ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನವಾಗಿದೆ. ಹಾರ್ಡವೇರ್ ಅಂಗಡಿಯ ಸೆಟರ್ಸ್ ಮುರಿದು ಕಳ್ಳರು ಕೈಚಳಕ ತೋರಿದ್ದಾರೆ. ಅಂಗಡಿಯಲ್ಲಿದ್ದ 15 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ನಿನ್ನೆಯಷ್ಟೇ ತಾಲೂಕಿನ ಮಳಗಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು. ಇವತ್ತು ಮತ್ತದೇ ರೀತಿ ಮತ್ತೊಂದು ಕಳ್ಳತನವಾಗಿದೆ. ಅಂದಹಾಗೆ, ಮುಂಡಗೋಡ ಪಟ್ಟಣದಲ್ಲಿ ಕಳೆದ ಎರಡು ತಿಂಗಳಲ್ಲಿ ಇದು ಮೂರನೇ ಕಳ್ಳತನ ಪ್ರಕರಣ. ಹೀಗಾಗಿ, ಸಾರ್ವಜನಿಕರು ಆತಂಕದಲ್ಲಿದ್ದಾರೆ.