ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?


ಮುಂಡಗೋಡ: ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಅರ್ಥವೇ ಆಗ್ತಿಲ್ಲ. ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡ್ತಿಲ್ಲ. ಯಾಕಂದ್ರೆ, ಪಟ್ಟಣದ ಬಂಕಾಪುರ ರಸ್ತೆಯ ನಿವಾಸಿಗಳಿಗೆ ಮಳೆ ಬಂದ್ರೆ ಸಾಕು ಜೀವ ಅಂಗೈಯಲ್ಲೇ ಹಿಡಿದು ಬದುಕಬೇಕಾದ ಸ್ಥಿತಿ ಇದೆ. ಚೀಪ್ ಆಫೀಸರ್ ಅನ್ನೋ ಹುದ್ದೆ ನೆತ್ತಿಗೇರಿಸಿಕೊಂಡು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಆ “ಆಫಿ” ಸರ್ರು..! ಇಡೀ ಪಟ್ಟಣವೇ ಗಬ್ಬೆದ್ದು ಹೋಗಿಸಿದ್ದಾರೆ. ಥೇಟು ಶಿಗ್ಗಾವಿ ಪಟ್ಟಣದ ರೀತಿಯಲ್ಲೇ ಮುಂಡಗೋಡನ್ನೂ ಬದಲಾಯಿಸಿ ಬಿಡ್ತಾರಾ..? ಅನ್ನುವ ಅನುಮಾನ ಶುರುವಾಗಿದೆ.

ರಸ್ತೆಯೋ ಕೆರೆಯೋ..?
ಅಸಲು, ಇಂದು ಸಂಜೆ ಸುರಿದ ಭಾರೀ ಮಳೆಯಿಂದ ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಮಳೆಯ ನೀರು ತುಂಬಿ ಅದ್ವಾನವಾಗಿದೆ‌. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ‌. ಮೊಣಕಾಲಿನವರೆಗೂ ಮಳೆಯ ನೀರು ತುಂಬಿದೆ‌. ಹೀಗಾಗಿ, ಇದೇನು ರಸ್ತೆಯೋ ಕೆರೆಯೋ ಎಂಬ ಅನುಮಾನದಲ್ಲೇ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ, ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದಾರೆ ಇಲ್ಲಿನ ಜನ..

ಅವೈಜ್ಞಾನಿಕ ಕಾಲುವೆ..!
ಅಸಲು, ಈ ಸಮಸ್ಯೆ ಇಲ್ಲಿನ ಜನರ ಜೀವ ಹಿಂಡುತ್ತಿದೆ ಅಂದ್ರೆ ಅದಕ್ಕೆ ನೇರ ಕಾರಣ ಆ ಕಾಲುವೆ ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಇಂಜಿನೀಯರ್ ಆಗಿರ್ತಾರೆ. ಅದೇಂತಹ ನಿದ್ದೆಗಣ್ಣಲ್ಲಿ ಈ ಕಾಮಗಾರಿ ನಡೆಸಿದ್ನೋ ಗೊತ್ತಿಲ್ಲ, ಈಗ ಆತ ಮಾಡಿರೋ ಬೇಜವಾಬ್ದಾರಿಯಿಂದ ಇಲ್ಲಿನ ಜನರು ಈಗ ನಿದ್ದೆಗೆಡುವಂತಾಗಿದೆ. ಅಷ್ಟಕ್ಕೂ ಈ ಪಟ್ಟಣ ಪಂಚಾಯತಿಯ ಮಾತೆತ್ತುವುದೇ ಮುಂಡಗೋಡಿಗರಿಗೆ ಬೇಡವಾಗಿದೆ.

ಗಬ್ಬೇದ್ದು ನಾರುತ್ತಿದೆ ಪಟ್ಟಣ..!
ನಿಜ ಅಂದ್ರೆ, ಮುಂಡಗೋಡ ಪಟ್ಟಣ ಪಂಚಾಯತಿ ಬೇಜವಾಬ್ದಾರಿಗೆ ಇಡೀ ಪಟ್ಟಣವೇ ಗಬ್ಬೇದ್ದು ನಾರುತ್ತಿದೆ. ಮಳೆಗಾಲದ ಈ ಸಂದರ್ಭದಲ್ಲಿ ಮುಂಡಗೋಡಿನ ಪ್ರತೀ ಗಲ್ಲಿಗಳಲ್ಲೂ ಕಸದ ರಾಶಿ, ಕೊಳಚೆಯದ್ದೇ ಸಾಮ್ರಾಜ್ಯವಾಗಿದೆ. ಸಾಂಕ್ರಾಮಿಕ ರೋಗಗಳ ಕಾರ್ಖಾನೆಯಂತಾಗಿದೆ ಪಟ್ಟಣ. ಇಷ್ಟಾದ್ರೂ ಇಲ್ಲಿನ ಮುಖ್ಯಾಧಿಕಾರಿ ಮಾತ್ರ ಕಣ್ಣೆತ್ತಿಯೂ ನೋಡುತ್ತಿಲ್ಲ ಅನ್ನೊ ಆಕ್ರೋಶದ ಆರೋಪ ಮುಂಡಗೋಡಿಗರದ್ದು.

