ಚೌಡಳ್ಳಿ-ಮಲವಳ್ಳಿ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!

ಮುಂಡಗೋಡ: ತಾಲೂಕಿನ ಚೌಡಳ್ಳಿ- ಮಲವಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಎರಡನೇ ಅವಧಿಗೆ, ನೂತನ ಅಧ್ಯಕ್ಷರಾಗಿ ಮೌಲಾಸಾಬ ಪೀರ್ ಸಾಬ್ ನದಾಫ್ ಹಾಗೂ ಉಪಾಧ್ಯಕ್ಷರಾಗಿ ಶಿವಾನಂದ ಯಲ್ಲಪ್ಪ ಬಿಸುಗಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಮುಖಂಡರಾದ ವೈ.ಪಿ ಪಾಟೀಲ್, ಅರ್ಜುನಪ್ಪ ಸಿಗ್ನಳಿ, ಪಿ. ಜಿ.ಪಾಟೀಲ, ಪರಶುರಾಮ್ ತಹಸೀಲ್ದಾರ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯ ವೈ.ಪಿ.ಭುಜಂಗಿ, ಪರಶುರಾಮ್ ಕುರಿಯವರ್, ಬಸವರಾಜ್ ಉಗ್ಗಿನಕೇರಿ, ರಾಮಚಂದ್ರ ರಾಥೋಡ್, ಮಹೇಶ್ ಅರ್ಕಸಾಲಿ, ಚವಡಳ್ಳಿ ಗ್ರಾಪಂ ಸದಸ್ಯ ಪ್ರದೀಪ್ ಚವಾಣ್, ಅಬ್ದುಲ್ ಖಾದರ್ ದುಂಡಸಿ , ಸೋನು ವರಕ, ಮುನೀರ್ ಮಖಾನ್ ಪಠಾಣ, ಪರಶುರಾಮ ಉಪ್ಪಾರ, ಸುನಿಲ್ ವೆರ್ಣೇಕರ, ಆರ್. ಆರ್. ವಾಲ್ಮೀಕಿ, ಮಂಜಣ್ಣ ಮುತಗಿ, ಬಸಣ್ಣ ಗರಗದ, ಎಲ್ಲಾ ಸಹಕಾರ ಸಂಘದ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತ ಬಾಂಧವರು ಉಪಸ್ಥಿತರಿದ್ದರು.

error: Content is protected !!