ಮುಂಡಗೋಡ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಜಕೀಯದ ಪಕ್ಷದ ಅಡಿ ಕೆಲಸ ಮಾಡ್ತಿದೆ..? ಅಷ್ಟಕ್ಕೂ ಇಲ್ಲಿನ ಸಾಹಿತ್ಯ ಪರಿಷತ್ತಿಗೆ ಯಾವುದಾದ್ರೂ ಪಕ್ಷದ ಸಿದ್ದಾಂತಗಳನ್ನ ಹೇರಲಾಗ್ತಿದೆಯಾ..? ಅಥವಾ ಇಡೀ ಪರಿಷತ್ತನ್ನೇ ರಾಜಕೀಯ ಪಕ್ಷದ ಜೊತೆ ವಿಲೀನಗೊಳಿಸಲಾಗಿದೆಯಾ..? ನಿಜಕ್ಕೂ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ತಾಲೂಕಿನಲ್ಲಿ ಸಾಹಿತ್ಯಿಕ ಕೃಷಿ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರು ಪಕ್ಷವೊಂದರ ಬಲವರ್ಧನೆಯಲ್ಲೇ ಬ್ಯುಸಿಯಾಗಿದ್ದಾರೆ.
ಅರಿಕೆಯಿರಲಿ..!
ನಾವಿಲ್ಲಿ ಯಾವುದೇ ಪಕ್ಷದ ಸಿದ್ಧಾಂತಗಳ ಬಗ್ಗೆ ಖಂಡಿತ ಮಾತನಾಡಲ್ಲ. ವಿರೋಧಿಸುವುದೂ ಇಲ್ಲ. ಆಯಾ ಪಕ್ಷಗಳಿಗೆ ಅದರದ್ದೇ ಆದ ಸಿದ್ಧಾಂತಗಳಿವೆ. ಆ ಸಿದ್ಧಾಂತಗಳನ್ನು ಒಪ್ಪಿ ಕೋಟ್ಯಾಂತರ ಜನ ಕಾರ್ಯಕರ್ತರು ಆಯಾ ಪಕ್ಷಗಳ ಜೊತೆಗೆ ಬೆನ್ನೆಲುಬಾಗಿ ನಿಂತಿರ್ತಾರೆ. ಅದು ಅವರವರ ಸಿದ್ಧಾಂತಗಳು, ಅವರವರ, ಆಯ್ಕೆ.. ಆದ್ರೆ, ಯಾವುದೋ ಒಂದು ವಿಭಿನ್ನ ನಿಲುವಿನ, ವಿಶಿಷ್ಟ ಸಂಪ್ರದಾಯಗಳ, ವಿಶೇಷ ಕಾಳಜಿ ಇರುವ ಸಂಘಟನೆಯೊಂದರ ಅಧ್ಯಕ್ಷರಾಗಿದ್ದು ಮತ್ಯಾವುದೋ ಪಕ್ಷದ ಜೊತೆ ಜೋತು ಬೀಳೋದು ಸರಿನಾ..? ಈ ಪ್ರಶ್ನೆ ಸದ್ಯ ಮುಂಡಗೋಡಿನ ಪ್ರಜ್ಞಾವಂತ ಸಾಹಿತ್ಯಾಭಿಮಾನಿಗಳದ್ದು.
ಅವ್ರು ಸಹದೇಪ್ಪ ನಡಿಗೇರಿ..!
ನಿಜ, ಅವ್ರೊಬ್ಬ ಅಪರೂಪದ ಜನಪದ ಕಲಾವಿದ, ಅಪ್ಪಟ ಸಾಂಸ್ಕೃತಿಕ ಮೆರುಗನ್ನೇ ಮೈಗೂಡಿಸಿಕೊಂಡ ತಾಲೂಕಿನ ಹೆಮ್ಮೆಯ ಸ್ನೇಹ ಜೀವಿ. ಸಾಹಿತ್ಯಿಕವಾಗಿ ಅವ್ರು ಅದೇನು ಮಾಡಿದ್ದಾರೋ ಗೊತ್ತಿಲ್ಲ. ಆದ್ರೆ, ಜನಪದಕ್ಕೆ ಅವ್ರದ್ದೇ ಆದ ಕೊಡುಗೆ ನೀಡಿದ್ದು ನಾವೇಲ್ಲರೂ ತುಂಬು ಹೃದಯದಿಂದ ಗೌರವಿಸಲೇ ಬೇಕು. ಅಸಲು, ನಾನೂ ಕೂಡ ಇವತ್ತಿಗೂ ಸಹದೇವ ನಡಗೇರಿಯವರ ಅಪ್ಪಟ ಅಭಿಮಾನಿ. ದೂಸ್ರಾ ಮಾತೇ ಇಲ್ಲ. ಇದೇ ಕಾರಣಕ್ಕಾಗೇ ನಡಗೇರಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾಗಿದ್ದ ಗಳಿಗೆಯಲ್ಲಿ ಇಡೀ ತಾಲೂಕಿನ ಸಾಹಿತ್ಯ ಕ್ಷೇತ್ರ ಸಂಭ್ರಮಿಸಿತ್ತು. ಅದು ಬೇರೆ ಮಾತು. ಆದ್ರೆ ಅದೇ ನಡಗೇರಿಯವರು ಈಗ ಕಸಾಪ ಅಧ್ಯಕ್ಷರಾಗಿದ್ದುಕೊಂಡು ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ ಅನ್ನುವುದು ಬೇಸರದ ಸಂಗತಿ. ಬಹುಶಃ ಯಾವೊಬ್ಬ ಸಾಹಿತ್ಯಾಭಿಮಾನಿಗೂ ಇದು ಸಹ್ಯವಾಗಲ್ಲವೆನೋ..?
