ಮುಂಡಗೋಡ ಬಿಜೆಪಿಯ ಕಾರ್ಯಕರ್ತರ ಒಳ ಗುದ್ದಾಟ ಮುಗಿಯುವ ಲಕ್ಷಣಗಳು ಸದ್ಯಕ್ಕಂತೂ ಕಾಣ್ತಿಲ್ಲ. ಅದ್ಯಾವ ಕಾರಣಕ್ಕೋ ಏನೋ ಹಲವ್ರಿಗೆ ಅಸಮಾಧಾನ ಅನ್ನೋದು ಒಳಗೊಳಗೇ ಕುದಿಯುತ್ತಿದೆ. ಹೀಗಾಗಿ, ಇಲ್ಲಿನ ಬಿಜೆಪಿ ಕಾರ್ಯಕರ್ತರ ಒಳನೋವು ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟಗೊಳ್ತಿವೆ.

ಒಂದು ಕಣ್ಣಿಗೆ ಸುಣ್ಣ..!
ಅಸಲು, ಮುಂಡಗೋಡ ಬಿಜೆಪಿಯಲ್ಲಿ ಕಾರ್ಯಕರ್ತರ ನೋವು ಕೇಳುವವರೇ ಇಲ್ವಾ..? ಕಾರ್ಯಕರ್ತರಲ್ಲಿ ಮುಖಂಡರ ನಡುವೆ ಅದೇಷ್ಟರ ಮಟ್ಟಿಗೆ ಗುಂಪುಗಾರಿಕೆಯಿದೆಯೋ ಅದೇಲ್ಲ ಜಾತಿಯಾದಾರಿತವಾ..? ಜಾತಿಗೊಂದು ಬಣ ಸೃಷ್ಟಿಯಾಗಿದೆಯಾ ಕಮಲ ಪಡೆಯಲ್ಲಿ..? ಇಂತಹ ಅನುಮಾನಗಳು ಸದ್ಯಕ್ಕಂತೂ ತಲೆ ಚಿಟ್ಟು ಹಿಡಿಸಿದೆ. ಅಷ್ಟಕ್ಕೂ ಇದನ್ನೇಲ್ಲ ಯಾಕಿಲ್ಲಿ ಹೇಳ್ತಿದಿವಿ ಅಂದ್ರೆ, ಇವತ್ತು ಮುಂಡಗೋಡಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ, ಬಿಜೆಪಿಯ ಓರ್ವ ಕಾರ್ಯಕರ್ತ ನೇರವಾಗಿ ಒಂದು ಸವಾಲು ಹಾಕಿದ್ದಾರೆ. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ತಿರಾ ಅಂತಾ ನೇರವಾಗಿ ಪ್ರಶ್ನಿಸಿದ್ದಾನೆ. ಅದಷ್ಟೇ ಆಗಿದ್ರೆ ಏನೋ ಬಿಡು ಅಂತಾ ಸುಮ್ಮನೇ ಇರಬಹುದಿತ್ತು. ಆದ್ರೆ, ಆ ಕಾರ್ಯಕರ್ತ, ಈ ಬಾರಿ ಮರಾಠರ ತಾಕತ್ತು ಏನು ಅನ್ನೋದನ್ನ ತೋರಿಸ್ತಿವಿ ಅಂತಾ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

   ಆ ಕಾರ್ಯಕರ್ತ ಬರೆದಿದ್ದು ಹೀಗೆ..!

“ನೀವು ಹೇಳಿದವರೇ ಪಕ್ಷದ ಕ್ಯಾಂಡಿಡೇಟ್ ಆದ್ರೆ, ನೀವು ಮಾಡಿದ್ದೇನು ಸರ್..? ಒಂದು ಕಣ್ಣಿಗೆ ಸುಣ್ಣಾ ಒಂದು ಕಣ್ಣಿಗೆ ಬೆಣ್ಣಿ ಮಾಡಿದ್ರಿ. ನಿಮಗೆ ನೇರವಾಗಿ ಮಾತಾಡಬೇಕು ನಾನು. ಪಕ್ಷ ತೊರಿಯಲ್ಲ, ಆದ್ರೆ ಈ ಬಾರಿ ನೋಡ್ತಿವಿ, ಮರಾಠರು ನಾವು ನೋಡ್ತಿರಿ.