ಹಂದಿಗಳ ಕಾಟ..!
ಅಸಲು, ಮುಂಡಗೋಡ ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಜನ್ರು ಓಡಾಡಲೂ ಭಯ ಪಡುವಂತಾಗಿದೆ. ಯಾಕಂದ್ರೆ, ಪ್ರತೀ ಹೆಜ್ಜೆಗೊಂದು ಹಂದಿಗಳ ಹಿ‌ಂಡು, ಇಡೀ ಪಟ್ಟಣವನ್ನೇ ಆಕ್ರಮಿಸಿಕೊಂಡಿವೆ. ಪುಟ್ಟ ಪುಟ್ಟ ಮಕ್ಕಳು ಈ ಹಂದಿಗಳ ಉಪಟಳದಿಂದ ಭಯ ಬೀಳುವಂತಾಗಿದೆ‌. ಕೊಳಚೆಗಳಲ್ಲಿ ಎದ್ದು, ಬಿದ್ದು ಬಡಿದಾಡಿಕೊಳ್ಳುವ ಹಂದಿಗಳ ಹಿಂಡು ಸಾಮ್ರಾಜ್ಯ ಸ್ಥಾಪಿಸಿಕೊಂಡಿವೆ. ಆದ್ರೂ ಕೂಡ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಇದೇಲ್ಲ ಕಾಣ್ತಿಲ್ಲ.
ಹೀಗಾಗಿ, ಜನ್ರು ಹಿಡಿಶಾಪ ಹಾಕ್ತಿದಾರೆ.

ಬಿಡಾಡಿ ದನಗಳು..!
ಇನ್ನು, ಪಟ್ಟಣದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳದ್ದೇ ಪಾರುಪತ್ಯ. ಇಲ್ಲಿ ಸಂಚರಿಸಬೇಕಂದ್ರೆ ಜೀವ ಅಂಗೈಯಲ್ಲಿ ಇಟ್ಟುಕೊಂಡೇ ಸಂಚರಿಸಬೇಕು. ಅಂತಹದ್ದೊಂದು ಭಯ ವಾಹನ ಸವಾರರು, ಬೈಕ್ ಸವಾರರಲ್ಲಿದೆ. ಯಾಕಂದ್ರೆ, ರಸ್ತೆಯ ಮದ್ಯೆಯೇ ಬಿಡಾಡಿ ದನಗಳ ಹಿಂಡು ಮಲಗಿರತ್ತವೆ, ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತವೆ. ಹೀಗಾಗಿ, ಬಿಡಾಡಿ ದನಗಳನ್ನು ತಪ್ಪಿಸಲು ಹೋಗಿ ಸವಾರರೇ ಬಿದ್ದು ಅನಾಹುತ ಮಾಡಿಕೊಳ್ಳುವ ಸಂದರ್ಭಗಳು ಎದುರಾಗುತ್ತಿವೆ. ಇದೂ ಕೂಡ ಪಾಪ, ಮುಖ್ಯಾಧಿಕಾರಿ ಸಾಹೇಬ್ರಿಗೆ ಕಾಣುತ್ತಿಲ್ಲ.

ಬೀದಿ ನಾಯಿಗಳ ಕಾಟ..!
ಬಹುಶಃ, ಮುಂಡಗೋಡ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾಹೇಬ್ರು, ಪಟ್ಟಣದಲ್ಲಿ ಸಂಚರಿಸಿಯೇ ಇಲ್ಲವೆನೊ ಅನಿಸತ್ತೆ. ಯಾಕಂದ್ರೆ, ಇಡೀ ಪಟ್ಟಣದ ತುಂಬಾ ಬೀದಿ ನಾಯಿಗಳ ದಂಡೇ ಇದೆ. ಶಾಲಾ ವಿದ್ಯಾರ್ಥಿಗಳಿಗೆ ಬೀದಿ ನಾಯಿಗಳ ಹಿಂಡು ಇನ್ನಿಲ್ಲದಂತೆ ಉಪಟಳ ನೀಡುತ್ತವೆ. ಅಲ್ಲದೆ, ಬೀದಿನಾಯಿಗಳ ತಂಟೆಗೆ ಹೋದ್ರೆ ಮುಗಿತು, ಬೆನ್ನತ್ತಿ ದಾಳಿ ಮಾಡುತ್ತಿವೆ. ಇಷ್ಟೇಲ್ಲ ಪಾಪ “ಮುಖ್ಯ” ಅಧಿಕಾರಿಗೆ ಕಾಣುತ್ತಲೇ ಇಲ್ಲ.

ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಮುಖ್ಯಾಧಿಕಾರಿಗಳೆ, ಮುಂಡಗೋಡಿನ ಮಂದಿಯ ತಾಳ್ಮೆ ಪರೀಕ್ಷಿಸಬೇಡಿ, ಮೊದಲು, ಪಟ್ಟಣದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಒಂದಿಷ್ಟು ಗಮನ ಕೊಡಿ. ಇಲ್ಲವಾದಲ್ಲಿ ಜನರ ಆಕ್ರೋಶದ ಕಟ್ಟೆ ಒಡಿಯೋ ದಿನ ದೂರವಿಲ್ಲ

error: Content is protected !!