ಮುಂಡಗೋಡ: ತಾಲೂಕಿನ ಕೋಡಂಬಿ, ಬೆಡಸಗಾಂವ್, ಮಳಗಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಉಚಿತ ಪಠ್ಯ, ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಭಟ್, ಫಣಿರಾಜ್ ಹದಳಗಿ, ಗಿರೀಶ್ ಕಾತೂರು, ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ, ದಿವಾನ್ ಸಾಬ್, ವಿಜಯ್ ಕುರುಬರ ಹಾಗೂ ಪಂಚಾಯತ್ ಅಧ್ಯಕ್ಷರು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಮುಖಂಡರು, ಶಿಕ್ಷಕವೃಂದ ಹಾಗೂ ಮಕ್ಕಳು ಉಪಸ್ಥಿತರಿದ್ದರು.
Top Stories
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ಆ ಶಿಕ್ಷಕನ ಯಡವಟ್ಟಿಗೆ, ಇಂದೂರಿನ ಓರ್ವ ವಿದ್ಯಾರ್ಥಿಯ ಬದುಕೇ ಬರ್ಬಾದು, ಬಿಇಓ ಸಾಹೇಬ್ರೇ ಏನಿದೇಲ್ಲ..?
ಮುಂಡಗೋಡ: ತಾಲೂಕಿನ ಇಂದೂರಿನ ಅದೊಬ್ಬ ಬಡ ವಿದ್ಯಾರ್ಥಿ ಸಂಕಟಕ್ಕೆ ಸಿಲುಕಿದ್ದಾನೆ. ಅವನ ಜೊತೆ ಆತನ ಪೋಷಕರೂ ನಿತ್ಯವೂ ಮುಂದೇನು ಅಂತಾ ಪರದಾಡುವ ಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವನೊಬ್ಬ ಮಾಸ್ತರು ಅದೇಂಥಾ ನಿದ್ದೆಗುಂಗಿನಲ್ಲಿ ಮಾಡಿದ್ನೋ ಗೊತ್ತಿಲ್ಲ, ಆತ ಮಾಡಿದ ಯಡವಟ್ಟಿಗೆ ಆ ವಿದ್ಯಾರ್ಥಿ ಈಗ ವಿಲ ವಿಲ ಅಂತಿದಾನೆ. ಆತನ ಹೆಸ್ರು ಮಾಂತೇಶ್..! ಅಂದಹಾಗೆ, ಇಂದೂರಿನ ಆ ವಿದ್ಯಾರ್ಥಿಯ ಹೆಸ್ರು ಮಾಂತೇಶ್ ಫಕ್ಕೀರಪ್ಪ ನಾಣಪೂರ್, ಈತ ಇಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪಾಸ್ ಆಗಿ, ಅದೇ ಇಂದೂರಿನ ಪ್ರೌಢಶಾಲೆಯಲ್ಲಿ ಮತ್ತೆ ಹೈಸ್ಕೂಲು ಶಿಕ್ಷಣ ಮುಗಿಸಿಕೊಂಡಿದ್ದಾನೆ. ಕಳೆದ ವರ್ಷ SSLC ಪರೀಕ್ಷೆಯಲ್ಲಿ ಪಾಸ್ ಆಗಿ ಇನ್ನೇನು ಕಾಲೇಜಿಗೆ ಹೋಗಲು ರೆಡಿಯಾಗಿದ್ದಾನೆ. ಆದ್ರೆ, ಸದ್ಯ SSLC ಅಂಕಪಟ್ಟಿಯಲ್ಲಿ ಈತನ ಹೆಸರೇ ಬದಲಾಗಿ ಹೋಗಿದೆ. ಮಾಂತೇಶ್ ಅಂತಾ ಇದ್ದ ಈ ವಿದ್ಯಾರ್ಥಿಯ ಹೆಸರು ಈಗ “ಮಾಲತೇಶ್” ಅಂತಾ ಬದಲಾಗಿದ್ದು, ಯಾವ ಕಾಲೇಜಿನಲ್ಲೂ ಪ್ರವೇಶಾತಿ ಸಿಗದೇ ಪರದಾಡುವಂತಾಗಿದೆ. ಮೂಲ ದಾಖಲೆಗಳೇ ಬೇರೆ..! ಅಸಲು, ಈ ವಿದ್ಯಾರ್ಥಿಯ...
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಮುಂಡಗೋಡಿನ “ಮಾಸ್” ಹುಡುಗ್ರ ಸ್ಟೆಪ್..!