ಉದ್ದೂದ್ದ ಭಾಷಣ..!
ಅಂದಹಾಗೆ, ಗುರುವಾರ ಇಂದೂರಿನ ಕಲ್ಮೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿತ್ತು. ಈ ಸಭೆಯಲ್ಲಿ ನೂರಾರು ಯುವ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ರು. ಕಸಾಪ ತಾಲೂಕಾಧ್ಯಕ್ಷ ಸಹದೇವಪ್ಪ ನಡಗೇರಿಯವರೂ ಸಭೆಯಲ್ಲಿ ಪಾಲ್ಗೊಂಡಿದ್ರು. ವೇದಿಕೆಯಲ್ಲಿ ನಡಗೇರಿಯವರಿಗೆ ಗೌರವಯುತ ಸ್ಥಾನವನ್ನೇ ನೀಡಿತ್ತು ಪಕ್ಷ. ಅಂತಹದ್ದೊಂದು ಸಭೆಯಲ್ಲಿ ಕಸಾಪ ತಾಲೂಕಾಧ್ಯಕ್ಷ ಸಹದೇವಪ್ಪ ನಡಗೇರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ರು. ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದ ಬಲವರ್ಧನೆಗಾಗಿ ಹೇಗೇಲ್ಲ ಶ್ರಮಿಸಬೇಕು ಅನ್ನೋ ಪಾಠ ಮಾಡಿದ್ರು. ಅಸಲಿಗೆ, ಹಾಗೆ ಸಹದೇವಪ್ಪ ನಡಗೇರಿ ಮಾತನಾಡಿದ್ದು ಬಿಜೆಪಿಗೆ ಸಾಕಷ್ಟು ಬಲಕೊಟ್ಟಿದ್ದು ಸತ್ಯ.
ಇದು ಸಾಹಿತ್ಯಾಸಕ್ತರ ಪ್ರಶ್ನೆ..!
ಹಾಗೆ, ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಬಲವರ್ಧನೆಯ ಪಾಠ ಹೇಳಿರೋ ಸಹದೇವಪ್ಪ ನಡಗೇರಿಯವರು, ಪ್ರತಿಷ್ಟಿತ ಸಾಹಿತ್ಯಿಕ ಕ್ಷೇತ್ರದ ಪ್ರತಿನಿಧಿಯಲ್ವಾ..? ತಾಲೂಕಾ ಕಸಾಪ ಅಧ್ಯಕ್ಷರಾಗಿದ್ದು ರಾಜಕೀಯ ಪಕ್ಷಗಳ ಕಾರ್ಯಕರ್ತನಾಗಿ ಕೆಲಸ ಮಾಡಬಹುದಾ..? ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡಬಹುದಾ..? ಹಾಗೇ, ಯಾವುದೋ ಒಂದು ರಾಜಕೀಯ ಪಕ್ಷದ ಪರವಾಗಿ ಸಾಹಿತ್ಯ ಪರಿಷತ್ ಅಧ್ಯಕ್ಷರು ಕೆಲಸ ಮಾಡ್ತಾರೆ ಅಂದ್ರೆ, ತಾಲೂಕಿನ ಸಾಹಿತ್ಯ ಕ್ಷೇತ್ರದ ಹಾದಿ ಯಾವ ದಿಕ್ಕಿಗೆ ಸಾಗಬೇಕು..? ಹಾಗಿದ್ರೆ, ಬಿಜೆಪಿ ಸಿದ್ಧಾಂತಗಳನ್ನ ಪ್ರತಿಪಾಧಿಸೋ ಸಾಹಿತಿಗಳೇ ಇವ್ರ ಜೊತೆ ಹೆಜ್ಜೆ ಹಾಕಬೇಕಾ..? ಅಥವಾ ಬೇರೊಂದು ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿರೋ ತಾಲೂಕಿನ ಸಾಹಿತಿಗಳು ಇವ್ರಿಗೆ ಬೇಕಾಗಿಯೇ ಇಲ್ವಾ..? ಇದೇಲ್ಲ ಪ್ರಶ್ನೆ ಕೇಳ್ತಿದಾರೆ ಸಾಹಿತ್ಯಾಸಕ್ತರು.
ಅವ್ರು ಹೇಳಿದ್ದೇನು..?
ಅಧ್ಯಕ್ಷರೇ, ಸಾಹಿತ್ಯ ಕ್ಷೇತ್ರದ ಗೌರವಾನ್ವಿತ ಹುದ್ದೆಯಲ್ಲಿರೋ ತಾವು ರಾಜಕೀಯ ಪಕ್ಷದ ಸಭೆಯಲ್ಲಿ ಪಕ್ಷದ ಪರವಾಗಿ ಬಾಷಣ ಮಾಡಿದ್ರಲ್ಲ ಅದು ಸರಿನಾ ಸರ್..? ಅನ್ನೊ ಪ್ರಶ್ನೆಯೊಂದಿಗೆ “ಪಬ್ಲಿಕ್ ಫಸ್ಟ್” ಆಧ್ಯಕ್ಷರ ಎದುರು ನಿಂತಾಗ, “ನಾನು ಹಿಂದಿನಿಂದಲೂ ಅದ್ರಲ್ಲೇ ಇದ್ದೋನು ಅದಿಕೆ ನಂಗೆ ಅದು ಅನಿವಾರ್ಯ” ಅನ್ನೋ ಮಾತು ಹೇಳಿದ್ರು ಅಷ್ಟೆ..