ನನಗೆ ನೋವಾಗಿದೆ, ತಾಲೂಕಾ ಅಧ್ಯಕ್ಷರು ಮಾತಾಡಲಿ, ನಾನೂ ಮಾತಾಡ್ತಿನಿ..”

ಹೀಗೆ ಬಿಜೆಪಿ ಕಾರ್ಯಕರ್ತನೊಬ್ಬ ವಾಟ್ಸ್ ಅಪ್ ಗ್ರೂಪ್ ನಲ್ಲಿ ನೋವು ತೋಡಿಕೊಂಡಿದ್ದಾನೆ.

ಹಾಗಾದ್ರೆ ಏನಿದು ಹಕೀಕತ್ತು..?
ಅಂದಹಾಗೆ, ವಾಟ್ಸ್ ಅಪ್ ನಲ್ಲಿ ಹಾಗೆ ನೋವು ಹಂಚಿಕೊಂಡಿದ್ದವರು ಯಾರು..? ಅವರ ನೋವಿಗೆ ಅಸಲೀ ಕಾರಣವಾದ್ರೂ ಏನು ಅಂತಾ ತಿಳಿಯಲು ಹೊರಟ ನಮಗೆ, ನಿಜಕ್ಕೂ ಒಂದಿಷ್ಟು ಕುತೂಹಲಕರ ಸಂಗತಿ ಗೊತ್ತಾಯ್ತು. ಅದು ಗ್ರಾಮ ಪಂಚಾಯತಿ ಚುನಾವಣೆಯ ಹೊತ್ತು. ಮುಂಡಗೋಡ ತಾಲೂಕಿನ ನಾಗನೂರು ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಇತ್ತು. ಆ ಹೊತ್ತಲ್ಲಿ, ಅದೊಂದು ವಾರ್ಡಿನಿಂದ “ಹಾಗೆ ನೋವು ತೋಡಿಕೊಂಡಿರೋ ವ್ಯಕ್ತಿ ತನ್ನ ಪತ್ನಿಯನ್ನು ಕಣಕ್ಕೆ ಇಳಿಸಿರ್ತಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿ ಇಳಿದಿರ್ತಾರಂತೆ. ಆದ್ರೆ, ಆ ವೇಳೆ ಬಿಜೆಪಿಯ ತಾಲೂಕಾ ಲೀಡರುಗಳು ಮಾಡಿರೋ ಯಡವಟ್ಟಿನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಬ್ರೂ ಸೋಲ ಬೇಕಾಯ್ತಂತೆ. ಇಬ್ಬರ ಕಾಳಗದಲ್ಲಿ ಕಾಂಗ್ರೆಸ್ ಅನಾಯಾಸವಾಗಿ ಗೆದ್ದು ಬೀಗಿತ್ತಂತೆ.

ಏನದು ಎಡವಟ್ಟು..?
ನೀವೇ ಯೋಚಿಸಿ, ಯಾವುದೇ ಪಕ್ಷವಿರಲಿ, ಅದ್ಯಾವುದೇ ಚುನಾವಣೆಯಿರಲಿ, ಅದ್ರಲ್ಲಿ ಒಂದು ಪಕ್ಷದಿಂದ, ಒಂದು ಕ್ಷೇತ್ರ ಅಥವಾ ವಾರ್ಡಿಗೆ ಒಬ್ಬರೇ ಸ್ಪರ್ಧಿಸ್ತಾರೆ ತಾನೆ..? ಆದ್ರೆ ಈ ಕಾರ್ಯಕರ್ತ ಹೇಳೋ ಪ್ರಕಾರ, ನಾಗನೂರು ಗ್ರಾಮ ಪಂಚಾಯತಿಯ ಆ ಒಂದೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತರಾಗಿ ಇಬ್ಬಿಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ರಂತೆ, ಅದೂ ಕೂಡ ತಾಲೂಕಾ ಲೀಡರುಗಳ ಕಣ್ಣೇದುರೇ. ಹಾಗಂತ, ಆ ಕಾರ್ಯಕರ್ತ ಹೇಳಿಕೊಳ್ತಾರೆ.