ಮುಂಡಗೋಡಿನ ಯುವಕರ ಪಡೆಯೊಂದು ತಾಲೂಕಿನ ಹೆಮ್ಮೆಗೆ ಕಾರಣವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಂಡಗೋಡಿನ ನೃತ್ಯ ಪಟುಗಳು ಭಾಗಿಯಾಗಿದ್ದಾರೆ. ಇಂದು ರವಿವಾರ ರಾತ್ರಿ ನಮ್ಮ ಹೆಮ್ಮೆಯ ಯುವಕರ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದಹಾಗೆ, ಮುಂಡಗೋಡಿನ ಮಾಸ್ ಅಕಾಡೆಮಿಯ ಹುಲಿಗಳು ಇವ್ರು. ಸಂದೀಪ್ ಕೋರಿ, ಸಾನಿಕಾ ಪವಾರ್,ರಂಜಿತಾ ಜೀವಣ್ಣವರ, ಮನೋಜ್ ಮೆತ್ರಾಣಿ ಎಂಬುವ ಡ್ಯಾನ್ಸ್ ಕಲಿಗಳು ಟಿವಿ ಪರದೆಯ ಮೇಲೆ ಇಂದು ಮಿಂಚಲಿದ್ದಾರೆ. ಪ್ರತೀ ಶನಿವಾರ, ರವಿವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ ಕಾರ್ಯಕ್ರಮದಲ್ಲಿ ನಮ್ಮ ಯುವಕರು ಭಾಗಿಯಾಗಿದ್ದು ಮುಂಡಗೋಡಿಗರ ಹೆಮ್ಮೆಗೆ ಕಾರಣವಾಗಿದೆ. ಹೀಗಾಗಿ, ನಮ್ಮ ಹುಡುಗರ ಡ್ಯಾನ್ಸ್ ಕಣ್ತುಂಬಿಕೊಳ್ಳಲು ಮುಂಡಗೋಡಿಗರ ಕಾತರ ಹೆಚ್ಚಾಗಿದೆ. ಅಂದಹಾಗೆ, ಇವತ್ತು “ಚೆಲ್ಲಿದರು ಮಲ್ಲಿಗೆಯಾ” ಗೀತೆಗೆ ಹೆಜ್ಜೆ ಹಾಕಲಿದ್ದಾರೆ ನಮ್ಮ ಮಾಸ್ ಹುಡುಗರು. ನೀವೂ ತಪ್ಪದೇ ನೋಡ್ತಿರಾ ಅಲ್ವಾ..?
ಚೌಡಳ್ಳಿ-ಮಲವಳ್ಳಿ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!
ಮುಂಡಗೋಡ: ತಾಲೂಕಿನ ಚೌಡಳ್ಳಿ- ಮಲವಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಎರಡನೇ ಅವಧಿಗೆ, ನೂತನ ಅಧ್ಯಕ್ಷರಾಗಿ ಮೌಲಾಸಾಬ ಪೀರ್ ಸಾಬ್ ನದಾಫ್ ಹಾಗೂ ಉಪಾಧ್ಯಕ್ಷರಾಗಿ ಶಿವಾನಂದ ಯಲ್ಲಪ್ಪ ಬಿಸುಗಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಮುಖಂಡರಾದ ವೈ.ಪಿ ಪಾಟೀಲ್, ಅರ್ಜುನಪ್ಪ ಸಿಗ್ನಳಿ, ಪಿ. ಜಿ.ಪಾಟೀಲ, ಪರಶುರಾಮ್ ತಹಸೀಲ್ದಾರ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯ ವೈ.ಪಿ.ಭುಜಂಗಿ, ಪರಶುರಾಮ್ ಕುರಿಯವರ್, ಬಸವರಾಜ್ ಉಗ್ಗಿನಕೇರಿ, ರಾಮಚಂದ್ರ ರಾಥೋಡ್, ಮಹೇಶ್ ಅರ್ಕಸಾಲಿ, ಚವಡಳ್ಳಿ ಗ್ರಾಪಂ ಸದಸ್ಯ ಪ್ರದೀಪ್ ಚವಾಣ್, ಅಬ್ದುಲ್ ಖಾದರ್ ದುಂಡಸಿ , ಸೋನು ವರಕ, ಮುನೀರ್ ಮಖಾನ್ ಪಠಾಣ, ಪರಶುರಾಮ ಉಪ್ಪಾರ, ಸುನಿಲ್ ವೆರ್ಣೇಕರ, ಆರ್. ಆರ್. ವಾಲ್ಮೀಕಿ, ಮಂಜಣ್ಣ ಮುತಗಿ, ಬಸಣ್ಣ ಗರಗದ, ಎಲ್ಲಾ ಸಹಕಾರ ಸಂಘದ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತ ಬಾಂಧವರು ಉಪಸ್ಥಿತರಿದ್ದರು.
