ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಮನೆ ಮಾತಾಗಿದೆ. ಹಳ್ಳಿ, ಹಳ್ಳಿಗಳಲ್ಲಿ ಹೆಜ್ಜೆಗೊಬ್ರು ಮಟ್ಕಾ ಬುಕ್ಕಿಗಳು ತಲೆ ಎತ್ತಿದ್ದಾರೆ, ಆದ್ರೆ ಇದನ್ನೇಲ್ಲ ಕಂಟ್ರೋಲ್ ಮಾಡಬೇಕಿದ್ದ ಪೊಲೀಸರು ಮಾತ್ರ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.. ಹಾಗಂತ, ನಾವು ಹೇಳ್ತಿಲ್ಲ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಂಡಗೋಡಿನ ಯುವ ಪಡೆ ಲಿಖಿತವಾಗಿ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದೆ.

ವಾಟ್ಸಾಪ್ ಮೂಲಕವೂ ದೂರು

ಯಸ್, ಮುಂಡಗೋಡ ಭಜರಂಗದಳದ ಕಾರ್ಯಕರ್ತ ಮಂಜುನಾಥ್ ಪವಾರ್ ಇಂತಹದ್ದೊಂದು ದೂರನ್ನು ಎಸ್ಪಿ ಸಾಹೇಬ್ರಿಗೆ ಸಲ್ಲಿಸಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಅನ್ನೋದು ಬಡ ಜನರ ಜೀವ ಹಿಂಡ್ತಿದೆ, ಯುವ ಜನರ ದಾರಿ ತಪ್ಪಿಸ್ತಿದೆ. ಅದೇಷ್ಟೋ ಬಡ ಹೆಣ್ಣುಮಕ್ಕಳು ತಮ್ಮ ಒಂದ್ಹೊತ್ತಿನ ತುತ್ತಿಗಾಗಿ ಪರದಾಡುತ್ತಿರುವಾಗ ಈ ಮಟ್ಕಾ, ಓಸಿ ದಂಧೆ ಮುಂಡಗೋಡ ತಾಲೂಕಿನ ಬಡವರ ರಕ್ತ ಹೀರುತ್ತಿದೆ ಅಂತಾ ಆರೋಪಿಸಿದ್ದಾರೆ‌.

ಎಸ್ಪಿಗೆ ನೀಡಿರೋ ದೂರಿನ ಪ್ರತಿ
ಎಸ್ಪಿಗೆ ನೀಡಿರೋ ದೂರಿನ ಪ್ರತಿ

ಪೊಲೀಸರಿಗೆ ಕೈ ಕಟ್ಟಿದ್ಯಾರು..?
ಇಲ್ಲಿ, ಗಮನಿಸಬೇಕಾದ ಅಂಶವೆಂದರೆ, ತಾಲೂಕಿನಾಧ್ಯಂತ ಮಟ್ಕಾ ದಂಧೆ ಅವ್ಯಾಹತವಾಗಿ ಚಾಲ್ತಿಯಲ್ಲಿದ್ದರೂ ಮುಂಡಗೋಡ ಪೊಲೀಸರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರಂತೆ. ಹಾಗಂತ, ಮಂಜುನಾಥ್ ಪವಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹಾಗಾದ್ರೆ, ಇಲ್ಲಿನ ಪೊಲೀಸರ ಕೈ ಕಟ್ಟಿದವರ್ಯಾರು ಅನ್ನೋ ಪ್ರಶ್ನೆ ಏಳುವಂತೆ ಮಾಡಿದ್ದಾರೆ. ನಿಜ ಅಂದ್ರೆ, ಮುಂಡಗೋಡ ಠಾಣೆಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಅದೇಂಥದ್ದೇ ಜಠಿಲ ಕೇಸುಗಳಿದ್ರೂ ಗಂಟೆಗಳ ಲೆಕ್ಕದಲ್ಲಿ ಬೇಧಿಸೋ ಚತುರರಿದ್ದಾರೆ. ಅದ್ರಲ್ಲೂ ಸ್ನೇಹ ಜೀವಿಯಾಗಿರೋ ಪಿಎಸ್ ಐ ಬಸವರಾಜ್ ಮಬನೂರು, ಅಪರಾಧ ಕಂಡೊಡನೇ ನೇರ ದಾಳಿ ಮಾಡೋ ಕ್ರೈಂ ಪಿಎಸ್ ಐ ಜಕ್ಕಣ್ಣವರ್, ಇವ್ರೊಟ್ಟಿಗೆ ಅದೇಷ್ಟೋ ಕೇಸುಗಳಲ್ಲಿ ಹೆಗಲು ಕೊಟ್ಟು ಬೇಧಿಸೋ ಚಾಣಾಕ್ಷ ಪೇದೆಗಳಿದ್ದಾರೆ‌. ಅಂತದ್ದರಲ್ಲಿ, ಮಟ್ಕಾ ಅನ್ನೋ ಮಹಾನ್ ಪೆಡಂಬೂತವನ್ನು ತಾಲೂಕಿನಿಂದ ಕಿತ್ತೊಗೆಯಲು ಇವ್ರಿಗೆ ಜಸ್ಟ್ ಒಂದು ಆರ್ಡರಿನ ಅವಶ್ಯಕತೆ ಇದ್ದೇ ಇರತ್ತೆ. ಹಾಗಂತ, ಆ ಆರ್ಡರ್ ನೀಡೋರಾದ್ರೂ ಯಾರು..? ಇದೇ ಯಕ್ಷ ಪ್ರಶ್ನೆ.

ದೂರುದಾರ ಮಂಜು ಪವಾರ್

ಅಸಲು, ಓಸಿ ಅನ್ನೋ ದಂಧೆಯ ಕಿಂಗ್ ಪಿನ್ ಗಳ ಜಾಲ ಬೇಧಿಸಲು ಎಸ್ಪಿ ಸಾಹೇಬ್ರೇ ಖಡಕ್ ಆದೇಶ ನೀಡಬೇಕಿದೆ‌. ಅಂದಾಗ ಮಾತ್ರ ಮುಂಡಗೋಡ ತಾಲೂಕು ಮಟ್ಕಾ ಮುಕ್ತವಾಗಬಹುದೇನೋ..? ಏನಂತೀರಿ..?

ಎಸ್ಪಿ ಸಾಹೇಬ್ರು

 

error: Content is protected !!