ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದ್ಯಕ್ಷ ವಿ.ಎಸ್. ಪಾಟೀಲರ ತವರಲ್ಲಿ ನಿತ್ಯವೂ ವಿದ್ಯಾರ್ಥಿಗಳು ಗೋಳು ಅನುಭವಿಸ್ತಿದಾರೆ. ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಗ್ರಾಮದಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
ಅಂದಹಾಗೆ..!
ನಂದಿಕಟ್ಟಾ ಗ್ರಾಮದಿಂದ ಮುಂಡಗೋಡಿಗೆ ಪ್ರತಿದಿನ 150 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ.
ಹಾಗೆ ತೆರಳುವ ಮಕ್ಕಳಿಗೆ ನಿತ್ಯವೂ ಸರಿಯಾದ ಸಮಯಕ್ಕೆ ಬಸ್ ಬರೋದೋ ಇಲ್ಲ. ಈ ಕಾರಣಕ್ಕಾಗಿ ಅದೇಷ್ಟೋ ಬಾರಿ ವಿದ್ಯಾರ್ಥಿಗಳು ಶಾಲೆ ಬಿಟ್ಟು ಮನೆಯಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ, ಈ ಸಮಸ್ಯೆಯ ಕುರಿತು ಹಲವು ಬಾರಿ ಯಲ್ಲಾಪುರ ಡೀಪೋ ಮ್ಯಾನೇಜರ್ ಗಮನಕ್ಕೆ ತರಲಾಗಿದೆ. ಅಲ್ಲದೇ, ಅಧ್ಯಕ್ಷ ವಿ.ಎಸ್.ಪಾಟೀಲರಿಗೂ ಮನವಿ ನೀಡಲಾಗಿದೆ. ಆದ್ರೆ, ಇದ್ತಾವುದಕ್ಕೂ ಅವರು ಕ್ಯಾರೇ ಅಂದಿಲ್ಲ. ಹೀಗಾಗಿ, ಸದ್ಯ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶಗೊಂಡಿದ್ದಾರೆ. ಬಸ್ ತಡೆದು ಪ್ರತಿಭಟಿಸಿದ್ದಾರೆ.
ಅಧಿಕಾರಿ ಭೇಟಿ..!
ಇನ್ನು, ಬಸ್ ಗಾಗಿ ಪ್ರತಿಭಟನೆ ನಡಿಸ್ತಿದಾರೆ ಅಂತಾ ಮಾಹಿತಿ ತಿಳಿದು ನಂದಿಕಟ್ಟಾ ಗ್ರಾಮಕ್ಕೆ ಆಗಮಿಸಿದ್ದ ಸಂಚಾರಿ ಬಿರೀಕ್ಷಕ ಭಂಡಾರಿ, ಎರಡುಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಮತ್ತದೇ ಭರವಸೆ ನೀಡಿ ಹೋಗಿದ್ದಾರೆ. ಆದ್ರೆ, ಈ ಸಾರಿ ಮಾತ್ರ ವಿದ್ಯಾರ್ಥಿಗಳು ಹಾಗೂ ಪೋಷಕರು ಖಡಕ್ಕಾದ ನಿರ್ಣಯ ತೆಗೆದುಕೊಂಡಿದ್ದು, ಒಂದು ವಾರದ ಕಾಲ ಸಮಯ ನೀಡಿದ್ದಾರೆ. ಅದರೊಳಗೆ ಸಮರ್ಪಕ ಬಸ್ ವ್ಯವಸ್ಥೆ ಮಾಡದೇ ಹೋದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಲು ತೀರ್ಮಾನಿಸಿದ್ದಾರೆ.
ಪ್ರತಿಭಟನೆ ವೇಳೆ ಗ್ರಾಮಸ್ಥರಾದ ಉದಯ್ ಕವಟೆ, ಮಹಾದೇವ ಹರೀಬನವರ, ಗೌಸಾಖಾನ್ ಕಲಘಟಗಿ, ಶಿವಾನಂದ ಪಡವಳ್ಳಿ, ನಾಗರಾಜ ಜಾನಕಾಯಿ, ಅಶೋಕ ಕಮ್ಮಾರ, ಜುಮ್ಮಾಖಾನ್ ಕಲಘಟಗಿ, ರಮೇಶ ನೇಮಣ್ಣನವರ, ವೆಂಕಟೇಶ್ ಕೋಟಾಗುಣಸಿ ಸೇರಿದಂತೆ ಹಲವರು ಹಾಜರಿದ್ದರು.