ಮುಂಡಗೋಡ ಗಾಂಧಿನಗರದಲ್ಲಿ ನೇಣಿಗೆ ಶರಣಾದ ಯುವಕ..!
ಮುಂಡಗೋಡ: ಪಟ್ಟಣದ ಗಾಂಧಿನಗರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ. ಗಾಂಧಿನಗರದ ದೇವಪುತ್ರ ಗೋರ್ನಾಳ (35) ಎಂಬ ಯುವಕನೇ ನೇಣಿಗೆ ಶರಣಾಗಿದ್ದು, ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಂದಿಕಟ್ಟಾದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ..!
ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದ್ಯಕ್ಷ ವಿ.ಎಸ್. ಪಾಟೀಲರ ತವರಲ್ಲಿ ನಿತ್ಯವೂ ವಿದ್ಯಾರ್ಥಿಗಳು ಗೋಳು ಅನುಭವಿಸ್ತಿದಾರೆ. ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಗ್ರಾಮದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಅಂದಹಾಗೆ..! ನಂದಿಕಟ್ಟಾ ಗ್ರಾಮದಿಂದ ಮುಂಡಗೋಡಿಗೆ ಪ್ರತಿದಿನ 150 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಹಾಗೆ ತೆರಳುವ ಮಕ್ಕಳಿಗೆ ನಿತ್ಯವೂ ಸರಿಯಾದ ಸಮಯಕ್ಕೆ ಬಸ್ ಬರೋದೋ ಇಲ್ಲ. ಈ ಕಾರಣಕ್ಕಾಗಿ ಅದೇಷ್ಟೋ ಬಾರಿ ವಿದ್ಯಾರ್ಥಿಗಳು ಶಾಲೆ ಬಿಟ್ಟು ಮನೆಯಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ, ಈ ಸಮಸ್ಯೆಯ ಕುರಿತು ಹಲವು ಬಾರಿ ಯಲ್ಲಾಪುರ ಡೀಪೋ ಮ್ಯಾನೇಜರ್ ಗಮನಕ್ಕೆ ತರಲಾಗಿದೆ. ಅಲ್ಲದೇ, ಅಧ್ಯಕ್ಷ ವಿ.ಎಸ್.ಪಾಟೀಲರಿಗೂ ಮನವಿ ನೀಡಲಾಗಿದೆ. ಆದ್ರೆ, ಇದ್ತಾವುದಕ್ಕೂ ಅವರು ಕ್ಯಾರೇ ಅಂದಿಲ್ಲ. ಹೀಗಾಗಿ, ಸದ್ಯ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶಗೊಂಡಿದ್ದಾರೆ. ಬಸ್ ತಡೆದು ಪ್ರತಿಭಟಿಸಿದ್ದಾರೆ. ಅಧಿಕಾರಿ ಭೇಟಿ..! ಇನ್ನು, ಬಸ್...
ಬೆಳಿಗ್ಗೆ ಬಿಜೆಪಿ, ರಾತ್ರಿ ಕಾಂಗ್ರೆಸ್ ಅನ್ನೋ “ಶಕುನಿ” ಲೀಡರ್ಸ್ ನಮಗೆ ಬೇಕಾಗಿಲ್ಲ: ರವಿಗೌಡ ಪಾಟೀಲ್ ಖಡಕ್ ಮಾತು..!
