ಚಿಗಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ, ಬಾಲಕಿ ಈಗ ಗರ್ಭಿಣಿ..! ಆರೋಪಿ ವಿರುದ್ಧ ಕೇಸ್ ದಾಖಲು

ಚಿಗಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ, ಬಾಲಕಿ ಈಗ ಗರ್ಭಿಣಿ..! ಆರೋಪಿ ವಿರುದ್ಧ ಕೇಸ್ ದಾಖಲು

ಮುಂಡಗೋಡ: ಅಪ್ರಾಪ್ತ ಬಾಲಕಿಯೋರ್ವಳಿಗೆ ಪುಸಲಾಯಿಸಿ ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ ನಡೆದಿದೆ. ಈ ಕುರಿತು ಬಾಲಕಿಯ ತಾಯಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪಿ ಮಂಜುನಾಥ ಫಕೀರಪ್ಪ ಹಂಚಿನಮನಿ ಎಂಬುವವನ ವಿರುದ್ಧ ದೂರು ದಾಖಲಿಸಿದ್ದಾರೆ. ಗಣೇಶ ಚತುರ್ಥಿಯ ಮರು ದಿನ..! ಅಂದಹಾಗೆ, ಕಳೆದ ವರ್ಷ ಗಣೇಶ ಚತುರ್ಥಿಯ ಮರುದಿನ ಮದ್ಯಾಹ್ನದ ಹೊತ್ತಲ್ಲಿ ಆರೋಪಿ ಮಂಜುನಾಥ, ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಏನೂ ಅರಿಯದ ಬಾಲಕಿಯನ್ನು ಬಳಸಿಕೊಂಡಿದ್ದಾನೆ ಅಂತಾ ದೂರಿನಲ್ಲಿ ಆರೋಪಿಸಲಾಗಿದೆ. ಆನಂತರದಲ್ಲಿ ತೋಟದ ಮನೆಯಲ್ಲಿ ನಿರಂತರವಾಗಿ ಬಾಲಕಿಯನ್ನು ಬೇಕಾದಾವಾಗಲೇಲ್ಲ ಬಳಸಿಕೊಂಡು ಗರ್ಭವತಿಯನ್ನಾಗಿ ಮಾಡಿದ್ದಾನೆ ಅಂತಾ ಬಾಲಕಿಯ ತಾಯಿ ದೂರಿದ್ದಾರೆ. ಜೀವ ಬೆದರಿಕೆ..! ಇನ್ನು, ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಮಂಜುನಾಥ, ಈ ವಿಷಯವನ್ನು ಯಾರಿಗಾದ್ರೂ ಬಾಯಿ ಬಿಟ್ರೆ ನಿನ್ನ ಕತೆ ಫಿನಿಷ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ, ಬಾಲಕಿ ಇದುವರೆಗೂ ಯಾರ ಎದುರೂ ಬಾಯಿ ಬಿಟ್ಟಿಲ್ಲ. ಆದ್ರೆ, ತನ್ನ ಮಗಳು ಗರ್ಭವತಿ ಅಂತಾ ತಿಳಿದ ಕೂಡಲೇ...

ಗುಟ್ಕಾ ಕೊಡಿಸಲಿಲ್ಲ ಅಂತಾ ಕೊ‌ಂದೇ ಬಿಟ್ಟ ಗೆಳೆಯ, ಹುಬ್ಬಳ್ಳಿಯಲ್ಲಿ 5 ರೂ. ಗುಟ್ಕಾಗಾಗಿ ಮರ್ಡರ್..!

ಗುಟ್ಕಾ ಕೊಡಿಸಲಿಲ್ಲ ಅಂತಾ ಕೊ‌ಂದೇ ಬಿಟ್ಟ ಗೆಳೆಯ, ಹುಬ್ಬಳ್ಳಿಯಲ್ಲಿ 5 ರೂ. ಗುಟ್ಕಾಗಾಗಿ ಮರ್ಡರ್..!

