಸ್ ತಂಡದ ಶೃದ್ಧಾಂಜಲಿ..!