ನ್ಯಾಸರ್ಗಿಯಲ್ಲಿ ವಿಷಕಾರಿ ಹಾವು ಕಚ್ಚಿ ಯುವಕ ದಾರುಣ ಸಾವು..!

ಮುಂಡಗೋಡ: ನ್ಯಾಸರ್ಗಿಯಲ್ಲಿ ಮೊಬೈಲ್ ನಲ್ಲಿ ಮಾತಾನಾಡುತ್ತ ಹಾವು ತುಳಿದ ಕಾರಣ ವಿಷಕಾರಿ ಹಾವು ಕಚ್ಚಿ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಚಂದ್ರು ಗೂಳಪ್ಪ ಜಮಾತಿ(30) ಎಂಬ ಯುವಕನೇ ವಿಷಕಾರಿ ಹಾವಿಗೆ ಬಲಿಯಾಗಿದ್ದಾನೆ.

ನಿನ್ನೆ ಬೆಳಿಗ್ಗೆ ತನ್ನ ಹಿತ್ತಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚಂದ್ರು, ವಿಷಕಾರಿ ಹಾವಿನ ಮೇಲೆ ಹೆಜ್ಜೆಯಿಟ್ಟಿದ್ದಾನೆ. ಹೀಗಾಗಿ, ಹಾವು ರೋಷದಿಂದ ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

error: Content is protected !!