ಹುಬ್ಬಳ್ಳಿ: ಆನಂದ ನಗರದಲ್ಲಿ ಗುಟ್ಕಾ ಕೊಡಿಸಲಿಲ್ಲ ಅಂತಾ ರೌಡಿಶೀಟರ್ ಒಬ್ಬ ಅಮಾಯಕ ವ್ಯಕ್ತಿಗೇ ಚಾಕು ಇರಿದು ಕೊಲೆ ಮಾಡಿದ್ದಾನೆ. ಆನಂದ ನಗರದ ಮೆಹಬೂಬ್ ಕಳಸ ಹಾಗೂ ಕೊಲೆ ಮಾಡಿ ಪರಾರಿಯಾಗಿರುವ ಗೌಸ್ ಎಂಬಾತ ಪರಸ್ಪರ ಪರಿಚಯಸ್ಥರು, ನಿನ್ನೆ ಕೂಡಾ ಇಬ್ಬರು ಮಂಜುನಾಥ ನಗರದ ಬಳಿ ಇರುವ ಕೊಡೆ ಬಾರ್ ನಲ್ಲಿ ಎಣ್ಣೆ ಹೊಡೆದಿದ್ದಾರೆ. ಬಾರ್ ನಿಂದ ಹೊರಬಂದ ನಂತರ ಗೌಸ್, ಮೆಹಬೂಬ್ ಗೇ ವಿಮಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾನೆ, ಆದ್ರೆ ಮೆಹಬೂಬ್ ವಿಮಲ್ ಕೊಡಿಸಲು ಹಿಂದೇಟು ಹಾಕಿದಾಗ, ಕುಡಿದ ಮತ್ತಿನಲ್ಲಿದ್ದ ಗೌಸ್ ಮೆಹಬೂಬ್ ಗೇ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿಯುತ್ತಿದ್ದ ಹಾಗೇ ಗಂಭೀರವಾಗಿ ಗಾಯಗೊಂಡ ಮೆಹಬೂಬ್ ಕೆಲಹೊತ್ತು ದೂರ ನಡೆದುಕೊಂಡು ಹೋಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಕೂಡಲೇ ಆತನನ್ನು ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ,ಆದ್ರೆ ಅದಾಗಲೇ ಮೆಹಬೂಬ್ ನ ಉಸಿರು ನಿಂತು ಹೋಗಿದೆ. ಹೀಗಾಗಿ, ಸ್ನೇಹಿತನ ಕೊಲೆಯ ನಂತರ ಗೌಸ್ ಈಗ ಪರಾರಿಯಾಗಿದ್ದಾನೆ. ಹಳೆ ಹುಬ್ಬಳ್ಳಿ ಪೊಲೀಸರು ಆತನಿಗಾಗಿ...

ಸಾಲಗಾಂವ್ ಬಾಣಂತಿ ದೇವಿ ದೇವಸ್ಥಾನದ ಬಳಿ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಸಾಲಗಾಂವ್ ಬಾಣಂತಿ ದೇವಿ ದೇವಸ್ಥಾನದ ಬಳಿ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ಬಾಣಂತಿದೇವಿ ದೇವಸ್ಥಾನದ ಹತ್ತಿರ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಲೂಕಿನ ನಂದಿಪುರ ಗ್ರಾಮದ 26 ವರ್ಷ ವಯಸ್ಸಿನ ಪವಿತ್ರ ಶಿವಾನಂದ ಹರಕುಣಿ ಎಂಬುವವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ, ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸುವಾಗ, ಮಹಿಳೆಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಸಾಲಗಾಂವ ಬಾಣಂತಿದೇವಿ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸುರಕ್ಷಿತವಾಗಿ ಹೆರಿಗೆಯನ್ನು ಮಾಡಿಸಲಾಯಿತು. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರ್, ಚಾಲಕ ಪ್ರಕಾಶ್ ಬಾಗೇವಾಡಿ ಸೇರಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಸದ್ಯ, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ MLC ಟಿಕೆಟ್ ಅಧಿಕೃತ ಘೋಷಣೆ: ಲಕ್ಷ್ಮಣ ಸವದಿಗೆ ಜಾಕ್ ಪಾಟ್..!

ಬಿಜೆಪಿ MLC ಟಿಕೆಟ್ ಅಧಿಕೃತ ಘೋಷಣೆ: ಲಕ್ಷ್ಮಣ ಸವದಿಗೆ ಜಾಕ್ ಪಾಟ್..!

ಬೆಂಗಳೂರು: ಬಿಜೆಪಿಯ ಪರಿಷತ್ ಅಭ್ಯರ್ಥಿಗಳ ಪಟ್ಟಿ ರಿಲೀಜ್ ಆಗಿದೆ‌. ಲಕ್ಷ್ಮಣ ಸವದಿ, ಚೆಲುವಾದಿ ನಾರಾಯಣ ಸ್ವಾಮಿ, ಕೇಶವ್ ಪ್ರಸಾದ್ ಹಾಗೂ ಹೇಮಲತಾ ನಾಯಕ್ ಗೆ ಈ ಬಾರಿ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಅಚ್ಚರಿಯ ಘೋಷಣೆ ಮಾಡಿದೆ. ಲಿಂಗಾಯತ ಕೋಟಾದಡಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ., ದಲಿತ ಕೋಟಾದಡಿ ಚಲುವಾದಿ ನಾರಾಯಣಸ್ವಾಮಿ, ಮಹಿಳಾ ಹಾಗೂ ನಾಯಕ್ ಕೋಟಾದಡಿ ಹೇಮಲತಾ ನಾಯಕ್ ಗೆ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿ ಕೇಶವ್ ಪ್ರಸಾದ್ ಗೆ ಟಿಕೆಟ್ ನೀಡಲಾಗಿದೆ.

ಇಂದು ಮತ್ತೆ ಭಾರೀ ಮಳೆಯಾಗುವ ಸಂಭವ, ಎಲ್ಲೇಲ್ಲಿ ಮಳೆಯಾಗತ್ತೆ ಗೊತ್ತಾ..?

ಇಂದು ಮತ್ತೆ ಭಾರೀ ಮಳೆಯಾಗುವ ಸಂಭವ, ಎಲ್ಲೇಲ್ಲಿ ಮಳೆಯಾಗತ್ತೆ ಗೊತ್ತಾ..?

ಬೆಂಗಳೂರು: ತಮಿಳುನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಇ‌‌ದು ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದ್ರಂತೆ ದಾವಣಗೇರೆಯಲ್ಲಿ ಹೆಚ್ಚು ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಕೊಡಗು,ಹಾಸನ, ಚಿಕ್ಕಮಗಳೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಅಂತಾ ಮುನ್ಸೂಚನೆ ನೀಡಲಾಗಿದೆ.

ಬಿಜೆಪಿ MLC ಟಿಕೆಟ್ ಕುತೂಹಲ: ಚೆಲುವಾದಿ ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಬಿಜೆಪಿ ಟಿಕೆಟ್..?

ಬಿಜೆಪಿ MLC ಟಿಕೆಟ್ ಕುತೂಹಲ: ಚೆಲುವಾದಿ ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಬಿಜೆಪಿ ಟಿಕೆಟ್..?

ಬೆಂಗಳೂರು: ಬಿಜೆಪಿಯ ಪರಿಷತ್ ಅಭ್ಯರ್ಥಿಗಳ ಪಟ್ಟಿ ರಿಲೀಜ್ ಆಗಿದೆಯಾ..? ಆ ನಾಲ್ವರು ಆಕಾಂಕ್ಷಿಗಳಿಗೆ ಬಿಜೆಪಿಯ ಪ್ರಮುಖ ನಾಯಕರುಗಳಿಂದ ಪೋನ್ ಕರೆ ಬಂದಿದ್ದು, ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುವಂತೆ ಕರೆ ಮಾಡಲಾಗಿದೆ ಅನ್ನೊ ಮಾತುಗಳು ಕೇಳಿ ಬಂದಿವೆ. ಲಿಂಗರಾಜ್ ಪಾಟೀಲ್, ಚೆಲುವಾದಿ ನಾರಾಯಣ ಸ್ವಾಮಿ, ಕೇಶವ್ ಪ್ರಸಾದ್ ಹಾಗೂ ಸಿ. ಮಂಜುಳಾಗೆ ಈ ಬಾರಿ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ ಎನ್ನಲಾಗಿದೆ. ಲಿಂಗಾಯತ ಕೋಟಾದಡಿ ಲಿಂಗರಾಜ್ ಪಾಟೀಲ್ ಗೆ ಟಿಕೆಟ್ ಫಿಕ್ಸ್, ದಲಿತ ಕೋಟಾದಡಿ ಚಲುವಾದಿ ನಾರಾಯಣಸ್ವಾಮಿ, ಮಹಿಳಾ ಕೋಟಾದಡಿ ಸಿ.ಮಂಜುಳಾ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿ ಕೇಶವ್ ಪ್ರಸಾದ್ ಗೆ ಟಿಕೆಟ್ ಫಿಕ್ಸ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಭೀಕರ ರಸ್ತೆ ಅಪಘಾತ 8 ಜನರ ದುರ್ಮರಣ, 25 ಕ್ಕೂ ಹೆಚ್ಚು ಜನ್ರಿಗೆ ಗಾಯ, ಹಲವರ ಸ್ಥಿತಿ ಚಿಂತಾಜನಕ..!

ಭೀಕರ ರಸ್ತೆ ಅಪಘಾತ 8 ಜನರ ದುರ್ಮರಣ, 25 ಕ್ಕೂ ಹೆಚ್ಚು ಜನ್ರಿಗೆ ಗಾಯ, ಹಲವರ ಸ್ಥಿತಿ ಚಿಂತಾಜನಕ..!

ಹುಬ್ಬಳ್ಳಿ; ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆ ಸಾವಿನ ಹೆದ್ದಾರಿ ಎಂದು ಬಿಂಬಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯೂ ಆಗಿರೋ ಇಲ್ಲಿ, ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತೆ. ಈ ಹಿನ್ನೆಲೆಯಲ್ಲಿ ಇದನ್ನು ದಶ ಪಥ ರಸ್ತೆಯನ್ನಾಗಿಸೋಕೆ ಶಿಲನ್ಯಾಸ ನೆರವೇರಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಇದೇ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಂಟು ಜನ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ. ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿಯೇ ಆರು ಜನರ ಸಾವನ್ನಪ್ಪಿದ್ದರೆ, ಓರ್ವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿವೆ. ಕೆಲವರ ಸ್ಥಿತಿ ಗಂಭೀರವಾಗಿದೆ.

ಮುಂಡಗೋಡಿನ ಮೈನಳ್ಳಿ ಬಳಿ ಮಾರುತಿ ಇಕೊ ವಾಹನ ಪಲ್ಟಿ, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು..!

ಮುಂಡಗೋಡಿನ ಮೈನಳ್ಳಿ ಬಳಿ ಮಾರುತಿ ಇಕೊ ವಾಹನ ಪಲ್ಟಿ, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ತಾಲೂಕಿನ ಯಲ್ಲಾಪುರ ರಸ್ತೆಯ ಮೈನಳ್ಳಿ ಹಾಗೂ ಗುಂಜಾವತಿ ನಡುವೆ ಅಪಘಾತವಾಗಿದೆ. ಮಾರುತಿ ಇಕೋ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೂವರಿಗೆ ಗಾಯವಾಗಿದೆ. ದಾವಣಗೇರೆಯ ಪರಶುರಾಮ R ಆಲದಕಟ್ಟಿ (53), ಬಾಪೂಜಿ N ಕಾಳೆ (42), ಗುರುರಾಜ್ ಸಾಳಂಕಿ (35) ಗಾಯಗೊಂಡವರು. ದಾವಣಗೆರೆಯಿಂದ ಕಾರವಾರಗೆ ಮದುವೆಗೆಂದು ಹೋಗುತ್ತಿದ್ದ ದಾವಣಗೆರೆ ಮೂಲದ ಇಕೋ ವಾಹನ, ಗುಂಜಾವತಿ ಮೈನಳ್ಳಿ ಮದ್ಯೆ ಸ್ಕಿಡ್ ಆಗಿ ಅಪಘಾತವಾಗಿದೆ.‌ ಘಟನೆಯಲ್ಲಿ ಒಬ್ಬರ ಬಲಗಾಲಿಗೆ ಗಾಯವಾಗಿದೆ. ಒಬ್ಬರಿಗೆ ಬಲಗೈಗೆ ಗಾಯ ಆಗಿದೆ. ಇನ್ನೊಬ್ಬರಿಗೆ ಮೈಮೇಲೆ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ. ತಕ್ಷಣವೇ 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಸಿ ಬಳೂರು ಮತ್ತು ಚಾಲಕ ಪ್ರಕಾಶ ಬಾಗೇವಾಡಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಂದಿಕಟ್ಟಾದ ಈ ಆರೋಗ್ಯ ಕೇಂದ್ರದ “ನರ್ಸಮ್ಮ” ಬರೋದು ಲೇಟಾದ್ರೂ, ಹೋಗೋದು ಮಾತ್ರ ಫಸ್ಟೇ..!

ನಂದಿಕಟ್ಟಾದ ಈ ಆರೋಗ್ಯ ಕೇಂದ್ರದ “ನರ್ಸಮ್ಮ” ಬರೋದು ಲೇಟಾದ್ರೂ, ಹೋಗೋದು ಮಾತ್ರ ಫಸ್ಟೇ..!

ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಅನುಷ್ಟಾನಗೊಂಡಿರೋ “ಆರೋಗ್ಯ ಮತ್ತು ಕ್ಷೇಮ ಕೇಂದ್ರ” ಇದ್ದೂ ಇಲ್ಲದಂತಾಗಿದೆ. ಇಲ್ಲಿ ನೇಮಕಗೊಂಡಿರೋ ಸ್ಟಾಪ್ ನರ್ಸ್ ಮೇಡಂ ಈ ಆರೋಗ್ಯ ಕೇಂದ್ರದ ಆರೋಗ್ಯವನ್ನೇ ಹಾಳು ಮಾಡಿದ್ದಾರೆ ಅಂತಿದಾರೆ ಇಲ್ಲಿನ ಜನ. ಯಾಕಂದ್ರೆ, “ತಮಗಿಷ್ಟ ಬಂದಾಗ ಬರೋದು, ಬೇಕಾದಾಗ ಹೋಗೋದು” ಅನ್ನೋ ರೂಢಿ ಇಟ್ಕೊಂಡಿರೋ ನರ್ಸಮ್ಮ ಇಲ್ಲಿನ ಜನ್ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬರೋದು ಮದ್ಯಾಹ್ನ..! ಅಂದಹಾಗೆ, ನಂದಿಕಟ್ಟಾ ಗ್ರಾಮಸ್ಥರ ಆರೋಗ್ಯ ಕಾಪಾಡಲು ಸ್ಥಾಪನೆಗೊಂಡಿರೋ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಓರ್ವ ಅಟೆಂಡರ್ ಹಾಗೂ ಮುಖ್ಯವಾಗಿ ಓರ್ವ ಸ್ಟಾಪ್ ನರ್ಸ್ ನಿಯೋಜನೆ ಮಾಡಲಾಗಿದೆ. ನಿತ್ಯವೂ ಇಲ್ಲಿನ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಲು ಅಂತಾ ನರ್ಸ್ ಮೇಡಂ ನಿಯೋಜನೆಗೊಂಡಿದ್ದಾರೆ. ಆದ್ರೆ, ಇಲ್ಲಿ ಒಂದು ದಿನವೂ ಈ ತಾಯಿ ಸಮಯಕ್ಕೆ ಸರಿಯಾಗಿ ಬಂದೇ ಇಲ್ಲವಂತೆ. ಇದು ಸರಿನಾ..? ಅಂದಹಾಗೆ, ಬೆಳಿಗ್ಗೆ 9.30 ಕ್ಕೆ ನಿತ್ಯವೂ ಡ್ಯೂಟಿಗೆ ಹಾಜರಾಗಿ, ಸಂಜೆ 4.30 ವರೆಗೂ ತಮ್ಮ ಕರ್ತವ್ಯ ನಿಭಾಯಿಸಬೇಕಿರೋದು ಇವ್ರ...

ಸತತ ಮಳೆಯಿಂದ ಗೋವಿನಜೋಳ ಬೆಳೆದ ರೈತನ ಗೋಳು..!

ಸತತ ಮಳೆಯಿಂದ ಗೋವಿನಜೋಳ ಬೆಳೆದ ರೈತನ ಗೋಳು..!

ಮುಂಡಗೋಡ: ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಬೆಳೆದ ಗೋವಿನಜೋಳ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರೋ ಕಾರಣಕ್ಕೆ ಮೊಳಕೆಯೊಡೆದು ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ಮೌಲ್ಯದ ಗೋವಿನ ಜೋಳದ ಬೆಳೆ ನೀರಲ್ಲಿ ಹಾಕಿದಂತಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಯ ಕಾರಣಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಹೀಗಾಗಿ ರಸ್ತೆ ಮೇಲೇಲ್ಲ ಗೊವಿನಜೋಳ ಹರಡಿಕೊಂಡು ಒಣಹಾಕಲು ಹರಸಾಹಸ ಪಡ್ತಿದಾನೆ ರೈತ. ಅಲ್ಲದೇ ಸ್ವಲ್ಪ ಹೊತ್ತು ಬಿಡುವು ಕೊಟ್ಟ ಮಳೆ ಮತ್ತೆ ಕೆಲವೇ ಹೊತ್ತಲ್ಲಿ ಸುರಿಯಲು ಪ್ರಾರಂಭವಾಗತ್ತದೆ. ಹೀಗಾಗಿ ಇಡೀ ರೈತನ ಕುಟುಂಬಗಳು ಈಗ ಗೋವಿನಜೋಳದ ಒಣ ಹಾಕುವ ಕೆಲಸ ಹಾಗು ಮತ್ತೆ ಕೂಡಿಡುವ ಕೆಲಸದಲ್ಲೇ ಕಾಲ ಕಳೆಯುವಂತಾಗಿದೆ.

error: Content is protected !!