ಇದು ಸತ್ಯವಾ..?
ಇಲ್ಲಿ, ಒಂದಂತೂ ಅರ್ಥವಾಗಿಲ್ಲ. ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲ್ಲಬೇಕೆನ್ನುವ ಇರಾದೆ ಇತ್ತೋ ಇಲ್ವೋ..? ಹಾಗೇನಾದ್ರೂ, ಇದ್ದಿದ್ರೆ ಅದ್ಯಾಕೆ ಎರಡೆರಡು ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು. ಅಲ್ಲಿ ಇದ್ದ ಬಿಜೆಪಿ ಮತಗಳಲನ್ನೇಲ್ಲ ಒಡೆದು ಹಾಕಿ, ಕಾಂಗ್ರೆಸ್ಸಿನ ಗೆಲುವಿನ ಹಾದಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ರಾ..? ಇದೇಲ್ಲ ನಿಜಕ್ಕೂ ವಿಚಿತ್ರವೇ ಅನಿಸತ್ತೆ. ಅಷ್ಟಕ್ಕೂ, ಇದೇಲ್ಲ ಅರಿಯದೇ ಆಗಿರೋ ಯಡವಟ್ಟಾ..? ಗೊತ್ತಿಲ್ಲ. ಪಕ್ಷದಿಂದ ಒಂದೇ ವಾರ್ಡಿನಲ್ಲಿ ಇಬ್ಬಿಬ್ಬರಿಗೆ ಬೆಂಬಲ, ನೀಡಿ ಖರ್ಚಿಗೆ ಬೇಕಾದ ವ್ಯವಸ್ಥೆಯನ್ನೂ ಮಾಡಿದ್ದಾದ್ರೂ ಯಾಕೆ..? ಅಲ್ಲಿನ ಲೆಕ್ಕಾಚಾರವಾದ್ರೂ ಏನಾಗಿತ್ತು..? ಅವ್ರೇ ಉತ್ತರಿಸಬೇಕು.

ಒಂದಂತೂ ಸತ್ಯ, ಇಂತಹ ಸಣ್ಣ ಸಣ್ಣ ಸಂಗತಿಗಳೇ ತಾಲೂಕಿನ ಬಿಜೆಪಿಯಲ್ಲಿ, ಬಗೆಹರಿಸಲಾರದ ಬೃಹನ್ ಸಮಸ್ಯೆಗಳಾಗಿ ರೂಪ ತಾಳ್ತಿವೆ. ಇಲ್ಲಿ ಇದೊಂದು ಉಧಾಹರಣೆ ಮಾತ್ರ. ಇಂತಹ ಒಂದಿಲ್ಲೊಂದು ಸಮಸ್ಯೆಗಳು ಪ್ರತೀ ಬೂತ್ ಮಟ್ಟದಲ್ಲೂ ವ್ಯಾಪಿಸಿಕೊಂಡಿವೆ. ಅಸಲು, ಇಲ್ಲಿ ಶಿವರಾಮ್ ಹೆಬ್ಬಾರರಾಗಲಿ, ಅವ್ರ ಪುತ್ರ ವಿವೇಕ್ ಹೆಬ್ಬಾರರಾಗಲಿ ಏನೂ ಹೇಳದ ಸ್ಥಿತಿಯಲ್ಲಿದ್ದಾರೋ ಏನೋ..? ಯಾಕಂದ್ರೆ, ಲೋಕಲ್ ಲೀಡರುಗಳ ನಿತ್ಯದ ಗೋಳುಗಳಿಗೆ “ದೊಡ್ಡವರೇ” ಉತ್ತರಿಸಿ, ಸರಿ‌ಮಾಡುವ “ಕರ್ಮ” ಎದುರಾಗಿದೆ‌.

error: Content is protected !!