ಬೆಳಿಗ್ಗೆ ಬಿಜೆಪಿಯಲ್ಲಿ ಚಹಾ ಕುಡಿದು, ರಾತ್ರಿಯಾದಂತೆ ಕಾಂಗ್ರೆಸ್ ಜೊತೆ ಚೀಯರ್ಸ್ ಹೇಳೊ, ಬೆನ್ನಿಗೆ ಚೂರಿ ಹಾಕೊ ಕಾರ್ಯಕರ್ತರು, ಮುಖಂಡರು ನಮಗೆ ಬೇಕಾಗಿಲ್ಲ. ಅಂತಹ ಮನಸ್ಥಿತಿಯವರು ಇದ್ರೆ ಈಗಲೇ ಈ ಸಭೆಯಿಂದಲೇ ಎದ್ದು ಹೋಗಿ ಅಂತಾ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲ್ ಖಡಕ್ಕಾಗೇ ಎಚ್ಚರಿಸಿದ್ರು. ಅವ್ರು, ಮುಂಡಗೋಡ ತಾಲೂಕಿನ ಇಂದೂರಿನ ಕಲ್ಮೇಶ್ವರ ದೇವಸ್ಥಾನದಲ್ಲಿ ನಡೆದ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ರು. ಕೊಪ್ಪರಿಗೆ ಹಾಲಿನಲ್ಲಿ ಒಂದು ಸಣ್ಣ ಉಪ್ಪಿನ ಚೂರು ಹಾಕಿದ್ರೂ ಇಡೀ ಕೊಪ್ಪರಿಗೆ ಹಾಲೇ ಕೆಟ್ಟು ಹೋಗತ್ತೆ ಹೀಗಾಗಿ, ನಮ್ಮ ಪಕ್ಷದ ಹಾಲಿಗೆ ಉಪ್ಪು ಬೆರೆಸೋರು ನಮಗೆ ಬೇಕಾಗಿಲ್ಲ, ಪಕ್ಷದ ಸಂಘಟನೆ ದೃಷ್ಟಿಯಿಂದ ನಮಗೆ ಅಂತಹ ಕಾರ್ಯಕರ್ತರು, ಮುಖಂಡರು ಬೇಡವೇ ಬೇಡ. ನಾವೇಲ್ಲರೂ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತೇವೆ ಅಂತಾ ರವಿಗೌಡ ಪಾಟೀಲ್ ಖಡಕ್ಕಾಗಿ ನುಡಿದ್ರು. ಇದಕ್ಕೂ ಮುನ್ನ ಮಾತನಾಡಿದ, ಸಿದ್ದಪ್ಪ ಹಡಪದ, ಪಕ್ಷಕ್ಕಾಗಿ ದುಡಿದವರ ಬಗ್ಗೆ ಹಿರಿಯರು ಯೋಚಿಸಬೇಕಿದೆ. ಕಿವಿ ಕಚ್ಚುವವರನ್ನು...
ಬಿಜೆಪಿ ಪಕ್ಷದ ನೆರಳಲ್ಲೇ ನಡಿತಿದೆಯಾ ಮುಂಡಗೋಡ ಕಸಾಪ..? ಅಷ್ಟಕ್ಕೂ ಕಸಾಪ ಅಧ್ಯಕ್ಷ ನಡಗೇರಿಯವರದ್ದು ಯಾವ ಸಿದ್ಧಾಂತ..?
ಮುಂಡಗೋಡ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಜಕೀಯದ ಪಕ್ಷದ ಅಡಿ ಕೆಲಸ ಮಾಡ್ತಿದೆ..? ಅಷ್ಟಕ್ಕೂ ಇಲ್ಲಿನ ಸಾಹಿತ್ಯ ಪರಿಷತ್ತಿಗೆ ಯಾವುದಾದ್ರೂ ಪಕ್ಷದ ಸಿದ್ದಾಂತಗಳನ್ನ ಹೇರಲಾಗ್ತಿದೆಯಾ..? ಅಥವಾ ಇಡೀ ಪರಿಷತ್ತನ್ನೇ ರಾಜಕೀಯ ಪಕ್ಷದ ಜೊತೆ ವಿಲೀನಗೊಳಿಸಲಾಗಿದೆಯಾ..? ನಿಜಕ್ಕೂ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ತಾಲೂಕಿನಲ್ಲಿ ಸಾಹಿತ್ಯಿಕ ಕೃಷಿ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರು ಪಕ್ಷವೊಂದರ ಬಲವರ್ಧನೆಯಲ್ಲೇ ಬ್ಯುಸಿಯಾಗಿದ್ದಾರೆ. ಅರಿಕೆಯಿರಲಿ..! ನಾವಿಲ್ಲಿ ಯಾವುದೇ ಪಕ್ಷದ ಸಿದ್ಧಾಂತಗಳ ಬಗ್ಗೆ ಖಂಡಿತ ಮಾತನಾಡಲ್ಲ. ವಿರೋಧಿಸುವುದೂ ಇಲ್ಲ. ಆಯಾ ಪಕ್ಷಗಳಿಗೆ ಅದರದ್ದೇ ಆದ ಸಿದ್ಧಾಂತಗಳಿವೆ. ಆ ಸಿದ್ಧಾಂತಗಳನ್ನು ಒಪ್ಪಿ ಕೋಟ್ಯಾಂತರ ಜನ ಕಾರ್ಯಕರ್ತರು ಆಯಾ ಪಕ್ಷಗಳ ಜೊತೆಗೆ ಬೆನ್ನೆಲುಬಾಗಿ ನಿಂತಿರ್ತಾರೆ. ಅದು ಅವರವರ ಸಿದ್ಧಾಂತಗಳು, ಅವರವರ, ಆಯ್ಕೆ.. ಆದ್ರೆ, ಯಾವುದೋ ಒಂದು ವಿಭಿನ್ನ ನಿಲುವಿನ, ವಿಶಿಷ್ಟ ಸಂಪ್ರದಾಯಗಳ, ವಿಶೇಷ ಕಾಳಜಿ ಇರುವ ಸಂಘಟನೆಯೊಂದರ ಅಧ್ಯಕ್ಷರಾಗಿದ್ದು ಮತ್ಯಾವುದೋ ಪಕ್ಷದ ಜೊತೆ ಜೋತು ಬೀಳೋದು ಸರಿನಾ..? ಈ ಪ್ರಶ್ನೆ ಸದ್ಯ ಮುಂಡಗೋಡಿನ ಪ್ರಜ್ಞಾವಂತ ಸಾಹಿತ್ಯಾಭಿಮಾನಿಗಳದ್ದು. ಅವ್ರು ಸಹದೇಪ್ಪ...
ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?
ಮುಂಡಗೋಡ: ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಅರ್ಥವೇ ಆಗ್ತಿಲ್ಲ. ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡ್ತಿಲ್ಲ. ಯಾಕಂದ್ರೆ, ಪಟ್ಟಣದ ಬಂಕಾಪುರ ರಸ್ತೆಯ ನಿವಾಸಿಗಳಿಗೆ ಮಳೆ ಬಂದ್ರೆ ಸಾಕು ಜೀವ ಅಂಗೈಯಲ್ಲೇ ಹಿಡಿದು ಬದುಕಬೇಕಾದ ಸ್ಥಿತಿ ಇದೆ. ಚೀಪ್ ಆಫೀಸರ್ ಅನ್ನೋ ಹುದ್ದೆ ನೆತ್ತಿಗೇರಿಸಿಕೊಂಡು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಆ “ಆಫಿ” ಸರ್ರು..! ಇಡೀ ಪಟ್ಟಣವೇ ಗಬ್ಬೆದ್ದು ಹೋಗಿಸಿದ್ದಾರೆ. ಥೇಟು ಶಿಗ್ಗಾವಿ ಪಟ್ಟಣದ ರೀತಿಯಲ್ಲೇ ಮುಂಡಗೋಡನ್ನೂ ಬದಲಾಯಿಸಿ ಬಿಡ್ತಾರಾ..? ಅನ್ನುವ ಅನುಮಾನ ಶುರುವಾಗಿದೆ. ರಸ್ತೆಯೋ ಕೆರೆಯೋ..? ಅಸಲು, ಇಂದು ಸಂಜೆ ಸುರಿದ ಭಾರೀ ಮಳೆಯಿಂದ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮಳೆಯ ನೀರು ತುಂಬಿ ಅದ್ವಾನವಾಗಿದೆ. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ. ಮೊಣಕಾಲಿನವರೆಗೂ ಮಳೆಯ ನೀರು ತುಂಬಿದೆ. ಹೀಗಾಗಿ, ಇದೇನು ರಸ್ತೆಯೋ ಕೆರೆಯೋ ಎಂಬ ಅನುಮಾನದಲ್ಲೇ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ, ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದಾರೆ ಇಲ್ಲಿನ ಜನ.. ಅವೈಜ್ಞಾನಿಕ ಕಾಲುವೆ..! ಅಸಲು,...
ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!
ಮುಂಡಗೋಡ: ಪಟ್ಟಣದ APMC ಹತ್ತಿರ KSRTC ಬಸ್ ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ KSRTC ಬಸ್ APMC ಸಮೀಪದ ರಸ್ತೆಯಲ್ಲಿ ಏಕಾಏಕಿ ಜಿಂಕೆ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಜಿಂಕೆ ಸ್ಥಳದಲ್ಲೇ ಮೃತಪಟ್ಟಿದೆ. ಇನ್ನು, ಮೃತಪಟ್ಟ ಜಿಂಕೆ ರಸ್ತೆಯಲ್ಲೇ ಬಿದ್ದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಿದೆ.