ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಅಂತಾ ತಿಳಿದು ಬಂದಿದೆ‌. ಇವತ್ತು ಗಾಂಧಿ ಜಯಂತಿ ಎಲ್ಲಿಯೂ ಮದ್ಯದ ಅಂಗಡಿಗಳನ್ನು ತೆರೆಯುವ ಹಾಗಿಲ್ಲ‌. ಆದ್ರೆ, ಅಗಡಿಯಲ್ಲಿ ಮಾತ್ರ ರಾಜಾರೋಶವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ, ಬಾತ್ಮಿ ತಿಳಿದು ಸ್ಥಳಕ್ಕೆ ಹೋಗಿದ್ದ ಪೊಲೀಸರಿಗೆ ಖಾತ್ರಿಯಾಗಿದೆ. ಮಾಲು ಸಮೇತ ಎಳೆದು ತಂದಿದ್ದಾರಂತೆ ಪೊಲೀಸ್ರು. ಹಾಗಂತ, ಮಾಹಿತಿಯಿದೆ, ಆದ್ರೆ, ಅಸಲು ಏನು ಅಂತಾ ಪೊಲೀಸರೇ ಹೇಳಬೇಕಿದೆ‌.

ಅಷ್ಟಕ್ಕೂ ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಇರೋ ಈ ಮದ್ಯದ ಅಂಗಡಿ ಪರವಾನಿಗೆ ಪಡೆದದ್ದು ಅಲ್ಲವಂತೆ, ಆದ್ರೆ ನಿತ್ಯವೂ ಇಲ್ಲಿ ರಾಜಾರೋಶವಾಗಿ ಮದ್ಯ ಮಾರಾಟ ಮಾಡಲಾಗ್ತಿದೆ ಅಂತಾ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ದುರಂತ ಅಂದ್ರೆ ಇದೇಲ್ಲ ಇಲ್ಲಿನ ಪೊಲೀಸರಿಗೂ ಗೊತ್ತಿದೆ. ಆದ್ರೆ, ಇವತ್ತು ಗಾಂಧಿ ಜಯಂತಿಯ ಕಾರಣಕ್ಕೆ ಮದ್ಯ ಮಾರಾಟ ಮಾಡೋರನ್ನು ಪ್ರಶ್ನಿಸಲಾಗಿದೆ‌. ಅಷ್ಟೆ.

ಪ್ರತೀ ಹಳ್ಳಿಗಳಲ್ಲೂ ಇದೇ ಕತೆ ಬಿಡಿ..!
ಅಸಲು, ಮುಂಡಗೋಡ ತಾಲೂಕಿನ ಪ್ರತೀ ಹಳ್ಳಿಗಳಲ್ಲೂ ಮದ್ಯ ಮಾರಾಟ ಜೋರಾಗಿದೆ‌. ಕಿರಾಣಿ ಅಂಗಡಿಗಳಲ್ಲೂ ಮದ್ಯ ಬಿಕರಿಯಾಗತ್ತೆ. ಇದೇಲ್ಲ ಆಯಾ ಸ್ಥಳೀಯ ಬೀಟ್ ಪೊಲೀಸರ ಕಣ್ಗಾವಲಿನಲ್ಲೇ ನಡೀತಿದೆ ಅನ್ನೋ ಆರೋಪಗಳೂ ಕೇಳಿ ಬರ್ತಿವೆ. ಆದ್ರೆ, ಇದೇಲ್ಲ ಗೋಳನ್ನು ಯಾರ ಎದುರು ಹೇಳೋದು ಅಂತಾ ತಾಲೂಕಿನ ಮಹಿಳೆಯರೇ ಅದೇಷ್ಟೋ ಸಾರಿ ಉಗ್ರ ರೂಪ ತಾಳಿದ್ದೂ ಇದೆ‌.

ಕೇಸು ಅಷ್ಟಕ್ಕೇ ಠುಸ್ ಅಂತೆ..!
ಇದು ಈಗಷ್ಟೇ ಬಂದ ಮಾಹಿತಿ, ಅಗಡಿಯಲ್ಲಿ, ದಾಳಿ ಮಾಡಲಾಗಿದ್ದ ಕೇಸ್ ಮುಂಡಗೋಡಿನ ವರೆಗೆ ಬರಲೇ ಇಲ್ಲವಂತೆ, ಟಿಬೇಟಿಯನ್ ಕಾಲೋನಿ ರಸ್ತೆವರೆಗೂ ಮಾಲು ಸಮೇತ ಕರೆತರಲಾಗಿತ್ತಂತೆ, ಆದ್ರೆ, ಅದು ಯಾವ ಕಾರಣಕ್ಕೋ ಗೊತ್ತಿಲ್ಲ, ಆ ಕೇಸು ಅಲ್ಲಿಗೇ ಪಂಕ್ಚರ್ ಆಯ್ತಂತೆ‌. ಗಾಂಧಿ ಜಯಂತಿಯ ದಿನ ಆಗಿರೋ ಈ ಘಟನೆಗೆ ಖುದ್ದು ಆ ಮಹಾತ್ಮನೇ ಕ್ಷಮಿಸಿದ್ರೋ ಏನೋ..? ದೇವ್ರೇ ಕಾಪಾಡು..!

error: Content is protected !!