ಹೆದರಿಕೊಂಡಿದ್ದ ಹುಲಿಹೊಂಡದ ಹುಡುಗಿಗೆ ಹುರುಪು ತುಂಬಿದ ಪೊಲೀಸ್ ಇನ್ಸಪೆಕ್ಟರ್..! ಸುಖಾಂತ್ಯಗೊಂಡ ಕೇಸ್..!

ಮುಂಡಗೋಡ ಪಿಐ ಗದರಿಸಿದ್ರು ಅಂತಾ ಶಾಲೆ ಬಿಟ್ಟು ಮನೆಯಲ್ಲೇ ಕುಳಿತ ಹುಲಿಹೊಂಡದ ವಿದ್ಯಾರ್ಥಿನಿಯ ಮನೆಗೆ, ಖುದ್ದು ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ಭೇಟಿ ನೀಡಿ ಬಾಲಕಿಗೆ ದೈರ್ಯ ತುಂಬಿದ್ದಾರೆ.
ಈ ಮೂಲಕ ಅದೇನೋ ಕೆಲಸದ ಟೆನ್ಶೆನ್ ನಲ್ಲಿ ಆಗಿ ಹೋಗಿದ್ದ ಘಟನೆಗೆ ಮಮ್ಮಲ ಮರುಗಿದ್ದಾರೆ. ಸದ್ಯ ಬಾಲಕಿ ಚೇತರಿಸಿಕೊಂಡು ಶಾಲೆಗೆ ಹೋಗಲು ರೆಡಿಯಾಗಿದ್ದಾಳೆ. ಹಾಗಂತ ಬಾಲಕಿಯ ಕುಟುಂಬಸ್ಥರು ತಿಳಿಸಿದ್ದಾರೆ.


ಈ ಕುರಿತು ಪಬ್ಲಿಕ್ ಫಸ್ಟ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಹೀಗಾಗಿ, ವರದಿ ಪ್ರಸಾರವಾದ ಬೆನ್ನಲ್ಲೇ ಪಿಐ ಸಾಹೇಬ್ರು ಬಾಲಕಿಯ ಮನೆಗೆ ಭೇಟಿ ನೀಡಿ ದೈರ್ಯ ತುಂಬುವ ಕೆಲಸ ಮಾಡಿದ್ರು. ಹೀಗಾಗಿ ನಮ್ಮ ಮಗಳು ಈಗ ಚೇತರಿಸಿಕೊಂಡಿದ್ದಾಳೆ ಇನ್ನೆರಡು ದಿನದಲ್ಲಿ ಶಾಲೆಗೂ ಹಾಜರಾಗ್ತಾಳೆ. ಸಾಹೇಬ್ರು ಬಂದು ಹೋದ ನಂತರ ಲವ ಲವಿಕೆಯಿಂದ ಇದ್ದಾಳೆ. ಅಲ್ದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಮ್ಮ ಮಗಳಿಗೆ ದೈರ್ಯ ತುಂಬಿದ್ದಾರೆ ಅಂತಾ ಬಾಲಕಿಯ ತಾಯಿ ಮಾಹಿತಿ ನೀಡಿದ್ರು.

ನಮ್ಮ ಅಕ್ಕನ ಮಗಳಿಗೆ ಈಗ ದೈರ್ಯ ಬಂದಿದೆ, ಶಾಲೆಗೆ ಹೋಗಲು ರೆಡಿಯಾಗಿದ್ದಾಳೆ, ಸ್ವತಃ ಪಿಐ ಸಿದ್ದಪ್ಪ ಸಿಮಾನಿ ಮನೆಗೆ ಬಂದು ನಮ್ಮ ಅಕ್ಕನ ಮಗಳಿಗೆ ದೈರ್ಯ ತುಂಬಿದ್ದಾರೆ. ಹೀಗಾಗಿ, ಇನ್ಮೇಲೆ ಏನೂ ಸಮಸ್ಯೆಯಿಲ್ಲ ಅಂತಾ ಬಾಲಕಿಯ ಮಾವ ತಿಳಿಸಿದ್ರು. ಒಟ್ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಇನ್ನೇನು ಬಾಲಕಿ ಶಾಲೆಗೆ ತೆರಳಲು ರೆಡಿಯಾಗಿದ್ದಾಳೆ ಅಂತಾ ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

error: Content is protected !!